ಕ್ಯಾಸ್ಟರ್ ಆಯಿಲ್ ನಮ್ಮ ಅಮ್ಮಂದಿರು ಮತ್ತು ಅಜ್ಜಿಯರು ಹಲವಾರು ವರ್ಷಗಳಿಂದ ಬಳಕೆ ಮಾಡುತ್ತಿರುವ ನೈಸರ್ಗಿಕ ಪದಾರ್ಥವಾಗಿದೆ. ಕ್ಯಾಸ್ಟರ್ ಆಯಿಲ್ ಅನ್ನು ಆಯುರ್ವೇದ ಔಷಧಿಗಳಲ್ಲಿ ಬಹಳ ಹಿಂದಿನಿಂದಲೂ ಬಳಕೆ ಮಾಡಲಾಗುತ್ತಿದೆ. ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಕೂದಲಿಗೆ ಕ್ಯಾಸ್ಟರ್ ಆಯಿಲ್ ನ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕ್ಯಾಸ್ಟರ್ ಆಯಿಲ್ ದಪ್ಪವಾಗಿರುತ್ತದೆ. ಈ ಎಣ್ಣೆಯನ್ನು ಕ್ಯಾಸ್ಟರ್ ಬೀಜಗಳಿಂದ ತಯಾರಿಸಲಾಗುತ್ತದೆ. ಇದನ್ನು ಸೌಂದರ್ಯ ವರ್ಧಕಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. , ಎಣ್ಣೆಯು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದರೂ, ಬೀಜಗಳು ವಿಷಕಾರಿ ಅಂಶಗಳನ್ನು ಹೊಂದಿದ್ದು, ಇದು ಕೆಲವೊಮ್ಮೆ ಮಾರಕವಾಗಬಹುದು, ಆದ್ದರಿಂದ ಇವುಗಳನ್ನು ಸೇವನೆ ಮಾಡುವುದನ್ನ ತಪ್ಪಿಸಬೇಕು.
ಕ್ಯಾಸ್ಟರ್ ಆಯಿಲ್ ಒಮೆಗಾ -6 ಮತ್ತು 9 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ಕೇವಲ ಕೂದಲಿಗೆ ಮಾತ್ರವಲ್ಲದೇ ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ಕೂದಲಿನಲ್ಲಿ ತೇವಾಂಶ ಮತ್ತು ನೈಸರ್ಗಿಕ ಎಣ್ಣೆಗಳನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಇದು ಅಗತ್ಯವಾದ ಅಮೈನೋ ಆಮ್ಲಗಳಿಂದ ಸಮೃದ್ಧವಾಗಿದೆ, ಇದು ಕೂದಲಿಗೆ ನೈಸರ್ಗಿಕ ಎಮೋಲಿಯಂಟ್ಗಳಾಗಿವೆ. ಇದರ ಬಳಕೆ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಕ್ಯಾಸ್ಟರ್ ಆಯಿಲ್ ಅನ್ನು ಬಳಸುವುದು ನೆತ್ತಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ, ವಿಶೇಷವಾಗಿ ನೀವು ತಲೆಹೊಟ್ಟು ಅಥವಾ ತುರಿಕೆಯ ತೊಂದರೆಯನ್ನು ಅನುಭವಿಸುತ್ತಿದ್ದರೆ ಇದು ಉತ್ತಮ ಪರಿಹಾರ ನೀಡುತ್ತದೆ. ಕ್ಯಾಸ್ಟರ್ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು ನಿಮ್ಮ ನೆತ್ತಿಯನ್ನು ಸೋಂಕಿನಿಂದ ದೂರವಿಡುತ್ತದೆ ಮತ್ತು ಸರಿಯಾದ ಪೋಷಣೆಯನ್ನು ನೀಡುತ್ತದೆ. ನೆತ್ತಿಗೆ ಹಚ್ಚಿದಾಗ, ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ಕಡಿಮೆ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಕೆ ಮಾಡುವುದು ನೆತ್ತಿಯ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕ್ಯಾಸ್ಟರ್ ಆಯಿಲ್ ಅನ್ನು ನೇರವಾಗಿ ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ.
ಇದನ್ನೂ ಓದಿ: ಕಂಕುಳ ಕಪ್ಪು ಕಲೆಗಳಿಂದ ಮುಕ್ತಿ ಬೇಕಾ? ಹೀಗೆ ಮಾಡಿ
ಕ್ಯಾಸ್ಟರ್ ಆಯಿಲ್ ನಲ್ಲಿ ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳ ಅಂಶವು ಅಧಿಕವಾಗಿರುತ್ತದೆ. ಇವುಗಳು ಉತ್ತಮ ಕೂದಲಿನ ಆರೋಗ್ಯಕ್ಕೆ ಪ್ರಮುಖ ಅಂಶಗಳಾಗಿವೆ. ವಿಟಮಿನ್ ಇ ಕೂದಲನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ, ಕ್ಯಾಸ್ಟರ್ ಆಯಿಲ್, ನಿಮ್ಮ ಕೂದಲು ಬೆಳವಣಿಗೆ ಉತ್ತಮವಾದ ಆಯ್ಕೆ. ಕ್ಯಾಸ್ಟರ್ ಆಯಿಲ್ ಸಾಮಾನ್ಯ ಎಣ್ಣೆಗಳಿಗಿಂತ ದಪ್ಪವಾಗಿರುವುದರಿಂದ ಅದರ ಕೊಬ್ಬಿನಂಶದಿಂದಾಗಿ, ಇದು ನೆತ್ತಿಯನ್ನು ಚೆನ್ನಾಗಿ ತೇವಗೊಳಿಸುತ್ತದೆ ಮತ್ತು ಪಿಹೆಚ್ ಮಟ್ಟವನ್ನು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಲಕ್ಷಣಗಳು ನೆತ್ತಿಯಲ್ಲಿ ರಕ್ತದ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಮತ್ತು ನೆತ್ತಿಯ ತುರಿಕೆಯ ಸಮಸ್ಯೆಯಿಂದ ಕಾಪಾಡುತ್ತದೆ.
ನಿಮ್ಮ ನೆತ್ತಿಯು ನಿಮ್ಮ ಕೂದಲಿನ ಮೂಲ. ಆದ್ದರಿಂದ ನೀವು ನಿಮ್ಮ ನೆತ್ತಿಯನ್ನು ಹೇಗೆ ಚೆನ್ನಾಗಿ ಪೋಷಿಸುತ್ತೀರಿ ಮತ್ತು ಆರೋಗ್ಯವಾಗಿರುತ್ತೀರಿ ಎಂಬುದು ನಿಮ್ಮ ಕೂದಲು ಆರೋಗ್ಯವನ್ನು ನಿರ್ಧರಿಸುತ್ತದೆ. ನಿಮ್ಮ ಕೂದಲಿಗೆ ಸಾಕಷ್ಟು ತೇವಾಂಶ ಮತ್ತು ಪೌಷ್ಟಿಕಾಂಶ ಸಿಗದಿದ್ದಾಗ ನೆತ್ತಿಯ ತುರಿಕೆ ಉಂಟಾಗುತ್ತದೆ ಮತ್ತು ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸ್ವಲ್ಪ ಕ್ಯಾಸ್ಟರ್ ಆಯಿಲ್ ಅನ್ನು ಒಲೆಯ ಮೇಲೆ ಬಿಸಿ ಮಾಡಿ ಮತ್ತು ಅದನ್ನು ನೆತ್ತಿಯ ಮೇಲೆ ಹಚ್ಚಿ ನಂತರ ಮಸಾಜ್ ಮಾಡಿ. ಇದನ್ನು ವಾರದಲ್ಲಿ 2 ರಿಂದ 3 ಬಾರಿ ಬಳಕೆ ಮಾಡುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ