ಎಲ್ಲರಿಗೂ ಅವರವರ ಜೀವಿತಾವಧಿಯಲ್ಲಿ ಫಾರಿನ್ ಟ್ರಿಪ್ (Foreign Trip) ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಭಾರತೀಯರಂತೂ (India) ಪಕ್ಕದಲ್ಲಿರುವ ಶ್ರೀಲಂಕಕ್ಕಾದರೂ (Sri Lanka) ಸರಿ ಫಾರಿನ್ ಪ್ರವಾಸ ಮಾಡಬೇಕು ಎಂದುಕೊಳ್ಳುತ್ತಾರೆ. ಅಮೆರಿಕಾ (America), ಬ್ರೆಜಿಲ್, ಅಲ್ಲಿ ಇಲ್ಲಿ ಅಂತಾ ಹೋಗೊದಕ್ಕೆ ಸಾಕಷ್ಟು ಖರ್ಚು-ವೆಚ್ಚ ತಗುಲುತ್ತದೆ. ಹೆಚ್ಚು ಖರ್ಚಾಗಬಾರದು ಆದರೆ ಹೊರ ದೇಶಕ್ಕೆ ಹೋಗಬೇಕು ಅನ್ನುವರಿಗೆ ಉತ್ತಮ ಆಯ್ಕೆ ಅಂದರೆ ಅದು ಥೈಲ್ಯಾಂಡ್ (Thailand). ಪ್ರಪಂಚದ ಪ್ರವಾಸಿಗರನ್ನು ಅತಿ ಹೆಚ್ಚಾಗಿ ಸೆಳೆಯುವ ದೇಶಗಳಲ್ಲಿ ಥೈಲ್ಯಾಂಡ್ ಮುಂಚೂಣಿಯಲ್ಲಿದೆ. ಬಜೆಟ್ ಸ್ನೇಹಿ ವಿದೇಶ ಪ್ರವಾಸ ಮಾಡುವವರು ನಿಸ್ಸಂದೇಹವಾಗಿ ಥೈಲ್ಯಾಂಡ್ಗೆ ಹೋಗಬಹುದು. ಹೇಗಿದ್ರೂ ಬೇಸಿಗೆ ರಜೆ ಸಂದರ್ಭ, ಎಲ್ಲಾದರೂ ಹೋಗಬೇಕು ಅಂತಿದ್ದರೆ ಥೈಲ್ಯಾಂಡ್ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ IRCTC, ಪ್ರಾದೇಶಿಕ ಕಛೇರಿ, ಪಾಟ್ನಾವು ಒಂದು ಬಂಪರ್ ಆಫರ್ ಅನ್ನು ಹೊರಡಿಸಿದೆ.
IRCTC ಇಂದ ಬಂಪರ್ ಆಫರ್
ಹೌದು, IRCTC, ಪ್ರಾದೇಶಿಕ ಕಛೇರಿ, ಪಾಟ್ನಾವು 'ಥ್ರಿಲ್ಲಿಂಗ್ ಥೈಲ್ಯಾಂಡ್ʼ ಎಂಬ ಟೂರ್ ಪ್ಯಾಕೇಜ್ ಅನ್ನು ಪ್ರವಾಸಿಗರಿಗೆ ಹೊರಡಿಸಿದ್ದು, ಕಡಿಮೆ ಹಣದಲ್ಲಿ ಥೈಲ್ಯಾಂಡ್‌ಗೆ ಹೋಗುವ ವಿಶೇಷ ಆಫರ್ ನೀಡಿದೆ. ಅಂದರೆ ಈ ಪ್ಯಾಕೇಜ್ ಅಡಿಯಲ್ಲಿ ಓರ್ವ ವ್ಯಕ್ತಿ 52,350 ರೂಪಾಯಿಯಲ್ಲಿ 6-ದಿನದ ಥೈಲ್ಯಾಂಡ್-ಬ್ಯಾಂಕಾಕ್ ಪ್ರವಾಸವನ್ನು ಮಾಡಿ ಬರಬಹುದು.
'ಥ್ರಿಲ್ಲಿಂಗ್ ಥೈಲ್ಯಾಂಡ್' ಪ್ಯಾಕೇಜ್‌ನಲ್ಲಿ ಏನಿದೆ?
* ಇದೇ ಎಪ್ರಿಲ್ 25 ರಿಂದ ಪ್ರವಾಸ ಆರಂಭವಾಗುತ್ತದೆ, ಪ್ಯಾಕೇಜ್ ಪ್ರಕಾರ ಪ್ರವಾಸವು 5 ರಾತ್ರಿ ಮತ್ತು 6 ಹಗಲನ್ನು ಒಳಗೊಂಡಿರುತ್ತದೆ.
* ಇಂಡಿಗೋ ಏರ್‌ಲೈನ್ಸ್‌ನಲ್ಲಿ ಪಾಟ್ನಾ-ಬ್ಯಾಂಕಾಕ್-ಪಾಟ್ನಾ ಮಾರ್ಗವಾಗಿ ತೆರಳಲಾಗುತ್ತದೆ.
* ಥ್ರಿಲ್ಲಿಂಗ್ ಥೈಲ್ಯಾಂಡ್ ತೆಗೆದುಕೊಂಡವರು ಬ್ಯಾಂಕಾಕ್, ಥೈಲ್ಯಾಂಡ್, ಪಟ್ಟಾಯ, ಕೋರಲ್ ಐಸ್‌ಲ್ಯಾಂಡ್ ಅಲ್ಲಿ ಸುತ್ತಾಡಿ ಬರಬಹುದು.
* 3 ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ.
* 04 ಉಪಹಾರಗಳು + 04 ಊಟಗಳು + 05 ರಾತ್ರಿಯ ಊಟಗಳು ಪ್ರಯಾಣದ ಪ್ರಕಾರ ಲಭ್ಯವಿರುತ್ತದೆ.
* ಪಟ್ಟಾಯದಲ್ಲಿ ಕೋರಲ್ ಐಲ್ಯಾಂಡ್ ಮತ್ತು ಅಲ್ಕಾಜರ್ ಶೋವನ್ನು ನೋಡಬಹುದು.
* ಬ್ಯಾಂಕಾಕ್‌ನಲ್ಲಿ ಮೆರೈನ್ ಪಾರ್ಕ್‌ನಲ್ಲಿ ಸಫಾರಿ ಹೋಗಬಹುದು. ಮತ್ತು ಗೋಲ್ಡನ್ ಬುದ್ಧ ಮತ್ತು ಮಾರ್ಬಲ್ ಬುದ್ಧ ಪ್ರತಿಮೆ ನೋಡಬಹುದು.
* ಪ್ರವಾಸದ ಸಂಪೂರ್ಣ ಅವಧಿಯಲ್ಲಿ ಸ್ಥಳೀಯ ಪ್ರವಾಸ ಮಾರ್ಗದರ್ಶಿ ಪ್ಯಾಕೇಜ್ ಪಡೆದಕೊಂಡವರ ಜೊತೆ ಇದ್ದು ಎಲ್ಲವನ್ನೂ ವಿವರಿಸುತ್ತಾರೆ.
* ಪ್ರಯಾಣ ವಿಮೆ (70 ವರ್ಷಗಳವರೆಗೆ) ನೀಡಲಾಗುತ್ತದೆ.
ಎಲ್ಲೆಲ್ಲಿಗೆ ಹೋಗಲಾಗುತ್ತದೆ?
25.04.2023 ಅಂದರೆ ಮೊದಲ ದಿನ ಪಾಟ್ನಾ- ಬ್ಯಾಂಕಾಕ್ ಪ್ರವಾಸ ಇರುತ್ತದೆ.
26.04.2023 - ಬ್ಯಾಂಕಾಕ್-ಪಟ್ಟಾಯ ಸುತ್ತಾಡಬಹುದು
27.04.2023 ಪಟ್ಟಾಯ- ಕೋರಲ್ ಐಲ್ಯಾಂಡ್ ಪ್ರವಾಸ
28 ರಿಂದ 29ರವರೆಗೆ - ಬ್ಯಾಂಕಾಕ್ ಪ್ರವಾಸ
ಕೊನೆ ದಿನದಂದು ಬ್ಯಾಂಕಾಕ್ ಮತ್ತು ಪಟ್ಟಾಯ ಪ್ರವಾಸ
ಸೂಚನೆಗಳು
- ಒಮ್ಮೆ ಬುಕ್ ಮಾಡಿದ ನಂತರ ಪ್ಯಾಕೇಜ್ ಹಣವನ್ನು ಮರುಪಾವತಿಸಲಾಗುವುದಿಲ್ಲ.
- ಲಭ್ಯತೆಗೆ ಅನುಗುಣವಾಗಿ ಹೋಟೆಲ್‌ಗಳು ಬದಲಾಗಬಹುದು.
- ಥೈಲ್ಯಾಂಡ್‌ನ ಹೋಟೆಲ್‌ಗಳಲ್ಲಿ ಸಾಮಾನ್ಯ ಉಪಹಾರ ಸಮಯವು 06.00 - 10.00 am ಆದ್ದರಿಂದ ಅದಕ್ಕೆ ಹೊಂದಿಕೊಳ್ಳಬೇಕು.
- ವಿಮಾನ ದರಗಳು ಮತ್ತು ತೆರಿಗೆಗಳನ್ನು ಸೂಚಿಸಿದ ದಿನಾಂಕದಂದು ಲೆಕ್ಕಹಾಕಲಾಗುತ್ತದೆ ಮತ್ತು ತೆರಿಗೆಗಳು ಅಥವಾ ವಿಮಾನ ದರಗಳಲ್ಲಿನ ಹೆಚ್ಚಳವನ್ನು ಗ್ರಾಹಕರು ಭರಿಸಬೇಕಾಗುತ್ತದೆ.
- ನಿಮ್ಮ ಪಾಸ್‌ಪೋರ್ಟ್ ಬಗ್ಗೆ ತಿಳಿದುಕೊಂಡಿರಬೇಕು.
- ಬುಕಿಂಗ್ ಸಮಯದಲ್ಲಿಯೇ 100% ಪಾವತಿ ಮಾಡಬೇಕು.
- ಬುಕಿಂಗ್ ಮತ್ತು ಪಾವತಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ, ದೃಢೀಕರಣ ಪ್ರವಾಸ ವೋಚರ್ ಅನ್ನು ನೀಡಲಾಗುತ್ತದೆ.
- ಬ್ಯಾಂಕ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
- ಬುಕಿಂಗ್ ಅನ್ನು ರದ್ದುಗೊಳಿಸುವ ಹಕ್ಕನ್ನು IRCTC ಹೊಂದಿರುತ್ತದೆ.
ಈ ಮೇಲಿನ ನಿಯಮಗಳ ಜೊತೆ ನಿಮಗೆ ಒಪ್ಪಿಗೆ ಇದ್ದರೆ ಇಂದೇ ಬುಕ್ ಮಾಡಿ ಥೈಲ್ಯಾಂಡ್ ಪ್ರವಾಸಕ್ಕೆ ರೆಡಿ ಆಗಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ