Diabetes: ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚು ಇದೆಯಾ? ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ, ಕಂಟ್ರೋಲ್​ ಆಗುತ್ತೆ ನೋಡಿ

ಮಧುಮೇಹವನ್ನು ನಿಯಂತ್ರಿಸದಿದ್ದರೆ, ಇದು ದೇಹದ ಬಹುತೇಕ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಆದ್ದರಿಂದ, ಈಗಾಗಲೇ ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಆಗಿದ್ದರೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಪಕ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಯಾರ ಆರೋಗ್ಯವನ್ನು (Health) ವಿಚಾರಿಸಿದರೂ ‘ನಮಗೆ ಸಕ್ಕರೆ ಕಾಯಿಲೆ ಇದೆ ಮತ್ತು ಬಿಪಿ ಇದೆ’ ಅಂತ ಹೇಳುವುದನ್ನು ನಾವು ತುಂಬಾನೇ ಕೇಳಿರುತ್ತೇವೆ. ಈ ಎರಡು ಈಗ ತುಂಬಾನೇ ಬೇಗನೆ ಮನುಷ್ಯನನ್ನು ಅವರಿಸಿಕೊಳ್ಳುವ ಕಾಯಿಲೆಗಳಾಗಿವೆ (disease) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮೊದಲೆಲ್ಲಾ 50 ವಯಸ್ಸಾದ ಮೇಲೆ ಶುರುವಾಗುತ್ತಿದ್ದ ಈ ಬಿಪಿ ಮತ್ತು ಸಕ್ಕರೆ ಕಾಯಿಲೆ (Sugar) ಈಗ ಎಷ್ಟೋ ಜನರಿಗೆ 30 ವಯಸ್ಸು ದಾಟುವ ಮುಂಚೆಯೇ ಬರುತ್ತಿವೆ ಎಂದು ಹೇಳಿದರೆ ಸುಳ್ಳಲ್ಲ. ಡಯಾಬಿಟಿಸ್ (Diabetes) ಎನ್ನುವುದು ಒಂದು ಗಂಭೀರ ಕಾಯಿಲೆ, ಆದರೆ ಇದನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಜಾಸ್ತಿಯಾದಾಗ ನಿಮ್ಮ ಸಕ್ಕರೆ ಕಾಯಿಲೆ ಇನ್ನೂ ತೀವ್ರವಾಗುತ್ತದೆ.

ಮಧುಮೇಹವನ್ನು ನಿಯಂತ್ರಿಸದಿದ್ದರೆ, ಇದು ದೇಹದ ಬಹುತೇಕ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಆದ್ದರಿಂದ, ಈಗಾಗಲೇ ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಆಗಿದ್ದರೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಪಕ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ.

1. ನಿಯಮಿತವಾಗಿ ವ್ಯಾಯಾಮ ಮಾಡುವುದು
ಮಧುಮೇಹ ಹೊಂದಿರುವ ವ್ಯಕ್ತಿಯು ತನ್ನ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಗಳನ್ನು ಒಳಗೊಂಡಿರಬೇಕು. ಕನಿಷ್ಠ 40 ರಿಂದ 45 ನಿಮಿಷಗಳ ಮಧ್ಯಮ ಮತ್ತು ತೀವ್ರತೆಯ ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗುತ್ತದೆ. ಚುರುಕಾದ ನಡಿಗೆ, ಸೈಕ್ಲಿಂಗ್, ಹೈಕಿಂಗ್, ರೋಲರ್ ಬ್ಲೇಡಿಂಗ್, ಜಾಗಿಂಗ್, ಈಜುವುದು, ಸ್ಕಿಪ್ಪಿಂಗ್ ಅಥವಾ ಯಾವುದೇ ರೀತಿಯ ಕ್ರೀಡೆಗಳನ್ನು ಸಹ ಆಡುವುದು ಸೇರಿದಂತೆ ದಿನನಿತ್ಯ ತಪ್ಪದೆ ಮಾಡಿರಿ.

2. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು
ನಿಮಗೆ ಸಕ್ಕರೆ ಕಾಯಿಲೆ ಇದ್ದರೆ, ನೀವು ನಿಮ್ಮ ದೇಹದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬೇಕು. ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ಮತ್ತು ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಊಟವನ್ನು ಬಿಡುವುದು ಒಳ್ಳೆಯ ಉಪಾಯ ಅಲ್ಲ. ಹೀಗೆ ಮಾಡುವುದರಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ, ಸರಿಯಾದ ರೀತಿಯ ಆಹಾರವನ್ನು ಸೇವಿಸುವ ಮೂಲಕ ಮತ್ತು ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬೇಕು.

ಇದನ್ನೂ ಓದಿ: Cancer And Health: ಈ ಕೆಲವು ಆಹಾರ ಸೇವನೆಯಿಂದ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ!

3. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ
ಮಧುಮೇಹ ಇರುವವರು ಸಮತೋಲಿತ ಆಹಾರವನ್ನು ಸೇವಿಸಬೇಕು. ಅವರು ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ನಾರಿನಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುವ ಮತ್ತೊಂದು ಜೀವನಶೈಲಿ ಬದಲಾವಣೆಯೆಂದರೆ ಸ್ವಲ್ಪ ಸ್ವಲ್ಪ ಊಟ ಮಾಡುವುದು. ನೀವು ಒಂದು ಬಾರಿಗೆ ಊಟದಲ್ಲಿ 4 ಚಪಾತಿಗಳನ್ನು ತಿಂದರೆ, ಅದನ್ನು ಎರಡು ಬಾರಿ ಎರಡೆರಡು ಚಪಾತಿಗಳನ್ನು ಸೇವಿಸುವುದು ಒಳ್ಳೆಯದು.

ಹೆಚ್ಚು ತರಕಾರಿಗಳು, ಬೀನ್ಸ್ ಮತ್ತು ಬೇಳೆಕಾಳುಗಳನ್ನು ಸೇವಿಸಬೇಕು. ಪಿಜ್ಜಾ, ಬರ್ಗರ್ ಗಳು, ನೂಡಲ್ಸ್, ಪೇಸ್ಟ್ರಿಗಳು ಮತ್ತು ಅಧಿಕ ಕೊಬ್ಬಿನ ಚೀಸ್ ನಂತಹ ಜಂಕ್‌ಫುಡ್ ಗಳನ್ನು ದೂರವಿಡಬೇಕು. ಚಿಪ್ಸ್, ಗರಿಗರಿ, ಪೇಸ್ಟ್ರಿಗಳು, ಬಿಸ್ಕತ್ತುಗಳು ಮತ್ತು ಸಮೋಸಾಗಳಂತಹ ಆಹಾರ ಪದಾರ್ಥಗಳಲ್ಲಿ ಕಂಡು ಬರುವ ಸ್ಯಾಚುರೇಟೆಡ್ ಕೊಬ್ಬನ್ನು ಆದಷ್ಟು ದೂರವೇ ಇರಿಸುವುದು ಒಳ್ಳೆಯದು. ಕೋಳಿ ಮತ್ತು ಟರ್ಕಿಯಂತಹ ಮಾಂಸವನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಗ್ರಿಲ್ಡ್ ಮತ್ತು ಹಬೆಯಲ್ಲಿ ಬೇಯಿಸಿದ ಮಾಂಸವನ್ನು ಆಹಾರದಲ್ಲಿ ಸೇರಿಸಬೇಕು ಮತ್ತು ಮದ್ಯ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು.

4. ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು
ಒತ್ತಡವು ಮಧುಮೇಹವನ್ನು ಪ್ರಚೋದಿಸುತ್ತದೆ. ಒತ್ತಡದ ಹಾರ್ಮೋನುಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ನಲ್ಲಿ ಏರಿಕೆಗೆ ಕಾರಣವಾಗುತ್ತವೆ. ನಿರಂತರ ಒತ್ತಡವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬಹುದು. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:  Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

ಒತ್ತಡವನ್ನು ಕಡಿಮೆ ಮಾಡಲು ಪ್ರತಿದಿನ 8 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಿ, ಒಳ್ಳೆಯ ಇಂಪಾದ ಸಂಗೀತ ಕೇಳುವುದು, ಮನಸ್ಸಿಗೆ ಹಿತ ಎನಿಸುವ ಚಲನಚಿತ್ರಗಳನ್ನು ನೋಡುವುದು, ಹಾಸ್ಯ ತುಣುಕುಗಳನ್ನು ವೀಕ್ಷಿಸುವುದು, ಜಿಮ್ ಗೆ ಹೋಗಿ ತಾಲೀಮು ಮಾಡುವುದು, ಒತ್ತಡವನ್ನು ಪ್ರಚೋದಿಸುವ ಸನ್ನಿವೇಶಗಳಿಂದ ದೂರವಿರುವುದು ಮತ್ತು ಆದಷ್ಟು ಯಾವುದಾದರೊಂದು ಹೊರಾಂಗಣ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಒಳ್ಳೆಯದು.
Published by:Ashwini Prabhu
First published: