Health Care: ಸಕ್ಕರೆ ಆರೋಗ್ಯಕ್ಕೆ ಹಾಳು, ಬದಲಿಗೆ ಬೇರೇನು ಬಳಸಬಹುದು?

ಸಕ್ಕರೆ ಬದಲಿಗೆ ಬಳಸುವ ಸಿಹಿಕಾರಕಗಳು ಮಾನವ ದೇಹದ ಮೇಲೆ ಕೆಟ್ಟ ಅಥವಾ ಉತ್ತಮ ಪರಿಣಾಮ ಬೀರುತ್ತವೆ ಎಂದು ಭಾವಿಸಲಾಗುತ್ತದೆ. ಸಿಹಿಕಾರಕಗಳ ಸೇವನೆ ದೇಹದ ಸೂಕ್ಷ್ಮಜೀವಿಗಳ ಕಾರ್ಯದಲ್ಲಿ ಬದಲಾವಣೆ ತರುತ್ತದೆ. ಸಿಹಿಕಾರಕ ಪದಾರ್ಥಗಳ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಬದಲಾಗುತ್ತ ಹೋಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನ್ಯೂಟ್ರಿಟಿವ್ ಅಲ್ಲದ (Non Nutritive) ಸಿಹಿಕಾರಕ ಪದಾರ್ಥಗಳ (Ingredients) ಬಳಕೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ಟ್ರೆಂಡ್‌ (Trend) ಆಗಿದೆ. ಈ ಸಿಹಿಕಾರಕ ಪದಾರ್ಥಗಳನ್ನು (Sweet Ingredients) ಸಕ್ಕರೆಯ ಬದಲಿಗೆ ಅಂದ್ರೆ ಸಕ್ಕರೆ ಪದಾರ್ಥದ ಪರ್ಯಾಯ ಪದಾರ್ಥವಾಗಿ ಇದನ್ನು ಬಳಕೆ ಮಾಡುವುದು ನೀವು ನೋಡಿರಬಹುದು. ತೂಕ ನಿಯಂತ್ರಿಸಲು ಹಲವರು ಸಕ್ಕರೆ ಬದಲು ಈ ರೀತಿಯ ಪರ್ಯಾಯ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಯಾವುದೇ ಕ್ಯಾಲೋರಿ ಇಲ್ಲದ ಅಂದ್ರೆ ಕ್ಯಾಲೋರಿ ರಹಿತ ಸಿಹಿ ತಿಂಡಿಗಳನ್ನು ತಯಾರಿಸಲು ಸಕ್ಕರೆ ಬದಲಿಗೆ ಬಳಸುವ ಈ ಪರ್ಯಾಯ ಪದಾರ್ಥಗಳು ಸಹಾಯ ಮಾಡುವುದೇ ಅವುಗಳ ವಿಶೇಷತೆ ಆಗಿದೆ. ಹಾಗಾಗಿ ಅವುಗಳನ್ನು ಸಕ್ಕರೆ ಬದಲಿ ಅಥವಾ ಕೃತಕ ಸಿಹಿ ಕಾರಕ ಪದಾರ್ಥಗಳು ಎಂದೂ ಕರೆಯುತ್ತಾರೆ.

    ಸಕ್ಕರೆ ಬದಲಿಗೆ ಬಳಸುವ ಪರ್ಯಾಯ ಸಿಹಿಕಾರಕಗಳು

    ಸೆಲ್‌ನಲ್ಲಿ ಪ್ರಕಟವಾದ ವೈಜ್‌ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರ ಪರೀಕ್ಷೆ ಹೇಳುವ ಪ್ರಕಾರ, ಸಿಹಿಕಾರಕಗಳು ನಿಷ್ಕ್ರಿಯವಾಗಿಲ್ಲ ಎಂದು ತೋರಿಸುತ್ತದೆ. ಅವು ಮಾನವ ದೇಹದ ಮೇಲೆ ಕೆಟ್ಟ ಅಥವಾ ಉತ್ತಮ ಪರಿಣಾಮ ಬೀರುತ್ತವೆ. ವಾಸ್ತವದಲ್ಲಿ ಈ ಸಿಹಿಕಾರಕಗಳ ಸೇವನೆ ಮಾಡುವುದು ದೇಹದ ಸೂಕ್ಷ್ಮಜೀವಿ ಬದಲಾಯಿಸಬಹುದು.

    ನಮ್ಮ ಕರುಳಿನಲ್ಲಿ ವಾಸಿಸುವ ಟ್ರಿಲಿಯನ್ಗಟ್ಟಲೆ ಸೂಕ್ಷ್ಮಜೀವಿಗಳು ವ್ಯಕ್ತಿಯ ರಕ್ತದ ಸಕ್ಕರೆ ಮಟ್ಟ ಬದಲಾಯಿಸುತ್ತ ಇರುತ್ತವೆ. ಜೊತೆಗೆ ಈ ಸಿಹಿಕಾರಕ ಪದಾರ್ಥಗಳ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಬದಲಾಗುತ್ತ ಹೋಗುತ್ತದೆ.

    ಇದನ್ನೂ ಓದಿ: ಚರ್ಮಕ್ಕೆ ಆರೈಕೆ ನೀಡಲು ವಿಟಮಿನ್ ಸಿ ಹೇಗೆ ಲಾಭಕಾರಿ?

    ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆ ಉಂಟು ಮಾಡುವ ಪದಾರ್ಥಗಳು

    2014 ರಲ್ಲಿ ವೈಸ್ಮನ್ ಇನ್ಸ್ಟಿಟ್ಯೂಟ್ ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಕೆಲವು ಪೌಷ್ಟಿಕಾಂಶ ಅಲ್ಲದ ಸಿಹಿಕಾರಕ ಪದಾರ್ಥಗಳು, ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆ ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ. ಮತ್ತು ಅದು ಹಾನಿಕಾರಕ ಆಗಿದೆ.

    ಹೊಸ ಅಧ್ಯಯನವಾದ ವೈಸ್ಮನ್ಸ್ ಡಿಪಾರ್ಟ್ಮೆಂಟ್ ಆಫ್ ಸಿಸ್ಟಮ್ಸ್ ಇಮ್ಯುನೊಲಾಜಿಯಿಂದ ಪ್ರೊ. ಎರಾನ್ ಎಲಿನಾವ್ ನೇತೃತ್ವದ ಸಂಶೋಧಕರ ತಂಡವು ಅಧ್ಯಯನದಲ್ಲಿ ಭಾಗಿಯಾದ ಸುಮಾರು 1,400 ಸಂಭಾವ್ಯ ಭಾಗವಹಿಸುವವರನ್ನು ಪರೀಕ್ಷೆ ಮಾಡಿ ನೋಡಿದೆ.

    ಆರು ಗುಂಪುಗಳಲ್ಲಿ ನಡೆದ ಅಧ್ಯಯನ ಹೇಳಿದ್ದೇನು?

    ಇದರಲ್ಲಿ 120 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅವರು ಯಾವುದೇ ರೀತಿಯ ಕೃತಕ ಸಿಹಿಕಾರಕ ಹೊಂದಿರುವ ಆಹಾರ ಅಥವಾ ಪಾನೀಯ ಸೇವನೆ ಮಾಡಲ್ಲ. ಈ ಜನರನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ.

    ನಾಲ್ಕು ಗುಂಪುಗಳಲ್ಲಿ ಭಾಗವಹಿಸಿದ ಜನರಿಗೆ ಪ್ರತಿ ಗುಂಪಿಗೆ ಸ್ಯಾಕ್ರರಿನ್, ಸುಕ್ರಲೋಸ್, ಆಸ್ಪರ್ಟೇಮ್ ಮತ್ತು ಸ್ಟೀವಿಯಾ ಸೇರಿದಂತೆ ಪೌಷ್ಟಿಕಾಂಶ ರಹಿತ ಸಿಹಿಕಾರಕಗಳ ಸ್ಯಾಚೆಟ್‌ ನೀಡಲಾಯಿತು. ಇನ್ನೆರಡು ಗುಂಪುಗಳಿಗೆ ನಿಯಂತ್ರಣವಾಗಿ ಸಿಹಿ ತಿಂಡಿ ನೀಡಲಾಯಿತು.

    ಗ್ಲೂಕೋಸ್ ಸಹಿಷ್ಣುತೆ ಮತ್ತು ಚಯಾಪಚಯ ತೊಂದರೆ

    ಎಲ್ಲಾ ನಾಲ್ಕು ಸಿಹಿಕಾರಕ ಪದಾರ್ಥ ಸೇವಿಸಿದ ಜನರಲ್ಲಿ ಸೂಕ್ಷ್ಮಜೀವಿಯ ರಚನೆ ಮತ್ತು ಕಾರ್ಯವನ್ನು ಬದಲಾಯಿಸುತ್ತವೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ. ಎರಡು ಸಿಹಿಕಾರಕ ಸ್ಯಾಕ್ರರಿನ್ ಮತ್ತು ಸುಕ್ರಲೋಸ್, ಜನರಲ್ಲಿ ಗ್ಲೂಕೋಸ್ ಸಹಿಷ್ಣುತೆ, ಸಕ್ಕರೆ ಚಯಾಪಚಯ ಗಮನಾರ್ಹವಾಗಿ ಬದಲಿಸಿದೆ ಎಂಬುದನ್ನು ಕಂಡು ಕೊಂಡಿದ್ದಾರೆ.

    ಈ ರೀತಿಯ ಬದಲಾವಣೆಗಳ ಪ್ರತಿಯಾಗಿ ಚಯಾಪಚಯ ಕಾಯಿಲೆಗೆ ಇದು ಕಾರಣ ಆಗಬಹುದು. ಇದಕ್ಕೆ ವಿರುದ್ಧವಾಗಿ ಎರಡು ನಿಯಂತ್ರಣ ಗುಂಪುಗಳಲ್ಲಿ ಸೂಕ್ಷ್ಮಜೀವಿ ಅಥವಾ ಗ್ಲೂಕೋಸ್ ಸಹಿಷ್ಣುತೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

    ಪೋಷಕಾಂಶ ರಹಿತ ಸಿಹಿಕಾರಕಗಳಿಂದ ತೊಂದರೆ

    ಪೌಷ್ಟಿಕಾಂಶವಿಲ್ಲದ ಸಿಹಿಕಾರಕಗಳು ನಮ್ಮ ಸೂಕ್ಷ್ಮಜೀವಿಯನ್ನು ಬದಲಾಯಿಸುವ ಮೂಲಕ ಗ್ಲೂಕೋಸ್ ಪ್ರತಿಕ್ರಿಯೆ ದುರ್ಬಲ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಅವರು ಪ್ರತಿ ವ್ಯಕ್ತಿಯ ಮೇಲೆ ಅನನ್ಯ ರೀತಿಯಲ್ಲಿ ಪರಿಣಾಮ ಬೀರುತ್ತವೆ.

    ಇದನ್ನೂ ಓದಿ: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ

    ಹಲವು ಅಧ್ಯಯನಗಳ ಪ್ರಕಾರ, ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂದು ತೋರಿಸಿರುವ ಸಕ್ಕರೆ ಸೇವನೆ, ಪೌಷ್ಟಿಕವಲ್ಲದ ಸಿಹಿಕಾರಕಗಳಿಗಿಂತ ಉತ್ತಮ ಎಂದು ಈ ಸಂಶೋಧನೆಗಳು ಯಾವುದೇ ಪುಷ್ಠಿ ನೀಡಿಲ್ಲ.
    Published by:renukadariyannavar
    First published: