ಇದು ಪ್ರೀತಿಯನ್ನು ಅರಸಿ ಹೊರಟ ಹಳ್ಳಿ ಹುಡುಗಿಯ ಕತೆ

ಈಗ ಕೀರ್ತನಾ ತನ್ನ 2ನೇ ಗಂಡನೊಂದಿಗೆ ಕುಳಿತು ಆರಾಮಾಗಿ ಹರಟೆ ಹೊಡೆಯುತ್ತಾಳೆ, ಧೈರ್ಯವಾಗಿ ಒಬ್ಬಳೇ ಎಲ್ಲಿ ಬೇಕಾದರೂ ಓಡಾಡುತ್ತಾಳೆ, ಮನೆಗೆಲಸ, ಆಫೀಸಿನ ಕೆಲಸವೆರಡನ್ನೂ ಖುಷಿಯಾಗಿ ನಿಭಾಯಿಸುತ್ತಾಳೆ. ಅವಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • RedWomb
 • Last Updated :
 • Share this:
  ಮಕ್ಕಳಿಗೆ ನಾವು ಯಾವ ರೀತಿಯ ಮೌಲ್ಯವನ್ನು ಕಲಿಸುತ್ತೇವೆ ಎಂಬುದರ ಆಧಾರದಲ್ಲಿ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಪೋಷಕರು ಮಕ್ಕಳನ್ನು ಹಲವು ಕಟ್ಟುಪಾಡುಗಳನ್ನು ಹಾಕಿ ಬೆಳೆಸುವುದರಿಂದಲೇ ಕೆಲವೊಮ್ಮೆ ಅವರ ಭವಿಷ್ಯ ಕಮರಿ ಹೋಗುತ್ತದೆ. ಹಾಗಿದ್ದರೆ, ಹೆಣ್ಣುಮಕ್ಕಳನ್ನು ಬೆಳೆಸುವಾಗ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕು? ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಎಂಬ ಅನುಮಾನ ಎಲ್ಲರಿಗೂ ಕಾಡುವುದು ಸಹಜ.

  ಅವಳ ಹೆಸರು ಕೀರ್ತನ (ಹೆಸರು ಬದಲಾಯಿಸಲಾಗಿದೆ). ತಮಿಳುನಾಡಿನ ಕುಗ್ರಾಮವೊಂದರಲ್ಲಿ ಹುಟ್ಟಿ, ಬೆಳೆದ ಆಕೆಗೆ ಹೊರಗಿನ ಪ್ರಪಂಚದ ಬಗ್ಗೆ ಯಾವ ಜ್ಞಾನವೂ ಇರಲಿಲ್ಲ. ಆಕೆಯ ಊರಿನಲ್ಲಿ ಹುಡುಗರ ಜೊತೆ ಮಾತನಾಡುವುದು ಕೂಡ ದೊಡ್ಡ ಅಪರಾಧವಾಗಿತ್ತು. ಆಕೆಯ ಜೀವನದಲ್ಲಿ ಎಂದೂ ಬೇರೆ ಹುಡುಗರ ಜೊತೆ ಮಾತನಾಡಿರಲಿಲ್ಲ. ಅವಳಿಗೆ ಮದುವೆ ಮಾಡಿ ಕಳುಹಿಸಿದಾಗ ಗಂಡನ ಜೊತೆ ಹೊಂದಿಕೊಳ್ಳಲು ತುಂಬ ಕಷ್ಟಪಡಬೇಕಾಯಿತು. ಹುಡುಗರ ಜೊತೆ ಮಾತನಾಡೇ ಗೊತ್ತಿಲ್ಲದ ಕೀರ್ತನ ಈಗ ದಿನಪೂರ್ತಿ ಅಪರಿಚಿತ ಪುರುಷನ ಜೊತೆ ಇರಬೇಕಾಗಿತ್ತು. ಮದುವೆಯಾಗಿದ್ದರೂ ಆಕೆಯ ಗಂಡ ಆಕೆಗೆ ಅಪರಿಚಿತನಾಗೇ ಇದ್ದ.

  ಗಂಡನ ಜೊತೆ ಯಾವ ರೀತಿ ನಡೆದುಕೊಳ್ಳಬೇಕೆಂಬುದು ಕೂಡ ಆಕೆಗೆ ಗೊತ್ತಿರಲಿಲ್ಲ. ಆಕೆಯ ಅಮ್ಮನಾಗಲಿ, ಅತ್ತೆಯಾಗಲಿ, ಬೇರೆ ಹೆಂಗಸರಾಗಲಿ ಈ ಬಗ್ಗೆ ಏನೂ ಹೇಳಿರಲಿಲ್ಲ. ಮಗುವಾಗಿದ್ದಾಗಿನಿಂದಲೂ ಅಪ್ಪ-ಅಮ್ಮನ ಜೊತೆಗೇ ಬೆಳೆದಿದ್ದ ಕೀರ್ತನ ಮೊದಲ ಬಾರಿಗೆ ಬೇರೆ ಮನೆಯಲ್ಲಿ ಜೀವನ ಕಳೆಯಬೇಕಾಗಿತ್ತು. ಆಕೆಯ ಅಪ್ಪ-ಅಮ್ಮ ಆರಾಮಾಗಿ ಕುಳಿತು ಪರಸ್ಪರ ಮಾತನಾಡಿದ್ದನ್ನು ಆಕೆ ನೋಡಿರಲೇ ಇಲ್ಲ. ಅಮ್ಮ ಸದಾ ಅಡುಗೆ, ಮನೆಗೆಲಸ, ಮಕ್ಕಳ ಆರೈಕೆ ಮಾಡಿಕೊಂಡು ಇರುತ್ತಿದ್ದ ಆಕೆಯ ಅಮ್ಮನಿಗೆ ಟೀಚರ್ ಆಗಬೇಕೆಂಬ ಕನಸಿತ್ತು. ಅದಕ್ಕಾಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ, ಕೀರ್ತನಾಳ ಅಪ್ಪನಿಗೆ ತನ್ನ ಹೆಂಡತಿ ಕೆಲಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಹೀಗಾಗಿ, ಆಕೆ ಕೆಲಸ ಬಿಡಬೇಕಾಯಿತು.

  ಇದನ್ನೂ ಓದಿ: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಲು ವಿರೋಧ; ಮಂಚದ ಮೇಲೆ ಬೆಂಗಳೂರು ವೇಶ್ಯೆಯ ಕಗ್ಗೊಲೆ

  ಹೀಗಾಗಿ, ಮದುವೆಗೂ ಮುನ್ನ ಕೀರ್ತನಾಳ ಗಂಡನಾಗುವ ವ್ಯಕ್ತಿ ಆಕೆಗೆ ಕೆಲಸ ಮಾಡಬಾರದೆಂದು ಷರತ್ತು ವಿಧಿಸಿದಾಗ ಆಕೆಗೆ ಅದು ಹೊಸ ವಿಷಯ ಎನಿಸಲೇ ಇಲ್ಲ. ಇದೇ ರೀತಿ ಭಾರತದ ಸಾವಿರಾರು ಯುವತಿಯರು ತಮ್ಮ ಕುಟುಂಬದವರ ನಡವಳಿಕೆ ನೋಡಿ, ಸಿನಿಮಾಗಳನ್ನು ನೋಡಿ ಸಂಬಂಧಗಳನ್ನು ತಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಹೆಣ್ಣುಮಕ್ಕಳು ಗಂಡನೊಂದಿಗೆ ಯಾವ ರೀತಿಯ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಬಗ್ಗೆ ಅವರ ಅಪ್ಪ-ಅಮ್ಮಂದಿರೂ ತಿಳಿವಳಿಕೆ ನೀಡುವುದಿಲ್ಲ. ಗಂಡ ಹೇಳಿದಂತೆ ಕೇಳಿಕೊಂಡಿರುವುದೇ ಸಂಸಾರದ ಮುಖ್ಯ ಗುರಿ ಎಂದು ಹಲವರು ನಂಬಿಕೊಂಡಿರುತ್ತಾರೆ. ಅದಕ್ಕೆ ಪೂರಕವಾಗಿ ಅವರ ಸುತ್ತಲಿನ ಘಟನೆಗಳು ಕೂಡ ನಡೆಯುತ್ತಿರುತ್ತವೆ.

  ಹೆಣ್ಣುಮಕ್ಕಳ ಸುರಕ್ಷತೆ, ಕುಟುಂಬವನ್ನು ನಡೆಸಿಕೊಳ್ಳುವ ರೀತಿ, ಹೊಂದಿಕೊಂಡು ಹೋಗುವ ವ್ಯಕ್ತಿತ್ವ, ತನ್ನ ಕನಸನ್ನು ನನಸಾಗಿಸಿಕೊಳ್ಳುವ ಪರಿ ಹೀಗೆ ಯಾವುದರ ಬಗ್ಗೆಯೂ ಪೋಷಕರು ಹೆಣ್ಣುಮಕ್ಕಳಿಗೆ ತಿಳಿಹೇಳುವುದೇ ಇಲ್ಲ. ಆದರೆ, ಕೀರ್ತನಾಗೆ ಇದೆಲ್ಲ ಸಾಕೆನಿಸಿತ್ತು. ಸ್ವಲ್ಪ ದಿನಕ್ಕೆ ಗಂಡನ ನಡವಳಿಕೆ ಬೇಸರ ತರಿಸಿತ್ತು. ಕೊನೆಗೆ ಕೆಲಸಕ್ಕೆ ಹೋಗಲು ಶುರು ಮಾಡಿದ ಕೀರ್ತನಾ ಅಲ್ಲಿ ಒಬ್ಬಾತನ ಗುಣವನ್ನು ಇಷ್ಟಪಟ್ಟು ಆತನನ್ನು ಮರು ಮದುವೆಯಾದಳು. ಆತ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದ, ಮನೆಗೆಲಸದಲ್ಲಿ ಕೀರ್ತನಾಗೆ ಸಹಾಯ ಮಾಡುತ್ತಿದ್ದ. ಎಲ್ಲ ಜವಾಬ್ದಾರಿಗಳನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು.

  ಇದನ್ನೂ ಓದಿ: ಕೊರೋನಾ ವೈರಸ್​​ನಿಂದ ಆಸ್ಪತ್ರೆ ಸೇರಿದ ಅಪ್ಪ; ಹಸಿವಿನಿಂದ ಕುಳಿತಲ್ಲೇ ಶವವಾದ ಮಗ!

  ಗಂಡನನ್ನು ಬಿಟ್ಟು ತಾನು ತಪ್ಪು ಮಾಡಿದೆ, ಅಪ್ಪ-ಅಮ್ಮ-ಗಂಡನ ಇಚ್ಛೆಗೆ ವಿರುದ್ಧವಾಗಿ ಕೆಲಸಕ್ಕೆ ಸೇರಿದೆ ಎಂಬ ಅಪರಾಧಿ ಭಾವ ಕೀರ್ತನಾಳಿಗೆ ಕೆಲವು ಸಮಯ ಕಾಡಿತ್ತು. ನಂತರ ತಾನು ಮಾಡಿದ್ದೇ ಸರಿಯಾದ ಕೆಲಸ ಎಂದು ಆಕೆ ನಿರ್ಧರಿಸಿದಳು. ಈಗ ಕೀರ್ತನಾ ತನ್ನ 2ನೇ ಗಂಡನೊಂದಿಗೆ ಕುಳಿತು ಆರಾಮಾಗಿ ಹರಟೆ ಹೊಡೆಯುತ್ತಾಳೆ, ಧೈರ್ಯವಾಗಿ ಒಬ್ಬಳೇ ಎಲ್ಲಿ ಬೇಕಾದರೂ ಓಡಾಡುತ್ತಾಳೆ, ಮನೆಗೆಲಸ, ಆಫೀಸಿನ ಕೆಲಸವೆರಡನ್ನೂ ಖುಷಿಯಾಗಿ ನಿಭಾಯಿಸುತ್ತಾಳೆ. ಅವಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಹೆಣ್ಣುಮಕ್ಕಳನ್ನು ಎಂದಿಗೂ ನಮ್ಮ ಕಟ್ಟುಪಾಡುಗಳಿಂದ ಕಟ್ಟಿ ಹಾಕಬಾರದು. ನನ್ನ ಅಪ್ಪ-ಅಮ್ಮ ನನ್ನನ್ನು ಬೆಳೆಸಿದಂತೆ ನಾನು ನನ್ನ ಮಗಳನ್ನು ಬೆಳೆಸುವುದಿಲ್ಲ ಎನ್ನುವ ಕೀರ್ತನಾ ಕಣ್ಣಲ್ಲಿ ಮಗಳ ಭವಿಷ್ಯದ ಬಗ್ಗೆ ಸಾವಿರ ಕನಸು ಕಾಣುತ್ತಿತ್ತು.
  First published: