• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Cooking Oil: ಅಡುಗೆಗೆ ಆಲಿವ್ ಎಣ್ಣೆಗಿಂತ ತುಪ್ಪ ಒಳ್ಳೆಯದೇ? ಇದರ ಬಗ್ಗೆ ಪೌಷ್ಟಿಕ ತಜ್ಞರು ಏನ್ ಹೇಳ್ತಾರೆ ನೋಡಿ

Cooking Oil: ಅಡುಗೆಗೆ ಆಲಿವ್ ಎಣ್ಣೆಗಿಂತ ತುಪ್ಪ ಒಳ್ಳೆಯದೇ? ಇದರ ಬಗ್ಗೆ ಪೌಷ್ಟಿಕ ತಜ್ಞರು ಏನ್ ಹೇಳ್ತಾರೆ ನೋಡಿ

ಅಡುಗೆಯ ಎಣ್ಣೆ

ಅಡುಗೆಯ ಎಣ್ಣೆ

kitchen Hack: ನೀವು ಯಾವ ರೀತಿಯ ಎಣ್ಣೆಯನ್ನು ಅಡುಗೆಗೆ ಬಳಸಿಕೊಳ್ಳುತ್ತೀರಿ ಮತ್ತು ಅದನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.

  • Share this:

ಬಹುತೇಕರು ಅಡುಗೆಗೆ ಅಂತ ಪ್ರತಿದಿನ ಎಣ್ಣೆಯನ್ನು (Oil) ಹಲವಾರು ರೀತಿಯಲ್ಲಿ ಬಳಸುತ್ತಾರೆ. ಎಂದರೆ ಹಪ್ಪಳ ಕರಿಯಲು, ಒಗ್ಗರಣೆ ಹಾಕುವುದಕ್ಕೆ, ಬೆಳಗ್ಗಿನ ಉಪಾಹಾರಗಳಿಗೆ ಅಂತ ಹೀಗೆ ಅನೇಕ ಸಂದರ್ಭಗಳಲ್ಲಿ ಎಣ್ಣೆಯನ್ನು ಬಳಸುತ್ತಾರೆ. ಆದರೆ ಅಡುಗೆಮನೆಯಲ್ಲಿ ಮಾಡುವ ಖಾದ್ಯಗಳಿಗೆ ವಿಶಿಷ್ಟವಾದ ಪರಿಮಳ ನೀಡುವುದು ಮಾತ್ರ ತುಪ್ಪ (Ghee). ಇದರಿಂದ ಅನೇಕ ಆರೋಗ್ಯಕರ (Health) ಪ್ರಯೋಜನಗಳಿವೆ. ಎಣ್ಣೆಯ ಅತಿಯಾದ ಸೇವನೆ ಅನೇಕ ರೋಗಗಳಿಗೆ ಕಾರಣವಾಗುತ್ತೆ ಅಂತ ಹೇಳುವುದನ್ನು ನಾವು ಹಿಂದೆಯಿಂದಲೂ ಕೇಳುತ್ತಲೇ ಬಂದಿದ್ದೇವೆ. ಆದರೆ ಈ ಮಾತು ಎಲ್ಲಾ ಎಣ್ಣೆಗಳಿಗೂ ಅನ್ವಯಿಸುವುದಿಲ್ಲ. ನೀವು ಯಾವ ರೀತಿಯ ಎಣ್ಣೆಯನ್ನು ಅಡುಗೆಗೆ ಬಳಸಿಕೊಳ್ಳುತ್ತೀರಿ ಮತ್ತು ಅದನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.


ಆಲಿವ್ ಎಣ್ಣೆಯ ಹಲವಾರು ಪ್ರಯೋಜನಗಳ ಬಗ್ಗೆ ನಾವು ಆಗಾಗ್ಗೆ ಕೇಳಿರುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ಆಲಿವ್ ಎಣ್ಣೆಯನ್ನು ಬಳಸದಿರುವುದು ಉತ್ತಮ ಅಂತ ಹೇಳುತ್ತಾರೆ ತಜ್ಞರು.


ಈ ತುಪ್ಪ ಮತ್ತು ಆಲಿವ್ ಎಣ್ಣೆಯಲ್ಲಿ ಯಾವುದು ಉತ್ತಮವಾದುದ್ದು?


ಸೆಲೆಬ್ರಿಟಿ ಪೌಷ್ಟಿಕ ತಜ್ಞರಾದ ನಮಾಮಿ ಅಗರ್ವಾಲ್ ಅವರ ಪ್ರಕಾರ "ತುಪ್ಪವು ಹೆಚ್ಚಿನ ಎಣ್ಣೆಗಳಿಗಿಂತ ಹೆಚ್ಚಿನ ಹೊಗೆಯ ಬಿಂದುವನ್ನು ಹೊಂದಿದೆ, ಅಂದರೆ ಅದು ಒಡೆಯಲು ಮತ್ತು ಹಾನಿಕಾರಕ ಸಂಯುಕ್ತಗಳನ್ನು ಉತ್ಪಾದಿಸಲು ಪ್ರಾರಂಭಿಸುವ ಮೊದಲು ಅದನ್ನು ಹೆಚ್ಚಿನ ತಾಪಮಾನಕ್ಕೆ ಬಿಸಿ ಮಾಡಬಹುದು. ಇದು ಹೆಚ್ಚಿನ ತಾಪಮಾನದಲ್ಲಿ ಬೇಯಿಸಲು ಉತ್ತಮ ಆಯ್ಕೆಯಾಗಿದೆ. ಭಾರತೀಯ ಭಕ್ಷ್ಯಗಳನ್ನು ಬೇಯಿಸಲು ತುಪ್ಪವು ಎಣ್ಣೆಗಿಂತಲೂ ಒಳ್ಳೆಯದು" ಎಂದಿದ್ದಾರೆ.


ಮತ್ತೊಂದೆಡೆ ಆಲಿವ್ ಎಣ್ಣೆಯು ಕಡಿಮೆ ಹೊಗೆಯ ಬಿಂದುವನ್ನು ಹೊಂದಿದೆ ಮತ್ತು ಅದನ್ನು ಬಿಸಿ ಮಾಡಲು ಸಾಧ್ಯವಿಲ್ಲ ಎಂದು ನಮಾಮಿ ಹೇಳುತ್ತಾರೆ.


ಆಲಿವ್ ಎಣ್ಣೆಯನ್ನು ಸಲಾಡ್ ಡ್ರೆಸ್ಸಿಂಗ್ ನಲ್ಲಿ ಏಕೆ ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಸಲಾಡ್ ಅನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ಇದನ್ನು ಬಿಸಿ ಮಾಡಲಾಗುವುದಿಲ್ಲ.


ಇದನ್ನೂ ಓದಿ: ಬೇಸಿಗೆಯಲ್ಲಿ ಗಿಡ ಬಾಡಿ ಹೋಗಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ


ಆದ್ದರಿಂದ, ಹೆಚ್ಚಿನ ತಾಪಮಾನದಲ್ಲಿ ಆಹಾರವನ್ನು ಬೇಯಿಸಲು ಆಲಿವ್ ಎಣ್ಣೆಯನ್ನು ಬಳಸುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ನೀವು ಅದರ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳ ಲಾಭವನ್ನು ಇತರ ರೀತಿಯಲ್ಲಿ ಪಡೆಯಬಹುದು.


ತುಪ್ಪ ಆರೋಗ್ಯಕರವೇ? ತುಪ್ಪದ ಪ್ರಮುಖ ಆರೋಗ್ಯ ಪ್ರಯೋಜನಗಳು ಹೀಗಿವೆ:


1. ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ: ತುಪ್ಪವು ಮಧ್ಯಮ ಮತ್ತು ಸಣ್ಣ ಸರಪಳಿ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ನಿಮಗೆ ಆರೋಗ್ಯಕರ ಶಕ್ತಿಯನ್ನು ಒದಗಿಸುತ್ತದೆ. ಇದಕ್ಕಾಗಿಯೇ ತುಪ್ಪವನ್ನು ಸೇವಿಸುವುದರಿಂದ ತಂಪಾದ ವಾತಾವರಣದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಬಹುದು.


2. ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸುತ್ತದೆ: ತುಪ್ಪವು ಬ್ಯೂಟಿರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ನಿಮ್ಮ ಹೊಟ್ಟೆಯಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳಿಗೆ ಒಳ್ಳೆಯದು.


ಇದನ್ನೂ ಓದಿ: ದೇಹದಲ್ಲಿ ಉರಿಯೂತ ಮತ್ತು ಆರೋಗ್ಯ ಸಮಸ್ಯೆ ತಡೆಯಲು ಈ ವಸ್ತುಗಳನ್ನು ಬಳಸಿ


ಈ ಆಮ್ಲವು ನಿಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ತುಪ್ಪವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಮತ್ತು ಮಲಬದ್ಧತೆಯಿಂದ ದೂರವಿಡುತ್ತದೆ ಎಂದು ಹೇಳಲಾಗುತ್ತದೆ.


3. ದೇಹದ ಚರ್ಮಕ್ಕೆ ಒಳ್ಳೆಯದು: ತುಪ್ಪದಲ್ಲಿನ ವಿಟಮಿನ್ ಎ ಮತ್ತು ಇ ಅಂಶವು ಚರ್ಮ ಸ್ನೇಹಿ ಘಟಕಾಂಶವಾಗಿದೆ. ಸೇವನೆಯ ಹೊರತಾಗಿ, ಚರ್ಮವನ್ನು ಮೃದುವಾಗಿಸಲು ತುಪ್ಪವನ್ನು ಚರ್ಮದ ಮೇಲೆ ಸಹ ಹಚ್ಚಿಕೊಳ್ಳಲಾಗುವುದು.


4. ಹೃದಯ ಆರೋಗ್ಯಕ್ಕೆ ಒಳ್ಳೆಯದು: ತುಪ್ಪವು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.


ಆದಾಗ್ಯೂ, ಅದರ ಸಂಪೂರ್ಣ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಲು ಇದನ್ನು ಮಿತವಾಗಿ ಸೇವಿಸಬೇಕು. ತುಪ್ಪದ ಸ್ಯಾಚುರೇಟೆಡ್ ಕೊಬ್ಬಿನ ಅಂಶವು ಕೆಲವರಿಗೆ ಸಮಸ್ಯೆಯನ್ನು ಉಂಟು ಮಾಡಬಹುದು, ಆದ್ದರಿಂದ ನೀವು ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಹೊಂದಿದ್ದರೆ ನೀವು ತಜ್ಞರನ್ನು ಕೂಡಲೇ ಸಂಪರ್ಕಿಸುವುದು ಒಳ್ಳೆಯದು.
5. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತೆ: ತುಪ್ಪವು ಸಂಯೋಜಿತ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಒಮೆಗಾ-6 ಕೊಬ್ಬಿನಾಮ್ಲವಾಗಿದೆ, ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ತುಪ್ಪವು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು ಮತ್ತು ಇತರ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ.

top videos
    First published: