Matta Rice: ಶುಗರ್ ಸಮಸ್ಯೆ ಇರೋರಿಗೆ ಬೆಸ್ಟ್​ ಫುಡ್​ ಇದು, ಕೆಂಪು ಮಟ್ಟಾ ರೈಸ್ ಬಗ್ಗೆ ಕೇಳಿದ್ದೀರೇನು?

ತೂಕ ಇಳಿಕೆಯ ಪ್ರಕ್ರಿಯೆ ಆರಂಭಿಸುವ ಮೊದಲು ನಮ್ಮಲ್ಲಿ ಅನೇಕರು ಮಾಡುವ ಮೊದಲ ಕೆಲಸವೆಂದರೆ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಲು ಅಕ್ಕಿ ಮತ್ತು ರೊಟ್ಟಿಯನ್ನು ತ್ಯಜಿಸುವುದು. ಆದರೆ ತೂಕ ಇಳಿಕೆಯಲ್ಲಿ ಹೇಗೆ ಜೋಳ, ರಾಗಿ ಪ್ರಮುಖ ಪಾತ್ರ ವಹಿಸುತ್ತವೆಯೋ ಹಾಗೆಯೇ ಅಕ್ಕಿಯು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಿದ್ರೆ ಅನ್ನ ಸೇವನೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ಈ ಲೇಖನದಲ್ಲಿಂದು ನೋಡೋಣ.

ಕೇರಳದ ಕೆಂಪು ಮಟ್ಟಾ ಅಕ್ಕಿ

ಕೇರಳದ ಕೆಂಪು ಮಟ್ಟಾ ಅಕ್ಕಿ

  • Share this:
rf ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಸೇವಿಸುವ ಆಹಾರ (Food) ಎಂದರೆ ಅದು ಅನ್ನ. ಅನ್ನ ಅನೇಕ ಜನರ ನೆಚ್ಚಿನ ಆಹಾರ. ಅಕ್ಕಿಯಲ್ಲಿ ಕ್ಯಾಲೋರಿ (Calorie) ಮತ್ತು ಕಾರ್ಬೋಹೈಡ್ರೇಟ್ ತುಂಬಾ ಹೆಚ್ಚಿರುತ್ತೆ. ಆದ್ದರಿಂದ, ತೂಕ ಕಳೆದುಕೊಳ್ಳುವ ಜನರು ಅನ್ನ (Rice) ಹೆಚ್ಚಾಗಿ ತಿನ್ನೋದಿಲ್ಲ. ತೂಕ ಇಳಿಕೆಯ ಪ್ರಕ್ರಿಯೆ ಆರಂಭಿಸುವ ಮೊದಲು ನಮ್ಮಲ್ಲಿ ಅನೇಕರು ಮಾಡುವ ಮೊದಲ ಕೆಲಸವೆಂದರೆ  ಕಾರ್ಬೋಹೈಡ್ರೇಟ್ (Carbohydrate) ಸೇವನೆಯನ್ನು ಕಡಿಮೆ ಮಾಡಲು ಅಕ್ಕಿ ಮತ್ತು ರೊಟ್ಟಿಯನ್ನು ತ್ಯಜಿಸುವುದು. ಆದರೆ ತೂಕ ಇಳಿಕೆಯಲ್ಲಿ (Weight Loss) ಹೇಗೆ ಜೋಳ, ರಾಗಿ ಪ್ರಮುಖ ಪಾತ್ರ ವಹಿಸುತ್ತವೆಯೋ ಹಾಗೆಯೇ ಅಕ್ಕಿಯು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಿದ್ರೆ ಅನ್ನ ಸೇವನೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ಈ ಲೇಖನದಲ್ಲಿಂದು ನೋಡೋಣ.

ಸಾಮಾನ್ಯವಾಗಿ ನಾವು ಊಟವನ್ನು ಮಾಡಬೇಕಾದರೆ ಬಿಳಿ ಅಕ್ಕಿಯನ್ನು ಸೇವನೆ ಮಾಡಿಯೇ ಮಾಡುತ್ತೇವೆ. ಆದರೆ ನಿಮಗೆ ಗೊತ್ತೇ ಈ ಅಕ್ಕಿಯಲ್ಲಿಯು ಕೂಡ ಹಲವಾರು ವಿಧಗಳಿವೆ. ಬಿಳಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ ಇತ್ಯಾದಿ. ನಾವೆಲ್ಲರೂ ಬಿಳಿ ಅಕ್ಕಿಯನ್ನು ಸೇವನೆ ಮಾಡಿರುತ್ತೇವೆ ಆದರೆ ಮಾರುಕಟ್ಟೆಯಲ್ಲಿ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಅಂತ ಸಿಗುತ್ತದೆ ಇದನ್ನು ತಿನ್ನುವವರು ತುಂಬಾನೇ ಕಡಿಮೆಯುಳ್ಳ ಜನರು ಇದ್ದಾರೆ.

ಅನ್ನ ತಿನ್ನೋದ್ರಿಂದ ತೂಕ ಹೆಚ್ಚುತ್ತೆ ಅನ್ನೋದು ಗೊತ್ತು. ಆದರೆ ಆರೋಗ್ಯಕರ ತೂಕ ಹೆಚ್ಚಳಕ್ಕಾಗಿ ಅನ್ನವನ್ನು ಸರಿಯಾಗಿ ತಿನ್ನುವುದು ಬಹಳ ಮುಖ್ಯ. ನೀವು ಅನ್ನದೊಂದಿಗೆ ತರಕಾರಿ, ಚೀಸ್ ಅಥವಾ ಬೇಳೆಕಾಳನ್ನು ತಿನ್ನಬಹುದು. ಇದು ನಿಮಗೆ ಕ್ಯಾಲೊರಿಗಳು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಮತ್ತು ಇತರ ಜೀವಸತ್ವಗಳನ್ನು ಸಹ ನೀಡುತ್ತದೆ.

ಕೇರಳದ ಕೆಂಪು ಮಟ್ಟಾ ಅಕ್ಕಿ:
ಇದರ ಜೊತೆಗೆ ಆಹಾರ ತಜ್ಞರು ಸೂಚಿಸುವ ಕಂದು ಅಕ್ಕಿಯ ಹೊರತಾಗಿ, ಕೇರಳದಲ್ಲಿ ಕಂಡುಬರುವ ಕೆಂಪು ಮಟ್ಟಾ ಅಕ್ಕಿಯು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಬಹುದು. ನೀವು ಕೇರಳದಲ್ಲಿ ಊಟಕ್ಕೆ ಹೋದರೆ, ಕೆಂಪು ಮಟ್ಟಾ ಅಕ್ಕಿಯ ಅನ್ನದ ಜೊತೆಗೆ ವಿವಿಧ ತರಕಾರಿ ಹಾಕಿರುವ ಸಾಂಬರ್‌ ಅನ್ನು ನೀಡಲಾಗುತ್ತದೆ, ಈ ಕೆಂಪು ಮಟ್ಟಾ ಅಕ್ಕಿಯನ್ನು ರೋಸ್ಮಟ್ಟಾ ಅಕ್ಕಿ, ಪಾಲಕ್ಕಡನ್ ಮಟ್ಟಾ ಅಕ್ಕಿ ಎಂದೂ ಕರೆಯುತ್ತಾರೆ. ಏಕೆಂದರೆ ಇದನ್ನು ಪಾಲಕ್ಕಾಡ್ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ಅಕ್ಕಿಗೆ ಜಿಐ (ಭೌಗೋಳಿಕ ಸೂಚಕ) ಟ್ಯಾಗ್ ಅನ್ನು ಸಹ ನೀಡಲಾಗಿದೆ.

ಈ ಅಕ್ಕಿಯಲ್ಲಿರುವ ಆಂಥೋಸಯಾನಿನ್ ಎಂಬ ರಾಸಾಯನಿಕದಿಂದ ಇದರ ಬಣ್ಣ ಮತ್ತು ಪರಿಮಳ ಅತ್ಯಂತ ವಿಶಿಷ್ಟತೆಯಿಂದ ಕೂಡಿದೆ ಎಂದು ಹೇಳಬಹುದು. ಈ ಕೆಂಪು ಮಟ್ಟಾ ಅಕ್ಕಿಯ ಪ್ರಯೋಜನಗಳನ್ನು ಈಗ ತಿಳಿಯೋಣ.

ಕೇರಳದ ಕೆಂಪು ಮಟ್ಟಾ ಅಕ್ಕಿಯ 10 ಪ್ರಯೋಜನಗಳು ಇಲ್ಲಿವೆ:
ಪೋಷಕಾಂಶಗಳು ಹೆಚ್ಚು: ಬಿಳಿ ಅಕ್ಕಿಗೆ ಹೋಲಿಸಿದರೆ ಇದು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ, ಏಕೆಂದರೆ ಭತ್ತದ ಧಾನ್ಯದ ಭಾಗವಾಗಿರುವ ಅಕ್ಕಿ ಸೂಕ್ಷ್ಮಾಣು, ಉತ್ಕೃಷ್ಟ ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ. ಪಾಲಿಶ್ ಮಾಡಿದ ಮತ್ತು ಸುಗಂಧಭರಿತ ಬಾಸ್ಮತಿ ಅಕ್ಕಿಗೆ ಇದನ್ನು ಹೋಲಿಸಿದರೆ ಸಾಂಪ್ರದಾಯಿಕ ಕೆಂಪು ಅಕ್ಕಿಯು ಹೆಚ್ಚು ಪಾಲಿಶ್‌ ಆಗಿರುವುದಿಲ್ಲ. ಆದ್ದರಿಂದ ಇದರಲ್ಲಿ ಐದು ಪಟ್ಟು ಹೆಚ್ಚು ಕಬ್ಬಿಣ ಅಂಶ, ಮೂರು ಪಟ್ಟು ಹೆಚ್ಚು ಸತು ಮತ್ತು ಎರಡು ಪಟ್ಟು ಹೆಚ್ಚು ನಾರಿನಾಂಶವನ್ನು ಇದು ಹೊಂದಿರುತ್ತದೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿತ್ತು.

ಇದನ್ನೂ ಓದಿ:  Breakfast Recipe: ಕೇವಲ 10 ನಿಮಿಷದಲ್ಲಿ ಈ ಉಪ್ಪಿಟ್ಟು ಮಾಡ್ಬೋದು, ಮಕ್ಕಳಿಗೂ ಇಷ್ಟವಾಗುತ್ತೆ

ನಾರಿನಾಂಶ ಹೆಚ್ಚು: ಮಾನವ ದೇಹದಲ್ಲಿನ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾರಿನಾಂಶ ಭರಿತ ಆಹಾರದ ಅಗತ್ಯವಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಒಂದು ಕಾಲು ಕಪ್ ಕೆಂಪು ಅಕ್ಕಿಯು ಸುಮಾರು 2 ಗ್ರಾಂ ನಾರಿನಾಂಶವನ್ನು ಹೊಂದಿರುತ್ತದೆ. ಇದು ನಮ್ಮ ದೈನಂದಿನ ನಾರಿನಾಂಶದ ಅಗತ್ಯವನ್ನು ಪೂರೈಸುತ್ತದೆ. ಹೆಚ್ಚಿನ ನಾರಿನ ಅಂಶದಿಂದಾಗಿ, ಕೆಂಪು ಅಕ್ಕಿಯಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿವೆ. ಆದರೆ ಬಿಳಿ ಅಕ್ಕಿಯಲ್ಲಿ ಸರಳ ಕಾರ್ಬೋಹೈಡ್ರೇಟ್‌ಗಳಿವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ: ಕೆಂಪು ಅಕ್ಕಿಯು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವುದರಿಂದ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಅಭಿವೃದ್ಧಿಪಡಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಬ್ಬಿಣಾಂಶವು ಹೆಚ್ಚು: ಕೆಂಪು ಮಟ್ಟಾ ಅಕ್ಕಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶ ಇದೆ. ಅರ್ಧ ಕಪ್ ಅಕ್ಕಿಯಲ್ಲಿ ಸುಮಾರು 42 ಗ್ರಾಂ ಕಬ್ಬಿಣಾಂಶ ಇದೆ ಎಂದು ವರದಿಗಳು ಹೇಳುತ್ತವೆ. ಇದು ಹೃದಯ, ಮೂಳೆಗಳು ಮತ್ತು ನರಗಳು ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಿಮೆ ಕಬ್ಬಿಣಾಂಶದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

ಹೆಚ್ಚಿನ ಕ್ಯಾಲ್ಸಿಯಂ ಮತ್ತು ಸತುವಿನ ಅಂಶ: ಬಿಳಿ ಅಕ್ಕಿಯಲ್ಲಿರುವುದಕ್ಕಿಂತ ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಮಟ್ಟಾ ಅಕ್ಕಿ ಹೊಂದಿದೆ. ಕ್ಯಾಲ್ಸಿಯಂ ಅಂಶವು ಹಲ್ಲು ಮತ್ತು ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಸತುವು ಕೂಡ ಅಧಿಕವಾಗಿದೆ. ಇದು ರೋಗನಿರೋಧಕ ವ್ಯವಸ್ಥೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಉಂಟಾಗುವ ಗಾಯಗಳನ್ನು ವೇಗವಾಗಿ ಗುಣಪಡಿಸುತ್ತದೆ.

ಇದನ್ನೂ ಓದಿ:  Red Meat: ಕೆಂಪು ಮಾಂಸ ಸೇವನೆ ಮಾಡುವವರೇ ಕೇಳಿ, ವೈದ್ಯರೇ ಹೇಳುತ್ತಿದ್ದಾರೆ ಇದರಿಂದ ಸಮಸ್ಯೆ ಇದೆಯಂತೆ!

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ: ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತಕ್ಕೆ ಕಾರಣವಾಗಬಹುದು. ಮಟ್ಟಾ ಅಕ್ಕಿಯು ಹೆಚ್ಚು ಪಾಲಿಶ್‌ ಆಗಿರದ ಕಾರಣ ಇದರಲ್ಲಿ ಮೊನಾಕೊಲಿನ್ ಎ ಎಂಬ ಪೋಷಕಾಂಶವು ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯನ್ನು ಸೇವನೆ ಮಾಡಿದರೆ ತುಂಬಾನೇ ಒಳ್ಳೆಯದು. ಫೈಬರ್ ಅಂಶವನ್ನು ಹೊಂದಿರುವ ಕೆಂಪು ಅಕ್ಕಿ ನಮ್ಮ ಜೀರ್ಣಕ್ರಿಯೆಗೆ ತುಂಬಾನೇ ಸಹಾಯ ಮಾಡುತ್ತದೆ. ಕೆಂಪು ಅಕ್ಕಿ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ಕಲ್ಮಶಗಳನ್ನು ಹೊರಹಾಕುತ್ತದೆ ಇದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ.

ವಿಟಮಿನ್ ಎ ಮತ್ತು ಬಿ ಸಮೃದ್ಧವಾಗಿವೆ: ಮಟ್ಟಾ ಅಕ್ಕಿಯಲ್ಲಿ ವಿಟಮಿನ್ ಎ ಮತ್ತು ಬಿ ಗಳು ಹೇರಳವಾಗಿವೆ. ವಿಟಮಿನ್ ಎ ನಿಮ್ಮ ಕಣ್ಣುಗಳು, ರೋಗನಿರೋಧಕ ಶಕ್ತಿ, ಚರ್ಮ ಮತ್ತು ಸಂತಾನೋತ್ಪತ್ತಿಗೆ ಮುಖ್ಯವಾಗಿ ಅಗತ್ಯವಿರುವ ವಿಟಮಿನ್‌ ಆಗಿದೆ. ಇನ್ನು ವಿಟಮಿನ್ ಬಿ ಯು ಚಯಾಪಚಯ ಕ್ರಿಯೆಗೆ ಪ್ರಮುಖವಾಗಿದೆ.

ದೇಹದ ತ್ವಚೆಗೆ ಉತ್ತಮ: ಈ ಮತ್ತಾ ಅಕ್ಕಿಯಲ್ಲಿ ಹಲವಾರು ವಿಟಮಿನ್‌ಗಳು ಮತ್ತು ಖನಿಜಗಳು ಇರುವುದರಿಂದ, ಮಟ್ಟಾ ಅಕ್ಕಿಯು ನಿಮ್ಮ ಚರ್ಮಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುವುದರಲ್ಲಿ ಎತ್ತಿದ ಕೈ ಆಗಿದೆ. ಈ ಕೆಲವು ವಿಟಮಿನ್‌ಗಳು ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲೂ ಕೂಡ ಸಹಾಯ ಮಾಡುತ್ತವೆ. ಈ ಅಕ್ಕಿಯು ನಿಮ್ಮ ಸುಂದರ ತ್ವಚೆಗೆ ಅತಿ ಅಗತ್ಯವಾದ ಆಹಾರ ಆಗಿದೆ.

ಗ್ಲುಟೆನ್‌ ಮುಕ್ತ ಆಹಾರ: ಕೆಂಪು ಅಕ್ಕಿಯ ಮತ್ತೊಂದು ಅಂಶವೆಂದರೆ ಅದು ಗ್ಲುಟೆನ್‌ ಮುಕ್ತ ಆಹಾರ ಆಗಿದೆ. ಗ್ಲುಟನ್ ಅಲರ್ಜಿ ಇರುವವರು ಮತ್ತು ಕರುಳಿನ ಸಮಸ್ಯೆ ಇರುವವರು ಇದನ್ನು ಧಾರಾಳವಾಗಿ ಸೇವಿಸಬಹುದು.

ತೂಕ ಇಳಿಕೆಯಲ್ಲೂ ಪ್ರಯೋಜನಕಾರಿ: ಈ ಮಟ್ಟಾ ಅಕ್ಕಿಯನ್ನು ಸರಿಯಾದ ಕ್ರಮದಲ್ಲಿ ಬೇಯಿಸುವುದರಿಂದ, ಬಿಳಿ ಅಕ್ಕಿಗಿಂತ ಇದು ಹೆಚ್ಚಿನ ಪೋಷಕಾಂಶಗಳನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ನಾರಿನಾಂಶ ಇರುವುದರಿಂದ, ಇದು ನಿಮ್ಮ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವರದಿಗಳು ಸೂಚಿಸುತ್ತವೆ.

ಇದನ್ನೂ ಓದಿ:  Kumkum Bhindi: ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಸೂಪರ್ ಫುಡ್ ಈ ಕುಂಕುಮ್ ಭಿಂಡಿ!

ಕೊನೆ ಮಾತು: ಬಿಳಿ ಅಕ್ಕಿ ನೋಡಲು ಸುಂದರವಾಗಿ ಬೆಳ್ಳಗೆ ಇರಲು ಕಾರಣ ಇದನ್ನು ಪಾಲಿಶ್ ಮಾಡಿರುತ್ತಾರೆ ಈ ಕಾರಣದಿಂದ ಇದರಲ್ಲಿ ಅಡಗಿರುವ ಹಾಗೆಯೇ ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಬಸಿದು ಹೋಗುತ್ತದೆ. ಹಾಗಾಗಿ ಕೆಂಪು ಅಕ್ಕಿ ಸೇವನೆ ಉತ್ತಮ. ಈ ಅಕ್ಕಿಯು ಬೇಗನೆ ಬೇಯುವುದಿಲ್ಲ ಅಂತ ತುಂಬಾ ಜನರು ನಿರಾಕರಿಸುತ್ತಾರೆ ಅದಕ್ಕಾಗಿ ನೀವು 4-5 ಗಂಟೆ ಮುಂಚಿತವಾಗಿ ಇದನ್ನು ನೆನೆಸಿಟ್ಟು ನಂತರ ಅನ್ನವನ್ನು ಮಾಡಿ ಸೇವನೆ ಮಾಡಿ ಇದರಿಂದ ಹತ್ತಾರು ಲಾಭಗಳನ್ನು ಪಡೆದುಕೊಳ್ಳಿ.
Published by:Ashwini Prabhu
First published: