• Home
  • »
  • News
  • »
  • lifestyle
  • »
  • Health Tips: ಸ್ತನ ಕ್ಯಾನ್ಸರ್​ನಿಂದ ಯಕೃತ್ತಿಗೆ ಹಾನಿಯಾಗುತ್ತಾ? ವಿಜ್ಞಾನಿಗಳು ಹೇಳೋದೇನು ಕೇಳಿ

Health Tips: ಸ್ತನ ಕ್ಯಾನ್ಸರ್​ನಿಂದ ಯಕೃತ್ತಿಗೆ ಹಾನಿಯಾಗುತ್ತಾ? ವಿಜ್ಞಾನಿಗಳು ಹೇಳೋದೇನು ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Liver And Breast Cancer: ಈ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಮನುಷ್ಯನಿಗೆ ವಿಸ್ತರಿಸುವುದಾದರೆ ಯಕೃತ್ತಿನ ಹಾನಿಯನ್ನು ಕಡಿಮೆ ಮಾಡುವ ವಿಧಾನಗಳನ್ನು ಕಂಡುಹಿಡಿಯಲು ಮುಂದೆ ಸಹಾಯವಾಗಬಹುದು. ಇದು ಸ್ತನ ಕ್ಯಾನ್ಸರ್ ನಿಂದ ಬದುಕುಳಿದವರಲ್ಲಿ ದೀರ್ಘಕಾಲದ ಅನಾರೋಗ್ಯ ಮತ್ತು ಮರಣದ ಪ್ರಮಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ'' ಎಂದು ಅವರು ಹೇಲುತ್ತಾರೆ.

ಮುಂದೆ ಓದಿ ...
  • Share this:

ಮೈಸೂರಿನ (Mysuru) ಜೆ.ಎಸ್.ಎಸ್ (JSS) ಮೆಡಿಕಲ್ ಕಾಲೇಜು, ಜೆ.ಎಸ್.ಎಸ್ ಸ್ಕೂಲ್ ಆಫ್ ಫಾರ್ಮಸಿ ಹಾಗೂ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಮತ್ತು JSS AHER ಸಂಸ್ಥೆಯ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಮಹತ್ವದ ಅಧ್ಯಯನವೊಂದರಲ್ಲಿ ಸ್ತನ ಕ್ಯಾನ್ಸರ್ (Breast cancer) ಕಾಯಿಲೆಯಿಂದ ಯಕೃತ್ (Liver) ಉರಿಯೂತ (ಹೆಪಟೈಟಿಸ್) ಮತ್ತು ಫೈಬ್ರಿಯಾಸಿಸ್ ಉಂಟಾಗುತ್ತದೆ ಎಂಬಂಶವನ್ನು ಪತ್ತೆ ಮಾಡಿರುವುದಾಗಿ ತಿಳಿದು ಬಂದಿದೆ. ಸ್ತನ ಕ್ಯಾನ್ಸರ್ ಹಿಂದಿರುವ ಆಣ್ವಿಕ ಸಂಯೋಜನೆಗಳು ಯಕೃತ್ ಹಾನಿಗೀಡಾಗುವುದು ಸೇರಿದಂತೆ ಇತರೆ ಕೋಮಾರ್ಬಿಡಿಗಳೊಂದಿಗೆ ಸಂಬಂಧ ಹೊಂದಿರುವುದು ಪತ್ತೆಯಾಗಿರುವುದಾಗಿ ಈ ಅಧ್ಯಯನದಲ್ಲಿ ಭಾಗಿಯಾಗಿದ್ದ ಸಂಶೋಧಕರು ಹೇಳಿದ್ದಾರೆ. ಇತ್ತೀಚೆಗಷ್ಟೆ ಈ ಅಧ್ಯಯನವು ಅಡ್ವಾನ್ಸಸ್ ಇನ್ ಕ್ಯಾನ್ಸರ್ ಬಯಾಲಜಿ - ಮೆಟಾಸ್ಟಾಸಿಸ್ ವಿಮರ್ಶಕರ ಜರ್ನಲ್ ಅಲ್ಲಿ ಪ್ರಕಟವಾಗಿರುವುದಾಗಿ ಎಂದು ಸಂಶೋಧಕರು ಈ ಸಂದರ್ಭದಲ್ಲಿ ಹೇಳಿದ್ದಾರೆ.


ಜೆ.ಎಸ್‌.ಎಸ್ ವೈದ್ಯಕೀಯ ಕಾಲೇಜಿನ ಜೀವರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಸಂತೆಕಡೂರ್ ಮತ್ತು ಅವರ ಸಹವರ್ತಿ ಜೆ.ಎಸ್‌.ಎಸ್ ವೈದ್ಯಕೀಯ ಕಾಲೇಜಿನ ರಾಮಲಿಂಗಸ್ವಾಮಿ ಹಾಗೂ ಅವರ ಪಿಎಚ್‌ಡಿ ವಿದ್ಯಾರ್ಥಿಗಳಾದ ನಿರ್ಮಲಾ ಜಿ.ಎಸ್ ಮತ್ತು ವರ್ಷ ಡಿ.ಎಸ್ ಜೊತೆ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಸಮುದ್ಯತಾ ಸಿ ಪ್ರಭುಸ್ವಾಮಿಮಠ ಮತ್ತು ಜೆಎಸ್ಎಸ್ ಸ್ಕೂಲ್ ಆಫ್ ಫಾರ್ಮಸಿಯ ಪ್ರೊಫೆಸರ್ ಶರವಣ ಬಾಬು ಸಿ. ಮತ್ತು ಸುನಂದಾ ತುಲಾಧರ್ ಅವರ ಸಹಯೋಗದಲ್ಲಿ ಈ ಅಧ್ಯಯನವನ್ನು ನಡೆಸಲಾಗಿತ್ತು.


ಈ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ನಿರ್ವಹಿಸಿರುವ ಡಾ. ಪ್ರಸನ್ನ ಸಂತೆಕಡೂರ್ ಅವರು ಹೇಳುವಂತೆ ಜಾಗತಿಕವಾಗಿ ಬಹಳಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಸ್ತುತ, ಸ್ತನ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆಯ ಆಯ್ಕೆಗಳು ಲಭ್ಯವಿದೆಯಾದರೂ ಅದಕ್ಕೆ ಸಂಬಂಧಿಸಿದಂತೆ ಇರುವ ಇತರೆ ಸಮಸ್ಯೆಗಳಾದ ಯಕೃತ್ ಉರಿಯೂತ ಹಾಗೂ ಫಬ್ರೋಸಿಸ್‌ಗೆ ಚಿಕಿತ್ಸೆ ನೀಡಲು ಯಾವುದೇ ಚಿಕಿತ್ಸೆ ಲಭ್ಯವಿಲ್ಲ.


ಸ್ತನ ಕ್ಯಾನ್ಸರ್​ನಿಂದ ಯಕೃತ್ತಿಗೆ ಹಾನಿ


ಶರೀರದಲ್ಲಿ ಲಿವರ್ ಅಥವಾ ಯಕೃತ್ತು ಒಂದು ಪ್ರಮುಖ ಒಳಾಂಗವಾಗಿದ್ದು 500ಕ್ಕೂ ಹೆಚ್ಚು ಶರೀರದ ಆಂತರಿಕ ಕ್ರಿಯೆಗಳನ್ನು ನಿರ್ವಹಿಸುತ್ತದೆ. ಸ್ತನ ಕ್ಯಾನ್ಸರ್‌ನಿಂದಾಗಿ ಉಂಟಾಗುವ ಯಕೃತ್ ಸಮಸ್ಯೆಯು ಮುಂದುವರೆಯುತ್ತ ಅದು ಯಕೃತ್ತಿನ ಕ್ಯಾನ್ಸರ್ ಅಥವಾ ಹೆಪಾಟೊಸೆಲ್ಯೂಲರ್ ಕ್ಯಾರ್ಸಿನೋಮಾ ಸ್ಥಿತಿಗೆ ಪರಿವರ್ತಿತವಾಗಬಹುದು.


ಇದನ್ನೂ ಓದಿ: ಗರ್ಭಧರಿಸುವ ಆಲೋಚನೆಯಲ್ಲಿದ್ರೆ ಈ ಅಂಶಗಳನ್ನು ಮರೆಯಬೇಡಿ


ಈ ಅಧ್ಯಯನವು ಸ್ತನ ಕ್ಯಾನ್ಸರ್-ಸಂಬಂಧಿತ ಯಕೃತ್ತಿನ ಹಾನಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ಕ್ರಿಯೆಗಳಿಗೆ ಸಂಬಂಧಿಸಿದಂತೆ ಟ್ಯೂಮರ್ ಆ್ಯಂಜಿಯೋಜೆನೆಸಿಸ್ ಅನ್ನು ಗುರಿಯಾಗಿಸಿಕೊಂಡು ಸುಧಾರಿತ ಚಿಕಿತ್ಸೆ ಕೊಡಲು ಸಹಾಯ ಮಾಡುತ್ತದೆ.


ಸಂಶೋಧಕರ ಪ್ರಕಾರ, ಪ್ರಸ್ತುತ, ಯಕೃತ್ತಿನ ಉರಿಯೂತ, ಫೈಬ್ರೋಸಿಸ್ ಮತ್ತು ಹೆಪಾಟೊಸೆಲ್ಯುಲರ್ ಕಾರ್ಸಿನೋಮ ಚಿಕಿತ್ಸೆಗಾಗಿ ಮಾರುಕಟ್ಟೆಯಲ್ಲಿ ಒಂದು ಅಥವಾ ಎರಡು ಔಷಧಿಗಳು ಮಾತ್ರವೇ ಲಭ್ಯವಿದೆ.


ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಲಹೆಗಾರರಾಗಿರುವ ಡಾ. ಮಧುರಾ ಪಾಟಕ್ “ ಈಗಾಗಲೇ ಹಿಂದಿನ ಕೆಲ ಅಧ್ಯಯನಗಳು ವ್ಯಕ್ತಿಯಲ್ಲಿ ಸ್ತನ ಕ್ಯಾನ್ಸರ್‌ ಉಂಟಾಗಲು ನಾನ್-ಅಲ್ಕೊಹೋಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಒಂದು ಅಪಾಯಕಾರಿ ಅಂಶವಾಗಿದೆ ಎಂದು ತೋರಿಸಿವೆ. ನಮಗೆ ತಿಳಿದಿರುವಂತೆ ಈ ಎರಡು ಪರಿಸ್ಥಿತಿಗಳು ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಮೆಟಾಬಾಲಿಕ್ ಸಿಂಡ್ರೋಮ್‌ನೊಂದಿಗೆ ಸಂಬಂಧ ಹೊಂದಿವೆ.


ಇಲಿಗಳ ಮೇಲೆ ಮಾಡಲಾದ ಪ್ರಯೋಗಗಳ ವಿವರ ಹೊಂದಿದ ಈ ಮಾದರಿ ಅಧ್ಯಯನವು ಸ್ತನ ಕ್ಯಾನ್ಸರ್ ಕೋಶಗಳು ಯಕೃತ್ತಿನಲ್ಲಿ ಹೊಸ ರಕ್ತನಾಳಗಳನ್ನು (ನಿಯೋ ಆಂಜಿಯೋಜೆನೆಸಿಸ್) ಉತ್ಪಾದಿಸುವ ಮೂಲಕ ಯಕೃತ್ತಿನ ಜೀವಕೋಶಗಳಿಗೆ ಹಾನಿ ಉಂಟು ಮಾಡುವ ಕಾರ್ಯವಿಧಾನವನ್ನು ತೋರಿಸಿದೆ, ಇದರಿಂದಾಗಿ ಉರಿಯೂತ ಮತ್ತು ಫೈಬ್ರೋಸಿಸ್ ಉಂಟಾಗುತ್ತದೆ. ಹೀಗಾಗಿ, ಸಾಮಾನ್ಯ ಯಕೃತ್ತಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಅವರು  ಹೇಳುತ್ತಾರೆ.


ಇದನ್ನೂ ಓದಿ: Reiki ಚಿಕಿತ್ಸೆ ನಿಮ್ಮ ಆರೋಗ್ಯದ ಈ ಸಮಸ್ಯೆಗಳಿಗೆ ಪರಿಹಾರವಂತೆ


"ಇದು ಯಕೃತ್ತಿನ ಕ್ಯಾನ್ಸರ್ ಬೆಳವಣಿಗೆಗೆ ಪೂರ್ವಗಾಮಿಯಾಗಿರುವ ಬೆಳವಣಿಗೆಯಾಗಿದೆ. ಈ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಮನುಷ್ಯನಿಗೆ ವಿಸ್ತರಿಸುವುದಾದರೆ ಯಕೃತ್ತಿನ ಹಾನಿಯನ್ನು ಕಡಿಮೆ ಮಾಡುವ ವಿಧಾನಗಳನ್ನು ಕಂಡುಹಿಡಿಯಲು ಮುಂದೆ ಸಹಾಯವಾಗಬಹುದು. ಇದು ಸ್ತನ ಕ್ಯಾನ್ಸರ್ ನಿಂದ ಬದುಕುಳಿದವರಲ್ಲಿ ದೀರ್ಘಕಾಲದ ಅನಾರೋಗ್ಯ ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ'' ಎಂದು ಅವರು ಹೇಳುತ್ತಾರೆ.

Published by:Sandhya M
First published: