International Day of Forests 2022: ಅರಣ್ಯಗಳ ಪ್ರಾಮುಖ್ಯತೆ ಏನು ಗೊತ್ತಾ?, ನಾವು ಅವುಗಳನ್ನು ಹೇಗೆ ರಕ್ಷಿಸಬಹುದು ನೋಡಿ

ಇಂದು (ಮಾರ್ಚ್‌ 21) ಅಂತಾರಾಷ್ಟ್ರೀಯ ಅರಣ್ಯ ದಿನ. ಹೌದು, ಪ್ರತಿ ವರ್ಷ, ಮಾರ್ಚ್ 21 ಅನ್ನು ಅಂತಾರಾಷ್ಟ್ರೀಯ ಅರಣ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವಸಂಸ್ಥೆ 2012ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಆಚರಿಸಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗಿಡ - ಮರಗಳು ನಮ್ಮ ಭೂಮಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭೂಮಿ ತಾಯಿಯನ್ನು ಕಾಪಾಡಲು ಸಹ ಸಸ್ಯ ಸಂಪನ್ಮೂಲಗಳನ್ನು ಕೂಡಿದ ಅರಣ್ಯ ಸಂಪತ್ತು ತುಂಬಾ ಮುಖ್ಯ. ಇಂದು (ಮಾರ್ಚ್‌ 21) ಅಂತಾರಾಷ್ಟ್ರೀಯ ಅರಣ್ಯ ದಿನ (International Day of Forests). ಹೌದು, ಪ್ರತಿ ವರ್ಷ, ಮಾರ್ಚ್ 21 (March 21) ಅನ್ನು ಅಂತಾರಾಷ್ಟ್ರೀಯ ಅರಣ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವಸಂಸ್ಥೆ 2012ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಆಚರಿಸಿತು. ಅಂತಾರಾಷ್ಟ್ರೀಯ ಅರಣ್ಯ ದಿನ ನಮ್ಮ ಜೀವನ ಚಕ್ರವನ್ನು ಸಮತೋಲನಗೊಳಿಸಲು ಕಾಡುಗಳ (Forest) ಮೌಲ್ಯಗಳು, ಮಹತ್ವ ಮತ್ತು ಕೊಡುಗೆಗಳ ಬಗ್ಗೆ ವಿವಿಧ ಸಮುದಾಯಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಇನ್ನು, ಅರಣ್ಯಗಳ ಪ್ರಾಮುಖ್ಯತೆ ಮತ್ತು ನಮ್ಮ ಪರಿಸರ ಹಾಗೂ ಆರ್ಥಿಕತೆಯಲ್ಲಿ ಅದು ವಹಿಸುವ ಪಾತ್ರದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಸರ್ಕಾರಿ ಜಾಲಗಳು ಮತ್ತು ಖಾಸಗಿ ಸಂಸ್ಥೆಗಳು ಪ್ರತಿ ವರ್ಷ ಈ ದಿನದಂದು ಒಟ್ಟಾಗಿ ಕೆಲಸ ಮಾಡುತ್ತವೆ.

ಅಂದ ಹಾಗೆ, ಈ ಅಂತಾರಾಷ್ಟ್ರೀಯ ಅರಣ್ಯ ದಿನ, ಅರಣ್ಯ ಸಂರಕ್ಷಣೆ ಏಕೆ ಮಹತ್ವದ್ದಾಗಿದೆ ಎಂಬುದನ್ನು ನೀವು ಸಹ ತಿಳಿದುಕೊಳ್ಳಬೇಕು ಅಲ್ಲವೇ? ಇದರ ಜತೆಗೆ, ವ್ಯಕ್ತಿಗಳು ಹಾಗೂ ಸರ್ಕಾರಗಳು ಮರು ಅರಣ್ಯೀಕರಣವನ್ನು ಏಕೆ ಆದ್ಯತೆಯನ್ನಾಗಿ ಮಾಡಬೇಕು ಎಂಬುದಕ್ಕೆ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

1) ಜೀವನೋಪಾಯ ಮತ್ತು ಸುಸ್ಥಿರ ಆರ್ಥಿಕತೆ:

1.5 ಬಿಲಿಯನ್‌ಗೂ ಅಧಿಕ ಜನರು ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನು ನೇರವಾಗಿ ಅವಲಂಬಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಅರಣ್ಯದ ಪ್ರಮಾಣ ಕುಗ್ಗುತ್ತಿದ್ದಂತೆ, ಈ ಸಮುದಾಯಗಳ ಸಂಸ್ಕೃತಿ, ಸಂಪ್ರದಾಯ ಮತ್ತು ಉಳಿವಿಗೂ ಅಪಾಯವಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಇದನ್ನೂ ಓದಿ: World Environment Day: ವಿಶ್ವ ಪರಿಸರ ದಿನದಂದೇ ಉಡುಪಿಯಲ್ಲಿ ಮರಗಳ ಮಾರಣಹೋಮ

2) ಮನೆ ಮತ್ತು ಆಶ್ರಯ:

ಹೆಚ್ಚುವರಿಯಾಗಿ, 300 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗಲೂ ಸಹ ಕಾಡುಗಳಲ್ಲೇ ವಾಸಿಸುತ್ತಿದ್ದಾರೆ. ಈ ಹಿನ್ನೆಲೆ ಅರಣ್ಯ ಸಂಪತ್ತು ನಾಶವಾದರೆ, ಅವರು ತಮ್ಮ ಮನೆಯನ್ನು ಕಳೆದುಕೊಳ್ಳುತ್ತಾರೆ. ಮನೆ ಕಳೆದುಕೊಂಡ ಬಳಿಕ ಅವರು ನಿರಾಶ್ರಿತರಾಗುತ್ತಾರೆ. ಅಲ್ಲದೆ, ಇದರಿಂದ ಅವರ ಬಡತನ ಹೆಚ್ಚಾಗುತ್ತದೆ ಎಂಬುದು ಸಹ ಪ್ರಮುಖ ಅಂಶ.

3) ಆಹಾರ ಭದ್ರತೆ:

ಪ್ರಪಂಚದಾದ್ಯಂತ ಇರುವ ಜನರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳಿದ್ದಾರೆ. ಇವೆಲ್ಲವೂ ಹೆಚ್ಚಾಗಿ ಕಾಡಿನಲ್ಲೇ ದೊರೆಯುತ್ತದೆ. ಅಲ್ಲಿ ಸಿಗುವ ನಟ್ಸ್‌, ಅಣಬೆ, ಹಣ್ಣುಗಳನ್ನು ಬಳಸುವ ಮನುಷ್ಯರ ಹೊರತಾಗಿ, ಆಹಾರ ಮತ್ತು ಇತರ ಸಂಪನ್ಮೂಲಗಳಿಗಾಗಿ ನಾವು ಅವಲಂಬಿಸಿರುವ ಪ್ರಾಣಿಗಳನ್ನು ಸಹ ಕಾಡುಗಳು ಬೆಂಬಲಿಸುತ್ತವೆ. ಹೀಗೆ, ಅರಣ್ಯ ನಾಶವಾದಲ್ಲಿ ಜನರಲ್ಲಿ ಆಹಾರ ಅಭದ್ರತೆ ಉಂಟಾಗುತ್ತದೆ.

4) ಬರಗಳನ್ನು ತಡೆಯುತ್ತದೆ:

ಮರಗಳ ಬೇರುಗಳ ಜಾಲವನ್ನು ಹೊಂದಿರುವ ಕಾಡುಗಳು ಮತ್ತು ಟ್ರಾನ್ಸ್‌ಪಿರೇಷನ್ ಪ್ರಕ್ರಿಯೆಯು ಹವಾಮಾನದ ಮೇಲೆ ವಿಶೇಷವಾಗಿ ಮಳೆಯ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕಾದರೆ ಕಾಡುಗಳು ಸಂಮೃದ್ಧವಾಗಿರಬೇಕು.

5) ಭೂಮಿಯ ಥರ್ಮೋರೆಗ್ಯುಲೇಷನ್‌:

ನಮ್ಮ ಭೂಮಿಯು ವಿದ್ಯುತ್ ರಹಿತ ಹವಾನಿಯಂತ್ರಣವನ್ನು ಹೊಂದಿವೆ. ಹೌದು, ಅರಣ್ಯಗಳಲ್ಲಿನ ಮರಗಳು ತಾಪಮಾನವನ್ನು ನಿಯಂತ್ರಿಸುವಲ್ಲಿ, ನಮ್ಮ ಗ್ರಹವನ್ನು ತಂಪಾಗಿರಿಸಲು ಮತ್ತು ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

6) ಗಾಳಿಗೆ ತಡೆಗೋಡೆ:

ದಟ್ಟವಾದ ಮರಗಳ ಹೊದಿಕೆಯು ಬಲವಾದ ಗಾಳಿ ತಡೆಗೋಡೆಗಳಂತೆ ಕಾರ್ಯನಿರ್ವಹಿಸುವುದರಿಂದ ಅರಣ್ಯ ಪ್ರದೇಶಗಳ ಬಳಿ ಕೃಷಿ ಮಾಡುವ ರೈತರಿಗೆ ಸಹಾಯ ಮಾಡುತ್ತದೆ. ಈ ದಟ್ಟ ಮರಗಳಿಂದ ಗಾಳಿ ಮತ್ತು ಬಿರುಗಾಳಿಗಳಿಂದ ನಾಶವಾಗುವ ಇಳುವರಿಗಳನ್ನು ರಕ್ಷಿಸುತ್ತದೆ.

7) ಇಂಗಾಲದ ಹಿಮ್ಮುಖ ಹೊರಸೂಸುವಿಕೆ:

ನಾವು ಎಲ್ಲಿಯೂ ನಮ್ಮ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿಲ್ಲ. ಆದರೆ ಮರಗಳು, ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಮರಗಳ ದ್ಯುತಿಸಂಶ್ಲೇಷಣೆ ಕ್ರೀಯೆಯಿಂದ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಅನ್ನು ಮರಗಳು ಹೀರಿಕೊಂಡು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತಿದೆ.

8) ಆಮ್ಲಜನಕ:

ದ್ಯುತಿಸಂಶ್ಲೇಷಣೆಯ ವಿಷಯದ ಸಂದರ್ಭದಲ್ಲಿ, ಮರಗಳು ನಮ್ಮ ಅಕ್ಷರಶಃ ಜೀವ ರಕ್ಷಕಗಳಾಗಿವೆ. ಏಕೆಂದರೆ ಮರಗಳು ನಾವು ಉಸಿರಾಡುವ ಆಮ್ಲಜನಕವನ್ನು ನಮಗೆ ನೀಡುತ್ತವೆ. ಅರಣ್ಯನಾಶ ಹೆಚ್ಚಾಗುತ್ತಿರುವ ಹಾಗೆ, ಆಮ್ಲಜನಕವೂ ಕಡಿಮೆಯಾಗುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಲೇಬೇಕು.

ಇದನ್ನೂ ಓದಿ: ಹುಲಿ ಸಂತತಿ ಬೆಳೆಸಲು ಕಾಡನ್ನು ಬೆಳೆಸಿ ಎಂದು ಮನವಿ ಮಾಡಿದ ದರ್ಶನ್: ಇಲ್ಲಿದೆ ವಿಡಿಯೋ​..!

9) ಜೀವವೈವಿಧ್ಯತೆಯನ್ನು ಕಾಪಾಡುತ್ತದೆ:

ಭೂಮಿಯ ಮೇಲಿನ ಜೀವನವು ನಾವು ಪ್ರತಿದಿನ ನೋಡುವುದಕ್ಕಿಂತ ತುಂಬಾ ಹೆಚ್ಚು. ಹೆಚ್ಚಿನ ಪ್ರಾಣಿಗಳು ಮತ್ತು ಸಸ್ಯಗಳು ಕಾಡುಗಳಲ್ಲಿ (ಉಷ್ಣವಲಯ ಅಥವಾ ಸಮಶೀತೋಷ್ಣ ವಲಯಗಳಲ್ಲಿ) ಮಾತ್ರ ಬದುಕಬಲ್ಲವು. ಈ ಹಿನ್ನೆಲೆ ಪ್ರಪಂಚದಾದ್ಯಂತದ ಅನೇಕ ಪ್ರಭೇದಗಳ ಅಳಿವು ಮತ್ತು ಅಪಾಯಕ್ಕೆ ಅರಣ್ಯದ ನಷ್ಟವು ಕಾರಣವಾಗಿದೆ.

10) ಔಷಧಿ ಗಿಡಗಳ ಸಂರಕ್ಷಣೆ:

ಪೆಸಿಫಿಕ್ ಯೀವ್‌ ಮತ್ತು ಮೋರಿಂಗಾದಂತಹ ಅನೇಕ ಮರಗಳು ಔಷಧಿ ಮತ್ತು ಚಿಕಿತ್ಸಕ ಬಳಕೆಗಳಿಗೆ ನಿಧಿಗಳಾಗಿವೆ. ಈ ಮರಗಳು ಹೆಚ್ಚಾಗಿ ಕಾಡುಗಳಲ್ಲಿ ಕಂಡುಬರುತ್ತವೆ. ಇವು ಸಣ್ಣ ಸೋಂಕುಗಳಿಂದ ಹಿಡಿದು ಕೀಮೋಥೆರಪಿಯನ್ನು ಗುಣಪಡಿಸಲು ಸಹ ಒಂದು ಪಾತ್ರ ವಹಿಸುತ್ತದೆ ಎನ್ನುವ ಅಂಶವನ್ನು ನಾವು ಅರಿತುಕೊಳ್ಳಬೇಕು.
Published by:shrikrishna bhat
First published: