• Home
  • »
  • News
  • »
  • lifestyle
  • »
  • Brain Health: ದೇಹದ ಉರಿಯೂತ ತಡೆಯಲು ಮತ್ತು ಮೆದುಳು ಚುರುಕಾಗಿಸುತ್ತದೆ ಈ ಗಿಡಮೂಲಿಕೆ!

Brain Health: ದೇಹದ ಉರಿಯೂತ ತಡೆಯಲು ಮತ್ತು ಮೆದುಳು ಚುರುಕಾಗಿಸುತ್ತದೆ ಈ ಗಿಡಮೂಲಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದ ಬ್ರಾಹ್ಮಿ ಗಿಡಮೂಲಿಕೆಯನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಮೆದುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ನರಮಂಡಲ ಶಾಂತಗೊಳಿಸುವ ಮತ್ತು ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿದೆ.

  • Share this:

    ಭಾರತದಲ್ಲಿ (India) ಬಹಳ ಜನಪ್ರಿಯವಾದ (Famous) ಹಲವು ಗಿಡಮೂಲಿಕೆಗಳು (Herbs) ಇವೆ. ಅವುಗಳಲ್ಲಿ ಬ್ರಾಹ್ಮಿ ಗಿಡಮೂಲಿಕೆ (Brahmi Herb) ಸಹ ಒಂದು. ಇದನ್ನು ಆಯುರ್ವೇದದಲ್ಲಿ (Ayurveda) ಔಷಧೀಯ ಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ. ಆಯುರ್ವೇದದ ಪ್ರಕಾರ, ಬ್ರಾಹ್ಮಿ ಗಿಡಮೂಲಿಕೆ ಒತ್ತಡ ಮತ್ತು ಆತಂಕ ಕಡಿಮೆ ಮಾಡುವ ಗುಣ ಹೊಂದಿದೆ. ಅಷ್ಟೇ ಅಲ್ಲದೇ, ಇದು ಮೆದುಳು ಹೆಚ್ಚಿಸುವ ಟಾನಿಕ್ ಎಂದು ಸಹ ಪರಿಗಣಿಸಲ್ಪಟ್ಟಿದೆ. ಗೋಟು ಕೋಲಾ ಎಂದೂ ಕರೆಯಲ್ಪಡುವ ಬ್ರಾಹ್ಮಿ ಗಿಡಮೂಲಿಕೆ ಹೆಸರು ಬ್ರಾಹ್ಮಣದಿಂದ ಬಂದಿದೆ. ಇದು ಸಂಸ್ಕೃತ ಹೆಸರು ಆಗಿದೆ. ಈ ಹೆಸರು ವ್ಯಕ್ತಿಯ ಪ್ರಜ್ಞೆ ಅಥವಾ ಮನಸ್ಸಿನ ಮೇಲೆ ಈ ಮೂಲಿಕೆಯ ಪರಿಣಾಮ ಬೀರುತ್ತದೆ.


    ಬ್ರಾಹ್ಮಿ ಗಿಡಮೂಲಿಕೆಯ ಇತರೆ ಹೆಸರುಗಳು ಸೆಂಟೆಲ್ಲಾ ಏಷ್ಯಾಟಿಕಾ ಮತ್ತು ಬಾಕೋಪಾ ಮೊನೆರಿ ಆಗಿದೆ. ಬ್ರಾಹ್ಮಿ ಗಿಡಮೂಲಿಕೆ ದುಂಡಗಿನ ಎಲೆ ಹೊಂದಿರುವ ಸಣ್ಣ ಬಳ್ಳಿಯಂತೆ ಕಾಣುತ್ತದೆ. ಇದರ ಎಲೆಗಳ ಆಕಾರ ಮೆದುಳಿನ ಆಕಾರದಂತೆಯೇ ಇರುತ್ತದೆ.


    ಆಯುರ್ವೇದ ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಮೆದುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ನರಮಂಡಲ ಶಾಂತಗೊಳಿಸುವ, ರಕ್ತವನ್ನು ಶುದ್ಧೀಕರಿಸುವ, ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಿಸುವ ಗುಣ ಹೊಂದಿದೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಮನಸ್ಸನ್ನು ಚುರುಕಾಗಿಸುತ್ತದೆ


    ಇದು ಮನಸ್ಸನ್ನು ಶಾಂತಗೊಳಿಸುವ ಗುಣ ಹೊಂದಿದೆ. ಮತ್ತು ಮನಸ್ಸಿನ ಕಾರ್ಯ ನಿರ್ವಹಣೆ ಸುಧಾರಿಸಲು ಬ್ರಾಹ್ಮಿ ಗಿಡಮೂಲಿಕೆ ಸಹಾಯ ಮಾಡುತ್ತದೆ. ಇದು ಮೆದುಳಿನ ಆಲೋಚನಾ ಶಕ್ತಿ ಸುಧಾರಿಸುತ್ತದೆ. ಜೊತೆಗೆ ವ್ಯಕ್ತಿಯ ಬುದ್ಧಿಶಕ್ತಿ ಚುರುಕಾಗಿಸುತ್ತದೆ.


    2020 ರ ಸಂಶೋಧನಾ ಅಧ್ಯಯನದ ಪ್ರಕಾರ, ದಿನಕ್ಕೆ ಎರಡು ಬಾರಿ ಬ್ರಾಹ್ಮಿ ಸೇವನೆ ಮಾಡುವುದು ಮೆದುಳಿನ ಕಾರ್ಯ ನಿರ್ವಹಣೆ ಸುಧಾರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.


    ದೇಹದ ಕಾರ್ಟಿಸೋಲ್ ಮಟ್ಟ ಕಡಿಮೆ ಮಾಡುತ್ತದೆ


    ಬ್ರಾಹ್ಮಿ ಗಿಡಮೂಲಿಕೆಯಲ್ಲಿರುವ ಸಂಯುಕ್ತಗಳು ದೇಹದ ಕಾರ್ಟಿಸೋಲ್ ಮಟ್ಟ ಕಡಿಮೆ ಮಾಡುವ ಮೂಲಕ ಮನಸ್ಥಿತಿ ಸುಧಾರಿಸುತ್ತದೆ. ಕಾರ್ಟಿಸೋಲ್ ಒತ್ತಡದ ಹಾರ್ಮೋನ್ ಆಗಿದೆ. ಇದು ದೇಹದಲ್ಲಿ ಸಿರೊಟೋನಿನ್ ಅಥವಾ ಸಂತೋಷದ ಹಾರ್ಮೋನ್ ಮಟ್ಟ ಹೆಚ್ಚಿಸುತ್ತದೆ. ಮತ್ತು ಇದು ಒತ್ತಡ ನಿವಾರಿಸುತ್ತದೆ.


    ಅನೇಕ ರೋಗ ತಡೆಗಟ್ಟುವಲ್ಲಿ ಸಹಕಾರಿ


    ಬ್ರಾಹ್ಮಿ ಶಕ್ತಿಯುತ ಉತ್ಕರ್ಷಣ ನಿರೋಧ ಹೊಂದಿದೆ. ಮತ್ತು ಇದರ ಸೇವನೆ ದೇಹವನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್ ಕೋಶಗಳಿಂದ ರಕ್ಷಿಸುತ್ತದೆ. ಸ್ವತಂತ್ರ ರಾಡಿಕಲ್ಗಳು ಮಾನವ ದೇಹಕ್ಕೆ ಹಾನಿಕರ. ಮತ್ತು ಹೃದ್ರೋಗ, ಮಧುಮೇಹ ಮತ್ತು ವಿವಿಧ ರೀತಿಯ ಕ್ಯಾನ್ಸರ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗೆ ಸಂಬಂಧಿಸಿವೆ.


    ಉರಿಯೂತ ಸಹ ಕಡಿಮೆ ಮಾಡುತ್ತದೆ


    ಉರಿಯೂತ ಕೆಲವೊಮ್ಮೆ ದೇಹಕ್ಕೆ ಹಾನಿಕಾರಕ. ನೀವು ಅದರ ವಿರುದ್ಧ ಹೋರಾಡಲು ನೈಸರ್ಗಿಕ ಮಾರ್ಗ ಹುಡುಕುತ್ತಿದ್ದರೆ ಬ್ರಾಹ್ಮಿ ಮೂಲಿಕೆ ನಿಮಗೆ ಸಹಾಯ ಮಾಡುತ್ತದೆ. ಉರಿಯೂತವು ಅನೇಕ ರೀತಿಯ ಕ್ಯಾನ್ಸರ್ ಉಂಟಾಗಲು ಸಂಬಂಧಿಸಿದೆ. ಬ್ರಾಹ್ಮಿ ಇದು ಉರಿಯೂತ ಗುಣಲಕ್ಷಣ ಸಹ ಹೊಂದಿದೆ.


    ರಕ್ತದೊತ್ತಡ ನಿಯಂತ್ರಿಸುತ್ತದೆ


    ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಬ್ರಾಹ್ಮಿ ಎಲೆಗಳು ಯಾವುದೇ ಔಷಧಗಿಂತ ಕಡಿಮೆಯಿಲ್ಲ. ಸಹಜವಾಗಿ ಇದು ತಕ್ಷಣದ ವೈದ್ಯಕೀಯ ಸಹಾಯದ ಅಗತ್ಯವಿರುವ ಗಂಭೀರ ಸ್ಥಿತಿ ಆಗಿದೆ. ಆದರೆ ಬ್ರಾಹ್ಮಿ ಎಲೆಗಳ ಸೇವನೆ ರಕ್ತದೊತ್ತಡ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಈ ಸಸ್ಯದ ಎಲೆಗಳ ಸೇವನೆ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ನಿಯಂತ್ರಿಸುತ್ತದೆ. ಕೆಲವು ಪ್ರಾಣಿಗಳ ಅಧ್ಯಯನಗಳು ಬ್ರಾಹ್ಮಿ ಎಲೆಗಳು ರಕ್ತನಾಳ ಹಿಗ್ಗಿಸುವ ಮತ್ತು ರಕ್ತದ ಹರಿವನ್ನು ಸುಧಾರಿಸುವ ನೈಟ್ರಿಕ್ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ ಎಂದು ಹೇಳಿವೆ.

    Published by:renukadariyannavar
    First published: