ನಾವೆಲ್ಲಾ ಸಾಮಾನ್ಯವಾಗಿ ಒಂದು ಮೊಟ್ಟೆಯಲ್ಲಿ ಒಂದು ಹಳದಿ ಬಣ್ಣದ (Egg Yolk) ಲೋಳೆಯಿರುವುದನ್ನು ನೋಡಿರುತ್ತೇವೆ, ಆದರೆ ಒಂದು ಮೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಹಳದಿ ಬಣ್ಣದ ಲೋಳೆಗಳು ಇರುತ್ತವೆ ಎಂದು ಬಹುತೇಕರಿಗೆ ಗೊತ್ತಿರುವುದಿಲ್ಲ.ನಿಮ್ಮ ಮನೆಯಲ್ಲಿರುವ (Homemade) ಮೊಟ್ಟೆಯನ್ನು ಆಮ್ಲೆಟ್ (Omelette) ಮಾಡಲು ಒಡೆದಾಗ ಅಥವಾ ಮೊಟ್ಟೆ ಸಾರು ಮಾಡುವಾಗ(Cooked) ಮೊಟ್ಟೆಯನ್ನು ಬೇಯಿಸಿದ ನಂತರ ಅದನ್ನು ತುಂಡರಿಸಿದಾಗ ಎರಡು ಲೋಳೆಗಳನ್ನು ನೀವು ನೋಡಿದರೆ ಆಶ್ಚರ್ಯವಾಗುವುದು (Wonder) ಸಹಜ.
ಈ ಎರಡು ಮೊಟ್ಟೆಯ ಹಳದಿ ಲೋಳೆಗಳನ್ನು ಹೊಂದಿರುವಂತಹ ಮೊಟ್ಟೆಗಳನ್ನು ಹೆಚ್ಚಾಗಿ ಯುವ ಕೋಳಿಗಳು ಉತ್ಪಾದಿಸುತ್ತವೆ. ಏಕೆಂದರೆ ಅವುಗಳ ಸಂತಾನೋತ್ಪತ್ತಿ ವ್ಯವಸ್ಥೆಗಳು ಇನ್ನೂ ಸಂಪೂರ್ಣವಾಗಿ ಪಕ್ವವಾಗಿಲ್ಲದೇ ಇರುವುದರಿಂದ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಕೋಳಿಯು ಅದರ ಪುನರುತ್ಪಾದಕ ಚಕ್ರದ ಅಂತ್ಯವನ್ನು ಸಮೀಪಿಸುತ್ತಿರುವಾಗ, ಅದು ಎರಡು ಹಳದಿ ಲೋಳೆಯೊಂದಿಗೆ ಮೊಟ್ಟೆಗಳನ್ನು ಇಡಬಹುದು ಎಂದು ಹೇಳಲಾಗುತ್ತಿದೆ.
ಇದರ ಬಗ್ಗೆ ಇರುವ ಮೂಢನಂಬಿಕೆಗಳು ನಿಮಗೆ ಗೊತ್ತೇ?
ಎರಡು ಹಳದಿ ಲೋಳೆಗಳಿರುವ ಅಸಾಮಾನ್ಯ ಮೊಟ್ಟೆ ಅನೇಕರಿಗೆ ಅಪರೂಪದ ದೃಶ್ಯವಾಗಿದೆ ಮತ್ತು ಇದರ ಸುತ್ತಲೂ ಹಲವಾರು ಮೂಢನಂಬಿಕೆಗಳು ಸಹ ಇವೆ. ವಿಕ್ಕನ್ ಜನರಲ್ಲಿ ಎರಡು ಮೊಟ್ಟೆಯ ಹಳದಿ ಲೋಳೆಯನ್ನು ನೋಡುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂದು ನಂಬುತ್ತಾರೆ. ಏಕೆಂದರೆ ಎರಡು ಹಳದಿ ಲೋಳೆಗಳನ್ನು ಹೊಂದಿರುವ ಮೊಟ್ಟೆಯು ಸಿಗುವುದು ತುಂಬಾನೇ ಅಪರೂಪ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Variety Eggs: ಒಂದು ಕೋಳಿ, ಬಗೆಬಗೆಯ ಮೊಟ್ಟೆ... ವೆರೈಟಿ ಮೊಟ್ಟೆ ಇಡೋ ವಿಚಿತ್ರ ಕೋಳಿ ಇಲ್ಲಿದೆ..ಮೊಟ್ಟೆ ಹೇಗಿದೆ ನೋಡಿ
ನಾರ್ಸ್ ಪುರಾಣವು ಅಂತಹ ಮೊಟ್ಟೆಯನ್ನು ನೋಡಿದರೆ ಹತ್ತಿರದ ಅಥವಾ ಆತ್ಮೀಯರ ಸಾವು ಆಗುವುದು ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ರೋಮನ್ ಜನರ ಅನಿಸಿಕೆ ಪ್ರಕಾರ, ಅಂತಹ ಮೊಟ್ಟೆಯನ್ನು ನೋಡಿದಾಗ ಮತ್ತು ಕುಟುಂಬದಲ್ಲಿ ಯಾರಾದರೂ ಗರ್ಭಿಣಿಯಾದಾಗ, ಅದು ಅವಳಿಗಳ ಆಗಮನವನ್ನು ಅರ್ಥೈಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ತಿನ್ನುವುದು ಸುರಕ್ಷಿತವೇ?
ಅನೇಕ ಜನರಿಗೆ ಈ ತರಹದ ಮೊಟ್ಟೆಗಳನ್ನು ಸೇವಿಸುವುದು ಆರೋಗ್ಯಕರವೇ ಎಂಬ ಪ್ರಶ್ನೆಯು ಕಾಡುತ್ತಿರುತ್ತದೆ. ಒಳ್ಳೆಯ ಸುದ್ದಿಯೆಂದರೆ, ಈ ತರಹದ ಮೊಟ್ಟೆಯು ಸೇವಿಸಲು ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗಿದೆ. ಅವಳಿ ಹಳದಿ ಲೋಳೆಗಳನ್ನು ಹೊಂದಿರುವ ಮೊಟ್ಟೆಯನ್ನು ನೀವು ಎಂದಾದರೂ ಗುರುತಿಸಿದರೆ, ಅವುಗಳನ್ನು ಎಂದಿಗೂ ಎಸೆಯಬೇಡಿ. ಅದು ಕೇವಲ ಒಂದು ಹಳದಿ ಲೋಳೆಯೊಂದಿಗೆ ಬರುವ ಮೊಟ್ಟೆಗಿಂತ ವಿಭಿನ್ನವಾಗಿರುತ್ತದೆ ಅಷ್ಟೇ. ಅಲ್ಲದೆ ಡಬಲ್-ಹಳದಿ ಲೋಳೆ ಮೊಟ್ಟೆ ಎಂದರೆ, ಸಾಮಾನ್ಯ ಮೊಟ್ಟೆಗಿಂತ ಪ್ರೋಟೀನ್, ಕೊಲೆಸ್ಟ್ರಾಲ್ ಮತ್ತು ಇತರ ಪೋಷಕಾಂಶಗಳನ್ನು ಹೆಚ್ಚಿಗೆ ಹೊಂದಿರುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಡಬಲ್-ಹಳದಿ ಲೋಳೆ ಮೊಟ್ಟೆಯನ್ನು ನೋಡಿದಾಗ ಅದನ್ನು ಬಿಸಾಡಬೇಡಿ.
ಎರಡಕ್ಕಿಂತಲೂ ಹೆಚ್ಚು ಹಳದಿ ಲೋಳೆಗಳು ಒಂದೇ ಮೊಟ್ಟೆಯಲ್ಲಿ ಇರಬಹುದೇ?
ಎರಡು ಮೊಟ್ಟೆಯ ಹಳದಿ ಲೋಳೆಯನ್ನು ಹುಡುಕುವುದೇ ಒಂದು ಅದೃಷ್ಟ ಎಂದು ನೀವು ಭಾವಿಸಿದರೆ, ಎರಡಕ್ಕಿಂತಲೂ ಹೆಚ್ಚು ಹಳದಿ ಲೋಳೆಗಳನ್ನು ಹೊಂದಿರುವ ಮೊಟ್ಟೆಯನ್ನು ನೋಡುವುದು ಇನ್ನೆಷ್ಟು ಅದೃಷ್ಟವನ್ನು ನಿಮಗೆ ತಂದು ಕೊಡಬಲ್ಲದು ನೀವೇ ಯೋಚಿಸಿ. ಜನರು ಮೊಟ್ಟೆಯಲ್ಲಿ 2ಕ್ಕಿಂತ ಹೆಚ್ಚು ಹಳದಿ ಲೋಳೆಗಳನ್ನು ಕಂಡು ಕೊಂಡಿದ್ದಾರೆ. ಮೂರು ಮತ್ತು ನಾಲ್ಕು ಹಳದಿ ಲೋಳೆಯನ್ನು ಹೊದಿರುವ ಮೊಟ್ಟೆಗಳು ಸಹ ಇವೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ, ಜುಲೈ 1971ರಲ್ಲಿ, ನ್ಯೂಯಾರ್ಕ್ನ ಹೈನ್ಸ್ ವರ್ತ್ ಪೌಲ್ಟ್ರಿ ಫಾರ್ಮ್ಸ್ನ ಡಯಾನ್ ಹೈನ್ಸ್ವರ್ತ್ ಎಂಬ ಮಹಿಳೆ 9 ಹಳದಿ ಲೋಳೆಗಳನ್ನು ಹೊಂದಿರುವ ಮೊಟ್ಟೆಯನ್ನು ನೋಡಿದ್ದಾಗಿ ವರದಿ ಮಾಡಿದ್ದಾರೆ.
ಇದನ್ನೂ ಓದಿ: Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್ ಹೇಳುತ್ತೆ ಸಂಶೋಧನೆ?
ಇಂತಹ ಮೊಟ್ಟೆಗಳನ್ನು ಏಕೆ ಮಾರಾಟ ಮಾಡುವುದಿಲ್ಲ?
ಇಂತಹ ಮೊಟ್ಟೆಗಳನ್ನು ಏಕೆ ಮಾರಾಟ ಮಾಡುವುದಿಲ್ಲ ಎಂದರೆ ಗ್ರಾಹಕರು ತುಂಬಾ ಆರೋಗ್ಯ ಪ್ರಜ್ಞೆಯನ್ನು ಹೊಂದಿದ್ದು, ಈ ಮೊಟ್ಟೆಯಲ್ಲಿ ಪ್ರೋಟೀನ್ ಹೊರತುಪಡಿಸಿ, ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಹೀಗಾಗಿ, ಫಾರ್ಮ್ಗಳು ನಿಜವಾಗಿಯೂ ಅವುಗಳನ್ನು ಪ್ರತ್ಯೇಕವಾಗಿರಿಸುತ್ತದೆ ಮತ್ತು ಬೇರೆಯವರಿಗೆ ಮಾರುತ್ತಾರೆ ಹೊರತು ಅಂಗಡಿಗಳಿಗೆ ನೀಡುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ