• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Street Food: ರಸ್ತೆ ಬದಿಗಳಲ್ಲಿ ಸ್ಟ್ರೀಟ್‌ ಫುಡ್‌ ತಿನ್ನೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ಪಾನಿಪೂರಿ ಪ್ರಿಯರು ತಪ್ಪದೇ ಓದಿ

Street Food: ರಸ್ತೆ ಬದಿಗಳಲ್ಲಿ ಸ್ಟ್ರೀಟ್‌ ಫುಡ್‌ ತಿನ್ನೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ಪಾನಿಪೂರಿ ಪ್ರಿಯರು ತಪ್ಪದೇ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಜೆ ಹೊತ್ತಿನಲ್ಲಿ ರಸ್ತೆ ಬದಿಗಳಲ್ಲಿ ಪಾನಿಪುರಿಯಿಂದ ಹಿಡಿದು ಪಾಪ್ಡಿ ಚಾಟ್ ಅಥವಾ ದಹಿ ಭಲ್ಲಾವರೆಗೆ, ಈ ರುಚಿಕರವಾದ ಆಹಾರ ಪದಾರ್ಥಗಳನ್ನು ಯಾರಿಗೆ ತಾನೇ ತಿನ್ನಬೇಕು ಅಂತ ಅನ್ನಿಸುವುದಿಲ್ಲ ಹೇಳಿ? ನೀವೂ ಆಹಾರ ಪ್ರಿಯರು ಆದರೆ ಈ ಸುದ್ದಿ ತಪ್ಪದೇ ಓದಿ

 • Trending Desk
 • 5-MIN READ
 • Last Updated :
 • Share this:

  ನಾವು ಸಾಮಾನ್ಯವಾಗಿ ಸಂಜೆ ಹೊತ್ತಿನಲ್ಲಿ ಹೊರಗೆ ಹಾಗೆ ಸುತ್ತಾಡಿಕೊಂಡು ಬರೋಣ ಅಂತ ಹೊರಗೆ ಹೋದರೆ, ನಮ್ಮ ಕಣ್ಣುಗಳು ಮೊದಲು ಹೋಗುವುದೇ ಈ ಸಣ್ಣ ಸಣ್ಣ ಚಾಟ್ ಅಂಗಡಿಗಳ (Chat Masala) ಕಡೆಗೆ ಅಂತ ಹೇಳಿದರೆ ತಪ್ಪಾಗೋದಿಲ್ಲ. ಅಲ್ಲಿ ವಿವಿಧ ರೀತಿಯ ಚಾಟ್ ಗಳು ಇರುವುದನ್ನು ನೋಡುತ್ತೇವೆ, ಅಷ್ಟೇ ಅಲ್ಲದೆ ಅಲ್ಲಿ ಕೂತು ಚಾಟ್ಸ್‌ ತಿನ್ನುವವರನ್ನು (Street Food) ನೋಡಿ, ನಮಗೂ ಅದನ್ನು ತಿನ್ನಬೇಕು ಅಂತ ಖಂಡಿತವಾಗಿಯೂ ಅನ್ನಿಸುತ್ತದೆ.


  ಇಂತಹ ಬಂಡಿಗಳಲ್ಲಿ ಪಾನಿಪುರಿಯಿಂದ ಹಿಡಿದು ಪಾಪ್ಡಿ ಚಾಟ್ ಅಥವಾ ದಹಿ ಭಲ್ಲಾವರೆಗೆ, ಈ ರುಚಿಕರವಾದ ಆಹಾರ ಪದಾರ್ಥಗಳನ್ನು ಯಾರಿಗೆ ತಾನೇ ತಿನ್ನಬೇಕು ಅಂತ ಅನ್ನಿಸುವುದಿಲ್ಲ ಹೇಳಿ?


  ಆದರೆ ಅವುಗಳು ತಿನ್ನುವುದಕ್ಕೆ ಎಷ್ಟು ಸ್ವಾದಿಷ್ಟಕರವಾಗಿರುತ್ತವೆಯೋ, ಅಷ್ಟೇ ಹೆಚ್ಚಿನ ಕ್ಯಾಲೋರಿಗಳನ್ನು ಸಹ ಹೊಂದಿರುತ್ತವೆ ಮತ್ತು ಕೆಲವನ್ನು ಎಣ್ಣೆಯನ್ನು ಬಳಸಿಕೊಂಡು ಮಾಡುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.


  ಇದನ್ನೂ ಓದಿ: Biriyani Masala: ಬಿರಿಯಾನಿ ಮಾಡ್ತಿದ್ದೀರಾ? ಹಾಗಾದ್ರೆ ಈ ಮಸಾಲ ಟ್ರೈ ಮಾಡಿ, ರುಚಿ ನೋಡಿ ಕಳೆದು ಹೋಗ್ತೀರಾ!


  ಚಾಟ್ ತಿನ್ನುವುದರ ಬಗ್ಗೆ ಪೌಷ್ಟಿಕ ತಜ್ಞರು ಹೇಳುವುದೇನು?


  ಅನೇಕ ಜನರು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಈ ಚಾಟ್‌ಗಳಿಂದ ತುಂಬಾನೇ ದೂರವಿರುತ್ತಾರೆ. 'ವರ್ಷಗಳಿಂದ ಚಾಟ್ ತಿನ್ನದ ಬಹಳಷ್ಟು ಜನರನ್ನು ನಾನು ನೋಡುತ್ತೇನೆ. ಇದು ಅವರ ಆರೋಗ್ಯಕ್ಕೆ ಕೆಟ್ಟದು ಎಂದು ಭಾವಿಸಿ ಅವರು ಈ ಚಾಟ್ ಗಳನ್ನು ದೂರವೇ ಇಟ್ಟಿರುತ್ತಾರೆ' ಎಂದು ಪೌಷ್ಟಿಕ ತಜ್ಞ ಭುವನ್ ರಸ್ತೋಗಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.


  'ಆದಾಗ್ಯೂ, ನೀವು ಚಾಟ್ ತಿನ್ನದೇ ಇರಬೇಕು ಅನ್ನೋ ಅಗತ್ಯವಿಲ್ಲ, ಏಕೆಂದರೆ ಹೊರಗೆ ನೀವು ಸೇವಿಸುವ ಯಾವುದೇ ಆಹಾರವು ಸಾಮಾನ್ಯವಾಗಿಯೇ ಹೆಚ್ಚಿನ ಪ್ರಮಾಣದ ಎಣ್ಣೆ ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ. ನಿಮಗೆ ಚಾಟ್ ಇಷ್ಟವಾದರೆ, ನಿಮ್ಮ ಫಿಟ್ನೆಸ್ ಗುರಿಯೊಂದಿಗೆ ಸ್ವಲ್ಪವೂ ರಾಜಿ ಮಾಡಿಕೊಳ್ಳದೆ ಅದನ್ನು ತಿನ್ನಬಹುದು' ಎಂದು ಭುವನ್ ಹೇಳುತ್ತಾರೆ.


  ಇದನ್ನೂ ಓದಿ: Spicy Meal for Weight Loss: ಮಸಾಲೆಯುಕ್ತ ಆಹಾರದಿಂದ ನಿಮ್ಮ ತೂಕ ಕಡಿಮೆ ಮಾಡಬಹುದು! ಅದು ಹೇಗಪ್ಪಾ ಅಂತೀರಾ?


  ಈ ಚಾಟ್‌ಗಳು ಆರೋಗ್ಯಕ್ಕೆ ಒಳ್ಳೆಯದೇ?


  ದಹಿ ಭಲ್ಲಾ: ದಹಿ ಭಲ್ಲಾ ಚಾಟ್ ಮೊಸರಿನಿಂದ ಮಾಡಿದ ಚಾಟ್ ಆಗಿರುತ್ತದೆ ಮತ್ತು ಇದರಲ್ಲಿರುವ ಎಣ್ಣೆಯನ್ನು ಕಡಿಮೆ ಮಾಡಲು ನೀರಿನಲ್ಲಿ ನೆನೆಸಲಾಗುತ್ತದೆ. "ಜೊತೆಗೆ, ಮೊಸರಿನಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಇದು ಒಂದು ಪ್ಲೇಟ್ ದಾಲ್ ಮತ್ತು ರೊಟ್ಟಿಗಿಂತಲೂ ಆರೋಗ್ಯಕರವಾಗಿರುತ್ತದೆ" ಎಂದು ಅವರು ಹೇಳಿದರು.


  ಪಾಪ್ಡಿ ಚಾಟ್: ಈ ಚಾಟ್ ನಲ್ಲಿ ಮೊಸರು ಮತ್ತು ಹುರಿದ ಮೈದಾ ರೊಟ್ಟಿ ಮತ್ತು ಸ್ವಲ್ಪ ಕಡಲೆ ಸಹ ಇರುತ್ತದೆ. "ಇದು ಆರೋಗ್ಯಕ್ಕೆ ಕೆಟ್ಟದ್ದೇನೂ ಅಲ್ಲ, ಆದರೆ ಇದರಲ್ಲಿ ಎಣ್ಣೆಯಲ್ಲಿ ತಡ್ಕಾ ಹೊಡೆದ ರೊಟ್ಟಿ ಮತ್ತು ಮೊಸರು ಇರುತ್ತದೆ. ಆದರೆ ಇಲ್ಲಿ ತಿನ್ನಲು ನಿಮಗೆ ಹೆಚ್ಚು ಮೊಸರು ಸಿಗುತ್ತದೆ" ಎಂದು ಅವರು ವಿವರಿಸಿದರು.


  ಬೇಸನ್ ಅಥವಾ ಮೂಂಗ್ ಚೀಲಾ: ಅನೇಕ ಭಾರತೀಯ ಮನೆಗಳಲ್ಲಿ ಜನಪ್ರಿಯ ಉಪಾಹಾರದ ಆಯ್ಕೆಯಾಗಿರುವ ಚೀಲಾ ತುಂಬಾ ಸಮತೋಲಿತ, ಪ್ರೋಟೀನ್ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.


  ಮಟರ್ ಕುಲ್ಚಾ: ಬಹುತೇಕರು ಇಷ್ಟಪಡುವ ಮತ್ತೊಂದು ಚಾಟ್ ಎಂದರೆ ಅದು ಮಟರ್ ಕುಲ್ಚಾ, ಇದನ್ನು ಮೈದಾದಿಂದ ಮಾಡಿರುತ್ತಾರೆ. ಮಟರ್ ದ್ವಿದಳ ಧಾನ್ಯವಾಗಿದ್ದು ಆರೋಗ್ಯಕರವಾಗಿರಲು ಸರಿಯಾದ ಪ್ರಮಾಣದ ಮಟರ್ ಅನ್ನು ತಿನ್ನುವುದು ಒಳ್ಳೆಯದು ಅಂತ ಹೇಳ್ತಾರೆ ಭುವನ್.


  ಗೋಲ್ ಗಪ್ಪ: ಈ ರುಚಿಕರವಾದ ಚಾಟ್ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ರಸ್ತೋಗಿ ಅವರ ಪ್ರಕಾರ, "ಇದು ಹೆಚ್ಚಿನ ಉತ್ಕರ್ಷಣ ನಿರೋಧಕ ನೀರನ್ನು ಹೊಂದಿರುತ್ತದೆ, ಏಕೆಂದರೆ ಅದರಲ್ಲಿ ಪುದಿನಾ ಹಾಕಿರುತ್ತಾರೆ ಮತ್ತು ಇದರ ಜೊತೆಗೆ ಸ್ನೇಹಿತರ ಜೊತೆ ಹೋದಾಗ ಅಚ್ಚುಮೆಚ್ಚಿನ ಚಾಟ್ ಅಂತ ಹೇಳುವುದನ್ನು ಹೊರತುಪಡಿಸಿ ಬೇರೇನೂ ಅಲ್ಲ.”


  ರಗ್ಡಾ ಪ್ಯಾಟಿಸ್: "ಇದು ಚೋಲೆ ಮತ್ತು ಮೊಸರಿನೊಂದಿಗೆ ಆಲೂಗಡ್ಡೆಯನ್ನು ಸಹ ಒಳಗೊಂಡಿರುತ್ತದೆ. ದಾಲ್ ಮತ್ತು ಮೊಸರಿನೊಂದಿಗೆ ರೊಟ್ಟಿಯು ಸಹ ಒಳ್ಳೆಯದು ಮತ್ತು ಸಮತೋಲಿತವಾಗಿರುತ್ತದೆ" ಎಂದು ಅವರು ವಿವರಿಸಿದರು.

  Published by:Avinash K
  First published: