Menstruation Problem: ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಿಸಲು ಈ ಪದಾರ್ಥಗಳ ಸೇವನೆ ಸಹಕಾರಿ ಅಂತಾರೆ ತಜ್ಞರು!

ಎಷ್ಟೋ ಮಹಿಳೆಯರು ಋತುಚಕ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಗಂಭೀರ ಗಮನ ನೀಡುವುದಿಲ್ಲ. ಈ ಬಗ್ಗೆ ಹೇಳುವುದು ಕಷ್ಟ. ಅನಿಯಮಿತ ಅವಧಿ ಅಥವಾ ಋತುಚಕ್ರ ಸಮಯಕ್ಕೆ ಸರಿಯಾಗಿ ಆಗದಿರುವುದು. ಅನೇಕ ಸಮಸ್ಯೆ ಹುಟ್ಟು ಹಾಕುತ್ತದೆ. ಇದು ಇದು ದೇಹದಲ್ಲಿ ಕಬ್ಬಿಣದ ಕೊರತೆ ರಕ್ತಹೀನತೆ ಸಂಕೇತ ಆಗಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅನೇಕ ಮಹಿಳೆಯರು (Women’s) ಮುಟ್ಟಿನ ಅಥವಾ ಋತುಚಕ್ರ ಸಮಸ್ಯೆ (Menstruation Problem) ಅನುಭವಿಸುತ್ತಾರೆ. ಕೆಲವರಿಗೆ ಋತುಚಕ್ರ ಸರಿಯಾದ ಸಮಯಕ್ಕೆ ಆಗುತ್ತೆ ಆದ್ರೆ ಹೊಟ್ಟೆ ಮತ್ತು ಸೊಂಟ ನೋವು (Stomach Pain) ಬಾಧಿಸುತ್ತದೆ. ಇನ್ನು ಕೆಲವರು ಋತುಚಕ್ರದಲ್ಲಿ ಏರುಪೇರು ಮತ್ತು ಪಿಸಿಒಎಸ್ ಸಮಸ್ಯೆ ಅನುಭವಿಸುತ್ತಾರೆ. ಋತುಚಕ್ರ ಸಮಯಕ್ಕೆ ಬರದಿರುವ ಸಮಸ್ಯೆ ಹೊಂದಿರುತ್ತಾರೆ. ಅದಾಗ್ಯೂ ಭಾರತದಲ್ಲಿ ಋತುಚಕ್ರ ಅವಧಿ ಬಗ್ಗೆ ಮೊದಲಿಗಿಂತ ಹೆಚ್ಚು ಮುಕ್ತವಾಗಿ ಚರ್ಚೆಗಳು ನಡೆಯುತ್ತಿವೆ. ಆದರೆ ಎಷ್ಟೋ ಮಹಿಳೆಯರು ಋತುಚಕ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಗಂಭೀರ ಗಮನ ನೀಡುವುದಿಲ್ಲ. ಈ ಬಗ್ಗೆ ಹೇಳುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ಇಂದು ನಾವು ಅನಿಯಮಿತ ಮುಟ್ಟಿನ ಕುರಿತು ಪ್ರಮುಖ ಮಾಹಿತಿ ತಿಳಿಯೋಣ.

  ಅನಿಯಮಿತ ಮುಟ್ಟು ಎಂದರೇನು?

  Webmd ಪ್ರಕಾರ, ಅನಿಯಮಿತ ಅವಧಿ ಅಥವಾ ಋತುಚಕ್ರ ಸಮಯಕ್ಕೆ ಸರಿಯಾಗಿ ಆಗದಿರುವುದು. ಮುಟ್ಟಿನ ಅನುಪಸ್ಥಿತಿ, ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ರಕ್ತಸ್ರಾವ, ಹೆಚ್ಚಿದ ಅವಧಿ ಅಥವಾ ಸಂಭವಿಸುವಿಕೆ ಬದಲಾವಣೆ ಅಂಶಗಳನ್ನು ಹೊಂದಿದೆ.

  ಅನಿಯಮಿತ ಅವಧಿ ಉಂಟಾಗುವುದು ಸಾಮಾನ್ಯವೇ?

  NCBI ಪ್ರಕಾರ, ಕೆಲವೊಮ್ಮೆ ಅವಧಿ ಅಥವಾ ಋತುಚಕ್ರದಲ್ಲಿ ಉಂಟಾಗುವ ಬದಲಾವಣೆಗಳು ಹಾನಿಕಾರಕ ಫಲಿತಾಂಶ ಉಂಟು ಮಾಡಲ್ಲ. ಆದರೆ ನೀವು ಯಾವಾಗಲೂ ಅಥವಾ ಹೆಚ್ಚಾಗಿ ಈ ಸಮಸ್ಯೆ ಹೊಂದಿದ್ದರೆ ಅದು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಸಂಕೇತ ಆಗಿರಬಹುದು.

  ಇದನ್ನೂ ಓದಿ: ಅಕ್ಕಿ ತೊಳೆದ ನೀರು, ಗಂಜಿ ಚೆಲ್ಲುತ್ತೀರಾ? ಚರ್ಮ ಮತ್ತು ಕೂದಲ ಸಮಸ್ಯೆಗೆ ಇದೇ ರಾಮಬಾಣವಂತೆ!

  ಅಲ್ಲದೇ ಇದು ಬಂಜೆತನ, ಆಸ್ಟಿಯೊಪೊರೋಸಿಸ್, ಹೃದಯ ರಕ್ತನಾಳದ ಕಾಯಿಲೆ, ಎಂಡೊಮೆಟ್ರಿಯಲ್ ಹೈಪರ್ಪ್ಲಾಸಿಯಾ ಅಂದ್ರೆ ಗರ್ಭಾಶಯದ ಒಳಪದರ ದಪ್ಪವಾಗುವುದು ಸಹ ಕಾರಣ ಆಗಬಹುದು.

  ಅನಿಯಮಿತ ಅವಧಿಗೆ ಚಿಕಿತ್ಸೆ ನೀಡುವುದು ಅಗತ್ಯ

  ಅಂತಹ ಸ್ಥಿತಿಯಲ್ಲಿ ಸಮಯಕ್ಕೆ ಸರಿಯಾಗಿ ಅನಿಯಮಿತ ಅವಧಿಗೆ ಚಿಕಿತ್ಸೆ ನೀಡುವುದು ಅಗತ್ಯ. ಅನಿಯಮಿತ ಅವಧಿಗೆ ಆಯುರ್ವೇದ ಚಿಕಿತ್ಸೆಯು ದೋಷಗಳ ನಡುವೆ ಸಮತೋಲನ ಕಾಪಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಆಯುರ್ವೇದ ತಜ್ಞ ಡಾ. ಈಲಾ ವಿವರಿಸಿದ್ದಾರೆ.

  ಪೌಷ್ಟಿಕಾಂಶ-ಭರಿತ ಆಹಾರ, ಸಮತೋಲಿತ ವ್ಯಾಯಾಮದ ಜೊತೆ ಆರೋಗ್ಯಕರ ಜೀವನಶೈಲಿ ಫಾಲೋ ಮಾಡುವುದು ಇದರಲ್ಲಿ ಸೇರಿದೆ. ಅನಿಯಮಿತ ಮುಟ್ಟಿನ ಸಮಸ್ಯೆ ಇರುವ ಮಹಿಳೆಯರಿಗೆ ಕೆಲವು ಹಣ್ಣುಗಳ ಸೇವನೆ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ.

  ಅನಿಯಮಿತ ಅವಧಿ ಉಂಟಾಗಲು ಕಾರಣವೇನು?

  ಗರ್ಭಾಶಯದ ಸಾಧನವನ್ನು ಹೊಂದಿರುವ (IUD) ಸಮಸ್ಯೆ, ಜನನ ನಿಯಂತ್ರಣ ಮಾತ್ರೆಗಳ ಸೇವನೆ ಮತ್ತು ಮಾತ್ರೆಗಳನ್ನು ಬದಲಾಯಿಸುವುದು ಅಥವಾ ಕೆಲವು ಔಷಧಿಗಳ ಬಳಕೆ, ಹೆಚ್ಚು ವ್ಯಾಯಾಮ ಅಥವಾ ವ್ಯಾಯಾಮ ಮಾಡದಿರುವುದು,

  ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಗರ್ಭಧಾರಣೆ ಅಥವಾ ಹಾಲುಣಿಸುವಿಕೆ, ಒತ್ತಡ, ಥೈರಾಯ್ಡ್ ಸಮಸ್ಯೆ, ಗರ್ಭಾಶಯದ ಒಳಪದರ ಅಥವಾ ಪಾಲಿಪ್ಸ್ ದಪ್ಪವಾಗುವುದು, ಗರ್ಭಾಶಯದ ಫೈಬ್ರಾಯ್ಡ್ಗಳು ಇವುಗಳು ಅನಿಯಮಿತ ಅವಧಿ ಉಂಟಾಗಲು ಕಾರಣಗಳಾಗಿವೆ.

  ಅನಿಯಮಿತ ಅವಧಿಯಲ್ಲಿ ಕಿತ್ತಳೆ ಸೇವನೆ ಉತ್ತಮ

  ಕಿತ್ತಳೆ ಅನಿಯಮಿತ ಅವಧಿ ನಿವಾರಣೆಗೆ ಕಾರಣವಾಗಿದೆ ಎಂದು ನಂಬಲಾಗಿದೆ. ಇತರ ವಿಟಮಿನ್-ಸಿ ಸಮೃದ್ಧ ಹಣ್ಣುಗಳಲ್ಲಿ ನಿಂಬೆ, ಕಿವಿ ಮತ್ತು ಮಾವು ಸೇರಿವೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದು ಋತುಚಕ್ರದ ಮೇಲಿನ ಅಕ್ರಮಣವನ್ನು ಕಡಿಮೆ ಮಾಡಬಹುದು.

  ಆಮ್ಲಾ ಸೇವಿಸಿ ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಿಸಿ

  ಅನಿಯಮಿತ ಮುಟ್ಟಿನಿಂದ ಬಳಲುತ್ತಿರುವ ಮಹಿಳೆಯರಿಗೆ ಆಮ್ಲಾ ಸೇವಿಸಲು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ಆಮ್ಲಾದಲ್ಲಿರುವ ಔಷಧೀಯ ಗುಣಗಳು ನೈಸರ್ಗಿಕ ರೀತಿಯಲ್ಲಿ ಋತುಚಕ್ರದ ಅನಿಯಮಿತತೆ ತೆಗೆದು ಹಾಕುತ್ತದೆ.

  ದಾಳಿಂಬೆ ಸೇವನೆ ಪ್ರಯೋಜನಕಾರಿ

  ದಾಳಿಂಬೆಯ ಸೇವನೆ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಈ ಹಣ್ಣು ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ, ಗರ್ಭಾಶಯದ ಅಸಹಜ ಆಕಾರ ಇತ್ಯಾದಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಿಸುತ್ತದೆ.

  ಅನಾನಸ್ ಸೇವನೆ

  ಅನಾನಸ್ ಬ್ರೋಮೆಲಿನ್ ಎಂಬ ಕಿಣ್ವ ಹೊಂದಿದೆ. ಇದು ಗರ್ಭಾಶಯದ ಒಳಪದರ ನಿಧಾನಗೊಳಿಸುತ್ತದೆ. ಇದು ನಿಮ್ಮ ಅವಧಿಗೆ ಪ್ರಚೋದಿಸುತ್ತದೆ. ಕೆಂಪು ಮತ್ತು ಬಿಳಿ ರಕ್ತ ಕಣಗಳ ಉತ್ಪಾದನೆ ಹೆಚ್ಚಿಸುತ್ತದೆ. ರಕ್ತದ ಹರಿವಿಗೆ ಸಹಕಾರಿ.

  ಇದನ್ನೂ ಓದಿ: ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕಿನಿಂದ ಸಾವು; ಯಾವುದು ಈ ಕಾಯಿಲೆ?

  ಬಾಳೆಹಣ್ಣು ಸೇವನೆ

  ಬಾಳೆಹಣ್ಣಿನ ವಿಟಮಿನ್ ಗಳು ಕರುಳಿನ ಚಲನೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿ. ಪ್ರತಿದಿನ ಒಂದು ಬಾಳೆಹಣ್ಣು PMS ಮತ್ತು ಮೂಡ್ ಸ್ವಿಂಗ್ಸ್ ಮತ್ತು ಅನಿಯಮಿತ ಅವಧಿ ಸಮಸ್ಯೆ ದೂರವಿಡುತ್ತದೆ.
  Published by:renukadariyannavar
  First published: