HOME » NEWS » Lifestyle » INTERNATIONAL NURSES DAY 2021 HISTORY AND SIGNIFICANCE STG LG

International Nurses Day 2021: ನರ್ಸ್​​ಗಳ ಅವಿರತ ಸೇವೆಗೆ ನಮ್ಮದೊಂದು ಸೆಲ್ಯೂಟ್

ನರ್ಸ್‍ಗಳು ಉತ್ತಮ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ನರ್ಸ್‍ಗಳು ತಮ್ಮ ವೃತ್ತಿಪರತೆ ಮೆರೆಯುವಲ್ಲಿ ಹಾಗೂ ನರ್ಸ್‍ಗಳಿಗೆ ಸಲಹೆ ಸೂಚನೆ, ಮಾರ್ಗದರ್ಶನ ನೀಡುವಲ್ಲಿ ರಾಷ್ಟ್ರೀಯ ಶುಶ್ರೂಷಕರ ಸಂಘದ ಬಹುಪಾಲು ಶ್ರಮವಿದೆ ಎಂಬುದನ್ನು ಅರಿಯಬೇಕಾಗುತ್ತದೆ.

news18-kannada
Updated:May 12, 2021, 11:29 AM IST
International Nurses Day 2021: ನರ್ಸ್​​ಗಳ ಅವಿರತ ಸೇವೆಗೆ ನಮ್ಮದೊಂದು ಸೆಲ್ಯೂಟ್
ನರ್ಸ್​ಗಳು
  • Share this:
ನರ್ಸ್‍ಗಳು ಆರೋಗ್ಯದ ನಾಡಿಮಿಡಿತ, ಆರೈಕೆಯ ದೇವಾನುದೇವತೆಯರು. ದಾದಿಯರು, ಶುಶ್ರೂಷಕರು ಹೀಗೆ ನಾನಾ ಹೆಸರಿದ್ದರೂ ಅವರ ಉದ್ದೇಶ ಮಾತ್ರ ಒಂದೇ.. ಅದುವೇ ಜನರ ಆರೋಗ್ಯ ಕಾಳಜಿ. ರೋಗಿಗಳಿಗೆ ಒಂದು ಸಣ್ಣ ಮಾತ್ರೆ ಕೊಡುವುದರಿಂದ ಹಿಡಿದು ದೊಡ್ಡ ದೊಡ್ಡ ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುವ ಇವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವೇ. ದಿನಗಟ್ಟಲೆ ನೂರಾರು ರೋಗಿಗಳ ಆರೈಕೆ ಮಾಡುತ್ತಲೇ ಇರುವ ನರ್ಸ್‍ಗಳು ಕೊರೋನಾ ವೇಳೆ ಮನೆ ತೊರೆದು ಜೀವವನ್ನು ಪಣಕ್ಕಿಟ್ಟು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಇವರ ದಿನ. ಅಂದರೆ ಇಂದು ಅಂತಾರಾಷ್ಟ್ರೀಯ ಶುಶ್ರೂಷಕರ ದಿನ. ನಾವು ಇಂದಿನ ಸಂದಿಗ್ಧ ಸಮಯದಲ್ಲಿ ಶ್ರಮ, ಪ್ರಯತ್ನ, ಬದ್ಧತೆಯಿಂದ ಕಾರ್ಯನಿರ್ವಹಿಸುವ ಪ್ರತಿಯೊಬ್ಬರನ್ನು ಗೌರವಿಸಲೇಬೇಕು. ಇದು ನಮ್ಮ ಕರ್ತವ್ಯವೂ ಹೌದು.

ಸುದ್ದಿಗಾಗಿ ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿಯಾಗಬೇಡ, ಸದ್ದಿಲ್ಲದೇ ಸೇವೆ ಮಾಡು ಎಂಬ ಮಹಾತಾಯಿ ಮದರ್ ಥೆರೇಸಾ ಅವರ ಮಾತಿಗೆ ಹೇಳಿ ಮಾಡಿಸಿದವರು ನರ್ಸ್‍ಗಳು ಎಂದರೆ ತಪ್ಪಾಗಲಾರದು. ಈ ವೇಳೆ ಇವರಿಗಾಗಿ ಇರುವ ದಿನದ ಮಹತ್ವವನ್ನು ಅರಿಯುವುದು ಬಹುಮುಖ್ಯ.

ಅಂತಾರಾಷ್ಟ್ರೀಯ ಶುಶ್ರೂಷಕರ ದಿನದ ಮಹತ್ವ

ಶುಶ್ರೂಷೆಯು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ಸೇವೆ ಎಂಬುದನ್ನು ನಾವು ಎಂದೂ ಮರೆಯಬಾರದು. ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಅವರ ತತ್ವ ಸಿದ್ದಾಂತಗಳು ಮಿಲೇನಿಯಮ್ ಡೆವಲಪ್‍ಮೆಂಟ್ ಗುರಿಗಳನ್ನು ಹಾಗೂ ಪ್ರಪಂಚದ ಆರೋಗ್ಯದ ಗುರಿ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಈ ಸಂಬಂಧ ರೋಗಿಗಳ ಆರೈಕೆಗೆ ಸಂಬಂಧಿಸಿದಂತೆ ಹಲವು ತರಬೇತಿಗಳನ್ನು ನೀಡಲಾಗಿದೆ.

ಬೆಂಗಳೂರಲ್ಲಿ ಬಹುಶಃ ಎರಡ್ಮೂರು ವಾರಗಳಲ್ಲಿ ಸೋಂಕು ಹತೋಟಿಗೆ ಬರಲಿದೆ; ಆರೋಗ್ಯ ಸಚಿವ ಸುಧಾಕರ್

ನರ್ಸ್‍ಗಳು ಉತ್ತಮ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ನರ್ಸ್‍ಗಳು ತಮ್ಮ ವೃತ್ತಿಪರತೆ ಮೆರೆಯುವಲ್ಲಿ ಹಾಗೂ ನರ್ಸ್‍ಗಳಿಗೆ ಸಲಹೆ ಸೂಚನೆ, ಮಾರ್ಗದರ್ಶನ ನೀಡುವಲ್ಲಿ ರಾಷ್ಟ್ರೀಯ ಶುಶ್ರೂಷಕರ ಸಂಘದ ಬಹುಪಾಲು ಶ್ರಮವಿದೆ ಎಂಬುದನ್ನು ಅರಿಯಬೇಕಾಗುತ್ತದೆ. ಆರೋಗ್ಯ ಆರೈಕೆಯ ರೂಢಿಗಳ ಬಲವರ್ಧನೆಗೊಳಿಸುವಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಜೋಡಿಸಿವೆ.

ಅಂತಾರಾಷ್ಟ್ರೀಯ ಶುಶ್ರೂಷಕರ ದಿನ ಹುಟ್ಟಿದ್ದು ಹೇಗೆ?ವೈದ್ಯಕೀಯ ಕ್ಷೇತ್ರದ ಬುನಾದಿಗಳಾಗಿರುವ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ನರ್ಸ್‍ಗಳಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ಯು.ಎಸ್. ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಡೊರೊಥಿ ಸದಲ್ಯಾಂಡ್, ಅಧ್ಯಕ್ಷ ಡ್ವೈಟ್ ಡಿ. ಐಸೆನ್‍ಹೋವರ್ ಅವರೊಂದಿಗೆ ಸಂವಹನ ನಡೆಸಿ 1953ರಿಂದ ದಾದಿಯರ ದಿನವನ್ನಾಗಿ ಆಚರಿಸಲು ಉದ್ದೇಶಿಸಿತು. ಆದರೆ ಇವರ ಮನವಿಯನ್ನು ಅಧ್ಯಕ್ಷರು ಮಾನ್ಯ ಮಾಡಲಿಲ್ಲ. 1965 ರಿಂದ ಅಂತಾರಾಷ್ಟ್ರೀಯ ನರ್ಸ್ ಕೌನ್ಸಿಲ್ ಈ ದಿನವನ್ನು ಆಚರಿಸಲು ಶುರು ಮಾಡಿತು. ಕೊನೆಗೂ, 1974ರಂದು ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಘೋಷಿಸಿತು. ಜೊತೆಗೆ ಈ ದಿನ ಜಗತ್ತಿನ ಶ್ರಶ್ರೂಷಕಿ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವೂ ಹೌದು. ಇವರ ಜನ್ಮದಿನದ ಸವಿ ನೆನಪಿಗಾಗಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತಿದೆ.
Youtube Video

ಯಾರಿದು ಫ್ಲೋರೆನ್ಸ್ ನೈಟಿಂಗೇಲ್..?

ಫ್ಲೋರೆನ್ಸ್ ನೈಟಿಂಗೇಲ್ ಅವರನ್ನು ಬ್ರಿಟಿಷರ ಶುಶ್ರೂಷಕಿ ಎಂದೇ ಕರೆಯಲಾಗುತ್ತದೆ. ನೈಟಿಂಗೇಲ್ ಒಬ್ಬ ಸಾಮಾಜಿಕ ಕಾರ್ಯಕರ್ತೆ. ಆದರೆ ಯುದ್ಧದ ಅವಧಿಯಲ್ಲಿ ದಾದಿಯರ ತಂಡದ ನೇತೃತ್ವ ಹೊತ್ತು ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ ಇವರು 1860ರಲ್ಲಿ ದಾದಿಯರಿಗಾಗಿ ಲಂಡನ್ ಸೈನ್ಸ್ ಆಸ್ಪತ್ರೆಯಲ್ಲಿ ನೈಟಿಂಗೇಲ್ ತರಬೇತಿ ಶಾಲೆಯನ್ನು ಆರಂಭಿಸಿದರು.
Published by: Latha CG
First published: May 12, 2021, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories