ಸೋಂಕಿಂನಿಂದಲೂ ಸಂಭವಿಸುತ್ತೆ ಹೃದಯಾಘಾತ; ಆಘಾತಕಾರಿ ವಿಚಾರ ಬಿಚ್ಚಿಟ್ಟ ವೈದ್ಯರು

ಈ ರೀತಿ ಸೊಂಕು ತಗಲಿದ ಎಲ್ಲರಿಗೂ ಹೃದಯಾಘಾತ ಅಥವಾ ಸ್ಟ್ರೋಕ್​ ಉಂಟಾಗುತ್ತದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಈ ರೀತಿ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಹಾಗಾಗಿ ಇಂಥ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೇ ವೈದ್ಯರಿಗೆ ತೋರಿಸುವುದು ಉತ್ತಮ ಎನ್ನುತ್ತಾರೆ ಅಧ್ಯಯನ ನಡೆಸಿದ ತಜ್ಞರು.

Rajesh Duggumane | news18-kannada
Updated:September 10, 2019, 11:15 PM IST
ಸೋಂಕಿಂನಿಂದಲೂ ಸಂಭವಿಸುತ್ತೆ ಹೃದಯಾಘಾತ; ಆಘಾತಕಾರಿ ವಿಚಾರ ಬಿಚ್ಚಿಟ್ಟ ವೈದ್ಯರು
ಸಾಂದರ್ಭಿಕ ಚಿತ್ರ
  • Share this:
ಸಕ್ಕರೆ ಕಾಯಿಲೆ, ಅತಿಯಾದ ರಕ್ತದೊತ್ತಡ ಹಾಗೂ ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾದರೆ ಹೃದಯಾಘಾತ ಸಂಭವಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ, ಕೆಲವೊಮ್ಮೆ ಅಲರ್ಜಿ ಉಂಟಾದರೂ ಹೃದಯಾಘಾತ ಉಂಟಾಗುವ ಸಾಧ್ಯತೆ ಇರುತ್ತದೆಯಂತೆ. ಹೊಸ ಅಧ್ಯಯನದ ಮೂಲಕ ಈ ವಿಚಾರ ಸಾಬೀತಾಗಿದೆ.

ಶ್ವಾಸಕೋಶ ಹಾಗೂ ಮೂತ್ರಕೋಶಕ್ಕೆ ಕೆಲವೊಮ್ಮೆ ಸೋಂಕು ತಗುಲುತ್ತದೆ. ಇದಾದ ಮೂರು ತಿಂಗಳಲ್ಲಿ ಹೃದಯಾಘಾತ ಹಾಗೂ ಸ್ಟ್ರೋಕ್​ ಎದುರಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಅಧ್ಯಯನ. ಹಲವು ವರ್ಷಗಳ ಕಾಲ ಅಮೆರಿಕದಲ್ಲಿ ಈ ಬಗ್ಗೆ ಅಧ್ಯಯನ ನಡೆದಿದೆ. ಹೃದಯಾಘಾತಕ್ಕೆ ತುತ್ತಾದ 1312 ಜನರನ್ನು, ಹಾಗೂ ಸ್ಟ್ರೋಕ್​ಗೆ ಒಳಗಾದ 727 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅಧ್ಯಯನದ ವೇಳೆ ತಿಳಿದುಬಂದ ವಿಚಾರ ಏನೆಂದರೆ, ಹೃದಯಾಘಾತಕ್ಕೆ ಒಳಗಾದವರ ಪೈಕಿ ಶೇ.37 ಹಾಗೂ ಸ್ಟ್ರೋಕ್​ಗೆ ತುತ್ತಾದ ಶೇ. 30 ಮಂದಿಗೆ ಸೋಂಕು ತಗುಲಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

“ಸೋಂಕು ತಗುಲಿದ ಎಲ್ಲರಿಗೂ ಹೃದಯಾಘಾತ ಅಥವಾ ಸ್ಟ್ರೋಕ್​ ಉಂಟಾಗುತ್ತದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಈ ರೀತಿ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಹಾಗಾಗಿ ಇಂಥ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೇ ವೈದ್ಯರಿಗೆ ತೋರಿಸುವುದು ಉತ್ತಮ,” ಎನ್ನುತ್ತಾರೆ ಅಧ್ಯಯನ ನಡೆಸಿದ ತಜ್ಞರು.

ಇದನ್ನೂ ಓದಿ: ಮಧುಮೇಹಕ್ಕೆ ರಾಮಬಾಣವಾಗಲಿದೆಯಾ ನೀರಾ ಸಕ್ಕರೆ?

ಇದು ವೈದ್ಯರ ಮೊದಲ ಹಂತದ ಅಧ್ಯಯನ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು. “ಸೋಂಕಿನಿಂದ ಹೃದಯಾಘಾತವಾಗುತ್ತದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಅಷ್ಟೇ. ಆದರೆ, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿಯೇ ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ. ನಾವು ನಡೆಸಿದ ಅಧ್ಯಯನದಲ್ಲಿ ಹೃದಯಾಘಾತ ಉಂಟಾದವರಲ್ಲಿ ಸೊಂಕಿದ್ದಿದ್ದು ನಿಜ. ಆದರೆ, ಅದರಿಂದಲೇ ಹಾರ್ಟ್​​ ಅಟ್ಯಾಕ್​ ಆಗಿದೆ ಎಂಬುದನ್ನು ಸಾಬೀತು ಪಡಿಸಲು ನಮ್ಮಲ್ಲಿ ಬಲವಾದ ಸಾಕ್ಷ್ಯಗಳಿಲ್ಲ” ಎನ್ನುತ್ತಾರೆ ತಜ್ಞರು.

First published: September 10, 2019, 10:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading