Healthy Habits: ಊಟವಾದ ನಂತರ ನಿದ್ದೆ (Sleeping Habits) ಮಾಡಲು ಹೋಗಬೇಕಾರೆ ಎಷ್ಟು ಹೊತ್ತು ಕಾಯಬೇಕು? ಅಥವಾ ಊಟ ಮತ್ತು ನಿದ್ದೆಯ ನಡುವೆ ಎಷ್ಟು ಅವಧಿಯ ಅಂತರ ಇರಬೇಕು? ಊಟವಾದ (Dinner) ತಕ್ಷಣ ಮಲಗುವುದು ಸರಿಯೇ? ಇಂತಹ ಪ್ರಶ್ನೆಗಳು ನಿಮ್ಮನ್ನು ಆಗಾಗ ಕಾಡುತ್ತಿರಬಹುದು. ಮಧ್ಯರಾತ್ರಿಯ ತಿನಿಸಾಗಿರಲಿ ಅಥವಾ ಬಿಡುವಿಲ್ಲದ ದಿನ ಕಳೆದ ತಡವಾಗಿ ಮಾಡಿದ ಊಟವಿರಲಿ, ಅದನ್ನು ಮುಗಿಸಿದ ಬಳಿಕ ಮಲಗಲು ಹೋಗಬೇಕೆಂದರೆ ನೀವು ಎಷ್ಟು ಹೊತ್ತು ಕಾಯಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳುವುದನ್ನು ಕಲಿಯಿರಿ. ಊಟ ಮಾಡಿದ ಬಳಿಕ ಬಹಳ ಹೊತ್ತು ಕಾಯದೆ ಮಲಗಿಬಿಟ್ಟರೆ, ನಿದ್ರಾ ಹೀನತೆ ಮತ್ತು ಎದೆಯುರಿ ಸೇರಿದಂತೆ ಕೆಲವೊಂದು ಅನಾರೋಗ್ಯ ಲಕ್ಷಣಗಳನ್ನು ನೀವು ಅನುಭವಿಸಬಹುದು.
ಮಧ್ಯಂತರದ ಅಗತ್ಯವಿದೆ
ಆಹಾರ ತಜ್ಞರು ಸಾಮಾನ್ಯವಾಗಿ, ದಿನದ ನಮ್ಮ ಕೊನೆಯ ಊಟ ಮತ್ತು ನಿದ್ದೆಯ ನಡುವೆ ಮೂರು ಗಂಟೆಯ ಮಧ್ಯಂತರ ಇರಬೇಕು ಎಂದು ಸಲಹೆ ನೀಡುತ್ತಾರೆ. ಇದು ಜೀರ್ಣ ಕ್ರೀಯೆ ನಡೆಯಲು ಮತ್ತು ನಿಮ್ಮ ಹೊಟ್ಟೆಯಲ್ಲಿರುವ ಪದಾರ್ಥಗಳು ಸಣ್ಣ ಕರುಳಿಗೆ ಚಲಿಸಲು ಅನುವು ಮಾಡಿಕೊಡುತ್ತದೆ. ಇದು ರಾತ್ರಿಯಲ್ಲಿ ಎದೆ ಉರಿ ಆಗುವುದು ಮತ್ತು ನಿದ್ರಾ ಹೀನತೆಯಂತಹ ಸಮಸ್ಯೆಗಳನ್ನು ಕೂಡ ತಡೆಯಬಲ್ಲದು. ಮಲಗುವುದರಿಂದ ಹೊಟ್ಟೆಯಲ್ಲಿರುವ ಆಹಾರ ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯಲು ಕಾರಣ ಆಗಬಹುದು, ಅದರಿಂದ ಎದೆಉರಿ ಅಥವಾ ಜಠರ ಹಿಮ್ಮುಖ ರೋಗ (ಜಿಇಆರ್ಡಿ)ದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮಲಗುವ ವೇಳೆಗೆ ಹೊಟ್ಟೆ ಸಂಪೂರ್ಣವಾಗಿ ಖಾಲಿ ಆಗದಿದ್ದರೆ ಇದು ಸಂಭಂವಿಸುತ್ತದೆ. ಊಟ ಮಾಡಿದ ನಂತರ ಬಹಳ ಹೊತ್ತು ಕಾದು, ನಂತರ ಮಲಗಿದರೆ ನಿದ್ರಾ ಹೀನತೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬರುವುದಿಲ್ಲ.
ನಿದ್ರೆ ಮತ್ತು ಆಹಾರದ ನಡುವಿನ ಸಂಬಂಧ
ಉತ್ತಮ ನಿದ್ರೆಗೆ ಸಹಕಾರಿ ಆಗುವ ಕೆಲವು ಆಹಾರ ಪದಾರ್ಥಗಳು ಇವೆ. ಉದಾಹರಣೆಗೆ ಟರ್ಕಿ ಮತ್ತು ಪೋರ್ಕ್ ಚಾಪ್ಸ್ ಅಧಿಕ ಪ್ರಮಾಣದ ಟ್ರೈಪ್ಟೋಫಾನ್ ಹೊಂದಿರುತ್ತವೆ. ಟ್ರೈಫ್ಟೋಫಾನ್ , ನಿದ್ರೆಯನ್ನು ಪ್ರಚೋದಿಸುವ ಅಂಶಗಳಾದ ಸೆರೊಟೊನಿನ್ ಮತ್ತು ಮೆಲಟೊನಿನ್ಗಳನ್ನು ದೇಹದಿಂದ ಚಯಾಪಚಯಗೊಳ್ಳುಯವಂತೆ ಮಾಡುವ ಒಂದು ದ್ರವ್ಯ. ಚೆರ್ರಿಯಂತಹ ಕೆಲವು ಪದಾರ್ಥಗಳು ಸ್ವಲ್ಪ ಪ್ರಮಾಣದ ಮೆಲಟೊನಿನ್ ಹೊಂದಿರುತ್ತದೆ.
ಬಿಸಿ ಹಾಲಿನಂತಹ ಕೆಲವು ಪದಾರ್ಥಗಳು ನಮಗೆ ನಿದ್ದೆ ಸಮಯದಲ್ಲಿ ಆರಾಮ ನೀಡಬಹುದು. ರಾತ್ರಿ ಮಧ್ಯ ಸೇವಿಸುವುದರಿಂದ ಆರಂಭದಲ್ಲಿ ನಮಗೆ ನಿದ್ದೆ ಬರಬಹುದು, ಆದರೆ ಬಳಿಕ ನಮ್ಮ ನಿದ್ದೆಗೆ ಅಡ್ಡಿಪಡಿಸಬಹುದು.
ಆಹಾರ ಸೇವನೆಯ ಸಮಯವು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಆಧಾರಗಳಿವೆ. ಆಹಾರದ ಸೇವನೆಯು ಇನ್ಸುಲಿನ್ ಬಿಡುಗಡೆಯನ್ನು ಪ್ರೇರೇಪಿಸುತ್ತದೆ.ಆಹಾರವು ಮೆದುಳಿನಲ್ಲಿ ಎಚ್ಚರವಾಗಿರುವ ಸಂಕೇತ ನೀಡುತ್ತದೆ ಮತ್ತು ಅದರಿಂದ ನಿದ್ರಿಸುವ ಸಾಮಥ್ಯಕ್ಕೆ ಅಡ್ಡಿಯಾಗಬಹುದು.
ಯಾವ ವೇಳೆಯಲ್ಲಿ ತಿನ್ನುವುದರಿಂದ ನಿದ್ದೆ ಹಾಳಾಗುತ್ತದೆ.
ಊಟ ಮಾಡಿದ ಕೂಡಲೇ ಮಲಗುವುದು ನಿಮ್ಮ ನಿದ್ದೆಗೆ ಹಾನಿ ಮಾಡಬಹುದು. ಅದರಲ್ಲೂ ನೀವು ಅತಿಯಾಗಿ ತಿಂದಿದ್ದರೆ ಅಥವಾ ನಿರ್ದಿಷ್ಟ ಪದಾರ್ಥಗಳನ್ನು ತಿಂದಿದ್ದರೆ ಎದೆ ಉರಿ ಆಗುವುದು ಖಂಡಿತಾ.
ಮಲಗುವುದರಿಂದ ಎದೆ ಉರಿ ಮತ್ತು ನಾಲಗೆ ಕಹಿಯಾಗುವುದು ಮುಂತಾದ ಆನಾರೋಗ್ಯಕರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮಸಾಲೆ ಪದಾರ್ಥಗಳುಳ್ಳ ಆಹಾರ, ಟೊಮ್ಯಾಟೋದಂತಹ ಸಿಟ್ರಿಕ್ ಅಂಶವುಳ್ಳ ಪದಾರ್ಥಗಳು, ಮದ್ಯಪಾನ, ಚಾಕೋಲೇಟು ಮತ್ತು ಪೆಪ್ಪರ್ಮೆಂಟ್ ಕೂಡ ಎದೆ ಉರಿ ಮತ್ತು ಹಿಮ್ಮಖ ಹರಿವಿನಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು.
ಮಲಗುವಾಗ ಕಾಫಿ, ಚಹಾ, ಸೋಡಾ, ಎನರ್ಜಿ ಡ್ರಿಂಕ್ಸ್ ಮತ್ತು ಚಾಕಲೇಟ್ ಸೇವಿಸಲೇಬೇಡಿ.ಅವೆಲ್ಲವೂ ನಿದ್ರೆಗೆ ಭಂಗ ತರಬಹುದು.ನಿದ್ರೆ ಮತ್ತು ಊಟದ ನಡುವಿನ ಅವಧಿಯ ಮಧ್ಯೆ ಸರಿಯಾದ ಅಂತರ ಕಾಪಾಡಿಕೊಂಡರೂ ಕೂಡ , ನಿಮಗೆ ನಿದ್ರಾಹೀನತೆಯ ಸಮಸ್ಯೆ ಬಂದರೆ ನೀವು ಕೂಡಲೇ ನಿದ್ರೆಯ ವಿಶೇಷ ತಜ್ಞರನ್ನು ಕಾಣುವುದು ಸೂಕ್ತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ