• Home
  • »
  • News
  • »
  • lifestyle
  • »
  • Pinnacle Health: ತೂಕ ನಷ್ಟಕ್ಕೆ ಅನಾನಸ್‌ ಡಯೆಟ್‌ ಪರಿಣಾಮಕಾರಿಯೇ? ಈ ಬಗ್ಗೆ ಪೌಷ್ಠಿಕಾಂಶ ತಜ್ಞರು ಏನಂತಾರೆ?

Pinnacle Health: ತೂಕ ನಷ್ಟಕ್ಕೆ ಅನಾನಸ್‌ ಡಯೆಟ್‌ ಪರಿಣಾಮಕಾರಿಯೇ? ಈ ಬಗ್ಗೆ ಪೌಷ್ಠಿಕಾಂಶ ತಜ್ಞರು ಏನಂತಾರೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ನಷ್ಟದ ವಿಚಾರಕ್ಕೆ ಬಂದಾಗ ಈ ಹಣ್ಣು ಸೀಮಿತ ಪ್ರಮಾಣದಲ್ಲಿ ಸಹಾಯಕವಾಗುತ್ತದೆ ಎನ್ನುವುದು ನಿಜ.

  • Trending Desk
  • 5-MIN READ
  • Last Updated :
  • Share this:

ತೂಕ (Weight)  ಇಳಿಕೆ ಮಾಡಿಕೊಳ್ಳಬೇಕು ಎನ್ನುವವರು ಸಾಮಾನ್ಯವಾಗಿ ಹಣ್ಣುಗಳನ್ನು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಕೆಲವೊಬ್ಬರು ಕೆಲವು ಹಣ್ಣುಗಳನ್ನು ಹೆಚ್ಚು ಸೇವಿಸಿ ಅಥವಾ ಕೆಲವೊಂದು ಹಣ್ಣು ತರಕಾರಿಗಳ ಜ್ಯೂಸ್‌ ಅನ್ನೇ ಹೆಚ್ಚಾಗಿ ಸೇವಿಸಿ ಡಯೆಟ್‌ ಮಾಡ್ತಾರೆ. ‌ ಅಂದಹಾಗೆ ನೀವು ಅನಾನಸ್‌ ಡಯೆಟ್‌ ಬಗ್ಗೆ ಕೇಳಿರಬಹುದು. ವಿಶಿಷ್ಟ ಪರಿಮಳ ಹಾಗೂ ರುಚಿಯುಳ್ಳ ಈ ಪೈನಾಪಲ್‌ನಲ್ಲಿ ವಿಟಾಮಿನ್‌ ಸಿ ಹೇರಳವಾಗಿರುತ್ತದೆ. ಇದರ ಜೊತೆಗೆ ವಿಟಮಿನ್‌ ಬಿ6, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ (Potassium) ಸೇರಿದಂತೆ ಸಾಕಷ್ಟು ವಿಟಾಮಿನ್ಸ್‌, ಮಿನರಲ್ಸ್‌ ಗಳನ್ನು ಇದರಲ್ಲಿವೆ. ತೂಕ ನಷ್ಟದ ವಿಚಾರಕ್ಕೆ ಬಂದಾಗ ಈ ಹಣ್ಣು ಸೀಮಿತ ಪ್ರಮಾಣದಲ್ಲಿ ಸಹಾಯಕವಾಗುತ್ತದೆ ಎನ್ನುವುದು ನಿಜ . 1970 ರಲ್ಲಿ ಡ್ಯಾನಿಶ್ ಮನಶ್ಶಾಸ್ತ್ರಜ್ಞರಿಂದ ರಚಿಸಲಾದ ಅನಾನಸ್ ಡಯಟ್ (Diet ಅನ್ನು ಮೊದಲು ಮಾದಕ ಪೈನಾಪಲ್ ಡಯೆಟ್‌ ಅಂತಲೇ ಕರೆಯಲಾಗುತ್ತಿತ್ತು. ಹಾಗಿದ್ರೆ ತ್ವರಿತ ತೂಕ ನಷ್ಟಕ್ಕೆ ಇದು ಎಷ್ಟು ಪರಿಣಾಮಕಾರಿ ಅನ್ನುವುದನ್ನು ತಿಳಿಯೋಣ.


ಅನಾನಸ್ ಡಯೆಟ್‌ ಎಂದರೇನು?


ಅನಾನಸ್ ಡಯೆಟ್‌ ಎನ್ನುವುದು ಎರಡು ದಿನಗಳವರೆಗೆ ಕೇವಲ ಅನಾನಸ್ ಹಣ್ಣನ್ನು ತಿನ್ನುವುದನ್ನು ಒಳಗೊಂಡಿರುತ್ತದೆ. 2 ದಿನಗಳ ಕಾಲ ಈ ಹಣ್ಣನ್ನು ಮಾತ್ರ ತಿಂದು ನಂತರದ 5 ದಿನಗಳ ವರೆಗೆ ಸಾಮಾನ್ಯ ಆಹಾರವನ್ನು ಸೇವಿಸುವುದಾಗಿದೆ. ಹಣ್ಣನ್ನು ಸೇವಿಸುವ ದಿನಗಳಲ್ಲಿ ನಿಮ್ಮ ದೇಹ ಸೇರುವ ಕ್ಯಾಲೋರಿಗಳ ಪ್ರಮಾಣ ಕೇವಲ 500 ಆಗಿರುತ್ತದೆ. ಹೀಗೆ ಕಡಿಮೆ ಕ್ಯಾಲೋರಿ ಸೇವಿಸುವುದು ತೂಕ ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿತ್ತು.


ತೂಕ ನಷ್ಟಕ್ಕೆ ಅನಾನಸ್ ಡಯೆಟ್‌ ಪರಿಣಾಮಕಾರಿಯಾಗಿದೆಯೇ?


ತೂಕ ನಷ್ಟಕ್ಕೆ ಅನಾನಸ್ ಡಯೆಟ್‌ ಪರಿಣಾಮಕಾರಿಯಾಗಲು ಹಲವಾರು ಕಾರಣಗಳಿವೆ. ಅದು ಹೇಗೆ ಎಂಬುದನ್ನು ನೋಡೋಣ.


1.ಅನಾನಸ್‌ ಡಯೆಟ್‌ ವಾರದಲ್ಲಿ ಎರಡು ದಿನಗಳ ಉಪವಾಸವನ್ನು ಒಳಗೊಂಡಿರುತ್ತದೆ. ಇದು ಕ್ಯಾಲೋರಿ ಸೇವನೆಯನ್ನು 500-600 ಕ್ಕೆ ಸೀಮಿತಗೊಳಿಸುತ್ತದೆ. ಅಲ್ಲದೇ ಇದು ಮಧ್ಯಂತರ ಉಪವಾಸದಂತೆಯೇ ಇರುತ್ತದೆ.


ಇದನ್ನೂ ಓದಿ: ರಕ್ತದಾನದಿಂದ ಕ್ಯಾನ್ಸರ್ ಅಪಾಯ ಕಡಿಮೆ, ಇನ್ನೂ ಸಾಕಷ್ಟು ಲಾಭಗಳಿವೆ ತಿಳಿಯಿರಿ


2.ಈ ಡಯೆಟ್‌ ವಾರದಲ್ಲಿ ಎರಡು ದಿನಗಳವರೆಗೆ ಆಹಾರ ಸೇವನೆಯನ್ನು ಮಿತಿಗೊಳಿಸುತ್ತದೆ. ದ್ರವಾಹಾರ ಸೇವನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.


3.ಅನಾನಸ್ ಬ್ರೊಮೆಲೈನ್ ಅನ್ನು ಹೊಂದಿರುತ್ತದೆ. ಬ್ರೊಮೆಲೈನ್ ಎನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುವ ಕಿಣ್ವವಾಗಿದ್ದು ಅದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.
4.ಪೈನಾಪಲ್‌ನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಬಿ 6 ಸಮೃದ್ಧವಾಗಿದೆ. ಇದು ಕ್ಯಾಲೋರಿ ಸೇವನೆಯನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ.


ಅನಾನಸ್‌ ಡಯೆಟ್‌ನ ನಕಾರಾತ್ಮಕ ಪರಿಣಾಮಗಳು


ಹಲವಾರು ಆಹಾರ ಪದ್ಧತಿಗಳು ತೂಕ ನಷ್ಟಕ್ಕೆ ಸಹಾಯ ಮಾಡಿದರೂ ಅನಾನಸ್‌ ಡಯೆಟ್‌ ನಿರ್ದಿಷ್ಟವಾಗಿ ಯಶಸ್ವಿಯಾಗಿಲ್ಲ. ನಕಾರಾತ್ಮಕ ಕ್ಯಾಲೋರಿ ಸಮತೋಲನವು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಜನರಿಗೆ ಸಹಾಯ ಮಾಡುತ್ತದೆ ಎಂಬುದನ್ನು ಬೆಂಬಲಿಸಲು ಹೆಚ್ಚಿನ ಪುರಾವೆಗಳಿಲ್ಲ. ಹಾಗಿದ್ರೆ ಅನಾನಸ್‌ ಡಯೆಟ್‌ನಿಂದಾಗುವ ನಕಾರಾತ್ಮಕ ಪರಿಣಾಮಗಳೇನು ಎಂಬುದನ್ನು ನೋಡೋಣ.


*ಇದು ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.


*ಕ್ರ್ಯಾಶ್ ಡಯಟ್ ಮೂಲಕ ಕಳೆದುಹೋದ ತೂಕವು ದೀರ್ಘಾವಧಿಯಲ್ಲಿ ಎರಡು ಪಟ್ಟು ಹೆಚ್ಚಾಗಬಹುದು.


*ಈ ಡಯೆಟ್‌ ಸಮರ್ಥನೀಯವಾಗಿಲ್ಲದಿರಬಹುದು.


*ಪೌಷ್ಟಿಕಾಂಶದ ಕೊರತೆಯ ಅಪಾಯ ಎದುರಾಗಬಹುದು.


*ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಕೊರತೆಯು ಮ್ಯಾಂಗನೀಸ್ ದೇಹಕ್ಕೆ ಸಂಪೂರ್ಣವಾಗಿ ಪ್ರಯೋಜನಕಾರಿಯಾಗದಂತೆ ತಡೆಯುತ್ತದೆ.


ಅಂದಹಾಗೆ ತೂಕ ನಷ್ಟದ ಹಾದಿಯಲ್ಲಿ, ಕ್ರ್ಯಾಶ್ ಡಯಟ್‌ಗಳ ರೂಪದಲ್ಲಿ ಶಾರ್ಟ್‌ಕಟ್ ತೆಗೆದುಕೊಳ್ಳದಂತೆ ತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇವುಗಳು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗುವುದಿಲ್ಲ. ಅಲ್ಲದೇ ಮುಂದೆ ಇದು ಚಯಾಪಚಯ ಅಸ್ವಸ್ಥತೆ ಮತ್ತು ಟೈಪ್ -2 ಮಧುಮೇಹದಂತಹ ದೀರ್ಘಕಾಲದ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

First published: