HOME » NEWS » Lifestyle » INTERESTING FACTS ABOUT PEOPLE WHO BORN IN JUNE MONTH KVD

ಜೂನ್ ತಿಂಗಳಲ್ಲಿ ಹುಟ್ಟಿದವರು ಭಾವುಕರು, ಬಟ್ಟೆ ಅಂದರೆ ಪ್ರಾಣ.. ಮತ್ತಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ

ನಿಮ್ಮ ಕೋಣೆ ಸ್ವಲ್ಪ ಕೊಳಕಾಗಿದ್ದರೂ ಅದರ ಬಗ್ಗೆ ವಾದ ಮಾಡಲು ಶುರು ಮಾಡುತ್ತಾರೆ. ಸಣ್ಣ ಕುಂದುಕೊರತೆಗಳನ್ನು ಮರೆಯಲು ಅವರು ತಮ್ಮದೇ ಆದ ಸ್ಥಳ ಮತ್ತು ಸಮಯವನ್ನು ತೆಗದುಕೊಳ್ಳುತ್ತಾರೆ.

Kavya V | news18-kannada
Updated:June 11, 2021, 6:12 AM IST
ಜೂನ್ ತಿಂಗಳಲ್ಲಿ ಹುಟ್ಟಿದವರು ಭಾವುಕರು, ಬಟ್ಟೆ ಅಂದರೆ ಪ್ರಾಣ.. ಮತ್ತಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
  • Share this:
ಹುಟ್ಟಿದ ದಿನ, ಹುಟ್ಟಿದ ಸಮಯ ಹೇಗೆ ವ್ಯಕ್ತಿಯ ರಾಶಿ ಭವಿಷ್ಯವನ್ನು ನಿರ್ಧರಿಸುತ್ತೋ ಹಾಗೆಯೇ ಹುಟ್ಟಿದ ತಿಂಗಳು ಸಹ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆ. ಜೂನ್​​ ತಿಂಗಳಿನಲ್ಲಿ ಜನಿಸಿದವರು ಉಳಿದವರಿಗಿಂತ ಸ್ವಲ್ಪ ಭಿನ್ನ ಎನ್ನಬಹುದು. ಇತರರಿಗಿಂತ ವಿಭಿನ್ನ ದೃಷ್ಟಿಕೋನದಲ್ಲಿ ಎಲ್ಲವನ್ನೂ ನೋಡುತ್ತಾರೆ. ತುಂಬಾ ಭಾವುಕರು ಹಾಗೂ ಕಾಳಜಿ ಇರುವಂತಹ ವ್ಯಕ್ತಿಗಳೂ ಇವರಾಗಿರುತ್ತಾರೆ. ಇವರು ನೀಡುವಂತಹ ತೀರ್ಪುಗಳು, ಮಾತುಗಳು ಉಳಿದವರಿಗಿಂತ ಪ್ರತ್ಯೇಕವಾಗಿ ನೋಡುವಂತೆ ಮಾಡುತ್ತದೆ. ಈ ಜೂನ್‌ ತಿಂಗಳಿನಲ್ಲಿ ಜನಿಸಿದವರ ವ್ಯಕ್ತಿತ್ವದ ಕುರಿತು ನಿಮಗೆ ಗೊತ್ತಿರದ ಸಂಗತಿಯನ್ನು ತಿಳಿಸುತ್ತೇವೆ ಓದಿ..

 

ಜೂನ್‌ನಲ್ಲಿ ಜನಿಸಿದವರನ್ನು ಜನರು ಪ್ರೀತಿಸುವುದು ಸುಲಭ. ಪ್ರತಿಯೊಬ್ಬರೂ ಇವರೊಂದಿಗೆ ಸ್ನೇಹಿತರಾಗಲು ಬಯಸುತ್ತಾರೆ. ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರನ್ನೂ ಮೋಡಿ ಮಾಡುವ ಸ್ವಭಾವದವರು ಇವರು. ತಮ್ಮಂತೇ ಆಕಷ್ಖ ಸಂಗಾತಿಯನ್ನೂ ಹೊಂದುತ್ತಾರೆ. ಸಿನಿಮಾ, ಕಲಾರಂಗದ ಕಡೆಗೆ ಇವರ ಆಸಕ್ತಿ ಹೆಚ್ಚಾಗಿರುತ್ತದೆ. ಕೆಲವರು ನಟರಾಗಬೇಕೆಂಬ ಆಸಕ್ತಿಯನ್ನೂ ಹೊಂದಿರುತ್ತಾರೆ.

ಇದನ್ನೂ ಓದಿ: ಹೊಕ್ಕುಳಿಗೆ ಎಣ್ಣೆ ಹಾಕಿದರೆ ಎಷ್ಟೊಂದು ಲಾಭ ಗೊತ್ತಾ? ಹೊಳೆಯುವ ತುಟಿಗೂ ಇದಕ್ಕೂ ಇದೆ ಸಂಬಂಧ

 
ಜೂನ್​​ನಲ್ಲಿ ಹುಟ್ಟಿದವರು ಸೃಜನಶೀಲ ಕಲ್ಪನೆಗಳನ್ನು ಹೊಂದಿರುತ್ತಾರೆ. ಎಲ್ಲವನ್ನೂ ಮೊದಲೇ ಯೋಜನೆ ಮಾಡಿಕೊಳ್ಳುವ ಇವರು ಸಾಮಾನ್ಯರು ಯೋಚನೆ ಮಾಡಿರುವುದಕ್ಕಿಂತಲೂ ಇದು ಹೆಚ್ಚು ಎನ್ನುವ ಭಾವನೆ ಹೊಂದಿರುತ್ತಾರೆ. ಇವರ ಕೆಲವು ಆಲೋಚನೆಗಳನ್ನು ಹುಚ್ಚುತನವೆಂದು ಕೆಲವರು ಭಾವಿಸಬಹುದು.ಆದರೆ ಇವರು ಬದಲಾವಣೆಯ ರಾಯಭಾರಿಗಳಾಗಿರುತ್ತಾರೆ.

ದುಬಾರಿ ವಸ್ತ್ರಗಳಿಂದ ತುಂಬಿದ ವಾರ್ಡ್‌ರೋಬ್‌ ಹೊಂದಿರುತ್ತಾರೆ. ನೀವು ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸಿಲ್ಲವಾದರೆ ಅವರು ನಿಮ್ಮ ಡ್ರೆಸ್ಸಿಂಗ್‌ ಪ್ರಜ್ಞೆಯ ಬಗ್ಗೆ ಟೀಕೆ ಮಾಡಬಹುದು. ಇದು ಅವರ ವರ್ತನೆಯನ್ನು ತೋರಿಸುತ್ತದೆ.ತಮ್ಮ ಸುತ್ತಲಿನ ಯೋಗ್ಯವಾದ ವಿಷಯಗಳ ಬಗ್ಗೆ ಇವರು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಜೂನ್‌ನಲ್ಲಿ ಜನಿಸಿದವರು ತಮ್ಮ ಶತ್ರುಗಳಾದರೂ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಸುಲಭವಾಗಿ ಸ್ವೀಕರಿಸುತ್ತಾರೆ.ಮಾತಿನಲ್ಲಿ ಒಳ್ಳೆಯತನವಿರುವ ಇವರು ಇಷ್ಟಪಡದ ಜನರೂ ಇಷ್ಟಪಡುವಂತಹ ಶಕ್ತಿ ಹೊಂದಿರುತ್ತಾರೆ. ತಮ್ಮ ಶತ್ರುಗಳೊಂದಿಗೆ ದೀರ್ಘಕಾಲದವರೆಗೆ ಶತ್ರುಗಳಾಗಿರಲು ಸಾಧ್ಯವಿಲ್ಲ.

 
ಜೂನ್‌ನಲ್ಲಿ ಜನಿಸಿದವರು ನಿಮ್ಮ ಸ್ನೆಹಿತರಾಗಿದ್ದರೆ ಅವರ ಬಗ್ಗೆ ಈ ಒಂದು ವಿಷಯ ತಿಳಿದುಕೊಳ್ಳಿ. ಇವರನ್ನು ಸಮಾಧಾನ ಪಡಿಸುವುದು ತುಂಬಾ ಕಷ್ಟ ಹಾಗೂ ವಿಪರೀತ ಮೂಡಿಯಾಗಿರುತ್ತಾರೆ. ಅವರ ಮನಸ್ಥಿತಿ ಯಾವ ಕಾರಣಕ್ಕೆ ಹಾಳಾಗುವುದು ಎನ್ನುವುದು ತಿಳಿಯುವುದಿಲ್ಲ. ಉದಾಹರಣೆಗೆ ನಿಮ್ಮ ಕೋಣೆ ಸ್ವಲ್ಪ ಕೊಳಕಾಗಿದ್ದರೂ ಅದರ ಬಗ್ಗೆ ವಾದ ಮಾಡಲು ಶುರು ಮಾಡುತ್ತಾರೆ. ಸಣ್ಣ ಕುಂದುಕೊರತೆಗಳನ್ನು ಮರೆಯಲು ಅವರು ತಮ್ಮದೇ ಆದ ಸ್ಥಳ ಮತ್ತು ಸಮಯವನ್ನು ತೆಗದುಕೊಳ್ಳುತ್ತಾರೆ.

ಇವರು ಬೇಸಿಗೆಯಲ್ಲಿ ಜನಿಸಿದರೂ, ಸೆಕೆ, ಬಿಸಿಲೆಂದರೆ ಇವರಿಗೆ ಆಗಿ ಬರದು. ತಂಪಾದ ವಾತಾವರಣವನ್ನು ಇಷ್ಟಪಡುತ್ತಾರೆ. ಐಸ್‌ಕ್ರೀಂ ಪ್ರೇಮಿ. ಗಿರಿಧಾಮಗಳಿಗೆ ಭೇಟಿ ನೀಡಲು ಇಷ್ಟಪಡುವಂತಹ ವ್ಯಕ್ತಿ ಇವರಾಗಿರುತ್ತಾರೆ. ಐಸ್​​ ಕ್ರೀಂ ಕೊಡಿಸಿ ಇವರಿಂದ ಯಾವ ಕೆಲಸನಾದ್ರು ಮಾಡಿಸಬಹುದು.
Published by: Kavya V
First published: June 11, 2021, 6:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories