Sleeping Problem: ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿ

ನಿದ್ರೆಯ ತೊಂದರೆ ಅನುಭವಿಸುತ್ತಿರುವವರಲ್ಲಿ ಮಾನಸಿಕ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ತಜ್ಞರು ಪ್ರತಿ ರಾತ್ರಿ 7 ರಿಂದ 9 ಗಂಟೆಗಳವರೆಗೆ ಚೆನ್ನಾಗಿ ನಿದ್ದೆ ಮಾಡಲು ಶಿಫಾರಸು ಮಾಡುತ್ತಾರೆ. ಆಯುರ್ವೇದ ವೈದ್ಯೆ ಐಶ್ವರ್ಯ ಸಂತೋಷ್ ಅವರು ಇತ್ತೀಚೆಗೆ ರಾತ್ರಿ ನಿದ್ರಾಹೀನತೆ ಸಮಸ್ಯೆ ಎದುರಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಾವು ಚೆನ್ನಾಗಿ ನಿದ್ರೆ (Sleeping) ಮಾಡಿದರೆ ನಮ್ಮ ಆರೋಗ್ಯವೂ (Health) ಉತ್ತಮವಾಗಿ ಇರುತ್ತದೆ. ಇನವೂ ನಿಯಮಿತವಾಗಿ ಉತ್ತಮ ನಿದ್ರೆ ಮಾಡುವುದು ನಮ್ಮನ್ನು ಆರೋಗ್ಯವಾಗಿಡುತ್ತದೆ. ಮತ್ತು ದೇಹವು (Body) ಪರಿಣಾಮಕಾರಿಯಾಗಿ (Effective) ಮತ್ತು ಚೆನ್ನಾಗಿ ಕಾರ್ಯ ನಿರ್ವಹಿಸಲು ನಿದ್ರೆ ಬಹಳ ಮುಖ್ಯ ಆಗಿದೆ. ನಿಮ್ಮ ಮೆದುಳು (Memory) ರಾತ್ರಿಯಲ್ಲಿ ಸ್ವಲ್ಪ ಸಮಯ ಮಾತ್ರ ವಿಶ್ರಾಂತಿ ಪಡೆಯುತ್ತದೆ. ಅಂತಹ ಸ್ಥಿತಿಯಲ್ಲಿ, ನೀವು ರಾತ್ರಿ ತುಂಬಾ ಹೊತ್ತು ಎಚ್ಚರವಾಗಿದ್ದರೆ, ಮಾನಸಿಕ ಕಾಯಿಲೆ ಬರುವ ಸಾಧ್ಯತೆ ಹೆಚ್ಚುತ್ತದೆ. ಮತ್ತು ದುರ್ಬಲ ಸ್ಮರಣೆ ಮತ್ತು ಗಮನ ಕೇಂದ್ರೀಕರಿಸುವಲ್ಲಿ ತೊಂದರೆ, ದುರ್ಬಲ ವಿನಾಯಿತಿ ಮತ್ತು ಮನಸ್ಥಿತಿ ಬದಲಾವಣೆ ಅಂತಹ ಅಡ್ಡ ಪರಿಣಾಮ ಅನುಭವಿಸಬಹುದು.

  ಪ್ರತಿ ರಾತ್ರಿ 7 ರಿಂದ 9 ಗಂಟೆ ಉತ್ತಮ ನಿದ್ರೆ ಮಾಡುವುದು ಮುಖ್ಯ

  ಹಾಗಾಗಿ ತಜ್ಞರು ಪ್ರತಿ ರಾತ್ರಿ 7 ರಿಂದ 9 ಗಂಟೆಗಳವರೆಗೆ ಚೆನ್ನಾಗಿ ನಿದ್ದೆ ಮಾಡಲು ಶಿಫಾರಸು ಮಾಡುತ್ತಾರೆ. ಆಯುರ್ವೇದ ವೈದ್ಯೆ ಐಶ್ವರ್ಯ ಸಂತೋಷ್ ಅವರು ಇತ್ತೀಚೆಗೆ ರಾತ್ರಿ ನಿದ್ರಾಹೀನತೆ ಸಮಸ್ಯೆ ಎದುರಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಶೇರ್ ಮಾಡಿದ್ದಾರೆ.

  ಅವರು ಶೇರ್ ಮಾಡಿರುವ ಪೋಸ್ಟ್‌ನಲ್ಲಿ, ನಿದ್ರಿಸಲು ತೊಂದರೆ ಅನುಭವಿಸುತ್ತಿರುವವರಿಗೆ, ಮಧ್ಯೆ ಮಧ್ಯೆ ಎಚ್ಚರಗೊಳ್ಳುವವರಿಗೆ ಮತ್ತು ಬೆಳಿಗ್ಗೆ ದಣಿದಿರುವವರಿಗೆ ಉತ್ತಮ ನಿದ್ರೆಗಾಗಿ 5 ಆಯುರ್ವೇದ ಪರಿಹಾರ ಶಿಫಾರಸು ಮಾಡುತ್ತಾರೆ. ಉತ್ತಮ ನಿದ್ರೆಗೆ ಅವರು ಹೇಳಿರುವ ಪರಿಹಾರಗಳು ಯಾವುವು ಎಂದು ನಾವು ಇಲ್ಲಿ ನೋಡೋಣ.

  ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

  ಸ್ಲೀಪ್ ರೆಮಿಡಿ ಪದಾಭ್ಯಂಗ್

  ರಾತ್ರಿಯಲ್ಲಿ ನಿದ್ರಿಸಲು ಸಾಧ್ಯವಾಗದೆ, ತೊಂದರೆ ಅನುಭವಿಸುತ್ತಿದ್ದರೆ ಪದಾಭ್ಯಂಗವನ್ನು ಅಭ್ಯಾಸ ಮಾಡಿ. ಇದರಲ್ಲಿ ಎರಡೂ ಪಾದಗಳಿಗೆ ಎಣ್ಣೆ ಹಚ್ಚಬೇಕು. ತದನಂತರ ಇದನ್ನು ಸ್ವಲ್ಪ ಸಮಯ ಚೆನ್ನಾಗಿ ಮಸಾಜ್ ಮಾಡಿ. ನಂತರ ಒಂದು ಗಂಟೆ ಬಿಟ್ಟು ಅದನ್ನು ಒರೆಸಿ ಅಥವಾ ನೀರಿನಿಂದ ತೊಳೆಯಿರಿ. ಪ್ರತಿದಿನ ರಾತ್ರಿ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಫಲಿತಾಂಶ ಸಿಗುತ್ತದೆ.

  ಸ್ಲೀಪಿಂಗ್ ರೆಮಿಡಿ ಪ್ರಾಣಾಯಾಮ

  ರಾತ್ರಿ ವೇಳೆ ನಿದ್ರಿಸಲು ನಿಮಗೆ ತೊಂದರೆ ಆಗುತ್ತಿದ್ದರೆ ಪ್ರಾಣಾಯಾಮವು ನಿಮಗೆ ನಿದ್ರೆಯ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ. ಚಂದ್ರ ಅನುಲೋಮ್ ವಿಲೋಮ್ ಪ್ರಾಣಾಯಾಮ ಮಾಡುವುದು ನಿಮ್ಮ ದೇಹವು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

  ಇದು ಪ್ರಾಣಾಯಾಮದಲ್ಲಿ ಒಂದು ಮೂಗಿನ ಹೊಳ್ಳೆಯ ಮೂಲಕ ಉಸಿರು ಒಳಗೆ ತೆಗೆದುಕೊಳ್ಳುವುದು ಮತ್ತು ಇನ್ನೊಂದು ಮೂಗಿನ ಹೊಳ್ಳೆಯ ಮೂಲಕ ಬಿಡುವುದು ಆಗಿದೆ. ಮಲಗುವ ವೇಳೆ ಪ್ರತಿದಿನ 5 ನಿಮಿಷಗಳ ಕಾಲ ಪ್ರಾಣಾಯಾಮ ಮಾಡುವುದು ನಿಮಗೆ ಪ್ರಯೋಜನ ನೀಡುತ್ತದೆ.

  ಸ್ಲೀಪಿಂಗ್ ರೆಮಿಡಿ ಔಷಧೀಯ ಹಾಲು

  ನಿದ್ರಾಹೀನತೆ ಸಮಸ್ಯೆ ನಿವಾರಿಸಲು ಔಷಧೀಯ ಹಾಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಸಲು ಒಂದು ಗ್ಲಾಸ್ ಹಾಲಿಗೆ ಕಾಲು ಚಮಚ ಜಾಯಿಕಾಯಿ ಪುಡಿ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಏಲಕ್ಕಿ ಪುಡಿ ಮಿಶ್ರಣ ಮಾಡಿ. ಈಗ ಅದನ್ನು 5 ನಿಮಿಷ ಕುದಿಸಿ. ಇದನ್ನು ಫಿಲ್ಟರ್ ಮಾಡಿ ಮತ್ತು ಮಲಗುವ ಮುನ್ನ ಪ್ರತಿದಿನ ಸೇವಿಸಿ.

  ಸ್ಲೀಪಿಂಗ್ ರೆಮಿಡಿ ಡಯಟ್

  ನಿದ್ರಾಹೀನತೆ ಸಮಸ್ಯೆ ಹೊಂದಿರುವವರು ವ್ಯಕ್ತಿಯು ಆಹಾರಕ್ರಮದಲ್ಲಿ ಕೆಲವು ಬದಲಾವಣೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಸೂರ್ಯಾಸ್ತದ ಮೊದಲು ತಿನ್ನುವುದು ಮತ್ತು ಸಂಜೆ ಚಹಾ ಅಥವಾ ಕಾಫಿ ಸೇವನೆ ತಪ್ಪಿಸುವುದರ ಹೊರತಾಗಿ ಬಿಸಿ ಆಹಾರ ಸೇವಿಸುವುದು ಆಗಿದೆ.

  ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

  ಸ್ಲೀಪ್ ರೆಮಿಡಿ ಜೀವನಶೈಲಿ

  ನಿದ್ರೆ ತೊಂದರೆ ಇದ್ದರೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿ. ಊಟವಾದ ನಂತರ 100 ಹೆಜ್ಜೆ ನಡೆಯಿರಿ. ರಾತ್ರಿ 10 ಗಂಟೆಯ ಮೊದಲು ಮಲಗುವುದು, ಮಲಗುವ ಒಂದು ಗಂಟೆ ಮೊದಲು ಫೋನ್, ಲ್ಯಾಪ್‌ಟಾಪ್, ಟಿವಿ ಬಳಕೆ ನಿಲ್ಲಿಸುವುದು.
  Published by:renukadariyannavar
  First published: