• Home
  • »
  • News
  • »
  • lifestyle
  • »
  • Weight Loss Tips: ಡಯೆಟ್‌ ಮಾಡುವಾಗ ಹಾಲು ಕುಡಿಯೋದು ತೂಕ ಹೆಚ್ಛಾಗೋಕೆ ಕಾರಣವಾಗುತ್ತಾ? ತಜ್ಞರು ಹೇಳಿದ್ದೇನು ನೋಡಿ

Weight Loss Tips: ಡಯೆಟ್‌ ಮಾಡುವಾಗ ಹಾಲು ಕುಡಿಯೋದು ತೂಕ ಹೆಚ್ಛಾಗೋಕೆ ಕಾರಣವಾಗುತ್ತಾ? ತಜ್ಞರು ಹೇಳಿದ್ದೇನು ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Milk is Good for Weight Loss: ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಆ ಪ್ರಕ್ರಿಯೆಯಲ್ಲಿ ಜನರು ಆಗಾಗ್ಗೆ ತಮ್ಮ ತೂಕ ಹೆಚ್ಚಿಸಲು ಕಾರಣವಾಗುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಅಂತಹ ಒಂದು ಆಹಾರ ಎಂದರೆ ಅದು ಹಾಲು ಅಂತ ಹೇಳಬಹುದು ನೋಡಿ.

  • Share this:

ಅನೇಕ ಜನರಿಗೆ ತಮ್ಮ ದೇಹದ ತೂಕವನ್ನು (Weight Loss) ಕಡಿಮೆ ಮಾಡಿಕೊಳ್ಳುವ ಹಂತದಲ್ಲಿ ಅನೇಕ ರೀತಿಯ ಗೊಂದಲಗಳು ಇರುವುದು ಸಹಜ. ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಆ ಪ್ರಕ್ರಿಯೆಯಲ್ಲಿ ಜನರು ಆಗಾಗ್ಗೆ ತಮ್ಮ ತೂಕ ಹೆಚ್ಚಿಸಲು ಕಾರಣವಾಗುವ ಕೆಲವು ಆಹಾರ (Food) ಪದಾರ್ಥಗಳನ್ನು ಸೇವಿಸುತ್ತಾರೆ. ಅಂತಹ ಒಂದು ಆಹಾರ ಎಂದರೆ ಅದು ಹಾಲು (Milk) ಅಂತ ಹೇಳಬಹುದು ನೋಡಿ. ಈ ಡೈರಿ ಉತ್ಪನ್ನವು ನಿಜವಾಗಿಯೂ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸಲು ಮತ್ತು ಅದರ ಬಗ್ಗೆ ಮಾಹಿತಿ ನೀಡಲು ಡಯಟೀಷಿಯನ್ ಶಿಖಾ ಕುಮಾರಿ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.


ಏನ್ ಹೇಳುತ್ತೇ ಡಯಟೀಷಿಯನ್ ಅವರ ಪೋಸ್ಟ್?


ಹಾಲು ಆರೋಗ್ಯಕರವಾಗಿದೆ, ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಇದು ಕೊಬ್ಬನ್ನು ಸಹ ಹೊಂದಿರುತ್ತದೆ, ಇದು ತೂಕ ಹೆಚ್ಚಳಕ್ಕೆ ಸಂಬಂಧಿಸಿದ ಮ್ಯಾಕ್ರೋನ್ಯೂಟ್ರಿಯಂಟ್ ಆಗಿದೆ. ಆದ್ದರಿಂದ, ತೂಕವನ್ನು ಕಡಿಮೆ ಮಾಡಿಕೊಳ್ಳುವಾಗ ನೀವು ನಿಜವಾಗಿಯೂ ಹಾಲಿನಿಂದ ದೂರವಿರುವುದು ಒಳ್ಳೆಯದೇ? ಹಾಲು ತೂಕ ಹೆಚ್ಚಳಕ್ಕೆ ಕಾರಣವಾಗಬಹುದೇ? ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಬರೆದಿದ್ದಾರೆ ನೋಡಿ.


“ಹಾಲು ತೂಕ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ ಎಂದು ವಿವರಿಸಿದರು, ವಾಸ್ತವವಾಗಿ ಇದು ನಿಮಗೆ ತೂಕ ಕಳೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ" ಎಂದು ಹೇಳಿದರು.


ತೂಕ ಇಳಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಂತೆ ಹಾಲು!


ಹಾಲು ತುಂಬಾನೇ ಆರೋಗ್ಯಕರವಾಗಿದೆ ಮತ್ತು ಉತ್ತಮ ಗುಣಮಟ್ಟದ ಪ್ರೋಟೀನ್ ನ ಮೂಲವಾಗಿದೆ, ಇದು ಸ್ನಾಯುಗಳ ನಿರ್ಮಾಣ ಮತ್ತು ಸ್ನಾಯುಗಳ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶವಾಗಿದೆ. ಇದು ಸತು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಯಂತಹ ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ಈ ಪೋಷಕಾಂಶಗಳು ನಿಮ್ಮ ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


250 ಮಿಲಿ ಲೀಟರ್ ಹಾಲಿನಲ್ಲಿ 8 ಗ್ರಾಂ ಪ್ರೋಟೀನ್ ಮತ್ತು 125 ಮಿಲಿ ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಆದ್ದರಿಂದ, ನೀವು ಡಯಟ್ ನಲ್ಲಿ ಇದ್ದರೂ ಸಹ ಪ್ರತಿದಿನ ಹಾಲನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ" ಎಂದು ಅವರು ವಿವರಿಸಿದರು. "ಆಹಾರದಿಂದ ಹಾಲು ಅಥವಾ ಹಾಲು ಆಧಾರಿತ ಉತ್ಪನ್ನಗಳನ್ನು ಕಡಿತಗೊಳಿಸಬೇಕಾಗಿಲ್ಲ" ಎಂದು ಅವರು ಹೇಳಿದರು.




"ಇದು ಸಮತೋಲಿತ ಆಹಾರದ ಅತ್ಯಗತ್ಯ ಭಾಗವಾಗಿದೆ ಮತ್ತು 1 ಕಪ್ ಹಾಲು ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ನೀವು ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿದ್ದರೆ ಮಾತ್ರ ಹಾಲಿಂದ ದೂರವಿರಿ. ಆಗ ಅವರು ಸೋಯಾ ಮತ್ತು ಬೀಜ ಹಾಲಿನಂತಹ ಸಸ್ಯ ಆಧಾರಿತ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಅಡುಗೆ ಮನೆಯ ಚಾಕು ಸೆಟ್​ ಹೆಚ್ಚು ಟೈಮ್ ಬಾಳಿಕೆ ಬರ್ಬೇಕು ಅಂದ್ರೆ ಹೀಗೆ ಮಾಡಿ


ತೂಕ ಕಡಿಮೆ ಮಾಡಿಕೊಳ್ಳುವವರು ಎಷ್ಟು ಹಾಲನ್ನು ಕುಡಿಯಬೇಕು?


ಆರೋಗ್ಯ ತರಬೇತುದಾರ ಮತ್ತು ಪೌಷ್ಟಿಕತಜ್ಞೆ ಅನುಪಮಾ ಮೆನನ್ ಅವರ ಪ್ರಕಾರ, ನೀವು ಯಾವುದೇ ರೀತಿಯ ಹಾಲನ್ನು ಕುಡಿಯಲು ನಿರ್ಧರಿಸಿದರೂ, ನೀವು ಅದನ್ನು ಮಿತವಾಗಿ ಕುಡಿಯಬೇಕು. "ನೀವು ಹಸುವಿನ ಹಾಲನ್ನು ಆಯ್ಕೆ ಮಾಡಿಕೊಂಡರೆ, ಅದು ಕೊಬ್ಬಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಒಂದು ಕಪ್ ಹಾಲಿನಲ್ಲಿ 150 ಕ್ಯಾಲೋರಿಗಳಿಗೆ ಹೋಲಿಸಿದರೆ ಕೊಬ್ಬು ರಹಿತ ಹಾಲಿನಲ್ಲಿ ಪ್ರತಿ ಕಪ್ ಹಾಲಿನಲ್ಲಿ 83 ಕ್ಯಾಲೋರಿಗಳಿರುತ್ತವೆ.


ನೀವು ಸೋಯಾ ಹಾಲಿನಂತಹ ಡೈರಿ ಬದಲಿಯನ್ನು ಸೇವಿಸಲು ಬಯಸಿದರೆ, ಅದು ಸಿಹಿರಹಿತವಾಗಿರಬೇಕು. ಅದರ ಹೆಚ್ಚಿದ ಪ್ರೋಟೀನ್ ಅಂಶದಿಂದಾಗಿ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಸುವಿನ ಹಾಲಿನ ಬಗ್ಗೆ ಅಲರ್ಜಿ ಇರುವವರು ಎಮ್ಮೆಯ ಹಾಲನ್ನು ಕುಡಿಯಬಹುದು" ಎಂದು ಮೆನನ್ ಹೇಳಿದರು.


ಹಾಲು ಕುಡಿಯಲು ಉತ್ತಮ ಸಮಯ ಯಾವುದು?


ಬೆಳಿಗ್ಗೆ ಮೊದಲು ಹಾಲನ್ನು ಸೇವಿಸಬೇಕು ಆದರೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಎಂದು ಅವರು ಸಲಹೆ ನೀಡಿದರು. "ಬೆಳಗಿನ ಉಪಾಹಾರಕ್ಕೆ ಹಾಲು ಅತ್ಯುತ್ತಮವಾಗಿದೆ, ಏಕೆಂದರೆ ಅದು ದಿನದ ಆರಂಭದಲ್ಲಿ ನಿಮಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಹಾರಗಳು ಬೇಕೇ ಬೇಕು


ಬೆಚ್ಚಗಿನ ಹಾಲು ಮಧ್ಯಾಹ್ನ ಅಥವಾ ಊಟದ ನಂತರ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ, ಆದರೆ ಕನಿಷ್ಠ ಒಂದು ಗಂಟೆಯ ಅಂತರವಿರಬೇಕು. ಇದನ್ನು ಊಟದೊಂದಿಗೆ ಸೇವಿಸಬಾರದು, ಏಕೆಂದರೆ ಇದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದರೆ, ನೀವು ಹಾಲು ಸೇವಿಸದೆ ಇರುವುದು ಒಳ್ಳೆಯದು” ಎಂದು ಮೆನನ್ ಹೇಳಿದರು.

Published by:Sandhya M
First published: