International Coffee Day: ಕಾಫಿ ಕುಡಿಯೊದಕ್ಕೂ ಒಂದು ಸಮಯವಿದೆ; ಯಾವಾಗ?

ಮತ್ತೊಂದು ವಿಚಾರವೆಂದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

ಕಾಫಿ

ಕಾಫಿ

 • Share this:
  ಒಂದೆಡೆ ವಿಪರೀತ ತಲೆನೋವು, ಮತ್ತೊಂದೆಡೆ ಆಫೀಸಿನಲ್ಲಿ ಬಿಟ್ಟು ಬಿಡದ ಕೆಲಸ, ಹೀಗಿರುವಾಗ ಮೈಂಡ್​ ಫ್ರೆಶ್​ ಮಾಡಲು ಒಂದು ಕಪ್​ ಕಾಫಿ ಕುಡಿದರೆ ಸಾಕು. ಎಲ್ಲಾ ತೊಂದರೆಗಳು ದೂರ ಓಡಿದಂತಾಗುತ್ತದೆ. ಹಾಗಾಗಿ ಹೆಚ್ಚಿನವರು ಒಂದು ಕಪ್​ ಕಾಫಿ ಕುಡಿಯಲು ಕಿಲೋ ಮೀಟರ್​ ಗಟ್ಟಲೇ ಹೋಗುವ ಪ್ರಸಂಗಗಳು ಇದೆ.  ಹೌದು. ಅನೇಕರಿಗೆ ಕಾಫಿ ಕುಡಿಯದಿದ್ದರೆ ಅಂದಿನ ದಿನ ಅಷ್ಟೇನು ಸರಿಯಾದಂತೆ ಅನಿಸುವುದಿಲ್ಲ. ಹಾಗಾಗಿ ಸರಿಯಾದ ಜಾಗ, ಇಷ್ಟವಾದ ಕಾಫಿ ಕುಡಿಯಲು ಎಷ್ಟೇ ದೂರವಾದರು ಕ್ರಮಿಸಿ ಕಾಫಿ ಸೇವಿಸುತ್ತಾರೆ. ಅಂದಹಾಗೆಯೇ. ಇಂದು ಅಂತರಾಷ್ಟ್ರೀಯ ಕಾಫಿ ದಿನ. ಕಾಫಿಗೆ ತನ್ನದೇ ಆದ ಮಹತ್ವವಿದೆ. ಅನೇಕರು ಅತಿಯಾದ ಕಾಫಿ ಸೇವಿಸಿದರೆ ಹಾನಿಕಾರವೆನ್ನುತ್ತಾರೆ. ಆದರೆ ಸರಿಯಾದ ಸಮಯ, ಇಂತಿಷ್ಟೇ ಕಾಫಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಯಾವ ಸಮಯ ಕಾಫಿ ಕುಡಿಯಬೇಕು? ಎಂಬದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ..

  ಅನೇಕರಿಗೆ ಬೆಳಗ್ಗೆ ಎದ್ದ ಕೂಡ ಕಾಫಿ ಕುಡಿಯಲೇ ಬೇಕು. ಇನ್ನು ಕೆಲವರು ಬೆಡ್​ ಕಾಫಿ ಕೊಡದಿದ್ದರೆ ರಂಪಾ ಮಾಡುತ್ತಾರೆ. ಆದರೆ ಬೆಳಗ್ಗಿನ ಜಾವ ಎದ್ದ ಕೂಡಲೆ ಕಾಫಿ ಕುಡಿಯುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಏಕೆಂದರೆ, ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್​ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್​ ಕಾರಣವಾಗುತ್ತದೆ.

  ಮತ್ತೊಂದು ವಿಚಾರವೆಂದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು.  ಅನೇಕರಿಗೆ ಸಂಜೆ ವೇಳೆ ಕಾಫಿ ಕುಡಿಯಲೇ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ತಡವಾಗಿ ಮಾತ್ರ ಕಾಫಿ ಕುಡಿಯಬಾರದು. ತಡವಾಗಿ ಕಾಫಿ ಕುಡಿದರೆ ಹಸಿವಾಗುತ್ತದೆ. ಇದರಿಂದ ಊಟದ ಸಮಯದಲ್ಲಿ ಸಮಸ್ತೆಯಾಗಬಹುದು. ಅಷ್ಟು ಮಾತ್ರವಲ್ಲ ರಾತ್ರಿ ಮಲಗುವ ಸಮಯದಲ್ಲೂ ಬದಲಾವಣೆ ಆಗಬಹುದು.

  ರಾತ್ರಿ ವೇಳೆ ಕಾಫಿ ಕುಡಿಯುವುದು ಉತ್ತಮವೇ? ಎಂಬ ಪ್ರಶ್ನೆ ಅನೇಕರಲ್ಲಿದೆ. ರಾತ್ರಿ ವೇಳೆ ಕಾಫಿ ಕುಡಿಯುದರಿಂದ ನಿದ್ರೆಯ ಸಮಯದಲ್ಲಿ ಬದಲಾವಣೆಯಾಗಬಹುದು. ಅದಕ್ಕಿಂದ ಬಿಸಿ ಹಾಲನ್ನು ಸೇವಿಸಿದರೆ ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಬರಬಹುದು.
  Published by:Harshith AS
  First published: