Gondola Rides: ವೆನೀಸ್​ನ ರೊಮ್ಯಾಂಟಿಕ್ ದೋಣಿ ವಿಹಾರಕ್ಕೆ ಬ್ರೇಕ್! ಅಯ್ಯೋ ಈ ಕಾಲುವೆಗಳಿಗೆ ಏನಾಯ್ತು?

ಇಟಲಿಯ ಹೆಚ್ಚಿನ ಭಾಗಗಳಲ್ಲಿ ಹೆಚ್ಚು ಒತ್ತಡದ ಹವಾಮಾನ ಪರಿಸ್ಥಿತಿಗಳಿಂದ ಕಾಲುವೆಗಳು ಒಣಗಿವೆ ಎಂಬುದಾಗಿ ಹವಾಮಾನ ತಜ್ಞರು ತಿಳಿಸಿದ್ದಾರೆ. ಈ ಕಾಲುವೆಗಳು ಒಣಗಿರುವುದು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟು ಮಾಡಿದೆ.

ಇಟಲಿಯ ಹೆಚ್ಚಿನ ಭಾಗಗಳಲ್ಲಿ ಹೆಚ್ಚು ಒತ್ತಡದ ಹವಾಮಾನ ಪರಿಸ್ಥಿತಿಗಳಿಂದ ಕಾಲುವೆಗಳು ಒಣಗಿವೆ ಎಂಬುದಾಗಿ ಹವಾಮಾನ ತಜ್ಞರು ತಿಳಿಸಿದ್ದಾರೆ. ಈ ಕಾಲುವೆಗಳು ಒಣಗಿರುವುದು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟು ಮಾಡಿದೆ.

ಇಟಲಿಯ ಹೆಚ್ಚಿನ ಭಾಗಗಳಲ್ಲಿ ಹೆಚ್ಚು ಒತ್ತಡದ ಹವಾಮಾನ ಪರಿಸ್ಥಿತಿಗಳಿಂದ ಕಾಲುವೆಗಳು ಒಣಗಿವೆ ಎಂಬುದಾಗಿ ಹವಾಮಾನ ತಜ್ಞರು ತಿಳಿಸಿದ್ದಾರೆ. ಈ ಕಾಲುವೆಗಳು ಒಣಗಿರುವುದು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟು ಮಾಡಿದೆ.

  • Trending Desk
  • 3-MIN READ
  • Last Updated :
  • Share this:

ಪ್ರವಾಸ (Travel) ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಅದರಲ್ಲೂ ರಜಾದಿನಗಳಲ್ಲಿ (Vacation) ವಿದೇಶಗಳಿಗೆ ಪ್ರಯಾಣಿಸುವುದೆಂದರೆ ಕನಸು ನಿಜವಾದ ಕ್ಷಣ ಎಂದೇ ಬಣ್ಣಿಸಬಹುದು. ವಿದೇಶಗಳಿಗೆ ಪ್ರಯಾಣಿಸುವವರು ಹೆಚ್ಚಾಗಿ ವೆನೀಸ್‌ಗೆ ಭೇಟಿ ನೀಡದೇ ಇರಲಾರರು. ಭಾರತೀಯ ಚಿತ್ರರಂಗದ ಅದೆಷ್ಟೋ ಸಿನಿಮಾಗಳು (Cinema) ಇದೇ ಸ್ಥಳದಲ್ಲಿ ಚಿತ್ರೀಕರಣಗೊಳ್ಳುತ್ತವೆ. ಈ ದೇಶದ ಚೆಲುವು ಪದಗಳಲ್ಲಿ ವರ್ಣಿಸಲಾಗದಷ್ಟು ಶ್ರೀಮಂತಿಕೆಯಿಂದ ಕೂಡಿದೆ.


ಕಾಲುವೆಗಳು ಬತ್ತಿರುವುದರಿಂದ ದೋಣಿಯಾನಕ್ಕೆ ತಡೆ


ವೆನೀಸ್‌ನಲ್ಲಿ ಇನ್ನೊಂದು ಗಮನಸೆಳೆಯುವ ಅಂಶವೆಂದರೆ ಗೊಂಡೋಲಾ ರೈಡ್‌ ಆಗಿದೆ. ಗೊಂಡೋಲಾ ಎಂದರೆ ವೆನೆಷಿಯನ್ ಕಾಲುವೆಗಳಲ್ಲಿ ಬಳಸಲಾಗುವ ಹಗುರವಾದ ಚಪ್ಪಟೆ-ತಳದ ದೋಣಿಯಾಗಿದೆ. ಆದರೆ ಈ ವಿಹಾರಗಳನ್ನು ಇದೀಗ ತಡೆಹಿಡಿಯಲಾಗಿದ್ದು ಸದ್ಯ ವಿಹಾರ ಮತ್ತೆ ಶುರುವಾಗುವ ಸಾಧ್ಯತೆ ಕಡಿಮೆ ಇದೆ.




ಇದಕ್ಕೆ ಕಾರಣ ನಗರದಲ್ಲಿರುವ ಸಣ್ಣ ಆದರೆ ಜನಪ್ರಿಯ ಕಾಲುವೆಗಳು ಬತ್ತಿ ಹೋಗಿರುವುದಾಗಿದೆ. ಇದರಿಂದ ಗೊಂಡೋಲಾ ಆಪರೇಟರ್‌ಗಳು ಹಾಗೂ ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.


ಕಾಲುವೆ ಬತ್ತಲು ಕಾರಣಗಳೇನು?


ಇಟಲಿಯ ಹೆಚ್ಚಿನ ಭಾಗಗಳಲ್ಲಿ ಹೆಚ್ಚು ಒತ್ತಡದ ಹವಾಮಾನ ಪರಿಸ್ಥಿತಿಗಳಿಂದ ಕಾಲುವೆಗಳು ಒಣಗಿವೆ ಎಂಬುದಾಗಿ ಹವಾಮಾನ ತಜ್ಞರು ತಿಳಿಸಿದ್ದಾರೆ. ಈ ಕಾಲುವೆಗಳು ಒಣಗಿರುವುದು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟು ಮಾಡಿದೆ. ಈ ಕಾಲುವೆಗಳನ್ನು ಜನರು ಅತ್ತಿತ್ತ ಓಡಾಡಲು ರಸ್ತೆಗಳಾಗಿಯೂ ಬಳಸುವುದರಿಂದ ನಗರದ ಹೆಚ್ಚಿನ ಭಾಗಗಳಲ್ಲಿ ಸಂಪರ್ಕ ತೊಡಕುಂಟಾಗಿದೆ ಎಂಬುದು ವರದಿಯಾಗಿದೆ.


ವೆನೀಸ್ ನಗರದಲ್ಲಿ ಕಾರುಗಳೇ ಇಲ್ಲ


ನಿರ್ದಿಷ್ಟವಾಗಿ ನಗರಗಳಲ್ಲಿ ರಸ್ತೆಗಳು ಇಲ್ಲದೇ ಇರುವುದರಿಂದ ನಿವಾಸಿಗಳು ಕಾಲುವೆಗಳನ್ನೇ ಬಳಸಿ ಸಂಚಾರ ನಡೆಸುತ್ತಾರೆ. ಈ ಸಣ್ಣ ಕಾಲುವೆಗಳ ನೀರು ಬತ್ತಿರುವುದರಿಂದ ನಗರದ ಹಲವು ಭಾಗಗಳು ನಿಲುಗಡೆಯಾಗಿವೆ.


ನಿವಾಸಿಗಳನ್ನು ಪ್ರವಾಸಿಗರನ್ನು ಅತ್ತಿತ್ತ ಕೊಂಡೊಯ್ಯುವ ಬೋಟ್‌ಗಳು


ಸಾಮಾನ್ಯವಾಗಿ ಗೊಂಡೋಲ್ಸ್ ಹಾಗೂ ಸ್ಟೀಮ್ ಬೋಟ್‌ಗಳು ನಿವಾಸಿಗಳನ್ನು ಅಂತೆಯೇ ಪ್ರವಾಸಿಗರನ್ನು ನಗರದಾದ್ಯಂತ ಸುತ್ತಾಡಿಸುತ್ತವೆ. ನೀರಿನಿಂದ ತುಂಬಿದ್ದ ಕಾಲುವೆಗಳು ಇದೀಗ ಸಣ್ಣ ತೊರೆಯಂತಿದ್ದು ಜಿನುಗುವಿಕೆ ಹಾಗೂ ಕೆಸರುಗದ್ದೆಯಾಗಿವೆ.




ಹವಾಮಾನ ವೈಪರೀತ್ಯದಿಂದ ಹಾನಿಗೊಳಗಾದ ಕಾಲುವೆಗಳು ನಗರದ ಅತ್ಯಂತ ಸುಂದರವಾದ ಸೇತುವೆಗಳಡಿಯಲ್ಲಿ ಹಾದು ಹೋಗುತ್ತವೆ ಹಾಗಾಗಿ ಈ ಸಣ್ಣ ಕಾಲುವೆಗಳಲ್ಲಿ ಬಹಳಷ್ಟು ರಮಣೀಯವಾದ ಗೊಂಡೋಲಾ ಸವಾರಿಗಳು ಇದೀಗ ನಡೆಯುತ್ತಿಲ್ಲ ಎಂಬುದಾಗಿ ವರದಿಯಾಗಿವೆ.


ತಜ್ಞರು ತಿಳಿಸಿರುವ ಕಾರಣಗಳೇನು?


ಅಧಿಕ-ಒತ್ತಡದ ಹವಾಮಾನ ಪರಿಸ್ಥಿತಿಯು ಕಡಿಮೆ ಹಿಮ ಕರಗುವಿಕೆಗೆ ಕಾರಣವಾಗಿದ್ದು ದೇಶದ ಹಲವಾರು ಭಾಗಗಳಲ್ಲಿನ ಪ್ರಮುಖ ಸರೋವರಗಳು ಮತ್ತು ನದಿ ತಾಣಗಳ ನೀರು ಬತ್ತಿಹೋಗಲು ಕಾರಣವಾಗಿವೆ. ಈ ಪರಿಸ್ಥಿತಿಯು ಜಾಗತಿಕ ತಾಪಮಾನ ಏರಿಕೆ ಮತ್ತು ಅಭೂತಪೂರ್ವ ಹವಾಮಾನ ಬದಲಾವಣೆಗಳ ಪರಿಣಾಮವಾಗಿದೆ ಎಂದು ತಜ್ಞರು ಸುಳಿವು ನೀಡಿದ್ದಾರೆ. 2019 ರಲ್ಲಿ ಮಾತ್ರ ವೆನಿಸ್ ತೀವ್ರ ಪ್ರವಾಹವನ್ನು ಕಂಡಿತು ಹಾಗೂ 50 ವರ್ಷಗಳಲ್ಲಿ ವೆನೀಸ್ ನಗರ ಕಂಡ ಅತ್ಯಂತ ಕೆಟ್ಟ ಪ್ರವಾಹವಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.


ಕೆಲವೊಂದು ಕಾಲುವೆಗಳಲ್ಲಿ ನೀರಿದೆ


ದೇಶವು ಇನ್ನೂ ಭರವಸೆ ಕಳೆದುಕೊಂಡಿಲ್ಲ ಏಕೆಂದರೆ ನಗರದ ಸಣ್ಣ ಕಾಲುವೆಗಳಲ್ಲಿನ ನೀರು ಬತ್ತಿಹೋಗಿದ್ದರೂ, ಗ್ರ್ಯಾಂಡ್ ಮತ್ತು ಗಿಯುಡೆಕಾ ಕಾಲುವೆಗಳಂತಹ ವಿಶಾಲ ಮತ್ತು ಮುಖ್ಯ ಜಲಮಾರ್ಗಗಳು ಎಂದಿನಂತೆ ನೀರಿನಿಂದ ತುಂಬಿಕೊಂಡಿವೆ ಹಾಗೂ ಕಾರ್ಯನಿರ್ವಹಿಸುತ್ತಿವೆ.


ನೀವು ವೆನೀಸ್‌ಗೆ ಹೋದರೆ, ಬಂದರು ನಗರಕ್ಕೆ ನಡೆದಾಡುವ ಪ್ರವಾಸವನ್ನು ಕೈಗೊಳ್ಳಿ. ಏಕೆಂದರೆ ಈ ಪ್ರದೇಶಗನ್ನು ಕಾಲ್ನಡಿಗೆಯಲ್ಲಿಯೇ ಸುತ್ತಾಡಬೇಕು ಹಾಗೂ ಅಲ್ಲಿನ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಪ್ರವಾಸಿಗರು ತಿಳಿಸುತ್ತಾರೆ.


ವೆನೀಸ್ ಪ್ರವಾಸಕ್ಕೆ ಉತ್ತಮ ತಿಂಗಳು ಯಾವುದು?


ಸಂದರ್ಶಕರಿಗೆ ವಿಶೇಷ ಸ್ಥಳ ಆಧಾರಿತ ಪ್ರವಾಸಗಳು ಮತ್ತು ಉಚಿತ ಪ್ರವಾಸಗಳು ಇವೆ. ಇಲ್ಲಿಗೆ ಭೇಟಿ ನೀಡಿದವರು ವೆನೀಸ್‌ನಾದ್ಯಂತ ಸುತ್ತಾಟವನ್ನು ಆರಾಮವಾಗಿ ಮಾಡಬಹುದಾಗಿದೆ. ವೆನಿಸ್‌ಗೆ ಪ್ರವಾಸ ಕೈಗೊಳ್ಳಲು ಏಪ್ರಿಲ್‌ನಿಂದ ಜೂನ್‌ ಮತ್ತು ಸೆಪ್ಟೆಂಬರ್‌ನಿಂದ ಅಕ್ಟೋಬರ್‌ ಉತ್ತಮ ತಿಂಗಳುಗಳಾಗಿವೆ.

Published by:Divya D
First published: