• Home
  • »
  • News
  • »
  • lifestyle
  • »
  • Intermittent Fasting: ತೂಕ ಇಳಿಸೋಕೆ ಮಾಡೋ ಈ ಉಪವಾಸ ಹಾರ್ಮೋನ್ ಸಮಸ್ಯೆಗೆ ಕಾರಣವಾಗುತ್ತಂತೆ

Intermittent Fasting: ತೂಕ ಇಳಿಸೋಕೆ ಮಾಡೋ ಈ ಉಪವಾಸ ಹಾರ್ಮೋನ್ ಸಮಸ್ಯೆಗೆ ಕಾರಣವಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Intermittent Fasting: ಈ ಸಂಶೋಧನೆಯಲ್ಲಿ ಭಾಗವಹಿಸಿದ್ದ ಆದರೆ ಮಧ್ಯಂತರ ಉಪವಾಸವನ್ನು ಅನುಸರಿಸದವರ ರಕ್ತದ ಮಾದರಿ ಡೇಟಾವನ್ನು ಪಡೆಯುವ ಮೂಲಕ ಹಾರ್ಮೋನ್ ಮಟ್ಟದಲ್ಲಿನ ವ್ಯತ್ಯಾಸಗಳನ್ನು ಸಂಶೋಧಕರು ಪರೀಕ್ಷಿಸಿದರು.

  • Share this:

ತೂಕ ಹೆಚ್ಚಳ, (Weight Loss) ಸ್ಥೂಲಕಾಯದಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು (Health Problem) ಉಂಟಾಗುತ್ತವೆ. ಹಾಗಾಗಿ ಸಾಕಷ್ಟು ಜನರು ತೂಕ ಇಳಿಕೆಗೆ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡ್ತಾ ಇರ್ತಾರೆ. ಅದರಲ್ಲಿ ಸಾಕಷ್ಟು ಜನಪ್ರಿಯವಾದ ಹಾಗೂ ಫಲಿತಾಂಶ ಕೊಡುತ್ತದೆ ಎಂದೇ ನಂಬಲಾಗಿರುವ ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್‌ ಕೂಡ ಒಂದು. ತೂಕ ಇಳಿಕೆಯ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಮಧ್ಯಂತರ ಉಪವಾಸ  (intermittent fasting ) ಅಂತಾನೇ ಅನೇಕ ಪೌಷ್ಟಿಕ ತಜ್ಞರು ಸಲಹೆ ನೀಡ್ತಾರೆ. ಈ ಮಧ್ಯಂತರ ಉಪವಾಸ, ವ್ಯಕ್ತಿ ದಿನದ 12 ರಿಂದ 16 ಗಂಟೆಗಳ ಕಾಲ ಉಪವಾಸ ಇದ್ದರೆ, ಉಳಿದಂತಹ 4-5 ಗಂಟೆಗಳ ಅವಧಿಯಲ್ಲಿ ಮಾತ್ರ ಆಹಾರ (Food) ಸೇವಿಸುವಂತಹ ಉಪವಾಸದ ವಿಧಾನವಾಗಿದೆ.


ಹಾರ್ಮೋನುಗಳ ಮೇಲೆ ನಕಾರಾತ್ಮಕ ಪರಿಣಾಮ?


ಅನೇಕರು ಇದರ ಈ ವಿಧಾನದ ಪ್ರಯೋಜನಗಳಿಗೆ ಸಾಕ್ಷಿಯಾಗಿದ್ದರೂ, ಹೊಸ ಅಧ್ಯಯನವು ಮಧ್ಯಂತರ ಉಪವಾಸವು ಮಹಿಳೆಯ ಸಂತಾನೋತ್ಪತ್ತಿ ಹಾರ್ಮೋನುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ತೋರಿಸಿದೆ. ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ತಂಡವು ಸ್ಥೂಲಕಾಯತೆಯನ್ನು ಅಧ್ಯಯನ ಮಾಡುತ್ತಿದ್ದು, ಮಹಿಳೆಯರಲ್ಲಿ IF ಬಗ್ಗೆ ಹೊಸ ಅಧ್ಯಯನ ನಡೆಸಿ ಪುರಾವೆಗಳನ್ನು ಹೊಂದಿದೆ.


ಯುಐಸಿ ಪೋಷಣೆಯ ಪ್ರಾಧ್ಯಾಪಕರಾದ ಕ್ರಿಸ್ಟಾ ವರಾಡಿ ನೇತೃತ್ವದ ತಂಡವು ಎಂಟು ವಾರಗಳ ಕಾಲ ಋತುಬಂಧಕ್ಕೊಳಗಾದ ನಂತರದ ಸ್ಥೂಲಕಾಯದ ಮಹಿಳೆಯರ ಗುಂಪನ್ನು "ವಾರಿಯರ್‌ ಡಯೆಟ್‌ " ವಿಧಾನದ ಮಧ್ಯಂತರ ಉಪವಾಸದ ಕುರಿತು ಅಧ್ಯಯನ ಮಾಡಿದೆ.


ಅವರ ಸಂಶೋಧನೆಗಳನ್ನು ವೈಲಿ ಆನ್‌ಲೈನ್ ಲೈಬ್ರರಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. IF ನ ವಾರಿಯರ್‌ ಡಯೆಟ್‌ ವಿಧಾನವು ಒಬ್ಬ ವ್ಯಕ್ತಿಯನ್ನು ದಿನಕ್ಕೆ ನಾಲ್ಕು ಗಂಟೆಗಳ ಕಾಲ ಮಾತ್ರ ತಿನ್ನುವಂತೆ  ಹೇಳುತ್ತದೆ. ಇದರಲ್ಲಿ ಭಾಗವಹಿಸಿದ್ದವರಿಗೆ ಕೊಟ್ಟಿರುವ ಸಮಯದಲ್ಲಿ ಏನನ್ನು ಬೇಕಾದರೂ ತಿನ್ನಲು ಸೂಚಿಸಲಾಗಿತ್ತು.
ಮಧ್ಯಂತರ ಉಪವಾಸ ಕೈಗೊಳ್ಳದವರಲ್ಲಿ ಬದಲಾಗಿರಲಿಲ್ಲ ಹಾರ್ಮೋನು!


ಈ ಸಂಶೋಧನೆಯಲ್ಲಿ ಭಾಗವಹಿಸಿದ್ದ ಆದರೆ ಮಧ್ಯಂತರ ಉಪವಾಸವನ್ನು ಅನುಸರಿಸದವರ ರಕ್ತದ ಮಾದರಿ ಡೇಟಾವನ್ನು ಪಡೆಯುವ ಮೂಲಕ ಹಾರ್ಮೋನ್ ಮಟ್ಟದಲ್ಲಿನ ವ್ಯತ್ಯಾಸಗಳನ್ನು ಸಂಶೋಧಕರು ಪರೀಕ್ಷಿಸಿದರು.


ಇದನ್ನೂ ಓದಿ: ಗರ್ಭಿಣಿಯರು ಪ್ರತಿ ರಾತ್ರಿ ಈ ಜ್ಯೂಸ್​ಗಳನ್ನು ಕುಡಿಬೇಕಂತೆ


ಇದರಲ್ಲಿ ಕ್ರಿಸ್ಟಾ ವರಾಡಿ ಮತ್ತು ಅವರ ತಂಡವು ಲೈಂಗಿಕ-ಬಂಧಿಸುವ ಗ್ಲೋಬ್ಯುಲಿನ್ ಹಾರ್ಮೋನ್, ದೇಹದಾದ್ಯಂತ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಸಾಗಿಸುವ ಪ್ರೋಟೀನ್, ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್‌ನಂತಹ ಇತರ ಹಾರ್ಮೋನುಗಳು ಬದಲಾಗಿಲ್ಲ ಎಂದು ಗಮನಿಸಿದರು.


ವರದಿ ಹೇಳೋದೇನು?


ಆದರೆ, ಪ್ರಯೋಗದ ಕೊನೆಯಲ್ಲಿ ಋತುಬಂಧಕ್ಕಿಂತ ಮೊದಲಿನ ಹಾಗೂ ನಂತರದ ಮಹಿಳೆಯರಲ್ಲಿ, ಅಂಡಾಶಯದ ಕಾರ್ಯ ಮತ್ತು ಮೊಟ್ಟೆಯ ಗುಣಮಟ್ಟವನ್ನು ಸುಧಾರಿಸಲು ಫಲವತ್ತತೆ ಚಿಕಿತ್ಸಾಲಯಗಳು ಸೂಚಿಸುವ ಡಿಹೈಡ್ರೊಪಿಯಾಂಡ್ರೊಸ್ಟೆರಾನ್ ಅಥವಾ DHEA ಎಂಬ ಹಾರ್ಮೋನ್ ಗಳು ಸುಮಾರು ಶೇ. 14% ರಷ್ಟು ಕಡಿಮೆಯಾಗಿದ್ದು ಕಂಡುಬಂತು.


ಪ್ರಯೋಗದ ಸಮಯದಲ್ಲಿ, ಮಧ್ಯಂತರ ಉಪವಾಸ ಕೈಗೊಂಡ ಮಹಿಳೆಯರು ತಮ್ಮ ಮೂಲ ತೂಕದ 3% ರಿಂದ 4% ನಷ್ಟು ತೂಕ ಇಳಿಕೆ ಅನುಭವಿಸಿದರು. ವರಾಡಿ ಅವರು ಮರುಕಳಿಸುವ ಉಪವಾಸ ಮತ್ತು ಇತರ ಉಪವಾಸ ವಿಧಾನಗಳ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕು ಎಂದು ತೀರ್ಮಾನಿದ್ದಾರೆ. ಅದರಲ್ಲೂ ವಿಶೇಷವಾಗಿ IF ನಲ್ಲಿ ನಕಾರಾತ್ಮಕ ಮಾಹಿತಿಯು ಇಲಿಗಳ ಮೇಲಿನ ಅಧ್ಯಯನಗಳಿಂದ ಬಂದಿದೆ.


ಇದನ್ನೂ ಓದಿ: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಹಾರಗಳು ಬೇಕೇ ಬೇಕು


ಇನ್ನು “ಇದು ಉತ್ತಮ ಮೊದಲ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ವಿವಿಧ ಪರ್ಯಾಯ-ದಿನದ ಉಪವಾಸ ಮತ್ತು ಸಮಯ-ನಿರ್ಬಂಧಿತ ಆಹಾರ ತಂತ್ರಗಳ ಮೂಲಕ ನಾವು ಸಾವಿರಾರು ಮಹಿಳೆಯರನ್ನು ಗಮನಿಸಿದ್ದೇವೆ. ಅದು ಜನರನ್ನು ಕಡಿಮೆ ತಿನ್ನುವಂತೆ ಮಾಡುವುದು. ತಿನ್ನುವ ವಿಂಡೋವನ್ನು ಕಡಿಮೆ ಮಾಡುವ ಮೂಲಕ, ನೀವು ನೈಸರ್ಗಿಕವಾಗಿ ಕ್ಯಾಲೊರಿಗಳನ್ನು ಸುಡಬಹುದು. ಮನುಷ್ಯರ ಮೇಲೆ ಮಧ್ಯಂತರ ಉಪವಾಸದ ಪರಿಣಾಮಗಳನ್ನು ನೋಡಲು ನಮಗೆ ಹೆಚ್ಚಿನ ಅಧ್ಯಯನಗಳು ಬೇಕಾಗುತ್ತವೆ”ಎಂದು ಸಂಶೋಧಕ ವರಾಡಿ ಹೇಳಿದ್ದಾರೆ.

Published by:Sandhya M
First published: