HOME » NEWS » Lifestyle » INTERESTING FACTS ABOUT AUSTRALIA HK

Australia: ಈ ದೇಶದಲ್ಲಿ ಟಿಪ್ಸ್​ ಪಡೆಯುವುದು ಅವಮಾನವಂತೆ..!

ಆಸ್ಟ್ರೇಲಿಯಾ ದೇಶವನ್ನು ಪ್ರವಾಸಿಗರ ಸ್ವರ್ಗ ಎನ್ನಲಾಗುತ್ತದೆ. ಆದರೆ ಇಲ್ಲಿ ಪ್ರವಾಸಕ್ಕೆ ಹೋಗುವ ಮುನ್ನ ಕೆಲ ವಿಷಯಗಳನ್ನು ತಿಳಿದಿರಬೇಕು

news18-kannada
Updated:November 30, 2020, 7:17 AM IST
Australia: ಈ ದೇಶದಲ್ಲಿ ಟಿಪ್ಸ್​ ಪಡೆಯುವುದು ಅವಮಾನವಂತೆ..!
ಆಸ್ಟ್ರೇಲಿಯಾ
  • Share this:
ಆಸ್ಟ್ರೇಲಿಯಾ ದೇಶವನ್ನು ಪ್ರವಾಸಿಗರ ಸ್ವರ್ಗ ಎನ್ನಲಾಗುತ್ತದೆ. ಆದರೆ ಇಲ್ಲಿ ಪ್ರವಾಸಕ್ಕೆ ಹೋಗುವ ಮುನ್ನ ಕೆಲ ವಿಷಯಗಳನ್ನು ತಿಳಿದಿರಬೇಕು


ಈ ದೇಶದಲ್ಲಿ ಹಲವು ಸಂಸ್ಕೃತಿಯ ಸಮ್ಮಿಲನವನ್ನು ಕಾಣಬಹುದು. ಎಲ್ಲಾ ಜನಾಂಗ ಹೊಂದಾಣಿಕೆಯಿಂದ ಇರುವ ಕೆಲವೇ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು.


ಆಸ್ಟ್ರೇಲಿಯಾದ ನಗರಗಳಲ್ಲಿ ಎಲ್ಲಾ ರೀತಿಯ ಭಕ್ಷ್ಯಗಳು ಸಿಗುತ್ತದೆ. ಕೆಲವೊಂದು ರೆಸ್ಟೊರೆಂಟ್​ಗಳಲ್ಲಿ ನೀವೇ ಆಹಾರವನ್ನು ತಯಾರಿಸಿಕೊಳ್ಳುವ ಅವಕಾಶ ನೀಡಲಾಗುತ್ತದೆ.


ಆಸ್ಟ್ರೇಲಿಯಾದಲ್ಲಿ ರೆಸ್ಟೊರೆಂಟ್​ಗಳಲ್ಲಿ ಕೆಲಸ ಮಾಡುವ ವೇಟರ್​ಗಳು ಟಿಪ್ಸ್​ ತೆಗೆದುಕೊಳ್ಳುವುದಿಲ್ಲವಂತೆ. ಕೆಲಸಕ್ಕೆ ಟಿಪ್ಸ್​ ಪಡೆಯುವುದು ಅವಮಾನ ಎಂದು ಇಲ್ಲಿನ ವೇಟರ್​ಗಳು ತಿಳಿದುಕೊಂಡಿದ್ದಾರೆ. ಹಾಗೆಯೇ ಇಲ್ಲಿನ ಕೆಲಸಗಾರರಿಗೆ ಕೈ ತುಂಬಾ ಸಂಬಳ ಕೂಡ ಸಿಗುತ್ತದೆ.


ಆಸ್ಟ್ರೇಲಿಯಾದ ಸ್ಥಳೀಯ ಮದ್ಯವು ವಿಶೇಷತೆಯಿಂದ ಕೂಡಿದೆ. ಇಲ್ಲಿ ಹಲವು ರೀತಿಯ ಸ್ಥಳೀಯ ಮದ್ಯಗಳು ಸಿಗುತ್ತಿದ್ದು, ಮದ್ಯಪ್ರಿಯರು ಒಮ್ಮೆ ಭೇಟಿ ಕೊಡುವುದು ಉತ್ತಮ.


ಅತಿ ವೇಗದ ಇಂಟರ್​ನೆಟ್​ ಬಳಸುತ್ತಿರುವ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಇಲ್ಲಿನ ಇಂಟರ್​ನೆಟ್​ ಎಷ್ಟು ವೇಗವಿದೆಯೋ ಅಷ್ಟೇ ದುಬಾರಿಯಾಗಿದೆ. ಅಲ್ಲದೆ ಫ್ರೀ ಇಂಟರ್​ನೆಟ್​ ಸೇವೆ ಸಿಗುವುದು ಕನಸಿನ ಮಾತು ಎನ್ನಲಾಗುತ್ತದೆ.


ಅಂದಹಾಗೆ ನೀವು ಆಸ್ಟ್ರೇಲಿಯಾ ಪ್ರಯಾಣಕ್ಕೆ ರೆಡಿಯಾದರೆ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಅಲ್ಲಿನ ದುಬಾರಿ ಹೊಟೇಲ್​ಗಳು​. ಈ ದೇಶದ ಲಾಡ್ಜ್​ ಅಥವಾ ಹೊಟೇಲ್​ಗಳು ತುಂಬಾ ದುಬಾರಿಯಾಗಿರುತ್ತದೆ. ಕನಿಷ್ಠ ಲಾಡ್ಜ್ ಚಾರ್ಜ್ 100 ಡಾಲರ್ ಆಗಿರುತ್ತದೆ.
Published by: G Hareeshkumar
First published: November 30, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading