HOME » NEWS » Lifestyle » INTEGRAL COACH FACTORY RAILWAY RECRUITMENT 2020 FOR 1000 APPRENTICE POSTS ZP

Railway Recruitment 2020: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ

ಈ ಹುದ್ದೆಗಳಿಗೆ ಅಪ್ರೆಂಟಿಸ್ ವಿಭಾಗದಲ್ಲಿ ಆಯ್ಕೆ ನಡೆಯುವುದರಿಂದ ವೇತನ ನೀಡಲಾಗುವುದಿಲ್ಲ. ಬದಲಾಗಿ ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುತ್ತದೆ.

news18-kannada
Updated:September 14, 2020, 10:21 PM IST
Railway Recruitment 2020: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ
Railway Recruitment
  • Share this:
ಭಾರತೀಯ ರೈಲ್ವೆ ಇಲಾಖೆಯ ಚೆನ್ನೈ ಇಂಟಿಗ್ರೆಲ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ವಿಭಾಗದಲ್ಲಿ 1000 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿದ್ದು, ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರ: ಫಿಟ್ಟರ್, ಮೆಕಾನಿಸ್ಟ್‌, ಟರ್ನರ್‌, ಎಲೆಕ್ಟ್ರಿಷಿಯನ್, ಪ್ಲಂಬರ್‌, ಪೇಂಟರ್‌, ಸ್ಟೆನೋ, ಕೊಪರ್‌ ಸೇರಿದಂತೆ ಒಟ್ಟು 1000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಆಯಾ ವಿಭಾಗಕ್ಕೆ ಆಯಾ ವಿದ್ಯಾರ್ಹತೆಗಳನ್ನು ಪರಿಗಣಿಸಲಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ, ಐಟಿಐ ಮತ್ತು ಪಿಯುಸಿ ಪಾಸ್ ಆದವರು ಅರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

ತರಬೇತಿ ಭತ್ಯೆ: ಈ ಹುದ್ದೆಗಳಿಗೆ ಅಪ್ರೆಂಟಿಸ್ ವಿಭಾಗದಲ್ಲಿ ಆಯ್ಕೆ ನಡೆಯುವುದರಿಂದ ವೇತನ ನೀಡಲಾಗುವುದಿಲ್ಲ. ಬದಲಾಗಿ ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುತ್ತದೆ. ಅದರಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 6 ಸಾವಿರದಿಂದ 7 ಸಾವಿರದವರೆಗೆ ಭತ್ಯೆ ಸಿಗಲಿದೆ.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷದವಾಗಿರಬೇಕು. ಇನ್ನು ಮೀಸಲಾತಿ ವಿಭಾಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
Youtube Video

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ನೀವು ಎಸ್‌ಎಸ್‌ಎಲ್‌ಸಿ, ಐಟಿಐ ಮತ್ತು ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಸೆಪ್ಟೆಂಬರ್ 2020.

ಈ ಹುದ್ದೆಗಳ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published by: zahir
First published: September 14, 2020, 10:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories