• Home
  • »
  • News
  • »
  • lifestyle
  • »
  • Cactus Juice: ಕ್ಯಾಕ್ಟಸ್​ ಜ್ಯೂಸ್​ನಿಂದ ಸುಧಾರಿಸುತ್ತೆ ಕರುಳಿನ ಆರೋಗ್ಯ, ಕ್ಯಾನ್ಸರ್ ಕೋಶಗಳ ಬೆಳವಣಿಗೆಯೂ ನಿಲ್ಲುತ್ತೆ!

Cactus Juice: ಕ್ಯಾಕ್ಟಸ್​ ಜ್ಯೂಸ್​ನಿಂದ ಸುಧಾರಿಸುತ್ತೆ ಕರುಳಿನ ಆರೋಗ್ಯ, ಕ್ಯಾನ್ಸರ್ ಕೋಶಗಳ ಬೆಳವಣಿಗೆಯೂ ನಿಲ್ಲುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಕ್ಯಾಕ್ಟಸ್​ಗಳು ಭಾರತದಲ್ಲಿಯೂ ಕಂಡು ಬರುತ್ತವೆ. ಹಲವು ಜನರು ಕ್ಯಾಕ್ಟಸ್ನ್ನು ಶೋ ಪೀಸ್ ಆಗಿ ಇಡುತ್ತಾರೆ. ಇನ್ನು ಕೆಲವರು ಕ್ಯಾಕ್ಟಸ್​ನ್ನು ತೋಟದಲ್ಲಿ ಕೇವಲ ಪ್ರದರ್ಶನ ಸಸ್ಯವಾಗಿ ನೆಡುತ್ತಾರೆ. ಆದರೆ ಕ್ಯಾಕ್ಟಸ್ ಸೇವನೆ ಹಲವು ರೀತಿಯ ಆರೋಗ್ಯ ಪ್ರಯೋಜನ ನೀಡುತ್ತದೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ.

ಮುಂದೆ ಓದಿ ...
  • Share this:

    ಹಾಥಾರ್ನ್ ಅಂದ್ರೆ ಕ್ಯಾಕ್ಟಸ್ (Cactus), ಇದು ಒಣ ಪ್ರದೇಶ (Dry Place) ಮತ್ತು ಮರುಭೂಮಿಗಳಲ್ಲಿ ಹೆಚ್ಚಾಗಿ ಬೆಳೆಯುವ ಸಸ್ಯ ಆಗಿದೆ. ಇದು ಬೆಳೆಯಲು ಹೆಚ್ಚು ಬೆಳಕು (Light) ಮತ್ತು ಕನಿಷ್ಠ ಪ್ರಮಾಣದ ನೀರು (Water) ಬೇಕು. ಪ್ರಪಂಚದಾದ್ಯಂತ (World) ಅನೇಕ ಜಾತಿಯ ಹಾಥಾರ್ನ್ ಸಸ್ಯಗಳಿರುವುದನ್ನು ನೀವು ಕಾಣಬಹುದು. ಅವುಗಳಲ್ಲಿ ಕೆಲವು ಕ್ಯಾಕ್ಟಸ್ ಗಳು ಭಾರತದಲ್ಲಿಯೂ ಕಂಡು ಬರುತ್ತವೆ. ಹಲವು ಜನರು ಕ್ಯಾಕ್ಟಸ್ ನ್ನು ಶೋ ಪೀಸ್ ಆಗಿ ಇಡುತ್ತಾರೆ. ಇನ್ನು ಕೆಲವರು ಕ್ಯಾಕ್ಟಸ್ ನ್ನು ತೋಟದಲ್ಲಿ ಕೇವಲ ಪ್ರದರ್ಶನ ಸಸ್ಯವಾಗಿ ನೆಡುತ್ತಾರೆ. ಆದರೆ ಕ್ಯಾಕ್ಟಸ್ ಸೇವನೆ ಹಲವು ರೀತಿಯ ಆರೋಗ್ಯ ಪ್ರಯೋಜನ ನೀಡುತ್ತದೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ.


    ಕಳ್ಳಿ ಮುಳ್ಳಿನ ಜಾತಿಗೆ ಸೇರುವ ಕ್ಯಾಕ್ಟಸ್ ಗಿಡ
    ಕಳ್ಳಿ ಮುಳ್ಳಿನ ಜಾತಿಗೆ ಸೇರುವ ಈ ಕ್ಯಾಕ್ಟಸ್ ಗಿಡವು ನಿಮಗೆ ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ಕ್ಯಾಕ್ಟಸ್ ರಸದ ಸೇವನೆ ಹೆಚ್ಚು ಜನಪ್ರಿಯ ಆಗಿಲ್ಲ. ಇದರ ರಸ ಸೇವನೆ ಮಾಡುವುದು ಹಲವು ಪ್ರಯೋಜನ ನೀಡುತ್ತದೆ. ಆದರೆ ಈ ಬಗ್ಗೆ ಅನೇಕ ಜನರು ತಿಳಿಯದೇ ಇರಬಹುದು. ಅಥವಾ ಈಗ ಮೊದಲ ಬಾರಿಗೆ ತಿಳಿದಿರಬಹುದು. ಆದರೆ ಕಳ್ಳಿ ಜ್ಯೂಸ್ ಅಂಗಡಿಯಲ್ಲಿ ಸುಲಭವಾಗಿ ಸಿಗುತ್ತದೆ.


    ವೆಬ್ ಮೆಡ್ ಹೇಳುವ ಪ್ರಕಾರ, ಕ್ಯಾಕ್ಟಸ್ ಗಿಡ ಅನೇಕ ಔಷಧೀಯ ಗುಣ ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ಇ, ಎ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಒಮೆಗಾ -3 ಮತ್ತು ಉರಿಯೂತ ನಿವಾರಕ ಅಂಶಗಳು ಹೇರಳವಾಗಿವೆ.


    ಇದನ್ನೂ ಓದಿ: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?


    ಹೃದ್ರೋಗ, ಮಧುಮೇಹದಂತ ಅನೇಕ ಆರೋಗ್ಯ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಇನ್ನೂ ಅನೇಕ ಗಂಭೀರ ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಜಂಟಿ ಮೂಳೆ ನೋವಿಗೆ ಪರಿಹಾರ
    ಎನ್ ಸಿಬಿಐ ಹೇಳುವ ಪ್ರಕಾರ, ಕಳ್ಳಿ ರಸವು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅಂಶಗಳನ್ನು ಹೊಂದಿದೆ. ವಾಸ್ತವದಲ್ಲಿ ವಿಟಮಿನ್ ಎ, ಸಿ ಮತ್ತು ಬಿ 2 ಇದರಲ್ಲಿ ಹೇರಳ ಆಗಿದೆ. ಇದು ರುಮಟಾಯ್ಡ್ ಸಂಧಿವಾತ ರೋಗಿಗಳಿಗೆ ಸಾಕಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು  ಕೀಲುಗಳಲ್ಲಿನ ನೋವು ಮತ್ತು ಬಿಗಿತ ಕಡಿಮೆ ಮಾಡುತ್ತದೆ.


    ಕರುಳಿನ ಆರೋಗ್ಯ ಸುಧಾರಿಸುತ್ತದೆ
    ಕ್ಯಾಕ್ಟಸ್ ರಸ ಸೇವನೆ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆ ಉತ್ತೇಜಿಸುತ್ತದೆ. ಇದನ್ನು ಡೈವರ್ಟಿಕ್ಯುಲೈಟಿಸ್ ಮತ್ತು ಕೊಲೈಟಿಸ್ ಚಿಕಿತ್ಸೆಯಲ್ಲಿ ಬಳಸಬಹುದು. ಕ್ಯಾಕ್ಟಸ್ ರಸವು ನೈಸರ್ಗಿಕ ವಿರೇಚಕವಾಗಿದೆ. ಹೀಗಾಗಿ ಇದು ಮಲಬದ್ಧತೆ ಸಮಸ್ಯೆ ನಿವಾರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮೂತ್ರನಾಳ ಮತ್ತು ಮೂತ್ರಕೋಶದ ಉರಿಯೂತ ಕಡಿಮೆ ಮಾಡುತ್ತದೆ.


    ತೂಕ ಇಳಿಕೆಗೆ ಸಹಕಾರಿ
    ಎನ್ ಐಎಚ್ ಪ್ರಕಾರ, ಕ್ಯಾಕ್ಟಸ್ ನಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಇದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಂತಹ ವೇಳೆ ನೀವು ತೂಕ ಇಳಿಸಲು  ಕ್ಯಾಕ್ಟಸ್ ಅನ್ನು ಆಹಾರದಲ್ಲಿ ಸೇರಿಸುವುದು ನಿಮಗೆ ಪ್ರಯೋಜನ ನೀಡುತ್ತದೆ.


    ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ
    ಕ್ಯಾಕ್ಟಸ್ ರಸವು ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ದೇಹದಲ್ಲಿ ಕ್ಯಾನ್ಸರ್ ಕೋಶ ಬೆಳವಣಿಗೆ ತಡೆಯುತ್ತದೆ. ಉತ್ತಮ ಪ್ರಮಾಣದ ವಿಟಮಿನ್ ಸಿ ಸಹ ಇದರಲ್ಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಮಧುಮೇಹ ನಿಯಂತ್ರಿಸುತ್ತದೆ
    ಮಧುಮೇಹದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಸಮಸ್ಯೆ ತಡೆಯುತ್ತದೆ. ಕಳ್ಳಿ ರಸ ಪ್ರಯೋಜನಕಾರಿ ಆಗಿದೆ. ಫೈಬರ್ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ. ಈ ವೇಳೆ ಮಧುಮೇಹಿಗಳು ಕಳ್ಳಿ ರಸ ಸೇವಿಸಬಹುದು.


    ನಿದ್ರಾಹೀನತೆ ಗುಣಪಡಿಸುತ್ತದೆ
    ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುತ್ತದೆ ಕಳ್ಳಿ ರಸ. ಕ್ಯಾಕ್ಟಸ್‌ ನಲ್ಲಿರುವ ಪೋಷಕಾಂಶಗಳು ಮತ್ತು ವಿಟಮಿನ್‌ ಗಳು ಮೆದುಳಿಗೆ ರಕ್ತ ಪರಿಚಲನೆ ಸುಧಾರಿಸಲು ಮತ್ತು ನರಮಂಡಲ ಸಮತೋಲನಗೊಳಿಸಲು ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


    ಹೃದಯಕ್ಕೆ ಆರೋಗ್ಯಕರ
    ಕಳ್ಳಿಯಲ್ಲಿರುವ ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಿಸುತ್ತದೆ. ಹೃದಯಕ್ಕೆ ಪ್ರಯೋಜನಕಾರಿಯಾದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿ.

    Published by:renukadariyannavar
    First published: