Winter Coffee: ಚಳಿಗಾಲದಲ್ಲಿ ಸದಾ ಬೆಚ್ಚಗೆ ಇರಲು ಕಾಫಿಯ ಜೊತೆಗೆ ಈ ವಸ್ತುಗಳನ್ನ ಸೇರಿಸಿ ಕುಡಿಯಿರಿ

Coffee: ಕಾಫಿಯಿಂದ ಸಿಗುವ ಆರೋಗ್ಯಕರ ಪೌಷ್ಟಿಕಾಂಶಗಳು ನಿಜವಾಗಿಯೂ ನಮ್ಮಲ್ಲಿ ನಮಗೆ ಧೈರ್ಯ ತುಂಬುತ್ತದೆ.ಇನ್ನು ಕಾಫಿಯಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾಗಿರುವಂತಹ ಮೆಗ್ನಿಶಿಯಂ ಮತ್ತು ಪೊಟಾಶಿಯಂ ಇದೆ. ಇವುಗಳು ದೇಹವು ಇನ್ಸುಲಿನ್ ಉಪಯೋಗಿಸಲು ನೆರವಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಳಿಗಾಲ(Winter) ಅಂದ್ರೆ ಸಾಕು ಸದಾ ದೇಹವನ್ನು(Body) ಬೆಚ್ಚಗೆ(Warm) ಇರಿಸಿಕೊಳ್ಳುವ ಕಾಲ.. ಮನೆಯಲ್ಲಿ(Home) ತಿನ್ನುವ ಪ್ರತಿಯೊಂದು ಆಹಾರ ಪದಾರ್ಥಗಳು(Food) ಬಿಸಿಯಾಗಿ(Hot) ಇರಬೇಕು ಎಂದು ಬಯಸುವ ಕಾಲ.. ಮನೆಯಿಂದ ಹೊರಗೆ ಬಂದರೆ ತಣ್ಣಗೆ ಬೀಸುವ ಶೀತ ಗಾಳಿಯಿಂದ (Cold Wave) ಕೈಕಾಲುಗಳು ತಣ್ಣಗೆ ಆದಾಗ ಗಡಗಡ ನಡುಗುವ ಅನುಭವ ಆಗುತ್ತದೆ.. ಇಂತಹ ಸಮಯದಲ್ಲಿ ದೇಹವನ್ನ ಬೆಚ್ಚಗಿರಿಸಲು ಬಿಸಿಬಿಸಿಯಾಗಿ ಏನನ್ನಾದರೂ ತಿನ್ನಬೇಕು ಅಥವಾ ಕುಡಿಯಬೇಕು ಎಂದುಕೊಂಡಾಗ ಥಟ್ಟನೆ ನೆನಪಾಗುವುದು ಕಾಫಿ.. ಚಳಿಗಾಲದಲ್ಲಿ ಎಷ್ಟು ಬೇಕಾದರೂ ಕೆಲವರು ಕಾಫಿ ಕುಡಿಯುವ ಹವ್ಯಾಸ ಇಟ್ಟುಕೊಂಡಿರುತ್ತಾರೆ.. ಒಂದು ಗುಟುಕು ಕಾಫಿ ದೇಹವನ್ನು ಸೇರುತ್ತಿದ್ದಂತೆ ದೇಹದ ಒಳಗೆ ಬೆಚ್ಚನೆಯ ಅನುಭವ ಆಗುತ್ತದೆ.. ಹೀಗಾಗಿ ಚಳಿಗಾಲದಲ್ಲಿ ಕಾಫಿ ಸೇವನೆ ಬೂಸ್ಟರ್ ಡೋಸ್ ನಂತೆ ಕೆಲಸ ಮಾಡುತ್ತದೆ. ಹೀಗಾಗಿಯೇ ಕೆಲವರು ವಿವಿಧ ಬಗೆಯ ಕಾಫಿ ಗಳನ್ನು ಮನೆಯಲ್ಲಿ ಮಾಡಿಕೊಂಡು ಕುಡಿಯಲು ಇಷ್ಟಪಡುತ್ತಾರೆ.. ಆದರೆ ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.. ಹೀಗಾಗಿಯೇ ನೀವು ಕಾಫಿ ಕುಡಿಯಲು ಬಯಸಿದರೆ ಚಳಿಗಾಲದಲ್ಲಿ ಕಾಫಿ ಜೊತೆಗೆ ಒಂದಷ್ಟು ವಸ್ತುಗಳನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ದೇಹ ಬೆಚ್ಚಗೆ ಇರುವುದರ ಜೊತೆಗೆ ಆರೋಗ್ಯದಿಂದ ಕೂಡ ಇರುವುದು.

  ಇನ್ನು ಕಾಫಿ ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, ಟೈಪ್​ 2 ಡಯಾಬಿಟಿಸ್​, ಖಿನ್ನತೆ, ಸಿರೋಸಿಸ್,​ ಆತ್ಮಹತ್ಯೆ ಮನೋಭಾವ, ಪಿತ್ತಜನಕಾಂಗದ ಕ್ಯಾನ್ಸರ್​ ನಂತಹ ಸಮಸ್ಯೆಗಳಿಂದ ದೂರವಿರಬಹುದು. ಇವುಗಳ ವಿರುದ್ಧ ಹೋರಾಡಬಲ್ಲ ಪೌಷ್ಟಿಕ ಅಂಶಗಳು ಕಾಫಿಯಲ್ಲಿ ಸಿಗುತ್ತವೆ. ಕಾಫಿಯಿಂದ ಸಿಗುವ ಆರೋಗ್ಯಕರ ಪೌಷ್ಟಿಕಾಂಶಗಳು ನಿಜವಾಗಿಯೂ ನಮ್ಮಲ್ಲಿ ನಮಗೆ ಧೈರ್ಯ ತುಂಬುತ್ತದೆ.ಇನ್ನು ಕಾಫಿಯಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾಗಿರುವಂತಹ ಮೆಗ್ನಿಶಿಯಂ ಮತ್ತು ಪೊಟಾಶಿಯಂ ಇದೆ. ಇವುಗಳು ದೇಹವು ಇನ್ಸುಲಿನ್ ಉಪಯೋಗಿಸಲು ನೆರವಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವುದು.

  1)ದಾಲ್ಚಿನ್ನಿ: ದಾಲ್ಚಿನ್ನಿ ಅಥವಾ ಚಕ್ಕೆ ತನ್ನಲ್ಲಿ ಆಂಟಿ - ಆಕ್ಸಿಡೆಂಟ್ ಮತ್ತು anti - inflammatory ಗುಣ - ಲಕ್ಷಣಗಳನ್ನು ಪಡೆದಿದೆ. ಮಧುಮೇಹ ನಿಯಂತ್ರಣದಲ್ಲಿ ಈ ಅಂಶಗಳು ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ.
  ಗಾಢವಾಗಿರುವ ರಕ್ತವನ್ನು ತೆಳುವಾಗಿಸಿ ರಕ್ತಪರಿಚಲನೆಯನ್ನು ಸುಲಭವಾಗಿಸುವಲ್ಲಿ ದಾಲ್ಚಿನ್ನಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ.
  ಜೊತೆಗೆ ದಾಲ್ಚಿನ್ನಿಯನ್ನ ಚಳಿಗಾಲದಲ್ಲಿ ಕಾಫಿಯಾ ಜೊತೆಗೆ ಸೇರಿಸಿ ಕುಡಿಯುವುದರಿಂದ ನಮ್ಮಪಿತ್ತಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆ ಸುಧಾರಣೆಗೊಳ್ಳಲಿದೆ.

  ಇದನ್ನೂ ಓದಿ: ದಿನಕ್ಕೊಂದು ಸೇಬು ಆರೋಗ್ಯಕ್ಕೆ ಉತ್ತಮ ಆದ್ರೆ ಅದಕ್ಕಿಂತ ಹೆಚ್ಚು ತಿನ್ನೋದು ಈ ಸಮಸ್ಯೆಗೆ ಕಾರಣವಾಗುತ್ತಂತೆ

  2)ಚಾಕೊಲೇಟ್: ಕಾಫಿಯಲ್ಲಿ ಕೆಫೀನ್, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಯಮ್ ಮುಂತಾದ ಗುಣಗಳಿವೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಕೊಬ್ಬನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಹೀಗಾಗಿ ಚಾಕಲೇಟ್‌ಗಳಲ್ಲಿ ಸಿಗುವ ಹಲವಾರು ಬಗೆಯ ಅದ್ಭುತ ಅಂಶಗಳು ದೇಹದ ಸದೃಢತೆಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಒಳಗಿನ ಸಾಕಷ್ಟು ಅಂಗಗಳಿಗೆ ಆರೋಗ್ಯಕರ ಅಭಿವೃದ್ಧಿಯನ್ನು ತಂದು ಕೊಡುತ್ತವೆ. ಹೀಗಾಗಿ ಕಾಫಿಗೆ
  ಚಾಕೊಲೇಟ್ ಸೇರಿಸಿ ಕುಡಿಯಬಹುದು.

  3)ಶುಂಠಿ: ಶುಂಠಿಯು ಅದ್ಭುತ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ಹಾಗೂ ಮನೆ ಮದ್ದು ತಯಾರಿಕೆಯಲ್ಲಿ ಶುಂಠಿಯನ್ನು ಪ್ರಮುಖ ವಸ್ತುವನ್ನಾಗಿ ಬಳಸಲಾಗುವುದು. ಇದರಲ್ಲಿ ಇರುವ ರೋಗ ನಿರೋಧಕ ಶಕ್ತಿಯು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಬಹು ಬೇಗ ನಿವಾರಣೆ ಮಾಡುವುದು.ಹೀಗಾಗಿ ಶುಂಠಿಯನ್ನು ಹೊಂದಿರುವ ಒಂದು ಕಪ್ ಕಾಫಿ ನಿಮ್ಮ ದೇಹವನ್ನು ಚೈತನ್ಯ ಶೀಲವಾಗಿರಿಸುವುದರ ಜೊತೆಗೆ ಆರೋಗ್ಯ ವೃದ್ಧಿ ಮಾಡುವುದು. ಜೀರ್ಣ ಕ್ರಿಯೆಗೆ ಸಹಾಯ ಮಾಡುವುದು.

  ಇದನ್ನೂ ಓದಿ: ದಿನನಿತ್ಯ ಪಪ್ಪಾಯಿ ತಿನ್ನೊದ್ರಿಂದ ಕೆಮ್ಮು, ವಾತ ನಿಮ್ಮ ಹತ್ರನೂ ಸುಳಿಯಲ್ಲ..

  4)ಪೆಪ್ಪರ್ ಮೆಂಟ್: ಪೆಪ್ಪರ್ ಮೆಂಟ್ ನ್ನು ಕಾಫಿಗೆ ಸೀರಿಸಿ ಕುಡಿಯುವುದರಿಂದ ಚಳಿಗಾಲದಲ್ಲಿ ನಮಗೆ ಹೊಸ ಉತ್ಸಾಹ ಸಿಗಲಿದೆ. ಅದ್ರಲ್ಲೂ ಪುದೀನಾ ಫ್ಲೇವರ್ ಇರುವ ಪೆಪ್ಪರ್ ಮೆಂಟ್ ಕಾಫಿಗೆ ಸೇರಿಸಿದ್ರೆ ನಮ್ಮ ದೇಹಕ್ಕೆ ಹೊಸ ಚೈತನ್ಯ ಸಿಗಲಿದೆ.
  Published by:ranjumbkgowda1 ranjumbkgowda1
  First published: