Interesting Facts: ಬಿರಿಯಾನಿ ಮಡಕೆಗಳ ಸುತ್ತ ಕೆಂಪು ಬಟ್ಟೆ ಸುತ್ತುವುದು ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಬಿರಿಯಾನಿ ತಯಾರಿಸಿದ ಮಡಕೆಗಳ ಸುತ್ತ ಕೆಂಪು ಬಟ್ಟೆಯೊಂದನ್ನು ಸುತ್ತಿರುವುದನ್ನು ಕಾಣಬಹುದು. ಒಮ್ಮೊಮ್ಮೆ ನಿಮಗೆ ಹಾಗೆ ಬಟ್ಟೆ ಏಕೆ ಸುತ್ತುತ್ತಾರೆ ಎಂದೆನಿಸಿರಬಹುದಾದರೂ ಅಷ್ಟು ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿರಬಹುದು. ಆದರೆ, ಅದು ಹಾಗೇಕೆ ಎಂಬುದನ್ನು ನಾವು ಹೇಳುತ್ತೇವೆ ಕೇಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿರಿಯಾನಿ ಎಂದರೆ ಸಾಕು, ಬಹುತೇಕರಿಗೆ ಬಾಯಲ್ಲಿ ನೀರೂರದೆ ಇರಲಾರದು. ಹೆಚ್ಚು ಕಡಿಮೆ ನಾನ್​ವೆಜ್ ಪ್ರಿಯರು ಒಮ್ಮೆಯಾದರೂ ತಮ್ಮ ಜೀವನದಲ್ಲಿ ಬಿರಿಯಾನಿಯ (Biryani) ಸವಿ ಖಂಡಿತ ಸವಿದೇ ಇರುತ್ತಾರೆ ಎಂದು ಹೇಳಬಹುದು. ಆದಾಗ್ಯೂ, ಕೇವಲ ಮಾಂಸಾಹಾರಿಗಳಿಗೆ (Non-veg) ಮಾತ್ರ ಬಿರಿಯಾನಿ ಸೌಲಭ್ಯ ಎಂದು ತಿಳಿಯಬೇಡಿ, ಸಸ್ಯಾಹಾರಿಗಳಿಗೂ ಬಿರಿಯಾನಿ ಎಲ್ಲೆಡೆ ದೊರೆಯುತ್ತದೆ. ಅದ್ಭುತ ಸಾಂಬಾರ ಪದಾರ್ಥಗಳ ಘಮ ಘಮ ಸುವಾಸನೆಯೊಂದಿಗೆ ತಯಾರಿಸಲಾಗುವ ಬಿರಿಯಾನಿ ಪ್ರತಿಯೊಬ್ಬರ ನೆಚ್ಚಿನ ಖಾದ್ಯ ಎಂದರೂ ತಪ್ಪಿಲ್ಲ. ಇನ್ನು, ಸ್ಥಳಗಳಿಗೆ ತಕ್ಕಂತೆ ವಿಶೇಷವಾಗಿ ತಯಾರಿಸಲ್ಪಡುವ ಬಿರಿಯಾನಿಗಳಿವೆ. ನೀವು ಈಗಾಗಲೇ ಹೈದರಾಬಾದ್ ಬಿರಿಯಾನಿ ಬಗ್ಗೆ ಖಂಡಿತ ಕೇಳಿರಬಹುದು. ಅದರಂತೆ ಭಾರತದಲ್ಲಿ ಲಖನೌ (Lucknow) ಬಿರಿಯಾನಿ ಸಹ ಅಷ್ಟೇ ಪ್ರಸಿದ್ಧ. ನೀವು ಗಮನಿಸಿರುವ ಹಾಗೆ ಬಿರಿಯಾನಿ ತಯಾರಿಸಿದ ಮಡಕೆಗಳ ಸುತ್ತ ಕೆಂಪು (Red) ಬಟ್ಟೆಯೊಂದನ್ನು ಸುತ್ತಿರುವುದನ್ನು ಕಾಣಬಹುದು. ಒಮ್ಮೊಮ್ಮೆ ನಿಮಗೆ ಹಾಗೆ ಬಟ್ಟೆ ಏಕೆ ಸುತ್ತುತ್ತಾರೆ ಎಂದೆನಿಸಿರಬಹುದಾದರೂ ಅಷ್ಟು ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿರಬಹುದು. ಆದರೆ, ಅದು ಹಾಗೇಕೆ ಎಂಬುದನ್ನು ನಾವು ಹೇಳುತ್ತೇವೆ ಕೇಳಿ.

ಮೊಘಲ್ ಆಡಳಿತ ಪದ್ಧತಿ:

ರಸ್ತೆ ಬದಿಯ ಬಂಡಿ ಅಂಗಡಿಗಳಿಂದ ಐಷಾರಾಮಿ ಹೋಟೆಲ್ ಗಳವರೆಗೆ ಕಾಣಸಿಗುವ ಬಿರಿಯಾನಿ ಹಂಡೆಯ ಸುತ್ತ ಕೆಂಪು ಬಟ್ಟೆಯನ್ನು ಸುತ್ತುವ ರೂಢಿ ಇಂದು ನಿನ್ನೆಯದಲ್ಲ, ಬದಲಾಗಿ ಇದು ನಮ್ಮನ್ನು ಮೊಘಲ್ ಆಡಳಿತದ ಹುಮಾಯೂನ್ ಕಾಲಕ್ಕೆ ಕರೆದೊಯ್ಯುತ್ತದೆ. ಆ ಸಮಯದಲ್ಲಿ ರಾಜ್ಯಭಾರ ಮಾಡುತ್ತಿದ್ದ ಆಡಳಿತದ ಅಡುಗೆ ಮನೆಗೆ ಸಂಬಂಧಿಸಿದಂತೆ ನಿಯಮವೇ ಹಾಗಿತ್ತೆಂದು ಹೇಳಲಾಗುತ್ತದೆ. ಅಂದು ರೂಢಿಯಲ್ಲಿದ್ದ ನಿಯಮದ ಪ್ರಕಾರ ಎಲ್ಲ ಸಂಗ್ರಹಿಸಿಡಬಹುದಾಗಿದ್ದ ಆಹಾರಗಳ ಪಾತ್ರೆಗಳನ್ನು ಕೆಂಪು ಬಟ್ಟೆಯಿಂದ ಸುತ್ತಿಡಬೇಕೆಂದಿತ್ತೆಂದು ಹೇಳಲಾಗುತ್ತದೆ.

ಕೆಂಪು ಬಟ್ಟೆ ಏಕೆ ಸುತ್ತುತ್ತಾರೆ?:

ಮತ್ತೊಂದು ಜನಪ್ರೀಯ ಅಭಿಪ್ರಾಯದ ಪ್ರಕಾರ, ಒಂದೊಮ್ಮೆ ಹುಮಾಯೂನ್ ಪರ್ಷಿಯಾ ದೇಶಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ರಾಜ ಹುಮಾಯೂನನಿಗೆ ಅದ್ಭುತವಾದ ಆತಿಥ್ಯ ಉಪಚಾರ ಮಾಡಿದ್ದ. ಆತ ಹುಮಾಯೂನನಿಗೆ ನೀಡಲಾದ ಮೃಷ್ಟಾನ್ನ ಭೋಜನಗಳ ಪಾತ್ರೆಗಳು ಬೆಳ್ಳಿಯದಾಗಿದ್ದವು ಹಾಗೂ ಅವುಗಳನ್ನು ಕೆಂಪು ವರ್ಣದ ಬಟ್ಟೆಯಿಂದ ಸುತ್ತಲಾಗಿತ್ತು.

ಇದನ್ನೂ ಓದಿ: Cancer: ನಾವು ಅಡುಗೆಯಲ್ಲಿ ಬಳಸುವ ಎಣ್ಣೆಯು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆಯಂತೆ! ಏಕೆ ಗೊತ್ತಾ?

ಅಲ್ಲದೆ ಹುಮಾಯೂನ್ ಪ್ರಥಮ ಬಾರಿಗೆ ಪರ್ಷಿಯಾಗೆ ಬಂದಿಳಿದಾಗ ಪರ್ಷಿಯಾ ರಾಜ ಆತನನ್ನು ಕೆಂಪು ವರ್ಣದ ಕಂಬಳಿ ಹಾಕಿ ಸ್ವಾಗತಿಸಿದ್ದ. ಇದರಿಂದ ಪ್ರಭಾವಿತರಾದ ಮುಘಲರು ಕೆಂಪು ಬಟ್ಟೆಯನ್ನು ಆಹಾರದ ಪಾತ್ರೆಗಳಿಗೆ ಸುತ್ತಲು ತಾವೂ ರೂಢಿಸಿಕೊಂಡರು ಎಂದು ಹೇಳಲಾಗುತ್ತದೆ. ಆ ನಂತರ ಮೊಘಲರು ಕೆಂಪು ಬಣ್ಣ ಸಮೃದ್ಧತೆ, ಸಂತಸ, ಪ್ರೀತಿ ಹಾಗೂ ಅದೃಷ್ಟದ ಸಂಕೇತ ಎಂದು ನಂಬುತ್ತಿದ್ದರೆನ್ನಲಾಗಿದೆ. ಹಾಗಾಗಿ, ಅದರ ಪ್ರತೀಕವಾಗಿ ಆಹಾರದ ಪಾತ್ರೆಗಳನ್ನು ಕೆಂಪು ಬಟ್ಟೆಯಿಂದ ಸುತ್ತಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

ಹೀಗೆ ಮೊಘಲರು ರೂಢಿಸಿಕೊಂಡ ಈ ಪದ್ಧತಿ ಭಾರತದಲ್ಲಿ ನಿಧಾನವಾಗಿ ಎಲ್ಲೆಡೆ ಹರಡಿತು ಎನ್ನಲಾಗಿದೆ. ಲಖನೌ ಪ್ರಾಂತದ ನವಾಬರೂ ಸಹ ಈ ರೀತಿ ಬಿರಿಯಾನಿ ಪಾತ್ರೆಗಳನ್ನು ಕೆಂಪು ಬಟ್ಟೆಯಿಂದ ಸುತ್ತಿಡುವುದರಿಂದ ಆಕರ್ಷಿತರಾಗಿದ್ದರು ಎನ್ನಲಾಗಿದ್ದು ಅವರೂ ಸಹ ಈ ಪದ್ಧತಿಯನ್ನು ರೂಢಿಸಿಕೊಂಡರೆನ್ನಲಾಗಿದೆ.

ವಾಡಿಕೆಯ ಮಾತು:

ಆದಾಗ್ಯೂ, ಇನ್ನೂ ಕೆಲವು ವರ್ಗದ ಜನರು ಈ ಬಗ್ಗೆ ತಮ್ಮದೆ ಆದ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಅವರ ಪ್ರಕಾರ, ಕೆಂಪು ಬಣ್ಣ ಎಂಬುದು ದೂರದಿಂದಲೂ ಸಹ ನೋಡಿದಾಗ ಎದ್ದು ಕಾಣುವ ಬಣ್ಣ. ಹೀಗೆ ಬಿರಿಯಾನಿ ಪಾತ್ರೆಗಳಿಗೆ ಕೆಂಪು ಬಣ್ಣದ ಬಟ್ಟೆ ಸುತ್ತುವುದರಿಂದ ಅದು ಜನರನ್ನು ದೂರದಿಂದಲೇ ಬಹು ಬೇಗ ಆಕರ್ಷಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Summer Health Tips: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈ 5 ತರಕಾರಿಗಳನ್ನು ತಪ್ಪದೇ ಸೇವಿಸಿ..!

ಗ್ರಾಹಕರು ಇದಕ್ಕೆ ಆಕರ್ಷಿತರಾಗಿ ಬರಲಿ ಎಂಬ ವ್ಯಾಪಾರ ಜಾಣ್ಮೆಯ ಬುದ್ಧಿಯ ಕುರುಹಾಗಿ ಈ ರೂಢಿ ಚಾಲ್ತಿಯಲ್ಲಿ ಬಂದಿರುವುದಾಗಿ ಹೇಳುತ್ತಾರೆ. ಇನ್ನೂ ಕೆಲವರ ಪ್ರಕಾರ, ಬಿರಿಯಾನಿ ಖಾದ್ಯವನ್ನು ಬಿಸಿ ಬಿಸಿಯಾಗೇ ಸೇವಿಸಬೇಕಾಗಿರುವುದನ್ನು ಶಿಫಾರಸ್ಸು ಮಾಡಲಾಗಿರುವ ಕಾರಣ ಪಾತ್ರೆಯಲ್ಲಿ ಬಿರಿಯಾನಿ ಹಾಕಿದಾಗ ಅದರ ಬಿಸಿ ಬೇಗ ಹೋಗದಂತೆ ಆ ಪಾತ್ರೆಯಲ್ಲೇ ಬಂಧಿಸಿಡಲು ಅನುಕೂಲವಾಗಲೆಂದು ಪಾತ್ರೆಯ ಹೊರ ಮೇಲ್ಮೈ ಸುತ್ತ ಕೆಂಪು ಬಟ್ಟೆಯನ್ನು ಸುತ್ತುತ್ತಾರೆ ಎನ್ನುತ್ತಾರೆ.

ಕಾರಣಗಳು ಏನೇ ಇರಲಿ ಒಟ್ಟಿನಲ್ಲಿ ಇಂದಿಗೂ ಬಿರಿಯಾನಿ ಪಾತ್ರೆಗಳ ಸುತ್ತ ಸುತ್ತಲಾಗುವ ಆ ಬಟ್ಟೆತಿಂದಲೇ ಬಿರಿಯಾನಿ ಹೆಸರುವಾಸಿಯಾಗಿದ್ದಂತೂ ಸತ್ಯ. ಪದ್ಧತಿ ಏನೇ ಇರಲಿ ಅದನ್ನು ಗೌರವಿಸುತ್ತ ರುಚಿಕರವಾದ ಬಿರಿಯಾನಿಯನ್ನು ಸವಿಯೋಣ ಅಷ್ಟೆ.
Published by:shrikrishna bhat
First published: