Baby Food: ನಿಮ್ಮ ಪುಟ್ಟ ಕಂದಮ್ಮಗಳಿಗೆ ಅನ್ನ ತಿನ್ನಿಸಬಹುದಾ? ಗೊಂದಲಕ್ಕೆ ಇಲ್ಲಿದೆ ಉತ್ತರ

ಸಾಕಷ್ಟು ತಾಯಂದಿರು ಮೊದಲಿಗೆ ಮಗುವಿಗೆ ನುಣ್ಣನೆಗೆ ಬೇಯಿಸಿದ ಅನ್ನವನ್ನು ಸಹ ನೀಡುತ್ತಾರೆ. ಕೆಲವೊಬ್ಬರಿಗೆ ಮಕ್ಕಳಿಗೆ ಅನ್ನ ನೀಡಬಹುದಾ? ಕೊಡುವುದಾದರೆ ಯಾವಾಗ ಕೊಡಬೇಕು ಹೀಗೆ ಸಾಕಷ್ಟು ಪ್ರಶ್ನೆಗಳಿರುತ್ತವೆ. ನಿಮ್ಮ ಎಲ್ಲಾ ಒಂದೊಂದೇ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಕ್ಕಳಿಗೆ ಹುಟ್ಟಿದ (Child Birth) ಮೊದಲ ಆರು ತಿಂಗಳ ತಾಯಿ (Mother) ಎದೆ ಹಾಲು ಸರ್ವಶ್ರೇಷ್ಟ. ನಂತರ ನಿಧಾನವಾಗಿ ಮಕ್ಕಳಿಗೆ ಘನ ರೂಪದ ಆಹಾರವನ್ನು ನೀಡಲಾಗುತ್ತದೆ. ಮೊದಲು ಆರು ತಿಂಗಳು ಮಕ್ಕಳಿಗೆ ಯಾವುದೇ ರೀತಿಯ ಸಾಲಿಡ್ ಆಹಾರಗಳನ್ನು ನೀಡದಂತೆ ವೈದ್ಯರು ಎಚ್ಚರಿಕೆ ಮತ್ತು ಸಲಹೆ ನೀಡುತ್ತಾರೆ. ಘನ ಆಹಾರವೆಂದರೆ (Food) ಮೊದಮೊದಲು ಎಲ್ಲಾ ಆಹಾರಗಳನ್ನು ನೀಡುವುದಿಲ್ಲ. ಹಣ್ಣಿನ ಪ್ಯೂರಿ, ರಾಗಿ ರಸ, ಬೇಯಿಸಿದ ತರಕಾರಿ, ಇಂತಹ ಆಹಾರಗಳನ್ನು ನೀಡಲಾಗುತ್ತದೆ. ಜೊತೆಗೆ ಸಾಕಷ್ಟು ಜನ ನುಣ್ಣನೆಗೆ ಬೇಯಿಸಿದ ಅನ್ನವನ್ನು (Boiled Rice) ಸಹ ನೀಡುತ್ತಾರೆ. ಸಾಕಷ್ಟು ತಾಯಂದಿರಿಗೆ ಮಕ್ಕಳಿಗೆ (Child) ಅನ್ನ ನೀಡಬಹುದಾ? ಕೊಡುವುದಾದರೆ ಯಾವಾಗ ಕೊಡಬೇಕು ಹೀಗೆ ಸಾಕಷ್ಟು ಪ್ರಶ್ನೆಗಳಿರುತ್ತವೆ. ನಿಮ್ಮ ಎಲ್ಲಾ ಒಂದೊಂದೇ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಅನ್ನವನ್ನು ಮಕ್ಕಳಿಗೆ ನೀಡಬಹುದೇ ಎಂಬ ನಿಮ್ಮ ಮೊದಲ ಪ್ರಶ್ನೆಗೆ ತಜ್ಞರ ಉತ್ತರ ಹೌದು. ನೀವು ಆರು ತಿಂಗಳ ವಯಸ್ಸಿನ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅನ್ನವನ್ನು ನೀಡಬಹುದು. ಆದರೆ ಕೆಲವು ಎಚ್ಚರಿಕೆಗಳ ಜೊತೆ ನೀವು ಮಕ್ಕಳಿಗೆ ಅನ್ನ ನೀಡಬಹುದು.

ಅನ್ನದಲ್ಲಿರುವ ಪೋಷಕಾಂಶ
ಮಕ್ಕಳಿಗೆ ನೀಡಬಹುದು ಎನ್ನುವ ಅನ್ನದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಭಾರತೀಯರಿಗೆ ಅನ್ನ ಮುಷ್ಟಾನ್ನವಿದ್ದಂತೆ. ಪ್ರತಿ ನಿತ್ಯ ಆಹಾರದಲ್ಲಿ ಅನ್ನ ಪ್ರಮುಖವಾದ ಆಹಾರ ಎಂಬುವುದು ಎಲ್ಲರಿಗೂ ತಿಳಿದಿದೆ. ಇದು ಫೈಬರ್, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ 1 ಮತ್ತು ಬಿ 6, ಸೆಲೆನಿಯಮ್ ಮತ್ತು ಫಾಸ್ಫರಸ್ನ ಮೂಲವಾಗಿದೆ. ನಿಮ್ಮ ಮಗುವಿಗೆ ಘನ ಆಹಾರ ಶುರು ಮಾಡಿದ್ದಲ್ಲಿ ಈ ಎಲ್ಲಾ ಪೌಷ್ಟಿಕಾಂಶದ ಅನ್ನವನ್ನು ನೀಡಬಹುದು.

ಮಗುವಿಗೆ ಅನ್ನ ಸುರಕ್ಷಿತವೇ?
ಆರು ತಿಂಗಳ ವಯಸ್ಸಲ್ಲಿ ಶಿಶುಗಳಿಗೆ ಅನ್ನ ಸುರಕ್ಷಿತವಾಗಿದೆ. ಹಲವು ತಜ್ಞರು ಅಕ್ಕಿಯಂತಹ ಏಕದಳದಲ್ಲಿ ಮಗುವಿನ ಸಾಲಿಡ್ ಆಹಾರ ಶುರು ಮಾಡಲು ಶಿಫಾರಸು ಮಾಡುತ್ತಾರೆ. ಇದನ್ನು ಎದೆ ಹಾಲು ಅಥವಾ ಫಾರ್ಮುಲಾ ಹಾಲಿನ ಜೊತೆ ನೀಡಬಹುದು. ದೊಡ್ಡವರಾದ ನಾವೂ, ನೀವು ತಿನ್ನುವ ಹದದಲ್ಲಿ ಅನ್ನವನ್ನು ಬೇಯಿಸದೆ ಸ್ವಲ್ಪ ಮೃದುವಾಗಿ ಬೇಯಿಸಿ ನೀಡುವುದರಿಂದ ಮಕ್ಕಳಿಗೆ ಗಂಟಲಲ್ಲಿ ಸುಲಭವಾಗಿ ಇಳಿಯಲು ಅನುಕೂಲವಾಗುತ್ತದೆ. ಮಕ್ಕಳಿಗೆ ಅನ್ನ ನೀಡುವ ಸಂದರ್ಭದಲ್ಲಿ ಇಂತಹ ಎಚ್ಚರಿಕೆಗನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ: Breastfeeding Awareness Week: ಮಗುವಿಗೆ ಎದೆಹಾಲು ಕುಡಿಸುವುದು ಹೇಗೆ? ತಜ್ಞರು ಸಲಹೆ ನೀಡಿದ್ದಾರೆ ಓದಿ

ಪ್ರಯೋಜನಗಳು
ಶಿಶುಗಳಿಗೆ ಅಕ್ಕಿ ಧಾನ್ಯವು ಕೆಲವು ಪೌಷ್ಟಿಕಾಂಶದ ಮೌಲ್ಯವನ್ನು ನೀಡುತ್ತಾದರೂ, ಇದು ಸಾಮಾನ್ಯವಾಗಿ ಜೀರ್ಣಿಸಿಕೊಳ್ಳಲು ಸುಲಭ ಮತ್ತು ಹೆಚ್ಚಾಗಿ ಕಬ್ಬಿಣದಿಂದ ಬಲವರ್ಧಿತವಾಗಿರುವುದರಿಂದ ಅನ್ನವನ್ನು ನೀಡಲಾಗುತ್ತದೆ. ಆದಾಗ್ಯೂ, ನಿಮ್ಮ ಚಿಕ್ಕ ಮಗುವಿಗೆ ಹೊಸ ಆಹಾರಗಳು ಪರಿಚಯಿಸಲು ಪ್ರಾರಂಭಿಸಲು ಇದು ಉತ್ತಮ ಆಯ್ಕೆಯಾಗಿದೆ ಎದೆಹಾಲಿನೊಂದಿಗೆ, ಅನ್ನ ನೀಡುವ ಮೂಲಕ ಕೆಲವು ಪೌಷ್ಟಿಕಾಂಶದ ಪ್ರಯೋಜನಗಳನ್ನು ಪಡೆಯಬಹುದು.

ಬೇಗ ಅನ್ನ ನೀಡುವ ಅಪಾಯಗಳು
ನಿಮ್ಮ ಮಗುವಿಗೆ ಅನ್ನವನ್ನು ಬೇಗನೆ ಕೊಡುವ ದೊಡ್ಡ ಅಪಾಯವೆಂದರೆ ಅವರ ಜೀರ್ಣಾಂಗ ವ್ಯವಸ್ಥೆಯು ಇನ್ನೂ ಸಿದ್ಧವಾಗಿಲ್ಲದಿರುವುದು. ಈ ಕಾರಣಕ್ಕಾಗಿ 4 ತಿಂಗಳ ವಯಸ್ಸಿನ ಮೊದಲು ಎಲ್ಲಾ ಘನ ಆಹಾರಗಳನ್ನು ತಪ್ಪಿಸಲು ಶಿಫಾರಸು ಮಾಡಲಾಗುತ್ತದೆ. ಮಗುವಿಗೆ ಬೇಯಿಸಿದ ಅನ್ನದಂತಹ ಟೆಕಶ್ಚರ್ಗಳನ್ನು ತುಂಬಾ ಬೇಗ, ತುಂಬಾ ಆಗಾಗ್ಗೆ ಅಥವಾ ತುಂಬಾ ಬಲವಂತವಾಗಿ ನೀಡಿದರೆ ಜೀರ್ಣ ಕ್ರಿಯೆಗಳಂತಹ ಅಪಾಯವಾಗಬಹುದು. ಅಕ್ಕಿಯಲ್ಲಿ ಆರ್ಸೆನಿಕ್ ಇರುವುದರಿಂದ ಇದರ ಬಗ್ಗೆಯೂ ಕಾಳಜಿ ವಹಿಸಬೇಕು.

ಯಾವಾಗ ಮತ್ತು ಹೇಗೆ ಅನ್ನವನ್ನು ಪರಿಚಯಿಸಬೇಕು?
ಶಿಶುಗಳಿಗೆ 6 ತಿಂಗಳ ಬಳಿಕವಷ್ಟೇ ಅನ್ನ ನೀಡಬೇಕು. ಅನ್ನವನ್ನು ಪ್ಯೂರಿ ಮತ್ತು ಮೃದುವಾದ ಆಹಾರಗಳೊಂದಿಗೆ ಬೆರೆಸಿ ಕೊಡಬಹುದು. ಜೊತೆಗೆ ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ಬಾರ್ಲಿ, ಓಟ್ಸ್ ಮತ್ತು ಇತರ ಬಹುಧಾನ್ಯ ಉತ್ಪನ್ನಗಳಂತಹ ಇತರ ರೀತಿಯ ಧಾನ್ಯಗಳೊಂದಿಗೆ ಅನ್ನವನ್ನು ಪರ್ಯಾಯವಾಗಿ ಶಿಫಾರಸು ಮಾಡುತ್ತಾರೆ ತಜ್ಞರು.

ಇದನ್ನೂ ಓದಿ: Puberty And Girls: ಹೆಣ್ಣು ಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು?

ಮುಖ್ಯವಾಗಿ ಮಕ್ಕಳಿಗೆ ಹೊಸ ಆಹಾರಗಳನ್ನು ಪರಿಚಯಿಸುವಾಗ ಅಲರ್ಜಿಯಂತಹ ಅಂಶಗಳ ಬಗ್ಗೆ ತಿಳಿದಿರಬೇಕು. ಅವುಗಳನ್ನು ಒಂದಕ್ಕೊಂದು ಕೆಲವು ದಿನಗಳ ಅಂತರದಲ್ಲಿ ನೀಡುವುದು ಉತ್ತಮ. ಏಕೆಂದರೆ ಯಾವುದೇ ಸಂಭಾವ್ಯ ಆಹಾರ ಅಲರ್ಜಿಯನ್ನು ಗುರುತಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮಗುವಿನ ಅನ್ನವನ್ನು ಯಾವಾಗ, ಹೇಗೆ ನೀಡಬೇಕು ಎಂಬುದರ ಕುರಿತು ನೀವು ಮಕ್ಕಳ ವೈದ್ಯರೊಂದಿಗೆ ಚರ್ಚಿಸಿ ಸಲಹೆ ಪಡೆಯಬಹುದು.
Published by:Ashwini Prabhu
First published: