ಮೆದುಳಿನಲ್ಲಿ (Brain) ಉಂಟಾಗುವ ಗೆಡ್ಡೆಗಳು ಮಾರಣಾಂತಿಕ ಕ್ಯಾನ್ಸರ್ (Cancer) ಅಥವಾ ಮಾರಣಾಂತಿಕವಲ್ಲದ (ಹಾನಿಕರವಲ್ಲದ) ಆಗಿರಬಹುದು. ಮೆದುಳು ಗೆಡ್ಡೆಗಳು ಬ್ರೈನ್ ಕ್ಯಾನ್ಸರ್ (Brain Cancer) ಅಲ್ಲ. ಕೆಲವೊಂದು ಬ್ರೈನ್ ಟ್ಯೂಮರ್‌ಗಳು ಕ್ಯಾನ್ಸರ್‌ನ ರೂಪದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಆದರೆ ಎಲ್ಲ ಮೆದುಳು ಗೆಡ್ಡೆಗಳು ಕ್ಯಾನ್ಸರ್ ಅಲ್ಲ ಎನ್ನುತ್ತಾರೆ ತಜ್ಞರು. ಭಾರತದಲ್ಲಿ (India), ಮೆದುಳಿನ ಗೆಡ್ಡೆಗಳು 100,000 ಜನಸಂಖ್ಯೆಗೆ 5-10 ದರದಲ್ಲಿ ಸಂಭವಿಸುತ್ತವೆ ಎಂದು ಅಂದಾಜಿಸಲಾಗಿದೆ, ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಮೆದುಳಿನ ಗೆಡ್ಡೆಗಳ ರೋಗ ಸ್ಥಿತಿ ಕೊಂಚ ಹೆಚ್ಚಾಗಿದೆ ಎನ್ನಲಾಗಿದೆ. ಬ್ರೈನ್ ಟ್ಯೂಮರ್ (Tumor) ಮತ್ತು ಕ್ಯಾನ್ಸರ್ ಬಗ್ಗೆ ಸ್ಪಷ್ಟನೇ ಯಾಕೆ ಅಂತೀರಾ ಈ ಲೇಖನವನ್ನು ಪೂರ್ತಿಯಾಗಿ ಓದಿ ನಿಮಗೆ ತಿಳಿಯುತ್ತೆ.
ಫೋನಿನ ವಿಕಿರಣಗಳಿಂದ ಮೆದುಳಲ್ಲಿ ಗೆಡ್ಡೆಯಾಗುತ್ತದೆಯೇ?
ಜಾಸ್ತಿ ಫೋನ್ ನೋಡಬೇಡ ತಲೆ ಹಾಳಾಗುತ್ತೆ ಅನ್ನೋ ಬುದ್ಧಿವಾದವನ್ನು ಕೇಳುತ್ತಲೇ ಇರುತ್ತವೆ.ಖಂಡಿತ ಇದು ಸತ್ಯ ಅತಿಯಾದ ಫೋನ್ ಬಳಕೆ ಮಾನಸಿಕ ಮತ್ತು ದೈಹಿಕವಾಗಿ ನಮ್ಮ ಮೇಲೆ ಪರಿಣಾಮ ಬೀರಬಹುದು. ಆದರೆ ಕೆಲವರು ಫೋನ್ ನಿಂದ ಹೊರಡುವ ವಿಕಿರಣಗಳಿಂದ ಮೆದುಳಲ್ಲಿ ಗೆಡ್ಡೆಯಾಗಬಹುದು ಎಂದು ನಂಬಿದ್ದಾರೆ. ಆದರೆ ಈ ವಾದಕ್ಕೆ ತಜ್ಞರು ಹೀಗಾಗಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
ಸಂದರ್ಶನವೊಂದರಲ್ಲಿ, ಪರೇಲ್ ಮುಂಬೈನ ಗ್ಲೋಬಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ ಸುರೇಶ್ ಸಂಖ್ಲಾ ಅವರು ಮಾತನಾಡಿ “ಬಹುತೇಕ ಪ್ರಕರಣಗಳಲ್ಲಿ ಗೆಡ್ಡೆಯ ಬಗೆಗೆ ನಿಖರ ಕಾರಣ ತಿಳಿದಿಲ್ಲ. ಆದಾಗ್ಯೂ, ಡಿಎನ್‌ಎಗೆ ಹಾನಿಯಾಗುವ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಮೆದುಳಿನ ಗೆಡ್ಡೆ ಉಂಟಾಗಬಹುದು ಎಂದು ಜನ ತಿಳಿದಿದ್ದಾರೆ, ಇದಕ್ಕೆ ಸಾಕಷ್ಟು ಪುರಾವೆಗಳು ಕೂಡ ಇವೆ. ಕಳೆದ ಕೆಲವು ವರ್ಷಗಳಿಂದ, ಸೆಲ್ ಫೋನ್‌ಗಳ ಮಿತಿಮೀರಿದ ಬಳಕೆ ಸ್ಥಿತಿಗೆ ಮುಖ್ಯ ಕಾರಣವಾಗಿದೆ. ಫೋನ್ ಗಳು ಹೊರ ಸೂಸುವ ವಿಕಿರಣದ ಪರಿಣಾಮವಾಗಿ ಮೆದುಳಿನ ಗೆಡ್ಡೆಗಳು ಅಭಿವೃದ್ಧಿಯಾಗುತ್ತವೆ. ಸೆಲ್ ಫೋನ್‌ಗಳ ಹೆಚ್ಚಿನ ಬಳಕೆ ಮಾನಸಿಕ ಆರೋಗ್ಯ, ನಿದ್ರೆ ಮತ್ತು ಮೆದುಳಿನ ಸಾಮಾನ್ಯ ಚಟುವಟಿಕೆಗಳ ಮೇಲೆ ಪ್ರತಿಕೂಲವಾಗಿ ಮೆದುಳಿನ ಗೆಡ್ಡೆಗಳ ಬೆಳವಣಿಗೆಗೆ ಕಾರಣವಾಗಬಹುದು ಎಂದು ತಪ್ಪಾಗಿ ಹೇಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Walking: ಪ್ರತಿದಿನ 10 ಸಾವಿರ ಹೆಜ್ಜೆ ನಡೆದರೆ ಈ ಕಾಯಿಲೆಗಳಿಂದ ದೂರವಿರಬಹುದು ಅಂತಿದೆ ಅಧ್ಯಯನ!
ದೀರ್ಘಕಾಲೀನ ಅಧ್ಯಯನಗಳು ನಡೆಯುತ್ತಿದ್ದರೂ, ಇಲ್ಲಿಯವರೆಗೆ ಸೆಲ್ ಫೋನ್ ಬಳಕೆಯು ಬ್ರೈನ್ ಟ್ಯೂಮರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಅವರು ತಿಳಿಸಿದರು. “ಸೆಲ್ ಫೋನ್‌ಗಳು ವಿದ್ಯುತ್ಕಾಂತೀಯ ವರ್ಣಪಟಲದ ರೇಡಿಯೊಫ್ರೀಕ್ವೆನ್ಸಿ ಪ್ರದೇಶದಲ್ಲಿ ವಿಕಿರಣವನ್ನು ಹೊರಸೂಸುತ್ತವೆ. ಎರಡನೇ, ಮೂರನೇ ಮತ್ತು ನಾಲ್ಕನೇ ತಲೆಮಾರಿನ (2G, 3G, 4G) ಸೆಲ್ ಫೋನ್‌ಗಳು 0.7-2.7 GHz ಆವರ್ತನ ಶ್ರೇಣಿಯಲ್ಲಿ ರೇಡಿಯೊಫ್ರೀಕ್ವೆನ್ಸಿಯನ್ನು ಹೊರಸೂಸುತ್ತವೆ ಮತ್ತು ಐದನೇ ತಲೆಮಾರಿನ ಫೋನ್‌ಗಳು (5G) 80 GHz ವರೆಗಿನ ಆವರ್ತನ ಸ್ಪೆಕ್ಟ್ರಮ್ ಅನ್ನು ಬಳಸುವ ನಿರೀಕ್ಷೆಯಿದೆ. ಈ ಆವರ್ತನಗಳನ್ನು ವರ್ಣಪಟಲದ ಅಯಾನೀಕರಿಸದ ಶ್ರೇಣಿಯಲ್ಲಿ ವರ್ಗೀಕರಿಸಲಾಗಿದೆ, ಇದು ಕಡಿಮೆ ಆವರ್ತನ ಮತ್ತು ಕಡಿಮೆ ಶಕ್ತಿ ಮತ್ತು ಮನುಷ್ಯನ ಡಿಎನ್‌ಎಗೆ ಹಾನಿಯಾಗದಂತೆ ತುಂಬಾ ಕಡಿಮೆ ವಿಕಿರಣವನ್ನು ಸೂಸುತ್ತದೆ ಎಂದು ಡಾ. ಸುರೇಶ್ ಸಂಖ್ಲಾ ತಿಳಿಸಿದ್ದಾರೆ.
ಅಧ್ಯಯನಗಳು ಏನು ಹೇಳಿವೆ?
ಕೆಲವು ವರ್ಷಗಳ ಹಿಂದಿನ ಒಂದು ಅಧ್ಯಯನವು, 420,000 ಬಳಕೆದಾರರಲ್ಲಿ ಸೆಲ್ ಫೋನ್ ಬಳಕೆ ಮತ್ತು ಮೆದುಳಿನ ಗೆಡ್ಡೆಗಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದೆ. ಸೆಲ್ ಫೋನ್‌ಗಳ ಹೆಚ್ಚಿನ ಬಳಕೆಗೆ ಸಂಬಂಧಿಸಿದಂತೆ ಮೆದುಳು ಅಥವಾ ಕೇಂದ್ರ ನರಮಂಡಲದ ಗೆಡ್ಡೆಗಳಲ್ಲಿ ಯಾವುದೇ ಹೆಚ್ಚಳವನ್ನು ಅಧ್ಯಯನ ವರದಿ ಮಾಡಿಲ್ಲ. 13 ವರ್ಷಗಳಿಗಿಂತಲೂ ಹೆಚ್ಚು ಕಾಲ 358,000 ಸೆಲ್ ಫೋನ್ ಚಂದಾದಾರರಲ್ಲಿ ನಡೆಸಲಾದ ಡ್ಯಾನಿಶ್ ಕೋಹಾರ್ಟ್ ಅಧ್ಯಯನವು ಸಹ ಇದೇ ರೀತಿಯಾದ ವರದಿ ಮಾಡಿದ್ದು, ಸೆಲ್ ಫೋನ್ ಬಳಕೆ ಮತ್ತು ಮೆದುಳಿನ ಗೆಡ್ಡೆಯ ನಡುವೆ ಯಾವುದೇ ಸಂಬಂಧ ಇಲ್ಲ ಎಂದಿದೆ.
ಸೆಲ್ ಫೋನ್ ಬಳಕೆಯು ಮೆದುಳಿನ ಗೆಡ್ಡೆಗಳನ್ನು ಉಂಡುಮಾಡುವುದಿಲ್ಲ ಎಂಬುವುದಕ್ಕೆ ಪುರಾವೆಗಳಿಲ್ಲ ಆದರೆ ಪ್ರಸ್ತುತ ಸೆಲ್ ಫೋನ್ ವಿಕಿರಣವು ಕ್ಯಾನ್ಸರ್-ಉಂಟುಮಾಡುವ ಏಜೆಂಟ್ ಎಂಬುದಕ್ಕೆ ಪುರಾವೆಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯ ಭಾಗವಾಗಿರುವ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ರೇಡಿಯೊಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್‌ಗಳನ್ನು ಜನರಲ್ಲಿ ಪ್ರಾಯಶಃ ಕಾರ್ಸಿನೋಜೆನಿಕ್ ಎಂದು ವರ್ಗೀಕರಿಸಿದೆ.
ಇದನ್ನೂ ಓದಿ: Brain Cancer: 4 ವರ್ಷದ ಕಂದಮ್ಮನನ್ನು ಕಾಡಿದ ಬ್ರೇನ್ ಕ್ಯಾನ್ಸರ್! ಇದಕ್ಕೆ ಶಾಶ್ವತ ಪರಿಹಾರನೇ ಇಲ್ವಾ?
ಆದಾಗ್ಯೂ "ಮೊಬೈಲ್ ಫೋನ್‌ಗಳು ಮತ್ತು ಮೆದುಳಿನ ಗೆಡ್ಡೆಗಳ ನಡುವಿನ ಸಂಭವನೀಯ ಸಂಪರ್ಕದ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನಿಮ್ಮ ಸೆಲ್ ಫೋನ್‌ಗಳ ಬಳಕೆಯನ್ನು ಮಿತಿಗೊಳಿಸಿ ಅಥವಾ ನಿಮ್ಮ ತಲೆಯಿಂದ ಫೋನ್ ಅನ್ನು ದೂರವಿರಿಸಲು ಸ್ಪೀಕರ್ ಅಥವಾ ಹ್ಯಾಂಡ್-ಫ್ರೀ ಸಾಧನವನ್ನು ಬಳಸಿ" ಎಂದು ಡಾ ಸುರೇಶ್ ಸಂಖ್ಲಾ ಸಲಹೆ ನೀಡಿದ್ದಾರೆ. ಮುಂಬೈನ ಮಸಿನಾ ಆಸ್ಪತ್ರೆಯ ಕನ್ಸಲ್ಟೆಂಟ್ ನರಶಸ್ತ್ರಚಿಕಿತ್ಸಕ ಡಾ ಮಝರ್ ಅಬ್ಬಾಸ್ ತುರಾಬಿ ಪ್ರಕಾರ, “ಸೆಲ್ ಫೋನ್‌ಗಳು ಕಡಿಮೆ ಆವರ್ತನ ಮತ್ತು ಕಡಿಮೆ ಶಕ್ತಿಯ ಅಯಾನೀಕರಿಸುವ ವಿಕಿರಣವನ್ನು ಹೊರಸೂಸುತ್ತವೆ. ಈ ಶಕ್ತಿಯು ಡಿಎನ್ಎಗೆ ಹಾನಿ ಮಾಡುವಷ್ಟು ಶಕ್ತವಾಗಿಲ್ಲ ಎನ್ನುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ