Piles Problem: ಮೂಲವ್ಯಾಧಿ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ರೆ ಇಲ್ಲಿದೆ ಪರಿಹಾರ

ಪೈಲ್ಸ್ ಸಮಸ್ಯೆಗೆ ಕಡಿಮೆ ನೀರು ಕುಡಿಯುವುದು. ಪೈಲ್ಸ್ ನಲ್ಲಿ ಹಲವು ವಿಧಗಳಿವೆ. ಕೆಲವರಿಗೆ ಗುದದ್ವಾರದ ಪೈಲ್ಸ್ ಆದರೆ ಇನ್ನು ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುತ್ತದೆ. ಕೂರುವುದು, ನಡೆಯಲು ಸಾಧ್ಯವಾಗದೇ ಒದ್ದಾಡಬೇಕಾಗುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೂಲವ್ಯಾಧಿ (piles) ಸಮಸ್ಯೆ (problem) ಅನುಭವಿಸಿದವರಿಗೆ ಗೊತ್ತು. ಕೂರಲು, ನಿಲ್ಲಲು ಸಾಧ್ಯವಾಗದೇ, ಉರಿಯನ್ನು ತಾಳಲಾಗದೇ ಜೀವ ಹೋದಂತೆ ಭಾಸವಾಗುತ್ತದೆ. ದೇಹದಲ್ಲಿ (body) ಯಾವ ಕಾಯಿಲೆ ಬಂದರೂ ಅನಾರೋಗ್ಯವೇ (unhealthy) ಆದರೆ ಮೂಲವ್ಯಾಧಿ ಸಂಕಷ್ಟ ತುಂಬಾ ಘೋರ. ಮುಖ್ಯವಾಗಿ ನಮ್ಮ ದೈನಂದಿನ ಸಮಸ್ಯೆಗೆ ಅನಾನುಕೂಲತೆ ಉಂಟು ಮಾಡಿ, ತುಂಬಾ ತೊಂದರೆ ಅನುಭವಿಸುವಂತೆ ಮಾಡುತ್ತದೆ. ತಜ್ಞರ ಪ್ರಕಾರ ಯಾರಲ್ಲಿ ಸುದೀರ್ಘವಾಗಿ ಮಲಬದ್ಧತೆಯ (constipation) ಸಮಸ್ಯೆ ಇರುತ್ತದೆಯೋ ಅಂತವರಿಗೆ ಮೂಲವ್ಯಾಧಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿಗಿರುತ್ತದೆ ಎಂದಿದ್ದಾರೆ. ಹಾಗಾದರೆ ಮೂಲವ್ಯಾಧಿ ಸಮಸ್ಯೆಗೆ ಏನು ಕಾರಣ ಅಂತ ನೋಡಿದಾಗ ಮೊದಲು ಬರುವುದೇ ನಮ್ಮ ಆಹಾರ  ಪದ್ಧತಿ ಮತ್ತು ಕೆಟ್ಟ (bad) ಜೀವನಶೈಲಿ (lifestyle).

  ಬಹುತೇಕರು ಊಟದಲ್ಲಿ ನಾರಿನಂಶ (Fiber) ಇರುವ ಪದಾರ್ಥ ಸೇವನೆ ಮಾಡದಿದ್ದಾಗ, ಹಸಿರು ಸೊಪ್ಪು,  ತರಕಾರಿ, ಹಣ್ಣನ್ನು ತಮ್ಮ ಆಹಾರ ಪದ್ಧತಿಯಲ್ಲಿ ರೂಢಿಸಿಕೊಳ್ಳದೇ ಹೋದಾಗ ಪೈಲ್ಸ್ ಹೆಚ್ಚಾಗಿ ಬಾಧಿಸುತ್ತದೆ. ಇನ್ನು ಮದ್ಯಪಾನ, ಧೂಮಪಾನ ಮಾಡುವವರಲ್ಲಿ, ಅನುವಂಶೀಯತೆಯೂ (inheritance) ಮೂಲವ್ಯಾಧಿಗೆ ಮುಖ್ಯ ಕಾರಣ.

  ಮೂಲವ್ಯಾಧಿ ದೀರ್ಘವಾಗಿ ಕಾಡುವ ಮಲಬದ್ಧತೆಯಿಂದ ಬೇಗ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ. ಮಲ ವಿಸರ್ಜನೆ ವೇಳೆ ರಕ್ತ ಸೋರುವುದು, ಗುದದ್ವಾರದಲ್ಲಿ ಕೆರೆತ, ಉರಿಯಿದ್ದರೆ ಮೂಲವ್ಯಾಧಿ ಸಮಸ್ಯೆ ಎಂದು ಗೊತ್ತಾಗುತ್ತದೆ.

  ಇನ್ನು ಪೈಲ್ಸ್ ಸಮಸ್ಯೆಗೆ ಪರಿಹಾರವಾಗಿ ಮನೆ ಮದ್ದು

  - ಹೆಚ್ಚು ನೀರಿನಂಶ ಇರುವ ಆಹಾರ ಸೇವನೆ ಮಾಡಬೇಕು.

  - ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ತುಳಸಿ ಎಲೆಗಳ ಸೇವನೆಯಿಂದ ಪೈಲ್ಸ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

  ಇದನ್ನೂ ಓದಿ: ತಾಯಿಯಾದ ನಂತರ ಉಂಟಾಗುವ ಖಿನ್ನತೆಯನ್ನು ದೂರ ಮಾಡಲು ಹೀಗೆ ಮಾಡಿ…

  - ಬಹಳಷ್ಟು ಕಾಯಿಲೆಗಳಿಗೆ ರಾಮಬಾಣವಾಗಿರುವ ಅರಿಶಿಣವನ್ನು ಮೂಲವ್ಯಾಧಿ ಸಮಸ್ಯೆ ನಿರ್ಮೂಲನೆಗೂ ಬಳಕೆ ಮಾಡಲಾಗುತ್ತದೆ. ಒಂದು ಚಿಕ್ಕ ಚಮಚದಲ್ಲಿ ಅರಿಶಿಣ ಪುಡಿ, ಕಾಲು ಚಮಚ ಸಾಸಿವೆ ಎಣ್ಣೆ, ಮೂರು ಹನಿ ಈರುಳ್ಳಿ ರಸ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟ್ ನ್ನು ರಾತ್ರಿ ಮಲಗುವ ಮೊದಲು ಪೈಲ್ಸ್ ಉಂಟಾಗಿರುವ ಜಾಗಕ್ಕೆ ಹಚ್ಚಿ. ಇದು ಉರಿಯೂತ, ಗಾಯದ ಸಮಸ್ಯೆಗೆ ಫುಲ್ ಸ್ಟಾಪ್ ಇಡುತ್ತದೆ.

  - ಈರುಳ್ಳಿ ಮತ್ತು ಜೇನುತುಪ್ಪ ಕೂಡ ಪೈಲ್ಸ್ ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಈರುಳ್ಳಿಯ ರಸದ ಜತೆಗೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ, ದಿನವೂ ಎರಡು ಬಾರಿ ಸೇವಿಸಿದರೆ ಪೈಲ್ಸ್ ನೋವು, ರಕ್ತಸ್ರಾವ ಬೇಗ ಗುಣವಾಗುತ್ತದೆ.

  - ಅಧಿಕ ನಾರಿನಂಶ ಹೊಂದಿರುವ ಮೆಂತ್ಯ ಕಾಳು ಮತ್ತು ಮೆಂತ್ಯ ಸೊಪ್ಪು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಸ್ವಲ್ಪ ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆ ಹಾಕಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು. ಇದರಿಂದ ಪೈಲ್ಸ್ ಬೇಗ ಗುಣವಾಗಲು ಸಹಾಯವಾಗುತ್ತದೆ.

  ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತೆ ಎಚ್ಚರ

  ಮಜ್ಜಿಗೆ ಸೇವನೆ

  ಇನ್ನು ಪೈಲ್ಸ್ ಸಮಸ್ಯೆಗೆ ಕಡಿಮೆ ನೀರು ಕುಡಿಯುವುದು. ಪೈಲ್ಸ್ ನಲ್ಲಿ ಹಲವು ವಿಧಗಳಿವೆ. ಕೆಲವರಿಗೆ ಗುದದ್ವಾರದ ಪೈಲ್ಸ್ ಆದರೆ ಇನ್ನು ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುತ್ತದೆ. ಕೂರುವುದು, ನಡೆಯಲು ಸಾಧ್ಯವಾಗದೇ ಒದ್ದಾಡಬೇಕಾಗುತ್ತದೆ.  ಹಾಗಾಗಿ ದಿನವೂ ಮಜ್ಜಿಗೆ ಸೇವನೆ ಮಾಡುವುದು ಒಳಿತು. ಕ್ಯಾರೆಟ್, ಬೀಟ್ ರೂಟ್ ಜ್ಯೂಸ್, ಕಿತ್ತಳೆ ಜ್ಯೂಸ್ ಕುಡಿದರೆ ಉರಿ ಕಡಿಮೆಯಾಗುತ್ತದೆ. ಹಾಗಲಕಾಯಿ ತಿನ್ನುವುದರಿಂದಲೂ ಪೈಲ್ಸ್ ಕಡಿಮೆಯಾಗುತ್ತದೆ.

  ಮೂಲಂಗಿ ಮೂಲವ್ಯಾಧಿಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿ ಆಹಾರವಾಗಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಮೂಲಂಗಿ ತಿನ್ನುವುದನ್ನು ರೂಢಿಸಿಕೊಳ್ಳಿ. ಅಧಿಕ ಖಾರವಿರುವ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ. ಉಪ್ಪು, ಹುಳಿ, ಖಾರವನ್ನು ಹೆಚ್ಚು ತಿನ್ನದೇ, ಎಷ್ಟು ಬೇಕೋ ಅಷ್ಟೇ ಸೇವಿಸಿ.
  Published by:renukadariyannavar
  First published: