Pregnancy Health: ಗರ್ಭಾವಸ್ಥೆಯಲ್ಲಿ ಸಂಪೂರ್ಣ ಸಸ್ಯಾಹಾರಿ ಆದ್ರೆ; ಎಷ್ಟೆಲ್ಲಾ ಪ್ರಯೋಜನ ಗೊತ್ತಾ?

ಮಹಿಳೆಯರು ಪೋಷಕಾಂಶ ಸಮೃದ್ಧ ಆಹಾರವನ್ನು ಸೇವಿಸಬೇಕು. ಅದು ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಮತ್ತು ತೂಕ ನಿಯಂತ್ರಿಸುತ್ತದೆ. ಮಹಿಳೆಯರಿಗೆ ಸಸ್ಯಾಹಾರಿ ಆಹಾರವು ಉತ್ತಮ ಆಹಾರ ಯೋಜನೆಯಾಗಿದೆ. ಅದು ದೇಹಕ್ಕೆ ಸಾಕಷ್ಟು ಪೋಷಕಾಂಶ ನೀಡುತ್ತದೆ. ಇದು ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿ ಕಾಪಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗರ್ಭಾವಸ್ಥೆಯಲ್ಲಿ (Pregnancy) ಆರೋಗ್ಯದ (Health) ಬಗ್ಗೆ ವಿಶೇಷ ಕಾಳಜಿ (Special Care) ವಹಿಸುವುದು ತುಂಬಾ ಮುಖ್ಯ. ಗರ್ಭ ಧರಿಸಿದ ನಂತರ ದೇಹದಲ್ಲಿ (Body) ಹಲವು ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು (Changes) ಉಂಟಾಗುತ್ತವೆ. ಈ ಸಮಯದಲ್ಲಿ ಹೆಚ್ಚಿನ ಶಕ್ತಿ (Energy) ಮತ್ತು ದೇಹಕ್ಕೆ ಪೋಷಕಾಂಶದ ಅಗತ್ಯತೆ ಇರುತ್ತದೆ. ಗರ್ಭಾವಸ್ಥೆಯ ಆರಂಭಿಕ ತಿಂಗಳುಗಳಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗುತ್ತವೆ. ಅಂತಹ ವೇಳೆ ವಾಕರಿಕೆ, ವಾಂತಿ ಮತ್ತು ತಲೆತಿರುಗುವಿಕೆ ಸಮಸ್ಯೆ ಉಂಟಾಗುತ್ತದೆ. ಗರ್ಭಧಾರಣೆಯ ನಂತರ ಈ ಸಮಸ್ಯೆ ಬಹುತೇಕ ಪ್ರತಿ ಮಹಿಳೆಯಲ್ಲಿ ಉಂಟಾಗುತ್ತದೆ. ಈ ವೇಳೆ ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

    ಸಸ್ಯಾಹಾರ ಆಹಾರವು ಗರ್ಭಾವಸ್ಥೆಯಲ್ಲಿ ಅವರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆಯೇ? ಇದರ ಬಗ್ಗೆ ತಿಳಿಯೋಣ.

    ಗರ್ಭಧಾರಣೆ ಮತ್ತು ಪೋಷಣೆ

    ಈ ವೇಳೆ ಮಹಿಳೆಯರು ಪೋಷಕಾಂಶ ಸಮೃದ್ಧ ಆಹಾರವನ್ನು ಸೇವಿಸಬೇಕು. ಅದು ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಮತ್ತು ತೂಕ ನಿಯಂತ್ರಿಸುತ್ತದೆ. ಮಹಿಳೆಯರಿಗೆ ಸಸ್ಯಾಹಾರಿ ಆಹಾರವು ಉತ್ತಮ ಆಹಾರ ಯೋಜನೆಯಾಗಿದೆ. ಅದು ದೇಹಕ್ಕೆ ಸಾಕಷ್ಟು ಪೋಷಕಾಂಶ ನೀಡುತ್ತದೆ. ಇದು ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿ ಕಾಪಾಡುತ್ತದೆ.

    ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ

    ಸಸ್ಯಾಹಾರಿ ಆಹಾರವು ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳ ಸೇವನೆ ತಪ್ಪಿಸುವ ಆಹಾರ ಆಗಿದೆ. ಕಾಳು, ಧಾನ್ಯ, ಬೀಜ, ಹಣ್ಣು, ತರಕಾರಿ, ಬೀಜಗಳು ಮತ್ತು ಒಣ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಬೇಕು.

    ಮ್ಯಾಕ್ಸ್ ಹೆಲ್ತ್‌ಕೇರ್‌ನ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಪ್ರಾದೇಶಿಕ ಮುಖ್ಯಸ್ಥೆ ರಿತಿಕಾ ಸಮದ್ದಾರ್ ಹೇಳುವ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಬಲವಾದ ರೋಗ ನಿರೋಧಕ ಶಕ್ತಿ ಹೊಂದುವುದು ತುಂಬಾ ಮುಖ್ಯ.

    ಈ ವೇಳೆ ಸಸ್ಯಾಹಾರಿ ಆಹಾರ ಸೇವನೆಯು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಮತ್ತು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಬಾಳೆಹಣ್ಣು, ಪಪ್ಪಾಯಿ, ಒಣದ್ರಾಕ್ಷಿ ಮತ್ತು ಶುಂಠಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳು ಕರುಳಿನಲ್ಲಿ ಆರೋಗ್ಯಕರ ಸೂಕ್ಷ್ಮಜೀವಿಗಳ ರಚನೆ ಉತ್ತೇಜಿಸುವ ಪ್ರಿಬಯಾಟಿಕ್‌ಗಳಾಗಿವೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    ಸಸ್ಯಾಹಾರಿ ಆಹಾರ ಏಕೆ ವಿಶೇಷ ಆಗಿದೆ?

    ಗರ್ಭಾವಸ್ಥೆಯಲ್ಲಿ ಸಸ್ಯಾಹಾರಿ ಆಹಾರವು ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಸಸ್ಯಾಧಾರಿತ ಆಹಾರವು ಆರೋಗ್ಯ ಕಾಪಾಡುತ್ತದೆ. ಸಸ್ಯಾಹಾರಿ ಆಹಾರಗಳು ಪ್ರೋಟೀನ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿವೆ. ಇದು ಗರ್ಭಾವಸ್ಥೆಯಲ್ಲಿ ಮಹಿಳೆ ಮತ್ತು ಮಗುವಿನ ಬೆಳವಣಿಗೆಗೆ ಅವಶ್ಯಕ.

    ಸಸ್ಯಾಹಾರಿ ಆಹಾರದ ಸಾಕಷ್ಟು ಸೇವನೆ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ಬಿ, ಸಿ ಸೇರಿದಂತೆ ಎಲ್ಲಾ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಅಲ್ಲದೆ ಈ ಆಹಾರವು ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.

    ಇದು ವಿಶೇಷವಾಗಿ ಗರ್ಭಿಣಿಯಾದ ನಂತರ ಮಹಿಳೆಯರಿಗೆ ಅಗತ್ಯವಾಗಿದೆ. ಸಸ್ಯ ಆಧಾರಿತ ಆಹಾರಗಳು ಕಾಲೋಚಿತ ಹಣ್ಣು, ತರಕಾರಿ, ಬೀಜ ಮತ್ತು ದ್ವಿದಳ ಧಾನ್ಯಗಳ ಸೇವನೆಗೆ ಹೆಚ್ಚು ಒತ್ತು ನೀಡುತ್ತವೆ.

    ಗರ್ಭಾವಸ್ಥೆಯಲ್ಲಿ ಸಸ್ಯಾಹಾರಿ ಆಹಾರ ಪ್ರಯೋಜನಕಾರಿ ಆಗಿದೆ

    ಬಾದಾಮಿ, ವಾಲ್‌ನಟ್ಸ್, ಅಗಸೆ ಬೀಜ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಗರ್ಭಾವಸ್ಥೆಯಲ್ಲಿ ಇವುಗಳ ಸೇವನೆ ಪೌಷ್ಟಿಕಾಂಶದ ಅವಶ್ಯಕತೆ ಪೂರೈಸುತ್ತದೆ. ಸಸ್ಯಾಹಾರಿ ಆಹಾರ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.

    ಸಸ್ಯಾಹಾರಿ ಆಹಾರವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ ಈ ಆಹಾರಗಳ ಸೇವನೆ ವೇಳೆ ವಿಶೇಷ ಕಾಳಜಿ ತೆಗೆದುಕೊಳ್ಳಿ.

    ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

    ಗರ್ಭಾವಸ್ಥೆಯಲ್ಲಿ ನೀವು ಸಸ್ಯಾಹಾರಿ ಆಹಾರ ಸೇವಿಸಲು ಸೋಯಾಬೀನ್ ತಪ್ಪದೇ ಸೇವನೆ ಮಾಡಿ. ಆಹಾರದಲ್ಲಿ ಧಾನ್ಯಗಳು, ಬೀನ್ಸ್, ಬಟಾಣಿ ಮತ್ತು ಕಾಳು ಸೇರಿಸಿ. ಒಣ ಹಣ್ಣುಗಳು ಮತ್ತು ಬೀಜಗಳನ್ನು ತಿನ್ನಿರಿ. ಋತುಮಾನದ ಹಣ್ಣುಗಳು ಮತ್ತು ನೇರಳೆ, ಕೆಂಪು ಮತ್ತು ಕಿತ್ತಳೆ ತರಕಾರಿ ಸೇರಿಸಿ.
    Published by:renukadariyannavar
    First published: