ಕಾಗೆಗಳಿಂದ ಈ ಪಾರ್ಕ್​ನಲ್ಲಿ ಸ್ವಚ್ಛತಾ ಅಭಿಯಾನ!

news18
Updated:August 12, 2018, 10:47 PM IST
ಕಾಗೆಗಳಿಂದ ಈ ಪಾರ್ಕ್​ನಲ್ಲಿ ಸ್ವಚ್ಛತಾ ಅಭಿಯಾನ!
news18
Updated: August 12, 2018, 10:47 PM IST
-ನ್ಯೂಸ್ 18 ಕನ್ನಡ

ಮನುಷ್ಯ ಎಷ್ಟೇ ಸುಶಿಕ್ಷಿತನಾದರೂ ಕೆಲ ವರ್ತನೆಗಳಲ್ಲಿ ಪ್ರಾಣಿಗಳಿಗಿಂತ ಕಡೆ ಆಗಿರುತ್ತಾನೆ ಎಂದರೆ ತಪ್ಪಾಗಲಾರದು. ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ಮೇಲೆ ಸವಾರಿ ಮಾಡುವ ಮಾನವರು ಇದೆಲ್ಲವೂ ತನ್ನ ಹಕ್ಕು ಎಂಬಂತೆ ಪರಿಸರವನ್ನು ಮಲಿನಗೊಳಿಸುತ್ತಾನೆ. ಫ್ರಾನ್ಸ್​ನ ಹಿಸ್ಟೋರಿಕಲ್​ ಥೀಮ್​ ಪಾರ್ಕ್​​ನಲ್ಲೂ ಅಲ್ಲಿನ ಜನರು ಮಾಡಿದ್ದೂ ಅದೇ ಕೆಲಸವನ್ನು. ಸುಂದರವಾದ ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿದ್ದರು.ಈ ಬಗ್ಗೆ ಎಚ್ಚೆತ್ತ ಅಲ್ಲಿನ ಸರ್ಕಾರ ಉಪಾಯವೊಂದನ್ನು ಮಾಡಿದೆ. ಪಾರ್ಕ್​ನ್ನು ಸ್ವಚ್ಛವಾಗಿಡಲು ಆರು ಕಾಗೆಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಕಾಗೆಗಳು ಉದ್ಯಾನವನದಲ್ಲಿರುವ ಸಿಗರೇಟ್ ತುಂಡುಗಳನ್ನು ಮತ್ತು ಇತರೆ ಕಸ ಕಡ್ಡಿಗಳನ್ನು ಹೆಕ್ಕುವ ಕೆಲಸ ಮಾಡಲಿದೆ ಎಂದು ಪಾರ್ಕ್​ನ ಅಧ್ಯಕ್ಷರು ತಿಳಿಸಿದ್ದಾರೆ.

ಈ ಪಾರ್ಕ್​ಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಕಸಗಳನ್ನು ಎಸೆಯುತ್ತಿದ್ದು, ಇದನ್ನು ಸ್ವಚ್ಛಗೊಳಿಸಲು ಮುಂದಿನ ವಾರದಿಂದ ಕಾಗೆಗಳನ್ನು ನಿಯೋಜಿಸಲಾಗುತ್ತದೆ. ಆದರೆ ಇದರ ಉದ್ದೇಶ ಕಾಗೆಗಳಿಂದ ಕೆಲಸ ಮಾಡಿಸುವುದಲ್ಲ. ಬದಲಾಗಿ ಪ್ರವಾಸಿಗರಿಗೆ ಸ್ವಚ್ಛತೆಯ ಅರಿವು ಮೂಡಿಸುವುದಾಗಿದೆ. ಪ್ರಾಣಿಗಳೇ ಪರಿಸರವನ್ನು ಸ್ವಚಂಧವಾಗಿಟ್ಟುಕೊಳ್ಳುವಾಗ ಮನುಷ್ಯರ ಮನಪರಿವರ್ತನೆ ಆಗಬಹುದು ಎಂಬುದು ಪುಯ್​​ ಡು ಫೌ ಪಾರ್ಕ್​​​ನ ನಿಕೋಲಸ್ ಡಿ ವಿಲಿಯರ್ಸ್​ರ ಅಭಿಪ್ರಾಯ.

ಕ್ಯಾರಿಯನ್ ಕ್ರೋ, ಜಾಕ್​ಡಾ ಮತ್ತು ರೇವನ್​ ಕಾಗೆಗಳ ಜಾತಿಗೆ ಸೇರುವ ರೂಕ್ಸ್​ ಕಾಗೆಯನ್ನು ತುಂಬಾ ಬುದ್ದಿವಂತ ಕಾಗೆ ಎಂದು ಪರಿಗಣಿಸಲಾಗುತ್ತದೆ. ಈ ಕಾಗೆಗಳು ಮಾನವನೊಂದಿಗಿನ ಸಂವಹನವನ್ನು ಗುರುತಿಸಲು ಹಾಗೂ ಉತ್ತಮ ಒಡನಾಟ ಹೊಂದುವುದರಲ್ಲಿ ಚತುರತೆ ಪ್ರದರ್ಶಿಸುತ್ತದೆ. ಹೀಗಾಗಿ ಈ ರೂಕ್ಸ್​ ಕಾಗೆಗಳಿಗೆ ತರಬೇತಿ ನೀಡಿ ಪಾರ್ಕ್​ನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಾಗೆಗಳ ಕೆಲಸವನ್ನು ಪ್ರೋತ್ಸಾಹಿಸಲು ರುಚಿಕರವಾದ ನೆಗ್ಗೆಟ್​ಗಳನ್ನು ನೀಡಲಾಗುತ್ತದೆ. ಪ್ರತಿಬಾರಿ ಕಸವನ್ನು ಹೆಕ್ಕಿ ಸಣ್ಣ ಡಬ್ಬಾದಲ್ಲಿ ಹಾಕಿದರೆ ರೂಕ್ಸ್​ ಕಾಗೆಗಳಿಗೆ ಬೇಕಾದ ಆಹಾರ ಸಿಗುತ್ತದೆ. ಇದರಿಂದ ಕಾಗೆಗಳ ಸ್ವಚ್ಛತಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನಿಕೋಲಸ್ ಡಿ ವಿಲಿಯರ್ಸ್ ತಿಳಿಸಿದ್ದಾರೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ