Sexual wellness: ದ್ವಿಲಿಂಗಿಗಳು ಮದುವೆಯಾಗುವುದು ಸರಿಯೇ?

ಭಾರತದಲ್ಲಿ ಎಲ್​ಜಿಬಿಟಿಕ್ಯೂಐ ಸಮುದಾಯವು ಸಲಿಂಗಕಾಮಿ ವಿವಾಹಕ್ಕೆ ಮುಂದಾಗುವುದನ್ನು ತಡೆಯಲು ಯಾರಿಗೂ ಹಕ್ಕಿಲ್ಲ. ಅದು ಅವರವರ ಆಯ್ಕೆ ಮತ್ತು ಇಚ್ಛೆಗೆ ಬಿಟ್ಟಿದ್ದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹಾಯ್ ಪಲ್ಲವಿ.
ನಿಮ್ಮ ಎಲ್ಲಾ ಲೇಖನಗಳಿಗೆ ಧನ್ಯವಾದಗಳು.
ದ್ವಿಲಿಂಗಿ ಮದುವೆಯಾಗುವುದು ಸರಿಯೇ?

ಯಾವುದೇ ಸಮಾಜದಲ್ಲಿ ದ್ವಿಲಿಂಗಿ ಎಂದು ಗುರುತಿಸುವ ಜನಸಂಖ್ಯೆಯ ಒಂದು ವಿಭಾಗ ಯಾವಾಗಲೂ ಇರುತ್ತದೆ. ಈ ದಿನಗಳಲ್ಲಿ ಅದೇ ಸಮುದಾಯದಲ್ಲಿ ದ್ವಿಲಿಂಗಿಗಳ ಮಾನ್ಯತೆ ಮತ್ತು ಅವರನ್ನು ಮುಕ್ತವಾಗಿ ಇನ್ನೂ ಸ್ವೀಕರಿಸಿಲ್ಲ. ಇದರ ಹೊರತಾಗಿಯೂ, ಅವರು ಸಾಮಾನ್ಯವಾಗಿ ತಮ್ಮ ಪಾಲುದಾರರಿಂದಲೇ ಅನುಮಾನ ಮತ್ತು ಅಪನಂಬಿಕೆ ಹೊಂದಿರುತ್ತಾರೆ. ಏಕೆಂದರೆ ಅವರ ಲೈಂಗಿಕ ಮತ್ತು ಪ್ರಣಯ ಸಂಬಂಧಗಳು ಇತರರಿಗಿಂತ ಹೆಚ್ಚಿನ ಆಯ್ಕೆಗಳನ್ನು ಹೊಂದಿರುತ್ತವೆ. ಈ ಅಪನಂಬಿಕೆಯು ವಿವಾಹಿತ ದ್ವಿಲಿಂಗಿ ವ್ಯಕ್ತಿಯನ್ನು ಸಂಶಯಾಸ್ಪದವಾಗಿ ಗ್ರಹಿಸಲು ಮುಖ್ಯ ಕಾರಣವಾಗಿದೆ. ಆದ್ದರಿಂದ ಇಲ್ಲಿ ಸಮಸ್ಯೆಯು ನಿಜವಾಗಿಯೂ ನಿಷ್ಠೆ ಮತ್ತು ನೈತಿಕತೆಯದ್ದಲ್ಲ. ಹೀಗಾಗಿ ದ್ವಿಲಿಂಗಿಗಳು  ತಮ್ಮ ಸಂಗಾತಿಗೆ ಆ ಬದ್ಧತೆ ಸಂಪೂರ್ಣ ಪರಿಪೂರ್ಣವಾಗಿ ಬರುವವರೆಗೂ  ಮದುವೆಯಾಗದಿರುವುದು ಸರಿ.

ಇದನ್ನು ಓದಿ: Sexual wellness: ಅವನು ನನ್ನನ್ನು ಮತ್ತೆ ನಗ್ನವಾಗಿ ನೋಡಿದಾಗ ಯಾವ ಭಾವನೆ ಉಂಟಾಗಬಹುದು?

ಇಂದು ಸಮಾಜ ಕೂಡ ಆಳವಾದ ಪೂರ್ವಾಗ್ರಹವಾಗಿದೆ. ಹೀಗಾಗಿ ಬೇರೆಯವರ ವೈಯಕ್ತಿಕ ಹಕ್ಕು, ಸ್ವಾತಂತ್ರ್ಯ ಹಾಗೂ ಆಯ್ಕೆಗಳ ವಿರುದ್ಧಮಾತನಾಡುವುದು ಸಹಜ. ಭಾರತದಲ್ಲಿ ಎಲ್​ಜಿಬಿಟಿಕ್ಯೂಐ ಸಮುದಾಯವು ಸಲಿಂಗಕಾಮಿ ವಿವಾಹಕ್ಕೆ ಮುಂದಾಗುವುದನ್ನು ತಡೆಯಲು ಯಾರಿಗೂ ಹಕ್ಕಿಲ್ಲ. ಅದು ಅವರವರ ಆಯ್ಕೆ ಮತ್ತು ಇಚ್ಛೆಗೆ ಬಿಟ್ಟಿದ್ದು.  
First published: