ಬೆಳಗ್ಗಿನ ಕಾಫಿ (Morning Coffee) ಹಸಿವನ್ನು(hungry) ನಿಯಂತ್ರಿಸುವಷ್ಟು ಸಮರ್ಥಶಾಲಿಯಾಗಿದೆ, ಹಾಗಾಗಿಯೇ ಕಾಫಿ ಹಸಿವಿನ ತೀವ್ರತೆಯನ್ನು ತಗ್ಗಿಸುತ್ತದೆ ಎಂಬುದು ತಿಳಿದು ಬಂದಿದೆ. ಶಕ್ತಿಯನ್ನು ಸುಧಾರಿಸುವ ಹಾಗೂ ಮೆದುಳಿನಿಂದ ದೇಹಕ್ಕೆ ಸಂಕೇತಗಳನ್ನು ವೇಗಗೊಳಿಸುವ ಮಹಾನ್ ಉತ್ತೇಜಕ ಎಂದೇ ಕಾಫಿಯನ್ನು ಮೆಚ್ಚಿಕೊಂಡವರಿದ್ದಾರೆ. ಕಾಫಿಯಲ್ಲಿರುವ ಕೆಫೇನ್ ಹಸಿವನ್ನು ನಿಗ್ರಹಿಸುವ ಮೂಲಕ ತೂಕ ಕಳೆದುಕೊಳ್ಳಲು (Weight Loss) ಸಹಕಾರಿಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಕಾಫಿಯು ಕ್ಯಾಲೊರಿ ಬರ್ನ್ ಮಾಡಿ ಹಸಿವನ್ನು ನಿಗ್ರಹಿಸುತ್ತದೆ. ಹಾಗೆಯೇ, ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣವನ್ನು ಹಾಕುತ್ತದೆ ಎಂಬುದಾಗಿ ಈ ವರದಿ ತಿಳಿಸಿದೆ. ಹಸಿರು ಕಾಫಿ ಬೀಜ ಹಾಗೂ ಹುರಿದ ಕಾಫಿ ಬೀಜಗಳಲ್ಲಿರುವ ನೈಸರ್ಗಿಕವಾಗಿ ಆಮ್ಲಗಳಾಗಿ ಕಂಡುಬರುವ ಫೈಟೊಕೆಮಿಕಲ್ ಸಂಯುಕ್ತಗಳನ್ನು ಕ್ಲೋರೊಜೆನಿಕ್ ಆಮ್ಲಗಳು ಎಂದು ಕರೆಯಲಾಗುತ್ತದೆ.
ಈ ಆಮ್ಲಗಳಿಗೆ ಹಸಿವನ್ನು ನಿಯಂತ್ರಿಸುವ ಶಕ್ತಿ ಇದೆ. ಕ್ಲೋರೊಜೆನಿಕ್ ಆಮ್ಲಗಳು ಸ್ಟ್ರಾಬೆರಿ, ಸೇಬು ಮೊದಲಾದ ಹಣ್ಣುಗಳಲ್ಲಿ ಕೂಡ ಇರುತ್ತವೆ. ಹಾಗಾಗಿಯೇ ಈ ಹಣ್ಣುಗಳನ್ನು ತಿಂದ ಬಳಿಕ ಹೆಚ್ಚು ಹಸಿವಾಗುವುದಿಲ್ಲ ಹಾಗೂ ಅತಿಯಾದ ಹಸಿವು ಕೂಡ ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಕೆಫೀನ್ ಅತ್ಯುತ್ತಮ ಹಸಿವು ನಿವಾರಕ
ಅನೇಕ ತಜ್ಞರು ಹಾಗೂ ಸ್ಥೂಲಕಾಯತೆಗೆ ಸಂಬಂಧಿಸಿದ ಸಂಶೋಧನೆಗಳು ಈ ವಿಷಯವನ್ನು ಗಮನಿಸಿದ್ದು, ಕೆಫೀನ್ ಅತ್ಯುತ್ತಮ ಹಸಿವು ನಿವಾರಕಗಳಲ್ಲಿ ಒಂದು ಎಂಬುದನ್ನು ತಿಳಿಸಿದ್ದಾರೆ. ಉತ್ಕರ್ಷಣ ನಿರೋಧಕಗಳಂತಹ ಅನೇಕ ಇತರ ಆರೋಗ್ಯ ಪ್ರಯೋಜನಗಳ ಜೊತೆಗೆ, ಈ ಮ್ಯಾಜಿಕ್ ಪಾನೀಯವು ಹಸಿವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಸವಾಲಿನ ಅಂಶವೆಂದರೆ ಹಸಿವು ಮತ್ತು ಆಹಾರದ ಮೇಲಿನ ಕಡುಬಯಕೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.. ಕಾಫಿ ಸೇವನೆಯು ಹಸಿವನ್ನು ನಿಯಂತ್ರಿಸುತ್ತದೆ ಎಂಬುದು ಒಂದು ಅಂಶವಾಗಿದ್ದರೂ ದೇಹದ ತೂಕವನ್ನು ಕಳೆದುಕೊಳ್ಳಬೇಕೆಂಬ ಗುರಿಯಲ್ಲಿ ಇದೊಂದೇ ಸಾಕಾಗುವುದಿಲ್ಲ. ಕೆಫೀನ್ ಅನ್ನು ಹಲವಾರು ಬೇರೆ ಬೇರೆ ರೂಪಗಳಲ್ಲಿ ಕೂಡ ಸೇವಿಸಬಹುದಾಗಿದೆ.
ಇಂದು ಮಾರುಕಟ್ಟೆಯಲ್ಲಿ ಹಸಿವನ್ನು ನಿಗ್ರಹಿಸುವ ಹಲವಾರು ಮಾತ್ರೆಗಳು ಲಭ್ಯವಿವೆ. ಈ ಮಾತ್ರೆಗಳು ಹೆಚ್ಚಾಗಿ ಕೆಫೀನ್ ಅಂಶವನ್ನು ಒಳಗೊಂಡಿರುತ್ತವೆ. ಇದರಿಂದ ಪುರುಷರು, ಮಹಿಳೆಯರು ತಮ್ಮ ತೂಕವನ್ನು ಕಳೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಹಸಿವನ್ನು ನಿಯಂತ್ರಿಸುವ ಮಾತ್ರೆಗಳ ಬಗ್ಗೆ ವಿಶ್ಲೇಷಣೆ ನಡೆದಿದ್ದು ಎಷ್ಟು ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಬೇಕು? ಮಾತ್ರೆಗಳ ಬೆಲೆ, ಮಾತ್ರೆಗಳಲ್ಲಿರುವ ಅಂಶಗಳ ಅಧ್ಯಯನ ಮಾಡಲಾಗುತ್ತಿದೆ.
ಫೆನ್ಗೋಲ್ಡ್ನ ಅಧಿಕೃತ ವೆಬ್ಸೈಟ್ನ ಆಧಾರದ ಮೇಲೆ, ಮಾತ್ರೆಯಿಂದ ದೊರೆಯುವ ಪ್ರಯೋಜನಗಳು:
ಉತ್ತೇಜಕಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವುಳ್ಳ ಜನರಿಗೆ ಫೆನ್ಗೋಲ್ಡ್ ಸೂಕ್ತವಾಗಿದೆ.
ಫೆನ್ಕ್ಯೂ ಉತ್ತಮವಾಗಿ ರೇಟ್ ಮಾಡಿದ ಸಪ್ಲಿಮೆಂಟ್
ಫಿಟ್ನೆಸ್ ಮತ್ತು ಆರೋಗ್ಯ ಸಂಬಂಧಿತ ಔಷಧಗಳನ್ನು ಉತ್ಪಾದಿಸಲು ಈಗಾಗಲೇ ಹೆಸರುವಾಸಿಯಾಗಿರುವ ವೋಲ್ಫ್ಸನ್ ಬರ್ಗ್, ಲಿಮಿಟೆಡ್ ಕಂಪನಿ ಇದನ್ನು ತಯಾರಿಸಿದೆ. ಈ ಉತ್ಪನ್ನವು ಕೇವಲ ಸಾಮಾನ್ಯ ಹಸಿವನ್ನು ನಿಗ್ರಹಿಸುವುದು ಮಾತ್ರವಲ್ಲದೆ, ಜೊತೆಗೆ ಅದರಲ್ಲಿರುವ ಥರ್ಮೋಜೆನಿಕ್ ಅಂಶಗಳಿಂದಾಗಿ ಸುಧಾರಿತ ಚಯಾಪಚಯ ಮತ್ತು ಹೆಚ್ಚಿದ ಶಕ್ತಿಯ ಮಟ್ಟಗಳಂತಹ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಸಹ ನೀಡುತ್ತದೆ.
ಫೆನ್ಕ್ಯೂ ಉತ್ಪನ್ನದಿಂದ ದೊರೆಯುವ ಪ್ರಯೋಜನಗಳು
ತೂಕ ಇಳಿಸಲು ಬಯಸುವ ಪುರುಷರು ಮತ್ತು ಮಹಿಳೆಯರಿಗೆ ಇದು ಅತ್ಯುತ್ತಮ ವಸ್ತು ಎನ್ನಲಾಗುತ್ತದೆ. ಆಹಾರದ ಕಡುಬಯಕೆಗಳು ಮತ್ತು ಹಸಿವನ್ನು ನಿಯಂತ್ರಿಸಲು ಕಷ್ಟಪಡುತ್ತಿರುವವರು ಈ ಉತ್ಪನ್ನವನ್ನು ಬಳಸಬಹುದು. ಇದು ತೂಕ ಮತ್ತು ಕೊಬ್ಬು ಕರಗಿಸುವಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ಟ್ರಿಮ್ಟೋನ್: ತೂಕ ಇಳಿಕೆಗೆ ಹಾಗೂ ಹಸಿವು ನಿಗ್ರಹಿಸುವ ಸಪ್ಲಿಮೆಂಟ್
ಟ್ರಿಮ್ಟೋನ್ ಮಹಿಳೆಯರಿಗಾಗಿ ತಯಾರಿಸಲಾದ ಇತರ ಅತ್ಯುತ್ತಮ ಹಸಿವು ನಿವಾರಕ ಸಪ್ಲಿಮೆಂಟ್ ಆಗಿದೆ. ಇದನ್ನು ಸ್ವಿಸ್ ರಿಸರ್ಚ್ ಲ್ಯಾಬ್ಸ್, ಲಿಮಿಟೆಡ್ ತಯಾರಿಸಿದೆ.
ಪ್ರಯೋಜನಗಳು
ಈ ಉತ್ಪನ್ನವನ್ನು ಹೆಚ್ಚಾಗಿ ಮಹಿಳೆಯರಿಗಾಗಿಯೇ ತಯಾರಿಸಲಾಗಿದ್ದು ತೂಕ ಇಳಿಸಲು ಬಯಸಿರುವವರು ತೆಗೆದುಕೊಳ್ಳಬಹುದಾಗಿದೆ. ದಿನಕ್ಕೆ ಒಂದು ಮಾತ್ರೆ ತೆಗೆದುಕೊಂಡರೆ ಸಾಕು.
ಲೀನ್ಬೀನ್: ಮಹಿಳೆಯರಿಗಾಗಿ ಉತ್ತಮ ಸಪ್ಲಿಮೆಂಟ್
ಮಹಿಳೆಯರಿಗಾಗಿ ಇರುವ ಉತ್ತಮ ಸಪ್ಲಿಮೆಂಟ್ ಇದಾಗಿದೆ. ಇದು ಹಸಿವನ್ನು ಮತ್ತು ಚಪಲವನ್ನು ನಿಯಂತ್ರಿಸುತ್ತದೆ. ಚಯಾಪಚಯ ಕ್ರಿಯೆಯಲ್ಲಿ ಇದು ಸಹಕಾರಿಯಾಗಿದೆ. ಕ್ಯಾಲೊರಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಚಯಾಪಚಯ ಕ್ರಿಯೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಚಯಾಪಚಯ ದರವು ಹೆಚ್ಚಾದಾಗ, ತೂಕ ಇಳಿಕೆಯ ಪ್ರಮಾಣವೂ ಅಧಿಕವಾಗಿರುತ್ತದೆ.
ಪ್ರಯೋಜನಗಳು
ಈ ಉತ್ಪನ್ನವನ್ನು ಯಾರು ಬಳಸಬಹುದು?
ಆಹಾರದ ಬಯಕೆ ಮತ್ತು ಹಸಿವನ್ನು ನಿಯಂತ್ರಿಸಲು ಬಯಸುವ ಮಹಿಳೆಯರು ಈ ಉತ್ಪನ್ನವನ್ನು ಬಳಸಬಹುದು. ಕೆಫೀನ್ ಹೊಂದಿಕೆಯಾಗದ ಮಹಿಳೆಯರು ಸಹ ಈ ಉತ್ಪನ್ನವನ್ನು ಸೇವಿಸಬಹುದು ಏಕೆಂದರೆ ಇದರಲ್ಲಿ ಕೆಫೀನ್ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ.
ಇನ್ಸ್ಟಂಟ್ ನಾಕ್ಔಟ್ ಕಟ್: ಪುರುಷರಿಗಾಗಿ ಸಪ್ಲಿಮೆಂಟ್
ಇನ್ಸ್ಟಂಟ್ ನಾಕ್ಔಟ್ ಕಟ್ ಪುರುಷರಿಗೆ ಅತ್ಯುತ್ತಮ ಹಸಿವು ನಿವಾರಕವಾಗಿದೆ. ಈ ಉತ್ಪನ್ನವು ನಿರ್ದಿಷ್ಟವಾಗಿ ಫೈಟರ್ಗಳು, ಕ್ರೀಡಾಪಟುಗಳಿಗೆ ಮೀಸಲಾದ ಉತ್ಪನ್ನವಾಗಿದೆ. ಕೊಬ್ಬು ಕರಗಿಸುವುದರೊಂದಿಗೆ ಸ್ನಾಯುವಿನ ಆರೋಗ್ಯವನ್ನು ಕಾಪಾಡುತ್ತದೆ.
ಪ್ರಯೋಜನಗಳು
ಚಯಾಪಚಯವು ಕ್ಯಾಲೊರಿಗಳು ಮತ್ತು ಕೊಬ್ಬನ್ನು ನಷ್ಟಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ, ಇದರಿಂದಾಗಿ ತೂಕ ಅಥವಾ ಕೊಬ್ಬು ನಷ್ಟದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಫಿ ಪರಿಣಾಮಕಾರಿ ಹಸಿವು ನಿವಾರಕವಾಗಿರುವುದರಿಂದ ತೂಕ ಇಳಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು, ನಿರ್ವಹಿಸಲು ಮತ್ತು ವೇಗಗೊಳಿಸಲು ಸಹಾಯ ಮಾಡುತ್ತದೆ.
ಕಾಫಿಯು ಪಾಲಿಫಿನಾಲ್ಗಳನ್ನು ಹೊಂದಿದೆ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ
ಕಾಫಿ ತೂಕ ಮತ್ತು ಕೊಬ್ಬು ಕರಗಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ಮತ್ತೊಂದು ರೀತಿಯಲ್ಲಿ ಉತ್ತಮ ಹಸಿವು ನಿಗ್ರಹಿಸುವ ಪದಾರ್ಥವಾಗಿ ಕಂಡುಬಂದಿದೆ. ಎಲ್ಲಾ ಸಸ್ಯ-ಆಧಾರಿತ ಆಹಾರಗಳಲ್ಲಿ, ಪಾಲಿಫಿನಾಲ್ಗಳ ರೂಪದಲ್ಲಿ ಸೂಪರ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಇರುತ್ತವೆ.
ಕಾಫಿಯು ಸಸ್ಯ-ಆಧಾರಿತ ಆಹಾರ ಅಥವಾ ಪಾನೀಯವಾಗಿದೆ. ಕಾಫಿಯನ್ನು ಪಾಲಿಫಿನಾಲ್ ಭರಿತ ಆಹಾರ ಎಂದು ಹೇಳಲಾಗುತ್ತದೆ. ನಿರ್ದಿಷ್ಟ ಅಧ್ಯಯನದ ಪ್ರಕಾರ ಪಾಲಿಫಿನಾಲ್ಗಳ ಅಗ್ರ 40 ಮೂಲಗಳಲ್ಲೊಂದರಲ್ಲಿ ಕಾಫಿ ಸ್ಥಾನ ಪಡೆದಿದೆ.
ಇದನ್ನೂ ಓದಿ: ಕಣ್ತುಂಬ ನಿದ್ದೆ ಮಾಡ್ಬೇಕು ಅಂದ್ರೆ ಮೆಲಟೋನಿನ್ ಉತ್ಪಾದನೆಯನ್ನು ಹೀಗೆ ಹೆಚ್ಚಿಸಿಕೊಳ್ಳಿ
ಕಾಫಿ ಹಸಿವಿನ ಹಾರ್ಮೋನ್ಗಳನ್ನು ನಿಗ್ರಹಿಸುತ್ತದೆ
ಕಾಫಿಯು ನೈಸರ್ಗಿಕ ಹಸಿವು ನಿವಾರಕ ಎಂದು ಅನೇಕ ಸಂಶೋಧಕರು ಹಾಗೂ ತಜ್ಞರು ತಿಳಿಸಿದ್ದಾರೆ. ನಮ್ಮ ದೇಹದಲ್ಲಿ ಹಸಿವಿಗೆ ಕಾರಣವಾಗಿರುವ ಹಾರ್ಮೋನ್ ಅನ್ನು ಗ್ರೆಲಿನ್ ಎಂದು ಕರೆಯಲಾಗುತ್ತದೆ. ಕಾಫಿ ಸೇವನೆಯಿಂದ ಗ್ರೆಲಿನ್ ಮಟ್ಟ ಇಳಿಕೆಯಾಗುತ್ತದೆ ಎಂದು 2014 ರ ಸಂಶೋಧನೆಯಿಂದ ತಿಳಿದು ಬಂದಿದೆ. ದಿನನಿತ್ಯದ ಕಾಫಿ ಸೇವನೆಯು ಗ್ರೆಲಿನ್ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ ಎಂದು ಕಂಡುಬಂದಿದ್ದು, ಇದರಿಂದಾಗಿ ಹಸಿವಿನ ತೀವ್ರತೆ ಕಡಿಮೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ