Drinking Water: ನೀವು ಊಟದ ಮಧ್ಯೆ, ನಂತರ ಈ ತಪ್ಪನ್ನು ಮಾಡ್ಬೇಡಿ, ಮುಂದೆ ದೊಡ್ಡ ಸಮಸ್ಯೆಯಾಗ್ಬಹುದು!

Drinking Water While Having Food: ಸಾಮಾನ್ಯವಾಗಿ ನೀವು ಆಹಾರವನ್ನು ತಿನ್ನುವಾಗ ಅಥವಾ ಅದರ ನಂತರ ತಕ್ಷಣ ನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಊಟ ಮಾಡುವಾಗ ಮಧ್ಯೆ ಮಧ್ಯೆ ನೀರು (Water) ಕುಡಿಯಬಾರದು ಹೊಟ್ಟೆ ತುಂಬುತ್ತೆ ಅಂತ ಮನೆಯಲ್ಲಿರುವ ಹಿರಿಯರು ಹೇಳುವುದನ್ನು ನಾವೆಲ್ಲಾ ಒಮ್ಮೆಯಾದರೂ ಕೇಳಿರುತ್ತೇವೆ. ಇಷ್ಟೇ ಅಲ್ಲದೆ ಇದರ ಜೊತೆಗೆ ಊಟ (Lunch) ಆದ ತಕ್ಷಣವೇ ನೀರು ಕುಡಿಯಬೇಡಿ ಅಂತ ಸಹ ಹೇಳುತ್ತಿರುತ್ತಾರೆ. ಊಟ ಮಾಡಬೇಕಾದರೆ ಮಧ್ಯದಲ್ಲಿ ಯಾಕೆ ನೀರು ಕುಡಿಯಬಾರದು ಅಂತ ನಿಮಗೆ ಅನೇಕ ಸಲ ಪ್ರಶ್ನೆಯೊಂದು (Question) ತಲೆಗೆ ಬಂದಿರುತ್ತದೆ. ಇದು ಸರಿ ಅಂತಾದರೆ ಊಟ ಆದ ತಕ್ಷಣ ಯಾಕೆ ನೀರು ಕುಡಿಯಬಾರದು ಅಂತ ನೀವು ನಿಮ್ಮ ಮನೆಯಲ್ಲಿ ಕೇಳಿಯೇ ಇರುತ್ತೀರಿ.  ಆಯುರ್ವೇದ (Ayurveda) ತಜ್ಞರು ಊಟದ ನಂತರ ಕನಿಷ್ಠ ಅರ್ಧಗಂಟೆ ಆದರೂ ಕಾಯಲು ಸಲಹೆ (Advice) ನೀಡುತ್ತಾರೆ. ಯಾಕೆ ನೀರು ಕುಡಿಬಾರ್ದು ಅನ್ನೋ ವಿಷಯ ತಿಳಿಬೇಕಾದ್ರೆ ಈ ಆರ್ಟಿಕಲ್ ಸಂಪೂರ್ಣ ಓದಿ.

ಸಾಮಾನ್ಯವಾಗಿ ನೀವು ಆಹಾರವನ್ನು ತಿನ್ನುವಾಗ ಅಥವಾ ಅದರ ನಂತರ ತಕ್ಷಣ ನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಅಂತ ಒಂದು ಗ್ರಹಿಕೆ ಇದೆ. ಆದರೆ ಕೆಲವೊಮ್ಮೆ ನೀವು ಊಟದ ಸಮಯದಲ್ಲಿ ನೀರನ್ನು ಕುಡಿಯದೆ ಇದ್ದರೆ ಊಟ ಆದ ನಂತರವೂ ನೀವು ಹಲವು  ಗಂಟೆಗಳ ಕಾಲ ನೀರು ಕುಡಿಯುವುದನ್ನುಮರೆತು ಬಿಡಬಹುದು. ನೀರು ಕುಡಿಯುವುದನ್ನು ನೀವು ಸಂಪೂರ್ಣವಾಗಿ ಮರೆತು ಬಿಟ್ಟರೆ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುತ್ತದೆ.  ಇದು ನಿಮ್ಮನ್ನು ನಿರ್ಜಲೀಕರಣಕ್ಕೆ ದೂಡಬಹುದು. ಆದ್ದರಿಂದ, ನಿಮ್ಮ ಊಟದ ಮೊದಲು ಮತ್ತು ನಂತರದ ಸಮಯದಲ್ಲಿ ನೀವು ನಿಜವಾಗಿಯೂ ನೀರನ್ನು ಕುಡಿಯಬಾರದೇ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಓಡಾಡುತ್ತಿರುತ್ತದೆ.

ತಜ್ಞರು ಏನ್ ಹೇಳ್ತಾರೆ ಗೊತ್ತಾ?

ಪೌಷ್ಟಿಕತಜ್ಞರಾದ ಭುವನ್ ರಸ್ತೋಗಿ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಊಟದ ಸಮಯದಲ್ಲಿ ನೀರು ಕುಡಿಯಬಾರದು ಎಂದು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳುತ್ತಾರೆ. "ಆಹಾರದೊಂದಿಗೆ ಅಥವಾ ಅದರ ನಂತರ ನೀರು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಳ್ಳುತ್ತವೆ ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕರು ನಂಬುತ್ತಾರೆ. ಸದ್ಯಕ್ಕೆ ಇದನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಆದ್ದರಿಂದ ಇದನ್ನು ಅನಿರ್ದಿಷ್ಟವೆಂದು ಪರಿಗಣಿಸಿ" ಎಂದು ಭುವನ್ ರಸ್ತೋಗಿ ಬರೆಯುತ್ತಾರೆ.

ಇದನ್ನೂ ಓದಿ: ಪಿರಿಯಡ್ಸ್‌ ಬಗ್ಗೆ ಇರೋ ಈ ಮಾತುಗಳೆಲ್ಲಾ ಬರೀ ಸುಳ್ಳು!

ಆಹಾರದಲ್ಲಿ ನೀರಿನಂಶ

"ಆಹಾರದೊಂದಿಗೆ ನೀರನ್ನು ಕುಡಿಯುವಲ್ಲಿ ಮತ್ತೊಂದು ತರ್ಕವೆಂದರೆ ನಾವು ಸಹಜವಾಗಿ ನಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಪದಾರ್ಥಗಳನ್ನು ಹೊಂದಿದ್ದೇವೆ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಸಲಾಡ್ ಗಳಲ್ಲಿಯೂ ನೀರಿನಾಂಶವಿರುತ್ತದೆ. ಸಾಂಪ್ರದಾಯಿಕ ಆಹಾರದಲ್ಲಿ, ಹಸಿರು ತರಕಾರಿಗಳಲ್ಲಿ ನೀರಿನಾಂಶ ತುಂಬಾ ಹೆಚ್ಚಿರುತ್ತವೆ ಮತ್ತು ತರಕಾರಿಗಳಲ್ಲಿಯೂ ನೀರಿನಾಂಶ ಇರುತ್ತದೆ.

ಇದನ್ನೂ ಓದಿ: ವ್ಯಾಯಾಮ ಮಾಡಿದ್ರೆ ಸಿಕ್ಕೇ ಸಿಗುತ್ತೆ ಈ 6 ಪ್ರಯೋಜನ!

ಊಟದ ನಂತರ ನೀರಿನ ಸೇವನೆ

ಊಟದ ನಂತರ ನೀರನ್ನು ಕುಡಿಯುವುದು ನಿಜವಾಗಿಯೂ ನಮ್ಮ ಆ ದಿನದ ಒಟ್ಟಾರೆ ನೀರಿನ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮತ್ತೊಂದೆಡೆ, ನಮ್ಮಲ್ಲಿ ಅನೇಕರು ಇದನ್ನು ಅನುಸರಿಸುವುದರಿಂದ, ಪ್ರತಿದಿನ ಊಟದ ಒಂದು ಗಂಟೆ ಮೊದಲು ಮತ್ತು ಪ್ರತಿ ಊಟದ ನಂತರ 2 ಗಂಟೆಗಳ ಕಾಲ ನೀರನ್ನು ಕುಡಿಯದೆ ಇರುವುದರಿಂದ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಹೀಗಾಗಿ ಅವರು ಪ್ರತಿದಿನ 3 ಅಥವಾ 4 ಲೀಟರ್ ನೀರಿನ ಸೇವನೆಯನ್ನು ಪೂರ್ಣಗೊಳಿಸಲು ಸಹ ಸಾಧ್ಯವಾಗುವುದಿಲ್ಲ. ನಿರ್ಜಲೀಕರಣವು ದೀರ್ಘಕಾಲದ ಮಲಬದ್ಧತೆ, ಆಮ್ಲೀಯತೆ, ಮೂತ್ರಪಿಂಡದಲ್ಲಿ ಕಲ್ಲುಗಳು, ಯುಟಿಐಗಳ ಹೆಚ್ಚಿದ ಸಾಧ್ಯತೆಗಳಂತಹ ಭೀಕರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಈಗಾಗಲೇ ಸಾಬೀತಾಗಿದೆ" ಎಂದು ತಜ್ಞರು ಹೇಳುತ್ತಾರೆ.
First published: