Ayurveda and Infertility: ದೇಹದ ತೂಕ ಜಾಸ್ತಿ ಇರೋದ್ರಿಂದ ಮಕ್ಕಳಾಗ್ತಿಲ್ವಾ? ಆಯುರ್ವೇದದಲ್ಲಿ ಇದಕ್ಕಿದೆ ಪರಿಹಾರ, ತಜ್ಞರು ವಿವರಿಸಿದ್ದಾರೆ

Weight Loss And Ayurveda: ಈ ತೂಕ ಹೆಚ್ಚಿರುವವರು ಹಾರ್ಮೋನ್ ಮಟ್ಟದಲ್ಲಿ ಅಸಮತೋಲನದ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾರ್ಮೋನುಗಳ ಅಸಮತೋಲನವು ಅಂಡೋತ್ಪತ್ತಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ತೂಕ ಹೆಚ್ಚಾಗಿದೆ (weight Gain) ಎಂದರೆ ನೀವು ಅಪಾಯದಲ್ಲಿದ್ದೀರಿ ಎಂದರ್ಥ. ತೂಕ ಹೆಚ್ಚಾದಂತೆ ಅದರ ಹಿಂದೆ ಒಂದೆಲ್ಲ ಒಂದು ಕಾಯಿಲೆಗಳು ಬರುತ್ತದೆ. ಮಧುಮೇಹದಂತಹ (Diabetes)  ಇತರ ಕಾಯಿಲೆಗಳಿಗೆ ಇದು ಕಾರಣವಾಗುತ್ತದೆ.  ಆದರೆ ಇದಕ್ಕಿಂತ ಮುಖ್ಯವಾಗಿ ತೂಕ ಹೆಚ್ಚಿರುವುದು ನಿಮ್ಮ ಗರ್ಭಧಾರಣೆಯ (Pregnancy)  ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ತೂಕ ನೀವು ಗರ್ಭ ಧರಿಸಲು ಅಡ್ಡಿಯುಂಟು ಮಾಡುತ್ತದೆ. ನೀವು ಕಡಿಮೆ ತೂಕ ಹೊಂದಿದ್ದರೂ ಸಹ, ಗರ್ಭ ಧರಿಸಲು ಆಗುವುದಿಲ್ಲ. ಆದ್ದರಿಂದ ಅತಿಯಾದ ತೂಕ ಅಥವಾ ಕಡಿಮೆ ತೂಕ ಎರಡೂ ಬಂಜೆತನಕ್ಕೆ (Infertility)  ಹೇಗೆ ಕಾರಣವಾಗುತ್ತದೆ. ಹಾಗಾದ್ರೆ ಅತಿಯಾದ ತೂಕ ಹೇಗೆ ಬಂಜೆತನಕ್ಕೆ ಕಾರಣವಾಗುತ್ತದೆ ಹಾಗೂ ಅದಕ್ಕೆ ಆಯುರ್ವೇದದಲ್ಲಿ (Ayurveda)  ಇದಕ್ಕೆ ಪರಿಹಾರ ಏನು ಎಂಬುದನ್ನ ಆಯುರ್ವೇದ ಪ್ರಸೂತಿ ತಜ್ಞೆ ರೇಷ್ಮಾ. ಎಂ. ಎ ನ್ಯೂಸ್​ 18 ಜೊತೆ ಹಂಚಿಕೊಂಡಿದ್ದಾರೆ.

ಬಂಜೆತನಕ್ಕೆ ತೂಕ ಹೇಗೆ ಕಾರಣವಾಗುತ್ತದೆ? 

ಬೊಜ್ಜಿರುವ ಮಹಿಳೆಯರಲ್ಲಿ ಫಲವತ್ತತೆ ಸಾಧ್ಯವಾಗುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಅಧಿಕ ತೂಕವಿರುವವರಲ್ಲಿ ಹಾರ್ಮೋನುಗಳ ಏರಿಳಿತದಿಂದಾಗಿ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದು ಮಹಿಳೆಯರ ಅಂಡೋತ್ಪತ್ತಿ ಚಕ್ರ ಮತ್ತು ಮೊಟ್ಟೆಗಳ ಗುಣಮಟ್ಟಕ್ಕೂ ಪರಿಣಾಮ ಬೀರುತ್ತದೆ. ಹೆಚ್ಚುವರಿ ತೂಕವು ಅಂಡೋತ್ಪತ್ತಿ ಚಕ್ರಕ್ಕೆ ಅಡ್ಡಿಪಡಿಸುತ್ತದೆ ಎಂದು ತಜ್ಞರು.

ಈ ತೂಕ ಹೆಚ್ಚಿರುವವರು ಹಾರ್ಮೋನ್ ಮಟ್ಟದಲ್ಲಿ ಅಸಮತೋಲನದ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾರ್ಮೋನುಗಳ ಅಸಮತೋಲನವು ಅಂಡೋತ್ಪತ್ತಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹವು ಉತ್ಪಾದಿಸುವ ಮೊಟ್ಟೆಗಳ ಗುಣಮಟ್ಟ ಹೆಚ್ಚಾಗಿ ಮಹಿಳೆಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ : ಜಿಮ್​ಗೆ ಹೋಗದೇ ತೂಕ ಇಳಿಸಲು ಬೆಳ್ಳುಳ್ಳಿ ಹೀಗೆ ಸಹಾಯ ಮಾಡುತ್ತದೆ

ನೀವು ಹೆಚ್ಚಿನ ತೂಕ ಹೊಂದಿದ್ದರೆ ಅಂಡಾಶಯವು ಗರ್ಭಾಶಯದಲ್ಲಿ ಯಾವುದೇ ಮೊಟ್ಟೆಗಳನ್ನು ಬಿಡುಗಡೆ ಮಾಡುವುದಿಲ್ಲ. ಮೊಟ್ಟೆಯನ್ನು ಬೆಳೆಸುವಲ್ಲಿ ತೊಂದರೆ ಉಂಟಾಗುತ್ತದೆ. ಅದನ್ನು ಫಾಲೋಪಿಯನ್ ಟ್ಯೂಬ್‌ಗೆ ಬಿಡುಗಡೆ ಮಾಡುತ್ತಾರೆ. ಮೊಟ್ಟೆಯ ಗುಣಮಟ್ಟವೂ ಕಳಪೆಯಾಗಿರುತ್ತದೆ.

ಹಾರ್ಮೋನುಗಳ ಅಸಮತೋಲನದಿಂದಾಗಿ ಸರಿಯಾದ ಸಮಯಕ್ಕೆ ಋತುಸ್ರಾವ ಆಗುವುದಿಲ್ಲ. ಇದು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಪಿಸಿಓಎಸ್ ಸಮಸ್ಯೆ ಉಂಟಾಗುತ್ತದೆ.  ಹೆಚ್ಚು ತೂಕ ಇರುವ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಹೆಚ್ಚು, ಗರ್ಭಾವಸ್ಥೆಯಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ, 5% ರಷ್ಟು ತೂಕ ಇಳಿಸುವುದು ಯಶಸ್ವಿಯಾಗಿ ಗರ್ಭಧರಿಸಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ.

ಆಯುರ್ವೇದದಲ್ಲಿದೆ ಪರಿಹಾರ

ಆಯುರ್ವೇದದಲ್ಲಿ ಈ ಸಮಸ್ಯೆಗೆ ಪರಿಹಾರವಿದ್ದು ಕೆಲ ಚಿಕಿತ್ಸೆಗಳ ಮೂಲಕ ಬಂಜೆತನವನ್ನು ನಿವಾರಿಸಬಹುದು.

1.  ತಕ್ರಪಾನ

ತಕ್ರ ಎಂದರೆ ಸಂಸ್ಕೃತದಲ್ಲಿ ಮಜ್ಜಿಗೆ ಎಂದು ಅರ್ಥ. ಮಜ್ಜಿಗೆ ಎಂದ ತಕ್ಷಣ ನಾವೇ ನಮಗೆ ಇಷ್ಟ ಬಂದ ಹಾಗೆ ಮಜ್ಜಿಗೆ ಕುಡಿಯಲು ಬರುವುದಿಲ್ಲ. ಈ ಮಜ್ಜಿಗೆ ತಯಾರಿಸಲು ಮನೆಯಲ್ಲಿ ಮೊಸರನ್ನು ಮೊದಲು ತಯಾರಿಸಬೇಕು, ಹಾಗೆಯೇ ಅದರಲ್ಲಿನ ಕೊಬ್ಬಿನ ಅಂಶಗಳನ್ನು ಅಂದರೆ ಹಾಗೂ ಬೆಣ್ಣೆಯನ್ನು ತೆಗೆಯುವುದು ಬಹಳ ಮುಖ್ಯವಾಗುತ್ತದೆ. ನಂತರ ಅದಕ್ಕೆ ಕೆಲ ಪುಡಿಗಳನ್ನು ಸೇರಿಸಿ ನೀಡಲಾಗುತ್ತದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡಿ, ಗರ್ಭಧರಿಸಲು ಸಹಾಯ ಮಾಡುತ್ತದೆ.

2.  ಉದ್ವರ್ತನ

ಉದ್ವರ್ತನವು ಗಿಡಮೂಲಿಕೆಗಳ ಪುಡಿಗಳನ್ನು ಬಳಸಿಕೊಂಡು ಮಾಡುವ ವಿಶೇಷ ಮಸಾಜ್ ಆಗಿದೆ. ಈ ಮಸಾಜ್ ಮೇಲ್ಮುಖವಾಗಿ ಸ್ಟ್ರೋಕಿಂಗ್ ಅನ್ನು ಒಳಗೊಂಡಿರುತ್ತದೆ, ಅಲ್ಲಿ ಪುಡಿಯನ್ನು ಬಲವಂತವಾಗಿ ದೇಹದ ಮೇಲೆ ಉಜ್ಜಲಾಗುತ್ತದೆ. ಉದ್ವರ್ತನದ ಮುಖ್ಯ ಪ್ರಯೋಜನವೆಂದರೆ ಚರ್ಮದ ಮೂಲಕ ವಿಷವನ್ನು ತೆಗೆದುಹಾಕುವುದು. ಇದು ಚರ್ಮವನ್ನು ಟೋನ್ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಉದ್ವರ್ತನಾ ಟೋನ್ಗಳು ಮತ್ತು ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ, ಕೊಬ್ಬಿನ ಅಂಗಾಂಶ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ, , ಕೆಟ್ಟ ದೇಹದ ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಚರ್ಮದ ಕೆಳಗಿನ ಕೊಬ್ಬನ್ನ ಕಡಿಮೆ ಮಾಡುವುದರಿಂದ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಈ ಚಿಕಿತ್ಸೆಯನ್ನು 7 ದಿನಗಳಿಂದ 14 ದಿನಗಳವರೆಗೆ ನೀಡಲಾಗುತ್ತದೆ.

3. ಪಂಚಕರ್ಮ ಚಿಕಿತ್ಸೆ

ಈ ಚಿಕಿತ್ಸೆ ಸಾಮಾನ್ಯವಾಗಿ ಎಲ್ಲಾ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಎನ್ನಬಹುದು. ಇದು ದೇಹದಿಂದ ವಿಷವನ್ನು ಹೊರ ಹಾಕುವುದರಿಂದ ತೂಕ ಕಡಿಮೆಯಾಗಿ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.

4. ವಿರೇಚನ ಚಿಕಿತ್ಸೆ

ಇದನ್ನೂ ಓದಿ: ಈ ದೇಶಗಳಲ್ಲಿ ಕ್ರಿಸ್ಮಸ್ ಅತ್ಯಂತ ವಿಜೃಂಭಣೆಯಿಂದ ಆಚರಿಸ್ತಾರೆ, ಚಿತ್ರಗಳಲ್ಲಿ ನೋಡಿ

ಈ ಚಿಕಿತ್ಸೆ ಸಹ ದೇಹದ ಅನಗತ್ಯ ತೂಕವನ್ನು ಕಡಿಮೆ ಮಾಡಿ ನಿಮ್ಮ ಬಂಜೆತನದ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
Published by:Sandhya M
First published: