Home Garden: ಕನಸಿನ ಮನೆಯಲ್ಲಿ ಹ್ಯಾಂಗಿಂಗ್ ಗಿಡ ಬೆಳೆಸಲು ಈ ಟ್ರಿಕ್ಸ್ ಫಾಲೋ ಮಾಡಿ

Hanging Garden: ಕಡಿಮೆ ಸ್ಥಳದಲ್ಲಿ ಇಡೀ ವಾತಾವರಣಕ್ಕೇ ಹೊಸಾ ರೂಪ ಕೊಡೋದು ಹ್ಯಾಂಗಿಂಗ್ ಗಾರ್ಡನ್. ಮನೆಯ ಮುಂದೆ, ಕಾಂಪೌಂಡ್‌ನ‌ಲ್ಲಿ ಮಾತ್ರವಲ್ಲ ಒಳಾಂಗಣದ ಅಲಂಕಾರಕ್ಕೂ ಹ್ಯಾಂಗಿಂಗ್‌ ಪಾಟ್‌ಗಳನ್ನು ಬಳಸಿ ವಿಭಿನ್ನವಾಗಿ ಗಾರ್ಡನ್ ಮಾಡಿದ್ರೆ ಮನೆಗೆ ಆಕರ್ಷಕ ಲುಕ್ ಬರುತ್ತದೆ

ಹ್ಯಾಂಗಿಂಗ್‌ ಪಾಟ್‌

ಹ್ಯಾಂಗಿಂಗ್‌ ಪಾಟ್‌

  • Share this:
    ಮನೆ(House) ಪ್ರತಿಯೊಬ್ಬರ ಜೀವನದ ಕನಸು(Dream). ಕನಸಿನ ಮನೆಯನ್ನು ತಮಗೆ ಇಷ್ಟಬಂದ ರೀತಿ ಅಲಂಕಾರ(Decoration) ಮಾಡಿ ಅದರಲ್ಲಿ ತಮಗಿಷ್ಟವಾದ ವಸ್ತುಗಳನ್ನು ತಂದಿಡುವುದು ಪ್ರತಿಯೊಬ್ಬರಿಗೂ ಮೆಚ್ಚಿನ ಹವ್ಯಾಸ(Habit).. ಅದರಲ್ಲೂ ಮನೆಯ ಮುಂದೆ ಮನೆಯ ಒಳಗಡೆ ಪುಟ್ಟ ಗಾರ್ಡನ್(Garden) ನಿರ್ಮಾಣ ಮಾಡುವುದು ಸುಂದರ ಮನೆಯನ್ನು ಮತ್ತಷ್ಟು ಅಂದವಾಗಿ ಇಡುವಂತೆ ಮಾಡುತ್ತದೆ.. ಹೀಗಾಗಿ ಮನೆಯಲ್ಲಿನ ಪ್ರತಿಯೊಬ್ಬ ಸದಸ್ಯರು ತಮ್ಮ ಮನೆಯಲ್ಲಿ ಒಂದು ಸಣ್ಣ ಕೈತೋಟ ನಿರ್ಮಾಣ ಮಾಡಲು ಬಯಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಗಾರ್ಡನ್ ಟೆರೇಸ್ ಹೆಚ್ಚು ಪ್ರಸಿದ್ಧವಾಗಿದ್ದರೂ, ಬೆಳೆಸುವ ಪ್ರತಿಯೊಂದು ಗಿಡಗಳು ಸಹ ಅಷ್ಟೇ ಮಹತ್ವ ಪಡೆದಿದೆ.. ಸದ್ಯದ ಮಟ್ಟಿಗೆ ಮನೆಯಲ್ಲಿ ಬೆಳೆಸುವ ಗಿಡಗಳಲ್ಲಿ ಹ್ಯಾಂಗಿಂಗ್ ಗಿಡಗಳು ಮನೆ ಚಿಕ್ಕದಾದ್ರು ದೊಡ್ಡದಿದ್ದರೂ ಒಂದು ಕಲರ್ಫುಲ್ ಲುಕ್ ನೀಡುತ್ತವೆ.. ಹೀಗಾಗಿ ಮನೆಯಲ್ಲಿ ಯಾವ ರೀತಿಯ ಹ್ಯಾಂಗಿಂಗ್ ಗಿಡಗಳನ್ನು ಬೆಳೆಸಬಹುದು ಹೇಗೆ ಬಳಸಬಹುದು ಎನ್ನುವ ಟಿಪ್ಸ್ ಇಲ್ಲಿದೆ..

    ಕಡಿಮೆ ಸ್ಥಳದಲ್ಲಿ ಇಡೀ ವಾತಾವರಣಕ್ಕೇ ಹೊಸಾ ರೂಪ ಕೊಡೋದು ಹ್ಯಾಂಗಿಂಗ್ ಗಾರ್ಡನ್. ಮನೆಯ ಮುಂದೆ, ಕಾಂಪೌಂಡ್‌ನ‌ಲ್ಲಿ ಮಾತ್ರವಲ್ಲ ಒಳಾಂಗಣದ ಅಲಂಕಾರಕ್ಕೂ ಹ್ಯಾಂಗಿಂಗ್‌ ಪಾಟ್‌ಗಳನ್ನು ಬಳಸಿ ವಿಭಿನ್ನವಾಗಿ ಗಾರ್ಡನ್ ಮಾಡಿದ್ರೆ ಮನೆಗೆ ಆಕರ್ಷಕ ಲುಕ್ ಬರುತ್ತದೆ. ಹ್ಯಾಂಗಿಂಗ್‌ ಪಾಟ್‌ಗಳನ್ನು ಮನೆಯ ಮುಂದಿನ ಸಿಟೌಟ್‌ ಗಳಲ್ಲಿ ಹೆಚ್ಚಾಗಿ ಬಳಸಬಹುದು. ಟೆರೇಸ್‌ನಲ್ಲಿ ಇವುಗಳನ್ನು ನೇತಾಡಿಸುವುದರಿಂದ ಮನೆಗೆ ಅಂದವಾದ ಲುಕ್‌ ಸಿಗುತ್ತದೆ.

    ಇದನ್ನೂ ಓದಿ: ಮನೆಯ ಒಳಗೆ ಯಾವ ಗಿಡಗಳನ್ನು ಬೆಳೆಸುವುದು ಎನ್ನುವ ಗೊಂದಲವಿದ್ದರೆ ಇದನ್ನು ಓದಿ

    1) ಸರಿಯಾದ ಪಾಟ್ ಆಯ್ಕೆ ಮಾಡಿ: ಮನೆಯ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಕ್ಕೆ ಸೂಕ್ತವಾದ ಹ್ಯಾಂಗಿಂಗ್ ಪಾಟ್ ನೇತು ಹಾಕಲು ನಿರ್ದಿಷ್ಟವಾಗಿ ತಯಾರಿಸಿದ ಕೆಲವು ಪ್ಲಾಂಟರ್‌ಗಳಿವೆ, ಸಾಮಾನ್ಯವಾಗಿ ಭಿನ್ನ ಭಿನ್ನವಾದ ವಿನ್ಯಾಸದ ಪಾಟ್‌ಗಳಿವೆ. ಡ್ರಿಪ್ ಟ್ರೇ ಯೋಜನೆ ಎಂದೂ ಕರೆಯಲ್ಪಡುವ ವಿನ್ಯಾಸವು ವೆಚ್ಚ ಮತ್ತು ಗಾತ್ರದಲ್ಲಿ ಮಿತವ್ಯಯಕಾರಿಯಾಗಿದೆ. ಆದರೆ ಈ ಟ್ರೇಗಳು ಹೆಚ್ಚಾಗಿ ಸೋರಿಕೆಯಾಗುತ್ತವೆ, ವಿಶೇಷವಾಗಿ ನೆಲದ ಅಥವಾ ಪೀಠೋಪಕರಣಗಳ ಮೇಲೆ ನೀರನ್ನು ಚೆಲ್ಲುತ್ತದೆ. ಹೀಗಾಗಿ ನೇತಾಡುವ ಗಿಡಗಳನ್ನು ನೆಡಲು ಸೂಕ್ತವಾದ ರೀತಿಯ ಕೊಂಡಗಳನ್ನು ಆಯ್ಕೆ ಮಾಡುವುದು ಉತ್ತಮ..

    2)ಹ್ಯಾಂಗಿಂಗ್‌ ಗಿಡಗಳ ಆಯ್ಕೆ: ಹ್ಯಾಂಗಿಂಗ್‌ ಪಾಟ್‌ಗಳನ್ನು ಖರೀದಿಸುವಾಗ ಮನೆಯ ಪರಿಸರಕ್ಕೆ ಅನುಗುಣವಾಗಿ ಖರೀದಿಸಬೇಕಾಗುತ್ತದೆ. ಬಿಸಿಲು ತಾಗುವಲ್ಲಿ ಬಳಸುವುದಾದರೆ ಅದಕ್ಕೆ ಸರಿಹೊಂದುವ ಗಿಡಗಳನ್ನು ಆಯ್ಕೆ ಮಾಡಬೇಕು. ಮನೆಯ ಒಳಗಡೆ ಅಥವಾ ನೆರಳಿರುವಲ್ಲಿ ಬಳಸುವುದಾದರೆ ಅದಕ್ಕೆ ಸೂಕ್ತವಾಗುವ ಗಿಡಗಳನ್ನೇ ಖರೀದಿಸಬೇಕು. ಅಷ್ಟೇ ಅಲ್ಲದೆ ಗಿಡಗಳನ್ನು ಆಯ್ಕೆ ಮಾಡುವಾಗ ಅವುಗಳ ಬಣ್ಣ, ಆಕೃತಿಗಳನ್ನು ಗಮನಿಸಿ ಆಯ್ಕೆ ಮಾಡಬೇಕಾಗುತ್ತದೆ.. ಜರೀಗಿಡಗಳು, ಹೂವುಗಳು ಮತ್ತು ಟೊಮೆಟೊಗಳು, ಪಾಲಕ ಮತ್ತು ಎಲೆಕೋಸುಗಳಂತಹ ಖಾದ್ಯಗಳು ಜನಪ್ರಿಯ ನೇತಾಡುವ ಸಸ್ಯಗಳಾಗಿವೆ. ಆಫ್ರಿಕನ್ ವಯೋಲೆಟ್‌ಗಳು ಮತ್ತು ಆರ್ಕಿಡ್‌ಗಳಂತಹ ಹೂವುಗಳು ಒಳಾಂಗಣ ಹ್ಯಾಂಗರ್‌ಗಳಿಗೆ ಜನಪ್ರಿಯ ಆಯ್ಕೆಗಳಾಗಿವೆ.

    3) ಸೂಕ್ತ ರೀತಿಯಲ್ಲಿ ನೀರುಣಿಸುವುದು: ಹ್ಯಾಂಗಿಂಗ್ ಗಿಡಗಳು ಹೊರಾಂಗಣದಲ್ಲಿ ಬೆಳೆಯುವ ಗಿಡಗಳಿಗಿಂತ ಕಡಿಮೆ ಪ್ರಮಾಣದಲ್ಲಿ ನೀರನ್ನು ಕೇಳುತ್ತವೆ.. ಕಡಿಮೆ ಸೂರ್ಯನ ಬೆಳಕು, ಮನೆಯೊಳಗೆ ಇರುವ ಹೆಚ್ಚಿನ ಆರ್ದ್ರತೆಯಿಂದ ಹ್ಯಾಂಗಿಂಗ್ ಗಿಡಗಳಿಗೆ ಕಡಿಮೆ ಪ್ರಮಾಣದ ನೀರು ಬೇಕಾಗುತ್ತದೆ.. ಹೀಗಾಗಿ ಬೇಕಾಬಿಟ್ಟಿ ನೀರು ಹಾಕುವ ಬದಲು ಎಷ್ಟು ಪ್ರಮಾಣದ ನೀರನ್ನು ಹ್ಯಾಂಗಿಂಗ್ ಗಿಡಗಳಿಗೆ ಹಾಕಬೇಕು ಎಂದು ಮೊದಲು ತಿಳಿದುಕೊಂಡಿರಬೇಕು..

    ಇದನ್ನೂ ಓದಿ: ನಿಮ್ಮ ಮನೆಯ ಅಂಗಳದಲ್ಲಿಯೇ ಅನಾನಸ್ ಬೆಳೆಯಲು ಇಲ್ಲಿವೆ ಟಿಪ್ಸ್

    4) ಹ್ಯಾಂಗಿಂಗ್ ಗಿಡಗಳಿಗೆ ಪಾಟಿಂಗ್ ಮಿಶ್ರಣ: ಒಳಾಂಗಣದಲ್ಲಿ ಬೆಳೆಯುವ ಸಸ್ಯಗಳ ಆಗಲಿ ಹೊರಾಂಗಣದಲ್ಲಿ ಬೆಳೆಯುವ ಸಸ್ಯಗಳಿಗೆ ಆಗಲಿ ಅವುಗಳಿಗೆ ಮಣ್ಣು ಅತ್ಯಗತ್ಯ. ಹಲೋ ಹ್ಯಾಂಗಿಂಗ್ ಗಿಡಗಳಿಗೆ ನಿರ್ದಿಷ್ಟವಾದ ರೀತಿಯ ಪಾಟ್ ಬಳಕೆ ಮಾಡುವುದರಿಂದ ಸರಿಯಾದ ರೀತಿಯಲ್ಲಿ ಮಣ್ಣಿನ ಮಿಶ್ರಣ ಅತ್ಯಗತ್ಯ.. ಹ್ಯಾಂಗಿಂಗ್ ಗಿಡಗಳ ಪಾಟಿಂಗ್ ಗೆ ಬಳಸುವ ಮಣ್ಣು ನಾವು ಬಳಸುವ ಹ್ಯಾಂಗಿಂಗ್ ಗಿಡಗಳನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ.. ಜೊತೆಗೆ ಕಾಲಕ್ಕೆ ತಕ್ಕಂತೆ ರಸಗೊಬ್ಬರಗಳು, ಕ್ರಿಮಿನಾಶಕಗಳ ಸಿಂಪಡನೆ ಅತ್ಯಗತ್ಯ.
    Published by:ranjumbkgowda1 ranjumbkgowda1
    First published: