Health Tips| ರಾತ್ರಿ ಸಮಯದಲ್ಲಿ ನಡೆಯುವುದರಿಂದ ಉಂಟಾಗುವ ಪ್ರಯೋಜನಗಳೇನು..?

ಐಸ್‌ಕ್ರೀಮ್ ಸೇವನೆ ಮಾಡದಿರಿ. ರಾತ್ರಿಯೂಟ ಆಗಿದೆಯೆಂದು ಐಸ್‌ಕ್ರೀಮ್ ಸೇವಿಸಿ ನಡೆದಲ್ಲಿ ನಡಿಗೆಯ ಪ್ರಯೋಜನ ನಷ್ಟವಾಗುತ್ತದೆ. ನಿತ್ಯವೂ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ನಿಧಾನವಾಗಿ ನಡಿಗೆ ಆರಂಭಿಸಿ ಆದರೆ ಬದ್ಧತೆಯನ್ನು ಅನುಸರಿಸಿ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನಡಿಗೆಯಿಂದ ಮಹತ್ತರ ಆರೋಗ್ಯ ಪ್ರಯೋಜನಗಳಿದ್ದು ತೂಕ ಇಳಿಕೆಯಲ್ಲಿ ನಡಿಗೆಯ ಪಾತ್ರ ಅತ್ಯಂತ ಪ್ರಮುಖವಾದುದಾಗಿದೆ. ಯಾವುದೇ ಚಟುವಟಿಕೆಗೂ ಮುನ್ನ ವೈದ್ಯರು ಸಲಹೆ ನೀಡುವುದು ನಡಿಗೆಗೆ. ಹೌದು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರೂ ಸುಲಭವಾಗಿ ಅನ್ವಯಿಸಿಕೊಳ್ಳಬಹುದಾದ ಚಟುವಟಿಕೆ ವ್ಯಾಯಾಮ ಎಂದರೆ ನಡಿಗೆಯೇ ಆಗಿದೆ. ನಡಿಗೆಗೆ ಇಂತಹದ್ದೇ ಸಮಯ ಸಂದರ್ಭಗಳು ಇರುವುದಿಲ್ಲ. ನೀವು ದಿನದಲ್ಲಿ ಎಷ್ಟು ನಡೆಯುತ್ತೀರೋ ಅಷ್ಟು ಆರೋಗ್ಯಕರವಾಗಿ ನೀವಿರುತ್ತೀರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

    ಆದರೆ ಕೆಲವೊಂದು ಅಧ್ಯಯನಗಳ ಪ್ರಕಾರ ನಡಿಗೆಗೂ ಸೂಕ್ತ ಸಮಯವಿದ್ದು ಬೆಳಗ್ಗಿನ ನಡಿಗೆಗಿಂತಲೂ ರಾತ್ರಿಯ ನಡಿಗೆ ಹೆಚ್ಚು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಹಾಗಾದರೆ ಈ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

    ಬೆಳಗ್ಗಿನ ನಡಿಗೆಗಿಂತ ರಾತ್ರಿಯ ನಡಿಗೆ ಹೇಗೆ ಸಹಕಾರಿ:

    ನಡಿಗೆಯ ವಿಷಯದಲ್ಲಿ ಬೆಳಗ್ಗಿನ ಹಾಗೂ ರಾತ್ರಿಯ ನಡಿಗೆ ಪ್ರಯೋಜನಕಾರಿಯೇ ಆದರೂ ರಾತ್ರಿ ನಡಿಗೆ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರಾತ್ರಿ ಊಟದ ನಂತರ 15 ನಿಮಿಷ ನಡೆಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅದೇ ರೀತಿ ಹೊಟ್ಟೆಯ ಬೊಜ್ಜನ್ನು ಕರಗಿಸಲು ಇದು ಸಹಕಾರಿಯಾಗಿದೆ ಎಂದು ಮುಂಬೈಯ ಹೋಪ್ ಏಂಡ್ ಕೇರ್ ಕ್ಲಿನಿಕ್‌ನ ಅಕ್ಷತ್ ಚಡಾ ಅಭಿಪ್ರಾಯ ಪಡುತ್ತಾರೆ. ಭಾರತೀಯ ಅಡುಗೆಗಳಲ್ಲಿ ಹೆಚ್ಚಿನ ಮಸಾಲೆ ಹಾಗೂ ಕಾರ್ಬೋಹೈಡ್ರೇಟ್‌ಗಳು ಬೆರೆತಿರುವುದರಿಂದ ರಾತ್ರಿ ಊಟದ ನಂತರ ನಡೆಯುವುದು ಜೀರ್ಣಕ್ರಿಯೆ ಸುಲಭಗೊಳಿಸಿ ಉತ್ತಮ ನಿದ್ದೆಗೆ ಸಹಕಾರಿಯಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.

    ಊಟವಾದ ಕೂಡಲೇ ನಿದ್ರಿಸುವುದರಿಂದ ಹೊಟ್ಟೆಯ ಬೊಜ್ಜಿನ ಸಮಸ್ಯೆ ಹೆಚ್ಚುತ್ತದೆ. ಇದರಿಂದ ಮಧುಮೇಹ, ಹೃದಯದ ಕಾಯಿಲೆಗಳು, ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ಊಟವಾದ ಕೂಡಲೇ ಸ್ವಲ್ಪ ಹೊತ್ತು ನಡೆಯುವುದು ಪರಿಣಾಮಕಾರಿ ಎಂಬುದು ಅವರ ಅಭಿಪ್ರಾಯವಾಗಿದೆ.

    ರಾತ್ರಿಯ ನಡಿಗೆ ಹೇಗೆ ಉಪಯೋಗಕಾರಿಯಾಗಿದೆ..?

    ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು ಹೆಚ್ಚಿನ ಕ್ಯಾಲೋರಿ ಕರಗಿಸುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಶೀಘ್ರ ಸಹಕಾರಿಯಾಗಿದೆ.
    ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ನಡಿಗೆ ಹಾಗೂ ವ್ಯಾಯಾಮದಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ರಾತ್ರಿ ಊಟವಾದೊಡನೆ ನಡಿಗೆ ಅಭ್ಯಾಸ ಮಾಡಿ.

    • ಸ್ನಾಯುಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ.

    • ಬೆನ್ನುನೋವನ್ನು ಕಡಿಮೆ ಮಾಡುತ್ತದೆ ಹಾಗೂ ಖಿನ್ನತೆಯನ್ನು ನಿವಾರಿಸುತ್ತದೆ

    • ರಕ್ತದ ಹರಿವನ್ನು ವರ್ಧಿಸುತ್ತದೆ

    • ಹಾಗಾದರೆ ಬೆಳಗ್ಗಿನ ನಡಿಗೆಯನ್ನು ನಿಲ್ಲಿಸಬೇಕೇ?


    ಬೆಳಗ್ಗಿನ ನಡಿಗೆಯು ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದ ಬೆಳಗ್ಗಿನ ನಡಿಗೆಯನ್ನು ನಿಲ್ಲಿಸಬೇಕಾಗಿಲ್ಲ. ಬೆಳಗ್ಗಿನ ಯಾವ ಸಮಯವನ್ನು ನೀವು ನಡಿಗೆಗೆ ಬಳಸಿಕೊಳ್ಳುತ್ತೀರಿ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿರುವ ವಿಷಯವಾಗಿದೆ. ಆದಷ್ಟು ಬೆಳಗ್ಗಿನ ಜಾವದ ನಡಿಗೆ ಹೆಚ್ಚು ಪ್ರಯೋಜನಕಾರಿ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

    ರಾತ್ರಿ ನಡಿಗೆಗೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಹೇಗೆ?

    ರಾತ್ರಿ ಊಟವಾದೊಡನೆ ನಡಿಗೆ ಆರಂಭಿಸಬೇಡಿ. ರಾತ್ರಿ ಊಟವಾದೊಡನೆ ನಡೆಯುವುದರಿಂದ ರಕ್ತವು ಇತರ ಅಂಗಗಳಿಗೆ ಪರಿಚಲನೆಯಾಗುವ ಸಾಧ್ಯತೆ ಇದೆ. ಇದರಿಂದ ಆಯಾಸ ಉಂಟಾಗಬಹುದು. ರಾತ್ರಿ ಊಟವಾಗಿ 20 ನಿಮಿಷಗಳ ನಂತರ ನಡಿಗೆ ಆರಂಭಿಸಿ. ರಾತ್ರಿ ನಡಿಗೆಯ ಸಮಯದಲ್ಲಿ ಶೂಗಳನ್ನು ಬಳಸಿ. ಇದರಿಂದ ನಡಿಗೆಯ ಪ್ರಯೋಜನ ನಿಮಗೆ ದೊರೆಯುತ್ತದೆ ಎಂದು ಅಕ್ಷತ್ ತಿಳಿಸುತ್ತಾರೆ
    ಬ್ರಿಸ್ಕ್ ವಾಕ್ ಮಾಡಿ. ನಿಧಾನ ನಡಿಗೆ ಮಾಡದಿರಿ

    ಇದನ್ನೂ ಓದಿ: 2020ರಲ್ಲಿ ಕೊಲೆ-ಅಪಹರಣ ಸೇರಿದಂತೆ ಅತಿಹೆಚ್ಚು ಅಪರಾಧಗಳು ದಾಖಲಾದ ರಾಜ್ಯ ಉತ್ತರಪ್ರದೇಶ; NCRB ದಾಖಲೆ ಬಿಡುಗಡೆ

    ಐಸ್‌ಕ್ರೀಮ್ ಸೇವನೆ ಮಾಡದಿರಿ. ರಾತ್ರಿಯೂಟ ಆಗಿದೆಯೆಂದು ಐಸ್‌ಕ್ರೀಮ್ ಸೇವಿಸಿ ನಡೆದಲ್ಲಿ ನಡಿಗೆಯ ಪ್ರಯೋಜನ ನಷ್ಟವಾಗುತ್ತದೆ. ನಿತ್ಯವೂ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ನಿಧಾನವಾಗಿ ನಡಿಗೆ ಆರಂಭಿಸಿ ಆದರೆ ಬದ್ಧತೆಯನ್ನು ಅನುಸರಿಸಿ. ಮೊದಲಿಗೆ 15 ರಿಂದ 30 ನಿಮಿಷದ ನಡಿಗೆ ಆರಂಭಿಸಿ ನಂತರ ಇದನ್ನು ಕ್ರಮೇಣ ಹೆಚ್ಚಿಸಿಕೊಳ್ಳಿ.
    Published by:MAshok Kumar
    First published: