ಮಕ್ಕಳಲ್ಲಿ ರೋಗನಿರೋಧಕ (Immunization)ಶಕ್ತಿ ತುಂಬಾ ಕಡಿಮೆಯಿರುತ್ತದೆ. ಇನ್ನು ವಾತಾವರಣದಲ್ಲಿನ ಸಣ್ಣಪುಟ್ಟ ಬದಲಾವಣೆಗಳಿಂದ ಮಕ್ಕಳು ಆಗಾಗ ಕೆಮ್ಮು, ನೆಗಡಿಯಿಂದ ಬಳಲುರುತ್ತಿದ್ದಾರೆ. ಕೆಮ್ಮಿನಿಂದಾಗಿ ಮಕ್ಕಳು ಕೆಲವೊಮ್ಮೆ ತುಂಬಾ ಸುಸ್ತಾಗಿ ಬಿಡುತ್ತಾರೆ. ಇದರಿಂದಾಗಿ ಅವರು ಸರಿಯಾಗಿ ತಿನ್ನಲು ಮತ್ತು ಮಲಗಲು ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ (Childrens) ಕೆಮ್ಮಿನ ಸಮಸ್ಯೆ (Cough problem) ಬಂದರೆ ಬಹಳಷ್ಟು ಜಾಗರೂಕರಾಗಿರಬೇಕು. ಇದಕ್ಕಾಗಿ ಪೋಷಕರು ಮಕ್ಕಳಿಗೆ ಆಸ್ಪತ್ರೆಯ ಮದ್ದುಗಳನ್ನು ತಂದು ನೀಡುತ್ತಾರೆ. ಆದರೆ ಕೆಲವೊಂದು ಬಾರಿ ಮಕ್ಕಳು ಸಹ ಅದನ್ನು ತೆಗೆದುಕೊಳ್ಳಲು ಒಪ್ಪಲ್ಲ. ಇನ್ನು ಕೆಲವರಿಗೆ ಅದರಿಂದ ಅಡ್ಡ ಪರಿಣಾಮಗಳು ಸಹ ಬರುತ್ತದೆ.
ಬದಲಾಗುತ್ತಿರುವ ಹವಾಮಾನದಿಂದಾಗಿ ಮಕ್ಕಳಲ್ಲಿ ಕೆಮ್ಮು, ನೆಗಡಿ ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಮಕ್ಕಳಿಗೆ ಔಷಧಿಗಳ ಬದಲಿಗೆ ನೈಸರ್ಗಿಕ ಸಿರಪ್ ನೀಡಬಹುದು. ಇದು ಮಕ್ಕಳು ಉತ್ತಮ ಆರೋಗ್ಯದಿಂದಿರಲು ಬಹಳಷ್ಟು ಸಹಕಾರಿಯಾಗುತ್ತದೆ. ಹಾಗಿದ್ರೆ ಆ ನೈಸರ್ಗಿಕ ಔಷಧಿಗಳು ಯಾವುದೆಂದು ಈ ಲೇಖನದಲ್ಲಿ ತಿಳಿಯಿರಿ.
ಮಕ್ಕಳಿಗಾಗಿ ಈ ನೈಸರ್ಗಿಕ ಕೆಮ್ಮು ಸಿರಪ್ ಮಾಡಿ
ಜೇನು ತುಪ್ಪ
ಜೇನುತುಪ್ಪವು ಕೆಮ್ಮಿನ ಸಮಸ್ಯೆಗೆ ಉತ್ತಮ ಮದ್ದಾಗಿದೆ. ಸುಮಾರು ಒಂದು ವರ್ಷದ ನಂತರದ ಮಕ್ಕಳಿಗೆ ಕೆಮ್ಮಿನ ತೊಂದರೆಯಿದ್ದರೆ ಜೇನುತುಪ್ಪವನ್ನು ನೀಡಬಹುದು. ಮಕ್ಕಳು ಕೂಡ ಜೇನುತುಪ್ಪವನ್ನು ರುಚಿಕರವೆಂದು ಕಂಡುಕೊಳ್ಳುತ್ತಾರೆ, ಆದ್ದರಿಂದ ಅವರು ಕೆಮ್ಮಿನ ಸಮಯದಲ್ಲಿ ಅದನ್ನು ಸುಲಭವಾಗಿ ತಿನ್ನುತ್ತಾರೆ. ಒಂದು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ 1 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗೆ ನೀಡಬಹುದು.
ಇದನ್ನೂ ಓದಿ: Health Tips: ದಿನಾ 2 ಸೇಬು ತಿಂದ್ರೆ ಕೊಲೆಸ್ಟ್ರಾಲ್ ಸಮಸ್ಯೆ ಬರೋದೇ ಇಲ್ಲ
ಚಿಕನ್ ಸೂಪ್
ತಜ್ಞರ ಪ್ರಕಾರ, ಚಿಕನ್ ನೂಡಲ್ ಸೂಪ್ ಗಂಟಲಿನ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಮ್ಮಿನಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ಚಿಕನ್ ನೂಡಲ್ ಸೂಪ್ ಬೆಚ್ಚಗಾಗುವ ಅಂಶವನ್ನು ಹೊಂದಿದೆ, ಇದು ನೋಯುತ್ತಿರುವ ಗಂಟಲು ನಿವಾರಿಸುವ ಮೂಲಕ ಮಕ್ಕಳಲ್ಲಿರುವ ಗಂಟಲಿನ ಆರೋಗ್ಯದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇನ್ನು ಚಿಕನ್ ಸೂಪ್ ಎಂದಾಗ ಮಕ್ಕಳು ಬೇಗನೆ ಸೇವಿಸುತ್ತಾರೆ. ಅದಕ್ಕಾಗಿ ಇದು ಉತ್ತಮವಾಗಿದೆ. ಚಿಕನ್ ಸೂಪ್ ತಯಾರಿಸಿ ನಿಮ್ಮ ಮಗುವಿಗೆ ನೀಡಿ. 10 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಚಿಕನ್ ಸೂಪ್ ಅನ್ನು ಕುಡಿಯಬಹುದು.
ಬಿಸಿ ಪಾನೀಯಗಳು
ಮಕ್ಕಳಲ್ಲಿ ಕೆಮ್ಮು, ಗಂಟಲಿನ ನೋವಿನಿಂದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಅವರು ತಮ್ಮ ಗಂಟಲಿನಲ್ಲಿರುವಂತಹ ಸಮಸ್ಯೆಗಳನ್ನು ತೆರವುಗೊಳಿಸಲು ಮತ್ತು ಕೆಮ್ಮನ್ನು ನಿವಾರಿಸಲು ಬಿಸಿ ಪಾನೀಯಗಳನ್ನು ಸೇವಿಸಬೇಕು. ಮಕ್ಕಳಿಗೆ ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಚಹಾವನ್ನು ನೀಡಬಹುದು.
ನೀರು ಮತ್ತು ಉಪ್ಪಿನಿಂದ ಬಾಯಿ ಮುಕ್ಕಳಿಸು
ಮಗುವು ತನ್ನಷ್ಟಕ್ಕೆ ತಾನೇ ನೀರಿನಿಂದ ಬಾಯಿ ಮುಕ್ಕಳಿಸಲು ಸಾಧ್ಯವಾದರೆ, ಬೆಚ್ಚಗಿನ ನೀರಿಗೆ ಅರ್ಧ ಚಿಟಿಕೆ ಉಪ್ಪನ್ನು ಸೇರಿಸಿ ನಂತರ ಬಾಯಿ ಮುಕ್ಕಳಿಸಲು ಹೇಳಿ. ಇದು ಕೆಮ್ಮಿನ ತೊಂದರೆ ಇರುವವರಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.
ಅರಿಶಿನ ಹಾಲು
ಅರಿಶಿನವು ನಂಜು ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸೋಂಕುಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ. ಒಂದು ಲೋಟ ಬೆಚ್ಚಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಟೀ ಚಮಚ ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದನ್ನು ಚೆನ್ನಾಗಿ ಕಲಕಿ ಮತ್ತು ನಿಮ್ಮ ಮಗುವಿಗೆ ರಾತ್ರಿ ಹೊತ್ತಿನಲ್ಲಿ ಮಲಗುವ ಮುಂಚೆ ಕುಡಿಯಲು ಹೇಳಿ. ಈ ಪಾನೀಯವು ಗಂಟಲು ನೋವು ಮತ್ತು ಕೆಮ್ಮಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ