• Home
  • »
  • News
  • »
  • lifestyle
  • »
  • Women Health: ಪ್ರತಿದಿನ ಮಹಿಳೆಯರು ಗೋಡಂಬಿ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಕಾಡಲ್ಲ

Women Health: ಪ್ರತಿದಿನ ಮಹಿಳೆಯರು ಗೋಡಂಬಿ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಕಾಡಲ್ಲ

ಗೋಡಂಬಿ

ಗೋಡಂಬಿ

Cashew Nut: ಮಹಿಳೆ ತನ್ನ ಆರೋಗ್ಯದ ಕಡೆ ಗಮನವನ್ನು ಬಹಳ ಹೆಚ್ಚಾಗಿ ಗಮನ ಹರಿಸಬೇಕು. ಮದುವೆ, ಮಕ್ಕಳು ಹೀಗೆ ಸಂಸಾರದ ಜವಬ್ಧಾರಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಆಕೆಗೂ ಒಂದಷ್ಟು ಫುಡ್ ಬ್ಯಾಲೆನ್ಸ್ ಅತ್ಯಗತ್ಯ.

  • Share this:

ತಿನ್ನೋದಕ್ಕೆ ಸಖತ್‌ ಟೇಸ್ಟಿಯಾಗಿರೋ ಡ್ರೈಫ್ರುಟ್ಸ್‌ ಗಳಲ್ಲಿ(Dry Fruits)      ಗೋಡಂಬಿ ಕೂಡ ಒಂದು. ಆದ್ರೆ ಕೆಲವೊಂದು ಕಾರಣಗಳಿಂದ ಸಾಕಷ್ಟು ಜನರು ಗೋಡಂಬಿಯಿಂದ ದೂರ ಸರೀತಾರೆ. ಇನ್ನು ಡಯೆಟ್‌ ಮಾಡೋರಂತೂ ಗೋಡಂಬಿಯನ್ನು ದೂರ ತಳ್ತಾರೆ. ಸ್ವಲ್ಪ ತಿಂದರೂ ದಪ್ಪ ಆಗ್ತೀವಿ ಅಂತ ಗೋಡಂಬಿ ತಿನ್ನೋದಕ್ಕೇ ಭಯ ಪಡ್ತಾರೆ. ಆದ್ರೆ ಗೋಡಂಬಿಯಲ್ಲಿರೋ  (Cashew Nuts) ಸಾಕಷ್ಟು ಗುಣಗಳಿಂದ ಆರೋಗ್ಯದ (Health) ಮೇಲೆ ಒಳ್ಳೆಯ ಪರಿಣಾಮ ಉಂಟಾಗುತ್ತದೆ. ಇನ್ನು ಮಹಿಳೆಯರಿಗಂತೂ ಗೋಡಂಬಿ ತಿನ್ನೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಅನ್ನೋದು ತಜ್ಞರ ಅಭಿಪ್ರಾಯ.


ಹೌದು, ಗೋಡಂಬಿಯ ಸೇವನೆಯು ನಿಮ್ಮ ಇಸ್ಟ್ರೋಜನ್‌ ಹಾರ್ಮೋನುಗಳ ಸಮತೋಲನದ ಮಟ್ಟದ ಮೇಲೆ ಧನಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತವೆ ಎನ್ನುತ್ತಾರೆ ತಜ್ಞರು.


ವೆಬ್‌ ಎಂಡಿ ಅನ್ನೋ ವೆಬ್‌ ಸೈಟ್‌ ಪ್ರಕಟಿಸಿದ ವರದಿ ಪ್ರಕಾರ, ಸ್ಯಾಚುರೇಟೆಡ್‌ ಫ್ಯಾಟ್‌ ನ್ನು ಸೇರಿಸೋದ್ರಿಂದ ಗೋಡಂಬಿ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಜನರು ಅಂದುಕೊಳ್ಳುತ್ತಿದ್ದರು. ಆದ್ರೆ ನಿಜವಾಗಿಯೂ ಇದು ಅಷ್ಟೊಂದು ಸಮಸ್ಯೆ ಉಂಟು ಮಾಡೋದಿಲ್ಲ. ಗೋಡಂಬಿಯಲ್ಲಿರುವ ಹೆಚ್ಚಿನ ಕೊಬ್ಬು ಸ್ಟಿಯರಿಕ್‌ ಆಮ್ಲಗಳಿಂದ ಬರುತ್ತೆ. ಆದ್ರೆ ತಜ್ಞರ ಪ್ರಕಾರ ಇದು ರಕ್ತದಲ್ಲಿರುವ ಕೊಬ್ಬಿನ ಮೇಲೆ ತಟಸ್ಥ ಪರಿಣಾಮವನ್ನು ಬೀರುತ್ತೆ ಅನ್ನೋದು ತಜ್ಞರ ಅಭಿಪ್ರಾಯ ಅಂತ ವೆಬ್‌ ಸೈಟ್‌ ನಲ್ಲಿ ವಿವರಿಸಲಾಗಿದೆ.


ಇದನ್ನೂ ಓದಿ: ನಾವ್ ಹೇಳೋ ರೀತಿ ನೀವ್ ಅಡುಗೆ ಮಾಡಿದ್ರೆ ಟೇಸ್ಟ್​ ಸೂಪರ್ ಆಗಿ ಇರುತ್ತೆ


ಇನ್ನು, ಪ್ರಸಿದ್ಧ ಪೌಷ್ಠಿಕ ತಜ್ಞೆ ಭಕ್ತಿ ಕಪೂರ್‌ ಗೋಡಂಬಿ ಎಷ್ಟು ಉಪಯುಕ್ತ ಅನ್ನೋದನ್ನು ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂ ನಲ್ಲಿ ವಿಡಿಯೋವೊಂದರಲ್ಲಿ ಹಂಚಿಕೊಂಡಿದ್ದಾರೆ. ಇವರ ಪ್ರಕಾರ ಗೋಡಂಬಿ ಸೇವನೆ ನಿಮ್ಮ ಈಸ್ಟ್ರೊಜೆನ್ ಹಾರ್ಮೋನುಗಳ ಮಟ್ಟದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ, ನೀವು ಈಸ್ಟ್ರೊಜೆನ್ ಹಾರ್ಮೋನ್‌ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನವೂ ಗೋಡಂಬಿಯನ್ನು ಸೇವಿಸಿ ಎಂದಿದ್ದಾರೆ.


ಹಾರ್ಮೋನ್‌ ಬ್ಯಾಲೆನ್ಸ್‌ ಗೆ ಗೋಡಂಬಿ ತಿನ್ನಿ!


ಇನ್ನು ಹಾರ್ಮೋನುಗಳ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಗೋಡಂಬಿ ಪ್ರಮುಖ ಪಾತ್ರ ವಹಿಸುತ್ತದೆ ಅನ್ನೊ ಅಂಶವನ್ನು ಅವರು ಹೈಲೈಟ್‌ ಮಾಡಿದ್ದಾರೆ. “ಗೋಡಂಬಿಯು ಅನಾಕಾರ್ಡಿಕ್ ಆಸಿಡ್ ಎಂಬ ವಸ್ತುವನ್ನು ಹೊಂದಿರುತ್ತದೆ. ಒಂದು ಹಿಡಿ ಗೋಡಂಬಿಯು ಸುಮಾರು 20 ಮಿಗ್ರಾಂ ಅನಾಕಾರ್ಡಿಕ್ ಆಮ್ಲವನ್ನು ಒಳಗೊಂಡಿರುತ್ತೆ. ಅಲ್ದೇ ಇತ್ತೀಚಿಗೆ ಮಹಿಳೆಯರು ಹೆಚ್ಚಿನ ಈಸ್ಟ್ರೊಜೆನ್ ಹಾರ್ಮೋನುಗಳ ಅಸಮತೋಲನ ದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಹಿಂದಿನ ಸಂಭವನೀಯ ಕಾರಣಗಳನ್ನು ಬಹಿರಂಗಪಡಿಸಿದ ಕಪೂರ್, "ಹೆಚ್ಚುವರಿ ಈಸ್ಟ್ರೊಜೆನ್ ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾದ ಸ್ಥಿತಿಯಾಗಿದೆ. ಏಕೆಂದರೆ ನಮ್ಮ ಆಹಾರ ಮತ್ತು ಪರಿಸರವು ಈಸ್ಟ್ರೊಜೆನ್ ಮತ್ತು ಸಿಂಥೆಟಿಕ್ ರಾಸಾಯನಿಕಗಳಿಂದ ತುಂಬಿರುತ್ತೆ. ಹೆಚ್ಚಿನ ಈಸ್ಟ್ರೊಜೆನ್ PMS, ಋತುಚಕ್ರದಲ್ಲಿ ನೋವು, ಗರ್ಭಾಶಯದ ಫೈಬ್ರಾಯ್ಡ್‌ಗಳು ಮತ್ತು ಸ್ತನ ಕ್ಯಾನ್ಸರ್‌ನ ಅಪಾಯದಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದಿದ್ದಾರೆ.


ಹಾಗಾಗಿ ನಿಮ್ಮ ಹಾರ್ಮೋನನ್ನು ಸಮತೋಲನದಲ್ಲಿಡಲು ಗೋಡಂಬಿ ಅತ್ಯಂತ ಅವಶ್ಯಕ. ಹಾಗಾಗಿ ಪೌಷ್ಠಿಕ ಆಹಾರವಾದ ಗೋಡಂಬಿಯನ್ನು ಪ್ರತಿದಿನವೂ ಸ್ವಲ್ಪ ಪ್ರಮಾಣದಲ್ಲಿ ಅಥವಾ ¼ ಕಪ್‌ ನಷ್ಟು ಸೇವಿಸೋಕೆ ಮರೆಯದಿರಿ ಅನ್ನೋದನ್ನು ಅವರು ಹೇಳಿದ್ದಾರೆ.


ಇದನ್ನೂ ಓದಿ: ಇಂಟ್ರೋವರ್ಟ್​ಗಳನ್ನು ಡೇಟ್​ ಮಾಡ್ತಿದ್ರೆ ಅವರ ಜೊತೆ ಹೀಗಿರಬೇಕಂತೆ


ಅದೆಷ್ಟೋ ತಪ್ಪು ತಿಳುವಳಿಕೆಯಿಂದಾಗಿ ನಾವು ಸಾಕಷ್ಟು ಆಹಾರಗಳನ್ನು ತಿನ್ನೋದೇ ಇಲ್ಲ. ಗೋಡಂಬಿಯ ಹಾಗೆಯೇ ತುಪ್ಪ ತಿನ್ನೋದ್ರಿಂದಲೂ ಸಾಕಷ್ಟು ಜನರು ದೂರವೇ ಉಳಿಯುತ್ತಾರೆ. ಆದ್ರೆ ತುಪ್ಪದಂತ ಆಹಾರ ನಮ್ಮ ದೇಹಕ್ಕೆ ಸಾಕಷ್ಟು ಪೌಷ್ಠಿಕಾಂಶಗಳನ್ನು ನೀಡೋದ್ರ ಜೊತೆಗೆ ಮೂಳೆಗಳನ್ನೂ ಬಲಪಡಿಸುತ್ತೆ. ಆದ್ರೆ ತಿನ್ನುವ ಪ್ರಮಾಣದ ಮೇಲೆ ನಿಗಾ ಇರೋದು ಮುಖ್ಯ. ಹಾಗೆಯೇ ಗೋಡಂಬಿ ಕೂಡ. ಫ್ಯಾಟ್‌ ಅಂಶ ಇದೆ ಅನ್ನೋ ಕಾರಣಕ್ಕೆ ಅದನ್ನು ತಿನ್ನದೇ ಹೋಗೋದು ಒಳ್ಳೆಯದಲ್ಲ. ದಿನವೂ ಸ್ವಲ್ಪ ಪ್ರಮಾಣದಲ್ಲಿ ತಿನ್ನುತ್ತ ಬಂದರೆ ಒಳ್ಳೆಯದು ಅಂತ ಆಹಾರ ತಜ್ಞರೇ ಹೇಳಿದ ಮೇಲೆ ಅಲ್ಪ ಪ್ರಮಾಣದಲ್ಲಿ ಅದನ್ನು ತಿನ್ನುವುದು ನಮಗೇ ಒಳ್ಳೆಯದು.

First published: