ವಿಶ್ವದಲ್ಲೇ ಸುಖ ನಿದ್ರೆ ಮಾಡುವರು ಈ ದೇಶದವರಂತೆ..!

ಇನ್ನು 18 ವರ್ಷಕ್ಕಿಂತ ಮೇಲ್ಪಟ್ಟವರು ವಾರದಲ್ಲಿ ರಾತ್ರಿ ಸರಾಸರಿ 6.8 ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ಅದೇ ಸಮಯದಲ್ಲಿ, ಅವರು ರಜಾದಿನಗಳಲ್ಲಿ ರಾತ್ರಿ 7.8 ಗಂಟೆಗಳ ಕಾಲ ನಿದ್ರಿಸುತ್ತೇವೆ ಎಂದು ತಿಳಿಸಿದ್ದಾರೆ.

zahir | news18-kannada
Updated:August 19, 2019, 5:11 PM IST
ವಿಶ್ವದಲ್ಲೇ ಸುಖ ನಿದ್ರೆ ಮಾಡುವರು ಈ ದೇಶದವರಂತೆ..!
ಮಲಗಿದ ಕೂಡಲೆ ಬಹುತೇಕರಿಗೆ ಮೊಬೈಲ್ ನೋಡುವ ಅಭ್ಯಾಸ ಇರುತ್ತದೆ. ಮೊಬೈಲ್​ನಲ್ಲಿ ವಿಡಿಯೋಗಳನ್ನು ನೊಡುತ್ತಾ ಮಲಗುವ ಅಭ್ಯಾಸ ಒಳ್ಳೆಯದಲ್ಲ. ಅದರಿಂದ ಕಣ್ಣು ಒಣಗಿದಂತಾಗಿ ನಿದ್ರೆಯೂ ದೂರ ಹೋಗುತ್ತದೆ.
  • Share this:
ನಿದ್ರಾಹೀನತೆ ಎಂಬುದು ಪ್ರಪಂಚದ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಅಂತದ್ರರಲ್ಲಿ ಇತ್ತೀಚೆಗೆ ಅತೀ ಚೆನ್ನಾಗಿ ನಿದ್ರಿಸುವ ಜನರು ಯಾವ ದೇಶದಲ್ಲಿದ್ದಾರೆ ಎಂಬುದರ ಮೇಲೆ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ದಕ್ಷಿಣ ಕೊರಿಯಾದ ಜನರು ಅತೀ ಕಡಿಮೆ ನಿದ್ರಿಸುತ್ತಾರೆ ಎಂಬುದು ತಿಳಿದು ಬಂದಿದೆ. ಅಭಿವೃದ್ಧಿ ಪಥದಲ್ಲಿ ಹೊಸ ನಾಗಾಲೋಟ ಮುಂದುವರೆಸಿರುವ ಜಪಾನ್ ದೇಶ ಕಡಿಮೆ ನಿದ್ರೆ ಮಾಡುವವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಭಾರತೀಯರು ಎಲ್ಲರಿಗಿಂತ ಚೆನ್ನಾಗಿ ನಿದ್ರಿಸುತ್ತಾರೆ ಎಂದು ತಿಳಿದು ಬಂದಿದೆ. ಅಂದರೆ ವಿಶ್ವದಲ್ಲೇ ಸುಖ ನಿದ್ದೆ ಮಾಡುವವರಲ್ಲಿ ಭಾರತೀಯರು ಮೊದಲ ಸ್ಥಾನ ಅಲಂಕರಿಸಿದ್ದಾರೆ. ನಂತರದ ಸ್ಥಾನ ಸೌದಿ ಅರೇಬಿಯಾ ಪಡೆದುಕೊಂಡಿದೆ. ಹಾಗೆಯೇ 3ನೇ ಸ್ಥಾನವನ್ನು ಚೀನಿಯರು ಪಡೆದುಕೊಂಡಿದ್ದಾರೆ.

ಈ ಸಮೀಕ್ಷೆಯನ್ನು ಜಾಗತಿಕ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೆಜೆಟಿ ಗ್ರೂಪ್ ನಡೆಸಿದ್ದು, 12 ದೇಶಗಳ 11006 ಜನರ ಅಭಿಪ್ರಾಯಗಳನ್ನು ಸಮೀಕ್ಷಾ ತಂಡ ಪರಿಗಣಿಸಿದೆ. ಈ ಸಮೀಕ್ಷೆಯಲ್ಲಿ 18 ವರ್ಷ ಮೇಲ್ಪಟ್ಟವರು ಭಾಗವಹಿಸಿದ್ದು, ವಿಶ್ವದ ಶೇ.62 ರಷ್ಟು ಮಂದಿ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಇನ್ನು 18 ವರ್ಷಕ್ಕಿಂತ ಮೇಲ್ಪಟ್ಟವರು ವಾರದಲ್ಲಿ ರಾತ್ರಿ ಸರಾಸರಿ 6.8 ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ಅದೇ ಸಮಯದಲ್ಲಿ, ಅವರು ರಜಾದಿನಗಳಲ್ಲಿ ರಾತ್ರಿ 7.8 ಗಂಟೆಗಳ ಕಾಲ ನಿದ್ರಿಸುತ್ತೇವೆ ಎಂದು ತಿಳಿಸಿದ್ದಾರೆ. ಹಾಗೆಯೇ ಪ್ರತಿದಿನ ಎಂಟು ಗಂಟೆಗಳ ನಿದ್ರೆಯನ್ನು ಪೂರ್ಣಗೊಳಿಸಲು 10 ವಯಸ್ಕರಲ್ಲಿ ಆರು ಮಂದಿ (ಶೇಕಡಾ 63 ರಷ್ಟು) ವಾರಾಂತ್ಯದಲ್ಲಿ ಹೆಚ್ಚು ನಿದ್ರೆ ಮಾಡಲು ಬಯಸುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಸಮೀಕ್ಷೆ ನಡೆಸಿದ 10 ಜನರಲ್ಲಿ ನಾಲ್ವರು ಕಳೆದ ಐದು ವರ್ಷಗಳಲ್ಲಿ ತಮ್ಮ ನಿದ್ರೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಅದೇ ರೀತಿ ಶೇ. 26 ರಷ್ಟು ಜನರು ಉತ್ತಮ ನಿದ್ರೆ ಮಾಡಿದ್ದೇವೆ ಎಂದರೆ, ಶೇ. 31 ರಷ್ಟು ಜನರು ತಮ್ಮ ನಿದ್ರೆಯ ಅಭ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

----------------
First published: August 19, 2019, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading