Multivitamin: ಮಲ್ಟಿವಿಟಮಿನ್‌ಗಳ ಸೇವನೆಯಿಂದ ದೇಹಕ್ಕಾಗೋ ಲಾಭವೇನು? ವೈದ್ಯರು ಏನು ಹೇಳಿದ್ದಾರೆ ನೋಡಿ

ಮಲ್ಟಿವಿಟಮಿನ್‌

ಮಲ್ಟಿವಿಟಮಿನ್‌

ನವದೆಹಲಿ ಮೂಲದ ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಆಂತರಿಕ ಔಷಧದ ಸಲಹೆಗಾರರಾದ ಮನೀಶ್ ಅರೋರಾ ಹೇಳುವಂತೆ ಯಾವುದೇ ಕಾರಣವಿಲ್ಲದೆ ಹಲವಾರು ರೋಗಿಗಳು ಮಲ್ಟಿವಿಟಮಿನ್‌ಗಳನ್ನು ಶಿಫಾರಸು ಮಾಡುವಂತೆ ಹೇಳುತ್ತಾರೆ. ವೈದ್ಯರ ವರದಿಯನ್ನು ಸರಿಯಾಗಿ ಗಮನಿಸದೆ ಈ ಪೂರಕಗಳನ್ನು ಒಳ್ಳೆಯದಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಶೀಘ್ರವಾಗಿ ಉತ್ತಮ ಆರೋಗ್ಯ (Health) ಹೊಂದಲು ಮಲ್ಟಿವಿಟಮಿನ್‌ಗಳನ್ನು (Multivitamin) ಬಳಸಬಾರದು ಎಂದು ಭಾರತದಾದ್ಯಂತ ಹಲವಾರು ವೈದ್ಯರು ಪೂರಕಗಳನ್ನು ನೀಡುವಂತೆ ಶಿಫಾರಸು ಮಾಡುವ ರೋಗಿಗಳಿಗೆ ಸೂಚಿಸಿದ್ದಾರೆ. ನವದೆಹಲಿ ಮೂಲದ ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಆಂತರಿಕ ಔಷಧದ ಸಲಹೆಗಾರರಾದ ಮನೀಶ್ ಅರೋರಾ ಹೇಳುವಂತೆ ಯಾವುದೇ ಕಾರಣವಿಲ್ಲದೆ ಹಲವಾರು ರೋಗಿಗಳು (patients) ಮಲ್ಟಿವಿಟಮಿನ್‌ಗಳನ್ನು ಶಿಫಾರಸು ಮಾಡುವಂತೆ ನನಗೆ ಹೇಳುತ್ತಾರೆ. ವೈದ್ಯರ ವರದಿಯನ್ನು ಸರಿಯಾಗಿ ಗಮನಿಸದೆ ನಾನು ಪೂರಕಗಳನ್ನು ನೀಡುವುದಿಲ್ಲ ಎಂದು ಹೇಳುತ್ತಾರೆ. ಮನೀಶ್ ಹೇಳುವಂತೆ ಯಾರೇ ಆಗಲಿ ಆರೋಗ್ಯಕರ ಆಹಾರ ಪದ್ಧತಿಯನ್ನು (Food Culture) ಅನುಸರಿಸಿದರೆ ನಿಮ್ಮ ದೇಹಕ್ಕೆ ಬೇಕಾದ ಎಲ್ಲಾ ವಿಟಮಿನ್ ಹಾಗೂ ಮಿನರಲ್‌ಗಳು ಆಹಾರದಿಂದಲೇ ದೊರೆಯುತ್ತದೆ ಎಂದಾಗಿದೆ.


ಮಲ್ಟಿವಿಟಮಿನ್‌ಗಳನ್ನು ಜನರು ಆಶ್ರಯಿಸಿರುತ್ತಿರುವುದು ಎಷ್ಟು ನಿಜವೆಂದರೆ 2020 ರಲ್ಲಿ ಕೋವಿಡ್-19 ರ ವಿರುದ್ಧ ಹೋರಾಡಲು ಭಾರತೀಯರು 500 ಕೋಟಿ ವಿಟಮಿನ್, ಸತು ಹಾಗೂ ಮಿಲ್ಟಿವಿಟಮಿನ್‌ಗಳನ್ನು ಖರೀದಿಸಿದ್ದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ. ಇದೆಲ್ಲಾ ವಿಷಯಗಳನ್ನು ಆಳವಾಗಿ ಅವಲೋಕಿಸಿದಾಗ ದೇಹವನ್ನು ಸದೃಢ ಹಾಗೂ ಆರೋಗ್ಯಕರವಾಗಿ ಇರಿಸಿಕೊಳ್ಳಲು ಮಲ್ಟಿವಿಟಮಿನ್‌ಗಳನ್ನು ಸೇವಿಸುವ ಅಗತ್ಯವಿದೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ.


ವೈದ್ಯರ ಸಲಹೆ ಇಲ್ಲದೆ ಮಲ್ಟಿವಿಟಮಿನ್‌ಗಳ ಸೇವನೆ ಮಾಡಬೇಡಿ
ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ಅತ್ಯುತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಲು ಮಲ್ಟಿವಿಟಮಿನ್‌ಗಳನ್ನು ಪ್ರತಿಯೊಬ್ಬರೂ ಸೇವಿಸಬೇಕು ಎಂಬುದು 1970 ರ ದಶಕದಿಂದಲೂ ಕೇಳಿಬರುತ್ತಿರುವ ಮಾತಾಗಿದೆ.


ಇದನ್ನೂ ಓದಿ: Cancer: ಯುವಜನರಲ್ಲಿಯೇ ಹೆಚ್ಚುತ್ತಿದ್ಯಂತೆ ಮಹಾಮಾರಿ ಕ್ಯಾನ್ಸರ್‌! ಹಾಗಿದ್ರೆ ಇದಕ್ಕೆ ಕಾರಣವೇನು?

ಈ ಮಾತನ್ನು ಪುಷ್ಟೀಕರಿಸುವ ಮುನ್ನ ನಿರಾಕರಣೆ ಹೀಗಿದ್ದು ಲೇಖನವು ರೋಗ ಅಥವಾ ರೋಗದ ಇತಿಹಾಸವನ್ನು ಹೊಂದಿರದ ಆರೋಗ್ಯಕರ ಜನರ ಕುರಿತು ಚರ್ಚಿಸುತ್ತದೆ. ವೈದ್ಯರನ್ನು ಸಂಪರ್ಕಿಸದೆಯೇ ಮಲ್ಟಿವಿಟಮಿನ್‌ಗಳನ್ನು ಸೇವಿಸುವುದರ ಬಗ್ಗೆಯೂ ಲೇಖನ ಬೆಳಕು ಚೆಲ್ಲುತ್ತದೆ.


ಜನರ ತಪ್ಪು ತಿಳುವಳಿಕೆ
ಆರೋಗ್ಯ ಸುಧಾರಣೆಗೆ ಹಾಗೂ ರೋಗಗಳನ್ನು ತಡೆಗಟ್ಟಲು ಮಲ್ಟಿವಿಟಮಿನ್‌ಗಳನ್ನು ಸೇವಿಸುವುದು ಉತ್ತಮ ಎಂಬುದು ಜನರ ತಪ್ಪು ನಂಬಿಕೆಯಾಗಿದೆ. ಇದು ಒಂದು ರೀತಿಯಲ್ಲಿ ತಮ್ಮನ್ನು ತಾವೇ ವಂಚಿಸುತ್ತಿರುವ ಪ್ರಕ್ರಿಯೆಯಾಗಿದ್ದು, ಉತ್ತಮ ಆರೋಗ್ಯದ ಭ್ರಮೆಗಳಲ್ಲಿ ಇದೂ ಒಂದಾಗಿದೆ.


ಅದಾಗ್ಯೂ ಮಲ್ಟಿ ವಿಟಮಿನ್ ಟ್ಯಾಬ್ಲೆಟ್ ಅಥವಾ ಸಿರಪ್ ಎಷ್ಟು ಪೋಷಕಾಂಶಗಳನ್ನು ಹೊಂದಿರಬೇಕು ಎಂಬುದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ ಅಂತೆಯೇ ವಾಸ್ತವವಾಗಿ, ದೈನಂದಿನ ಮಲ್ಟಿವಿಟಮಿನ್‌ಗಳು ಮತ್ತು ಖನಿಜಗಳ ಸೇವನೆಯನ್ನು ಸೂಚಿಸಲು ಯಾವುದೇ ಉತ್ತಮ ಗುಣಮಟ್ಟದ ಸಂಶೋಧನಾ ಡೇಟಾ ಇಲ್ಲ.


ದೇಹಕ್ಕೆ ಎಷ್ಟು ಪೋಷಕಾಂಶ ಬೇಕು?
ನಾವು ಸೇವಿಸುವ ಎಲ್ಲಾ ಆಹಾರವನ್ನು ನಮ್ಮ ದೇಹವು ಹೀರಿಕೊಳ್ಳುವುದಿಲ್ಲ. ನಮ್ಮ ದೇಹವು ಹೀರಿಕೊಳ್ಳುವ ಪೋಷಕಾಂಶಗಳ ಪ್ರಮಾಣಕ್ಕೆ ಶಾರೀರಿಕ ಮಿತಿಗಳಿವೆ. ಉದಾಹರಣೆಗೆ, ನಮ್ಮ ದೇಹವು ಸಾಮಾನ್ಯವಾಗಿ ಸಸ್ಯಾಹಾರಿ ಆಹಾರದಿಂದ 10% ಕ್ಕಿಂತ ಹೆಚ್ಚು ಕಬ್ಬಿಣವನ್ನು ಮತ್ತು ಪ್ರಾಣಿಗಳ ಆಹಾರವನ್ನು ಒಳಗೊಂಡಿರುವ ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ 18% ಗಿಂತ ಹೆಚ್ಚಿನ ಕಬ್ಬಿಣವನ್ನು ಹೀರಿಕೊಳ್ಳುವುದಿಲ್ಲ.


ಇದನ್ನೂ ಓದಿ:   Heart Diseases: ಸಣ್ಣ ವಯಸ್ಸಿನಲ್ಲೇ ಕಾಡುತ್ತಿವೆ ಹೃದ್ರೋಗ ಸಮಸ್ಯೆಗಳು! ಈ ಬಗ್ಗೆ ತಜ್ಞರು ಏನಂತಾರೆ ಕೇಳಿ

ಅಂತೆಯೇ, ಕೇವಲ 20-25 ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್ ಅನ್ನು ಒಂದೇ ಸಮಯದಲ್ಲಿ ಹೀರಿಕೊಳ್ಳುತ್ತದೆ. ಇನ್ನು ಮಲ್ಟಿವಿಟಮಿನ್‌ಗಳ ವಿಷಯದಲ್ಲೂ ಇದು ನಿಜವಾಗಿದೆ.


ಯಾರಿಗೆ ಎಷ್ಟು ಪ್ರಮಾಣದಲ್ಲಿ ಮತ್ತು ಯಾವಾಗ ಮಲ್ಟಿವಿಟಮಿನ್‌ಗಳ ಅಗತ್ಯವಿದೆ
ಕಬ್ಬಿಣದ ಕೊರತೆಯ ರಕ್ತಹೀನತೆ ಅಥವಾ ವಿಟಮಿನ್ ಸಿ ಕೊರತೆಯ ಲಕ್ಷಣಗಳು ವೈದ್ಯರ ಗಮನಕ್ಕೆ ಬರುತ್ತದೆ. ಪೋಷಕಾಂಶಗಳ ಕೊರತೆಯು ಬಹು ಬೇಗನೇ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಸಸ್ಯಾಹಾರಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ B12 ಕೊರತೆಯಿಂದ ಮರಗಟ್ಟುವಿಕೆ ಮತ್ತು ಕೈಗಳ ಜುಮ್ಮೆನಿಸುವಿಕೆಯು ಪೋಷಕಾಂಶಗಳ ಕೊರತೆಯಿಂದ ಎಂಬುದಾಗಿ ರೋಗನಿರ್ಣಯ ಮಾಡಬಹುದು.


ಹಾಗಾಗಿ ಸಮತೋಲನ ಇಲ್ಲಿ ಮುಖ್ಯವಾಗಿದೆ. ಮಲ್ಟಿವಿಟಮಿನ್‌ಗಳ ಉಪಯೋಗ ಕ್ರೀಡಾಪಟುಗಳಿಗೆ ಮುಖ್ಯವಾಗಿದೆ ಆದರೆ ಇಲ್ಲಿ ಕೂಡ ಪ್ರಮಾಣ ಹಾಗೂ ಅಗತ್ಯತೆ ಮುಖ್ಯವಾಗಿದೆ ಎಂಬುದು ದೆಹಲಿ ಮೂಲದ ಆರೋಗ್ಯ ವೈದ್ಯ ಡಾ ಅಭಿಷೇಕ್ ಸಿಂಘಾಲ್ ಹೇಳಿಕೆಯಾಗಿದೆ.


ಅಂತೆಯೇ, ಗರ್ಭಿಣಿ ಮಹಿಳೆಯರಿಗೆ, ಪೌಷ್ಟಿಕಾಂಶದ ಅವಶ್ಯಕತೆಗಳು ಹೆಚ್ಚಾಗುತ್ತವೆ ಮತ್ತು ಫೋಲಿಕ್ ಆಮ್ಲ, ಹಾಗೆಯೇ ಆಹಾರ ಪೂರಕಗಳು ಅವರಿಗೆ ಅಗತ್ಯವಾಗಿವೆ. ಇನ್ನು ಈ ಅವಶ್ಯಕತೆಗಳನ್ನು ಪೂರೈಸಲು ಅವರು ಒಂದು ಲೋಟ ಹಾಲು ಅಥವಾ ಸೇಬು ಅಥವಾ ಯಾವುದೇ ಹಣ್ಣನ್ನು ತಿನ್ನುವುದು ಅಗತ್ಯವಾದ ಪ್ರಮಾಣದ ಜೀವಸತ್ವಗಳನ್ನು ಒದಗಿಸುತ್ತದೆ.


ಮಲ್ಟಿವಿಟಮಿನ್‌ಗಳ ಸೇವನೆ ಅಗತ್ಯವಿಲ್ಲದಿದ್ದರೆ ಬೇಡ
ಮಲ್ಟಿವಿಟಮಿನ್‌ಗಳು ಜಡವಸ್ತುಗಳಾದ ಫಿಲ್ಲರ್‌ಗಳು ಅಥವಾ ಎಕ್ಸಿಪೈಂಟ್‌ಗಳನ್ನು ಒಳಗೊಂಡಿರುತ್ತವೆ, ಮಾನವ ದೇಹದೊಂದಿಗೆ ಪ್ರಕ್ರಿಯಿಸುವುದಿಲ್ಲ. ಹೆಚ್ಚಿನ ಮಲ್ಟಿವಿಟಮಿನ್ ಮಾತ್ರೆಗಳು ಪೌಡರ್ ಅನ್ನು ಫಿಲ್ಲರ್ ಆಗಿ ಹೊಂದಿರುತ್ತವೆ.


ಜಾನ್ಸನ್ ಆಂಡ್ ಜಾನ್ಸನ್ ಹೆಸರಿನಲ್ಲಿ ಈಗಾಗಲೇ ಪ್ರಪಂಚವು ಟಾಲ್ಕ್ ಆಧಾರಿತ ಪೌಡರ್‌ಗಳನ್ನು ತೆಗೆದುಕೊಳ್ಳುತ್ತಿರುವುದರಿಂದ, ನಾವು ಇದೇ ರೀತಿಯ ಫಿಲ್ಲರ್‌ಗಳನ್ನು ಮಲ್ಟಿವಿಟಮಿನ್‌ಗಳಲ್ಲಿ ಕೂಡ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ, ಎಂದು ಡಾ ಸಿಂಘಾಲ್ ಹೇಳುತ್ತಾರೆ.


ಇದನ್ನೂ ಓದಿ:  Dreaming: ನೀವು ಕನಸಿನಲ್ಲಿ ಮಾತನಾಡದ ವ್ಯಕ್ತಿಯ ಬಗ್ಗೆ ಕನಸು ಕಂಡರೆ ಅದರ ಅರ್ಥವೇನು? ಕನಸಿನ ತಜ್ಞರು ಹೇಳುವುದೇನು?

ಈ ನಡುವೆ ಮಲ್ಟಿವಿಟಮಿನ್‌ಗಳ ಸೇವನೆಯಲ್ಲಿ ಸಮತೋಲಿತ ಸೂತ್ರವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಜೀವಸತ್ವಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬಾರದು ಅಂತೆಯೇ ಖಾತ್ರಿ ಇಲ್ಲದೆ ಅವುಗಳ ಅನಗತ್ಯ ಸೇವನೆ ಕೂಡ ಮಾಡಬಾರದು ಎಂಬುದು ಸಿಂಘಲ್ ಮಾತಾಗಿದೆ.

top videos
    First published: