ಲೈಫ್ ಸ್ಟೈಲ್

  • associate partner

IPL 2020 Points Table: ಸೋತರೂ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಉಳಿಸಿಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

ಮುಂಬೈ ಇಂಡಿಯನ್ಸ್​ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಎರಡಲ್ಲಿ ಸೋತಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಡೆಲ್ಲಿ, ಕೆಕೆಆರ್​ ಆರ್​ಸಿಬಿ ತಲಾ ಆರು ಅಂಕ ಪಡೆದು ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

news18-kannada
Updated:October 8, 2020, 7:49 AM IST
IPL 2020 Points Table: ಸೋತರೂ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಉಳಿಸಿಕೊಂಡ ಚೆನ್ನೈ ಸೂಪರ್​ ಕಿಂಗ್ಸ್​
ಧೋನಿ
  • Share this:
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್​ಗಳ ಭರ್ಜರಿ ಜಯ ಸಾಧಿಸಿದೆ. 168 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಸಿಎಸ್​ಕೆ ಬಾಟ್ಸ್​ಮನ್​ಗಳು ಕೆಕೆಆರ್ ಬೌಲರುಗಳ ಭರ್ಜರಿ ಬೌಲಿಂಗ್ ಮುಂದೆ ಮಂಡಿಯೂರಿದರು. ಈ ಮೂಲಕ ಚೆನ್ನೈ ಟೂರ್ನಿಯ ನಾಲ್ಕನೇ ಸೋಲನುಭವಿಸುವಂತಾಯಿತು. ಆದರೆ ಅಂಕಪಟ್ಟಿಯಲ್ಲಿ ಸಿಎಸ್​ಕೆ ಐದನೇ ಸ್ಥಾನವನ್ನೇ ಉಳಿಸಿಕೊಂಡಿದೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ.  

ಮುಂಬೈ ಇಂಡಿಯನ್ಸ್​ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಎರಡಲ್ಲಿ ಸೋತಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಡೆಲ್ಲಿ, ಕೆಕೆಆರ್​ ಆರ್​ಸಿಬಿ ತಲಾ ಆರು ಅಂಕ ಪಡೆದು ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಸಿಎಸ್​ಕೆ, ಹೈದರಾಬಾದ್​ ಹಾಗೂ ರಾಜಸ್ಥಾನ, ಸಿಎಸ್​ಕೆ ನಾಲ್ಕು ಅಂಕ ಗಳಿಸಿ ನಂತರದ ಮೂರು ಸ್ಥಾನಗಳಲ್ಲಿವೆ. ಕಿಂಗ್ಸ್​ ಇಲವೆನ್ ಪಂಜಾಬ್  ಎರಡು ಅಂಕ ಪಡೆಯುವ ಮೂಲಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 

ಚೆನ್ನೈ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರಲು ಕಾರಣ ರನ್​ ರೇಟ್​. ಚೆನ್ನೈ, ಹೈದರಾಬಾದ್​ ಹಾಗೂ ರಾಜಸ್ಥಾನ ಗಳಿಸಿರುವುದು ತಲಾ ನಾಲ್ಕು ಅಂಕವಾದರೂ ರನ್​ರೇಟ್​ನಲ್ಲಿ ಚೆನ್ನೈ ಮುಂದಿದೆ. ಹೀಗಾಗಿ, ಅಂಕಟ್ಟಿಯಲ್ಲಿ ಐದನೇ ಸ್ಥಾನ ಕಾಯ್ದುಕೊಂಡಿದೆ.






ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಕೈಯ್ಯಲ್ಲಿದೆ. ಐದು ಪಂದ್ಯಗಳಿಂದ ಅವರು 302 ರನ್​ ಕಲೆ ಹಾಕಿದ್ದಾರೆ. ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ 4ವಿಕೆಟ್​ ಪಡೆಯುವ ಮೂಲಕ ರಬಾಡ ವಿಕೆಟ್​ ತೆಗೆದ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ಈ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.
Published by: Rajesh Duggumane
First published: October 8, 2020, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading