• Home
  • »
  • News
  • »
  • lifestyle
  • »
  • Mushrooms: ಮಶ್ರೂಮ್​ ಸಸ್ಯಾಹಾರನಾ ಅಥವಾ ಮಾಂಸಾಹಾರನಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Mushrooms: ಮಶ್ರೂಮ್​ ಸಸ್ಯಾಹಾರನಾ ಅಥವಾ ಮಾಂಸಾಹಾರನಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Is Mushroom Veg or Non Veg: ಅಣಬೆಗಳು ಸಾಮಾನ್ಯವಾಗಿ ಕೊಳೆತ ಸಸ್ಯಗಳ ಮಧ್ಯೆ ಬೆಳೆಯುತ್ತವೆ ಮತ್ತು ಹೀಗೆ ನೋಡಿದರೆ ಇದನ್ನು ಸಸ್ಯಾಹಾರ ಅಂತ ಹೇಳಬಹುದು. ಕಾರ್ಡಿಸೆಪ್ಸ್ ಪ್ರಭೇದಗಳು ಜೀವಂತ ಕಂಬಳಿಹುಳುಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಅವುಗಳೊಳಗೆ ಬೆಳೆಯುತ್ತವೆ.

  • Share this:

ಸಾಮಾನ್ಯವಾಗಿ ನಾವು ಕೆಲವು ಗೊಂದಲಮಯ, ಬಿಡಿಸಲಾಗದ ಪ್ರಶ್ನೆಗಳನ್ನು (Question)  ಕೇಳಿರುತ್ತೇವೆ, ಉದಾಹರಣೆಗೆ ಮೊಟ್ಟೆ (egg) ಮೊದಲು ಬಂದಿದ್ದ ಅಥವಾ ಕೋಳಿ ಮೊದಲು ಬಂದಿದ್ದ ಅಂತ ಮತ್ತು ಕೆಲವು ಆಹಾರ ಪದಾರ್ಥಗಳು ಸಸ್ಯಾಹಾರಿಯೋ ಅಥವಾ ಮಾಂಸಹಾರಿಯೋ (Non Veg) ಅಂತ ಅನೇಕ ಸಲ ನಾವು ಗೊಂದಲಕ್ಕೆ ಒಳಗಾಗಿರುತ್ತೇವೆ. ಹೀಗೆ ಮೊಟ್ಟೆಯನ್ನು ಕೆಲವರು ಸಸ್ಯಾಹಾರಿ (Veg)  ಪಟ್ಟಿಯಲ್ಲಿ ಬರುತ್ತೆ ಅಂತ ಹೇಳಿದರೆ, ಇನ್ನೂ ಕೆಲವರು ಮೊಟ್ಟೆ ಕೋಳಿಯಿಂದ ಬಂದಿರುವುದರಿಂದ ಮಾಂಸಾಹಾರಿ ಪಟ್ಟಿಗೆ ಸೇರಿಸುವುದನ್ನು ಸಹ ನಾವು ನೋಡಿದ್ದೇವೆ. ಹೀಗೆ ಅನೇಕ ಗೊಂದಲಮಯ ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಮಶ್ರೂಮ್ ಸಸ್ಯಾಹಾರವೋ? ಮಾಂಸಹಾರವೋ?


ಈಗ ಇನ್ನೊಂದು ಆಹಾರ ಪದಾರ್ಥದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ ನೋಡಿ. ತುಂಬಾ ಜನರು ಇಷ್ಟಪಟ್ಟು ಹೊಟೇಲ್ ಗಳಲ್ಲಿ ತಂದೂರಿ ರೋಟಿಯೊಂದಿಗೆ ತಿನ್ನಲು ಇಷ್ಟಪಡುವ ಮಶ್ರೂಮ್ ಮಂಚೂರಿ, ಮಶ್ರೂಮ್ ಮಸಾಲಾ ಮತ್ತು ಮಶ್ರೂಮ್ ನಿಂದ ತಯಾರಿಸಿದ ಇತರೆ ಪದಾರ್ಥಗಳು ಅಣಬೆಯಿಂದ ಮಾಡಿರುವುದಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಅಣಬೆಗಳು ಸಸ್ಯಾಹಾರದ ಪಟ್ಟಿಯಲ್ಲಿ ಬರುತ್ತದೆಯೋ ಅಥವಾ ಮಾಂಸಾಹಾರದ ಪಟ್ಟಿಯಲ್ಲಿ ಬರುತ್ತದೆಯೋ ಎನ್ನುವುದೇ ಸದ್ಯದ ಗೊಂದಲ.


ಅಣಬೆಗಳಲ್ಲಿ ಎಷ್ಟು ಪ್ರಕಾರಗಳು?


ಈ ಅಣಬೆಗಳಲ್ಲಿ ಎರಡು ರೀತಿಯ ಅಣಬೆಗಳಿದ್ದು, ಅವುಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಅಂತ ಹೇಳಬಹುದು. ಈ ವಿಷ ಅಣಬೆಗಳು ತಿನ್ನಲು  ಬರುವುದಿಲ್ಲ ಮತ್ತು ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕ ಸಹ ಆಗುತ್ತವೆ ಅಂತ ಹೇಳಬಹುದು. ಆದರೆ, ತಿನ್ನಲು ಬರುವ ಅಣಬೆಗಳು ಪೋಷಕಾಂಶಗಳನ್ನು  ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಮೂಲ್ಯ ವಸ್ತು ಎನ್ಬಹುದು. ಹಾಗಾದರೆ ಇದನ್ನು ಸಸ್ಯಾಹಾರದ ಪಟ್ಟಿಗೆ ಸೇರಿಸಬಹುದೇ ಅನ್ನೋ ಪ್ರಶ್ನೆ ನೀವು ಕೇಳಬಹುದು.


ಇದನ್ನೂ ಓದಿ:ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಸಾಂಬಾರ್ ರುಚಿಕರವಾಗುತ್ತೆ


ಅಣಬೆಗಳು ಎಲ್ಲಿ ಬೆಳೆಯುತ್ತವೆ ಗೊತ್ತೇ?


ಅಣಬೆಗಳು ಸಾಮಾನ್ಯವಾಗಿ ಕೊಳೆತ ಸಸ್ಯಗಳ ಮಧ್ಯೆ ಬೆಳೆಯುತ್ತವೆ ಮತ್ತು ಹೀಗೆ ನೋಡಿದರೆ ಇದನ್ನು ಸಸ್ಯಾಹಾರ ಅಂತ ಹೇಳಬಹುದು. ಕಾರ್ಡಿಸೆಪ್ಸ್ ಪ್ರಭೇದಗಳು ಜೀವಂತ ಕಂಬಳಿಹುಳುಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಅವುಗಳೊಳಗೆ ಬೆಳೆಯುತ್ತವೆ ಅನ್ನೋ ಮಾತನ್ನು ಸ್ವಲ್ಪ ಗಮನವಿಟ್ಟು ನೋಡಿದರೆ, ಅಣಬೆ ಮಾಂಸಹಾರದ ಪಟ್ಟಿಗೆ ಸೇರುತ್ತದೆ ಅಂತ ಅನ್ನಿಸುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಅಂತ ಹೇಳಬಹುದು. ಇದು ಕೀಟಗಳು ಮತ್ತು ಸಸ್ಯಗಳನ್ನು ತಿನ್ನುತ್ತದೆ ಅಂತ ಹೇಳಬಹುದು.




ಹಾಗೆ ನೋಡಿದರೆ ಇದು ಮನುಷ್ಯನ ಆಹಾರಕ್ಕೆ ಸಂಬಂಧಪಟ್ಟಂತೆ ಸಸ್ಯಾಹಾರ ಮತ್ತು ಮಾಂಸಹಾರ ಎರಡರ ಪಟ್ಟಿಯಲ್ಲೂ ಸೇರುವುದಿಲ್ಲ ಅಂತ ಹೇಳಲಾಗುತ್ತಿದೆ.


ಇದು ಒಂದು ಶಿಲೀಂಧ್ರ


ಇದು ಜೀವನ ವ್ಯವಸ್ಥೆಯಲ್ಲಿ ಅದರ ಒಂದು ವಿಶಿಷ್ಟವಾದ ವರ್ಗವನ್ನು ಹೊಂದಿದೆ. ಅದನ್ನೇ ಶಿಲೀಂಧ್ರಗಳು ಎಂದು ಕರೆಯುತ್ತಾರೆ. ಆದರೂ ಇದು ಡಿಎನ್ಎ ಅನುಕ್ರಮದಲ್ಲಿ ಮಾನವರೊಂದಿಗೆ ಸುಮಾರು 40 ರಿಂದ 50 ಪ್ರತಿಶತವನ್ನು ಹೋಲುತ್ತದೆ, ಅಲ್ಲಿ ಸಸ್ಯಗಳು ಮನುಷ್ಯರೊಂದಿಗೆ ಕೇವಲ 10 ಪ್ರತಿಶತವನ್ನು ಮಾತ್ರ ಹೋಲುತ್ತವೆ. ಆದ್ದರಿಂದ ಸಸ್ಯಗಳಿಗಿಂತ ಹೆಚ್ಚು ಅಣಬೆಗಳನ್ನು ತಿನ್ನುವುದು ಬುದ್ಧಿವಂತಿಕೆಯಾಗಿದೆ.


ಇದನ್ನೂ ಓದಿ: ಡಯಾಬಿಟಿಸ್​ ರೋಗಿಗಳಲ್ಲಿ ವಿಟಮಿನ್ ಬಿ 12 ಕಡಿಮೆಯಾಗೋಕೆ ಇದೇ ಕಾರಣವಂತೆ


ಆದ್ದರಿಂದ ಇಲ್ಲಿ ಈಗ ಸಸ್ಯಾಹಾರಿ ಮತ್ತು ಮಾಂಸಹಾರಿ ಜನರು ಇಬ್ಬರೂ ಅಣಬೆಗಳನ್ನು ಸೇವಿಸಬಹುದು. ಇದರ ಮೂಲದ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳದಿದ್ದರೆ, ಸಸ್ಯಾಹಾರಿಗಳಿಗೆ ಅಣಬೆ ಒಳ್ಳೆಯ ಆಹಾರ ಅಂತ ಹೇಳಬಹುದು. ನಿಮಗೆ ಇದು ತುಂಬಾ ಇಷ್ಟವಾದರೆ ತಿನ್ನಿರಿ, ಇಷ್ಟವಾಗದೆ ಹೋದರೆ ಅದರಿಂದ ದೂರವಿರಿ ಅಷ್ಟೇ. ಅದನ್ನ ಬಿಟ್ಟು ಅಣಬೆ ಒಂದು ಸಸ್ಯಾಹಾರವೋ? ಮಾಂಸಹಾರವೋ? ಅನ್ನೋದರ ಬಗ್ಗೆ ತುಂಬಾ ತಲೆ ಕೆಡೆಸಿಕೊಳ್ಳಬೇಡಿ. ಇದು ಒಂದು ಶಿಲೀಂಧ್ರ ಅಂತ ಹೇಳಬಹುದು ಅಷ್ಟೇ.

Published by:Sandhya M
First published: