Pregnancy Tips: ಗರ್ಭಿಣಿ ಕೇಸರಿ ಹಾಕಿದ ಹಾಲು ಕುಡಿದರೆ ಕೆಂಪು ಕೆಂಪಾದ ಮಗು ಹುಟ್ಟುತ್ತಾ? ಕೇಸರಿಯಿಂದ ಏನು ಪ್ರಯೋಜನ?

Saffron Milk for Pregnant: ಇದೆಲ್ಲಾ ಗೊತ್ತಿರುವುದರಿಂದಲೇ ಅಜ್ಜಿ, ಅಮ್ಮಂದಿರು ಮನೆಯಲ್ಲಿರೋ ಗರ್ಭಿಣಿಯರಿಗೆ ತಪ್ಪದೇ ಕೇಸರಿ ಹಾಲು ನೀಡ್ತಾರೆ. ದೇಹದ ಕಣಗಳನ್ನು ರಿಲ್ಯಾಕ್ಸ್ ಮಾಡುವ ಶಕ್ತಿ ಕೇಸರಿಗಿದೆ. ಹಾಗಾಗಿ ಬೆಚ್ಚಗಿನ ಹಾಲಿಗೆ ಒಂದೆರಡು ಎಸಳು ಕೇಸರಿ ಬೆರೆಸಿ ಕುಡಿದರೆ ಆಯಾಸ ಕಡಿಮೆಯಾಗುವುದು ಮಾತ್ರವಲ್ಲ, ಒಳ್ಳೆ ನಿದ್ದೆಯೂ ಬರುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Health Tips: ಗರ್ಭಾವಸ್ಥೆ ಪ್ರತೀ ಮಹಿಳೆಯ ಬದುಕಿನ ಅಪರೂಪದ ಅನುಭವ. ತಾನು ತಾಯಿಯಾಗುವ ಘಳಿಗೆಯನ್ನು ಹೆಣ್ಣು ಬಹಳ ಆಸ್ಥೆಯಿಂದ ಎದುರು ನೋಡುತ್ತಾಳೆ. ಆದರೆ ಈ ಸಂದರ್ಭದಲ್ಲಿ ಅವಳ ದೇಹದಲ್ಲಿ ಆಗೋ ನಾನಾ ಬದಲಾವಣೆಗಳಿಂದ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಾಳೆ. ಹೊಟ್ಟೆಯೊಳಗಿನ ಮಗುವಿಗೆ ಅನುಕೂಲವಾಗುತ್ತೆ ಎಂದು ಏನು ಹೇಳಿದರೂ ಸರಿ ಬಹಳ ಅಕ್ಕರೆಯಿಂದಲೇ ಅದೆಲ್ಲವನ್ನೂ ಮಾಡಲು ಮುಂದಾಗುತ್ತಾಳೆ. ಬಹಳ ಹಿಂದಿನಿಂದ ಗರ್ಭಿಣಿ ಮಹಿಳೆಯರಿಗೆ ಇವುಗಳನ್ನು ನೀಡಬೇಕು ಅಥವಾ ನೀಡಬಾರದು ಎನ್ನುವ ಬಗ್ಗೆ ನಮ್ಮ ಹಿರಿಯರು ಸಾಕಷ್ಟು ಮಾಹಿತಿಗಳನ್ನು ತಲೆಮಾರುಗಳಿಗೆ ದಾಟಿಸಿದ್ದಾರೆ. ಅದರಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದು ಗರ್ಭಿಣಿಯರಿಗೆ ಕೇಸರಿ ಹಾಕಿದ ಹಾಲು ನೀಡಬೇಕು ಎನ್ನುವುದು. ಬಹಳಷ್ಟು ಜನ ಗರ್ಭಿಣಿ ಮಹಿಳೆ ಕೇಸರಿ ಹಾಕಿದ ಹಾಲು ಕುಡಿದರೆ ಹುಟ್ಟುವ ಮಗು ಕೆಂಪು ಕೆಂಪಾಗಿ ಮುದ್ದಾಗಿರುತ್ತದೆ, ಹಾಗಾಗಿ ಕೊಡುತ್ತಾರೆ ಎಂದೇ ಭಾವಿಸುತ್ತಾರೆ.

ಈ ವಿಚಾರ ಅದೆಷ್ಟು ಸುಳ್ಳೋ ಸತ್ಯವೋ ತಿಳಿದಿಲ್ಲ. ಆದರೆ ಗರ್ಭಿಣಿ ಮಹಿಳೆ ಕೇಸರಿಯುಕ್ತ ಹಾಲನ್ನು ಕುಡಿದರೆ ಆಕೆಯ ಆರೋಗ್ಯಕ್ಕೆ ನಾನಾ ರೀತಿಯ ಪ್ರಯೋಜನಗಳಿವೆ ಎನ್ನುವುದಂತೂ ಸತ್ಯ. ಇದನ್ನೂ ವೈದ್ಯರೂ ದೃಢಪಡಿಸುತ್ತಾರೆ. ದುಬಾರಿ ವಸ್ತು ಕೇಸರಿ ಅತ್ಯಂತ ಉತ್ತಮ ಆರೋಗ್ಯ ನೀಡುತ್ತದೆ. ಅದ್ರಲ್ಲೂ ಗರ್ಭಿಣಿಯರಿಗೆ ಹೆಚ್ಚು ಹಾರ್ಮೋನ್ ವ್ಯತ್ಯಾಸವಿರುತ್ತದೆ. ಚಿಟಿಕೆ ಕೇಸರಿ ಬೆರೆಸಿದ ಬೆಚ್ಚಗಿನ ಹಾಲು ಆಕೆಗೆ ಅದೆಷ್ಟು ನೆಮ್ಮದಿ ಕೊಡುತ್ತದೆ ಎನ್ನುವುದು ಆಕೆಗಷ್ಟೇ ಗೊತ್ತು.

ಕ್ಷಣ ಚಿತ್ರ ಕ್ಷಣ ಪಿತ್ತ ಎನ್ನುವಂತಿರುತ್ತದೆ ಗರ್ಭಿಣಿಯ ಮೂಡ್. ಒಂದು ಕ್ಷಣ ಖುಷಿಯಿಂದ ಇರುವಾಕೆ ಸರ್ರನೆ ಕೋಪಿಸಿಕೊಂಡು ಸಿಡಿದೇಳುತ್ತಾಳೆ. ಮತ್ತೊಮ್ಮೆ ಕಾರಣವೇ ಇಲ್ಲದೆ ಕಣ್ಣೀರಾಗುತ್ತಾಳೆ. ಇದೆಲ್ಲಾ ಅವಳ ಒಳಗಿನ ಹಾರ್ಮೋನುಗಳು ಆಡಿಸೋ ಆಟ. ಮೊದಲೇ ಆಯಾಸ, ಹೇಳಿಕೊಳ್ಳಲಾಗದ ಸಂಕಟ. ಸದಾ ಕಾಡೋ ಆತಂಕ ಇವೆಲ್ಲವುಗಳ ಜೊತೆ ಆಕೆಯ ಬದುಕು ಸಾಗಬೇಕಿರುತ್ತದೆ. ಇಂಥಾ ಸಂದರ್ಭದಲ್ಲಿ ಆಕೆಗೆ ಒಂದಿಷ್ಟಾದರೂ ಸಮಾಧಾನ ಕೊಡೋದು ಕೇಸರಿ ಹಾಲಿನಂಥಾ ಕೆಲ ವಿಚಾರಗಳಷ್ಟೇ.

ಇದನ್ನೂ ಓದಿ: ಈ ಹುಡುಗನಿಗೆ ಆಹಾರ ಅಂದ್ರೆ ಭಯ, 10 ವರ್ಷ ಬರೀ ಬ್ರೆಡ್-ಮೊಸರು ತಿಂದು ಬದುಕಿದ್ದಾನೆ: ಇದೊಂದು ವಿಚಿತ್ರ ಖಾಯಿಲೆ

ಇದೆಲ್ಲಾ ಗೊತ್ತಿರುವುದರಿಂದಲೇ ಅಜ್ಜಿ, ಅಮ್ಮಂದಿರು ಮನೆಯಲ್ಲಿರೋ ಗರ್ಭಿಣಿಯರಿಗೆ ತಪ್ಪದೇ ಕೇಸರಿ ಹಾಲು ನೀಡ್ತಾರೆ. ದೇಹದ ಕಣಗಳನ್ನು ರಿಲ್ಯಾಕ್ಸ್ ಮಾಡುವ ಶಕ್ತಿ ಕೇಸರಿಗಿದೆ. ಹಾಗಾಗಿ ಬೆಚ್ಚಗಿನ ಹಾಲಿಗೆ ಒಂದೆರಡು ಎಸಳು ಕೇಸರಿ ಬೆರೆಸಿ ಕುಡಿದರೆ ಆಯಾಸ ಕಡಿಮೆಯಾಗುವುದು ಮಾತ್ರವಲ್ಲ, ಒಳ್ಳೆ ನಿದ್ದೆಯೂ ಬರುತ್ತದೆ. ವಿಶ್ರಾಂತಿ ಗರ್ಭಿಣಿಗೆ ಅತ್ಯವಶ್ಯಕ, ಹಾಗಾಗಿ ರಾತ್ರಿ ವೇಳೆ ಕೇಸರಿ ಹಾಲನ್ನು ನೀಡುತ್ತಾರೆ.

ಇನ್ನು ಹೈಪರ್​ಟೆನ್ಶನ್ ಸಮಸ್ಯೆ ಕೂಡಾ ಗರ್ಭಿಣಿಯರಿಗೆ ತುಸು ಹೆಚ್ಚು. ಕೇಸರಿ ಹಾಲು ಆ ನಿಟ್ಟಿನಲ್ಲೂ ಬಹಳ ಸಹಕಾರಿ. ಕೇಸರಿಯಲ್ಲಿರುವ ಕೆಲವು ಗುಣಗಳಿಂದಾಗಿ ರಕ್ತ ದೇಹದೊಳಗೆ ಹೆಪ್ಪುಗಟ್ಟುವುದನ್ನು ಅದು ತಡೆಯುತ್ತದೆ. ಇದು ಒತ್ತಡ ಮತ್ತು ಅದರಿಂದ ಉಂಟಾಗಬಹುದಾದ ಯಾವುದೇ ಆರೋಗ್ಯ ಸಮಸ್ಯೆಯಿಂದಲೂ ಕಾಪಾಡುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರಿಗೆ ಕೇಸರಿ ಮತ್ತು ಹಾಲಿನ ಸೇವನೆ ಅತ್ಯಂತ ಉಪಯುಕ್ತ. ಮಗುವಿನ ಆರೋಗ್ಯವಂತ ಬೆಳವಣಿಗೆಗೆ ಅದು ಸಹಕಾರಿ ಎನ್ನುವುದೂ ಅಷ್ಟೇ ಸತ್ಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: