Vitamin D Deficiency: ಭಾರತೀಯರನ್ನ ಅತಿಯಾಗಿ ಕಾಡ್ತಿದೆ ವಿಟಮಿನ್ ಡಿ ಕೊರತೆ! ಅದಕ್ಕೆ ಕಾರಣ ಇಲ್ಲಿದೆ

ವಿಶ್ವದಾದ್ಯಂತ ವೃದ್ಧಿಯಾಗುತ್ತಿರುವ ವಿಟಮಿನ್ ಡಿ ಕೊರತೆಯು ಆಹಾರದ ಕೊರತೆ ಹಾಗೂ ಸೂರ್ಯಕಿರಣಗಳಿಗೆ ಕಡಿಮೆ ಪ್ರಮಾಣದಲ್ಲಿ ಒಡ್ಡಿಕೊಳ್ಳುವುದರಿಂದ ಆಗಿರಬಹುದಾಗಿದ್ದು, ಕೋವಿಡ್-19 ಅವಧಿಯಲ್ಲಿ ಇದು ಮತ್ತಷ್ಟು ಬಿಗಡಾಯಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯರಲ್ಲಿ ಅಪೌಷ್ಟಿಕತೆ (Malnutrition) ಪ್ರಮಾಣ ಹೆಚ್ಚು ಎಂದು ಈಗಾಗಲೇ ಅಧ್ಯಯನ (Studies) ವರದಿಗಳು ದೃಢಪಡಿಸಿವೆ. ಆದರೆ, ಭಾರತದಲ್ಲಿ ಯಥೇಚ್ಛವಾಗಿ ಸೂರ್ಯನ ಬೆಳಕು(Sunlight) ಲಭ್ಯವಿದ್ದರೂ ಭಾರತೀಯರಲ್ಲಿ ವಿಟಮಿನ್ ಡಿ (Vitamin D deficiency) ಕೊರತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ತಿಳಿಸಿದೆ. ಇದು ತೀವ್ರ ಪ್ರಮಾಣದಲ್ಲಿದ್ದು, ಈ ಸಂಖ್ಯೆ ಬೆಳೆಯುತ್ತಲೇ ಇದೆ ಎನ್ನಲಾಗಿದೆ. ವಿಟಮಿನ್ ಡಿ ಕೊರತೆಯು ಸಾರ್ವಜನಿಕ ಆರೋಗ್ಯ(Health problem) ಸಮಸ್ಯೆಯಾಗಿದ್ದು, ಇದು ಸಾಂಕ್ರಾಮಿಕ ರೋಗಗಳ (Infectious diseases) ಪ್ರಮಾಣಕ್ಕೆ ಸಮಾನವಾಗಿದೆ ಎಂಬ ಆಘಾತಕಾರಿ ಅಂಶ ಅಧ್ಯಯನ ವರದಿಯಿಂದ ಬಹಿಂಗವಾಗಿದೆ. ಇದಕ್ಕಿರುವ ಕಾರಣಗಳೇನಿರಬಹುದು..?

ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣ
ಸೂಕ್ತ ಪ್ರಮಾಣದ ಆಹಾರ ಸೇವನೆಯ ಕೊರತೆ ಇದಕ್ಕೆ ಕಾರಣವೆಂಬುದಕ್ಕೆ ಸಾಕ್ಷ್ಯವಿದೆ. ಹೀಗಾಗಿ ಪೌಷ್ಟಿಕತೆಯ ನೀತಿ ನಿರೂಪಕರು ಪೂರಕ ಆಹಾರದ ಮೂಲಕ ಈ ಮಹತ್ವದ ಸಾರ್ವಜನಿಕ ಆರೋಗ್ಯ ಸಮಸ್ಯೆಯೊಂದಿಗೆ ಹೋರಾಡಲು ಯೋಚಿಸುತ್ತಿದ್ದಾರೆ. ಆದರೆ, ವಿಜ್ಞಾನಿಗಳು ಮಾತ್ರ ಭಾರತೀಯರಲ್ಲಿನ ವಿಟಮಿನ್ ಡಿ ಕೊರತೆಗೆ ಹಲವು ವಿಷಯಗಳು ಸೇರಿಕೊಂಡಿವೆ ಎಂದು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಒಳ ಮನೆ ವಾಸ್ತವ್ಯ, ಮಾಲಿನ್ಯ, ಬಹು ವಿಧದಲ್ಲಿ ತಯಾರಿಸಲಾಗುತ್ತಿರುವ ಆಹಾರ ಸೇವನೆ ಹಾಗೂ ಭಾರತೀಯರ ಚರ್ಮವು ಕಡು ಬಣ್ಣ ಹೊಂದಿರುವುದು ಅವರಲ್ಲಿನ ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೀವು ಸೇವಿಸುವ ಆಹಾರದಲ್ಲಿ ಇದೆಯಾ ಆರೋಗ್ಯ ವೃದ್ಧಿಯ ವಿಟಮಿನ್ B12? ಇಲ್ಲಿವೆ ಸೇವನೆಯ ಪ್ರಯೋಜನಗಳು

ನಿದ್ರಾ ಗುಣಮಟ್ಟದ ಮೇಲೆ ಪರಿಣಾಮ
ಸೂರ್ಯನ ಕಿರಣಗಳಿಂದ ದೊರೆಯುವ ವಿಟಮಿನ್ ಡಿ, ಅತ್ಯಂತ ಮಹತ್ವದ ಬೆರೆತು ಹೋಗುವ ವಿಟಮಿನ್ ಆಗಿದ್ದು, ವೇಗದ ಬೆಳವಣಿಗೆ, ಅಭಿವೃದ್ಧಿ, ಜೀರ್ಣ ಕ್ರಿಯೆಗಳು, ರೋಗ ನಿರೋಧಕ ಶಕ್ತಿ, ಮೂಳೆಯ ಆರೋಗ್ಯ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಅಧ್ಯಯನಗಳ ಪ್ರಕಾರ ವಿಟಮಿನ್ ಡಿ ಪ್ರಮಾಣವು ಖಿನ್ನತೆ, ಆತಂಕ, ಅನ್ಯಮನಸ್ಕತೆ ಹಾಗೂ ನಿದ್ರಾ ಗುಣಮಟ್ಟದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಆದರೆ, ಭಾರತೀಯರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ವಿಟಮಿನ್ ಡಿ ಪಡೆಯುತ್ತಿದ್ದಾರೆ.

ಸಮೀಕ್ಷೆ ಏನು ಹೇಳುತ್ತೆ
ಬಹುತೇಕ ತಜ್ಞರು ವಿಟಮಿನ್ ಡಿ ಕೊರತೆಯನ್ನು ಸೀರಮ್ 25-ಹೈಡ್ರಾಕ್ಸಿವಿಟಮಿನ್ ಡಿ (25(OH)D) ಪ್ರಮಾಣವು 30 ng/mlಗಿಂತ ಕಡಿಮೆ ಇರುವುದು ಎಂದು ವ್ಯಾಖ್ಯಾನಿಸುತ್ತಾರೆ. ಗಂಭೀರ ಸ್ವರೂಪದ ವಿಟಮಿನ್ ಡಿ ಕೊರತೆಯಲ್ಲಿ 25(OH)D ಪ್ರಮಾಣವು <12 ng/ml 25 (OH)D ಆಗಿರುತ್ತದೆ. ಭಾರತ, ಟುನಿಷಿಯಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾದಲ್ಲಿ ಈ ಪ್ರಮಾಣ ಶೇ. 20ರಷ್ಟಿದ್ದು, ಭಾರತದಲ್ಲಿ 490 ಮಿಲಿಯನ್ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ.

ಶೇ. 79ರಷ್ಟು ಭಾರತೀಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು 2020ರ ಮೇನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಈ ಕುರಿತು ನಡೆದ ಸಮೀಕ್ಷೆಯಲ್ಲಿ ಭಾರತದ 81 ನಗರಗಳ 221 ಪ್ರದೇಶದ 4624 ಮಂದಿ ಭಾಗಿಯಾಗಿದ್ದರು. ಈ ಪೈಕಿ 18-30 ವರ್ಷ ವಯಸ್ಸಿನ ಯುವಕರಲ್ಲಿ ವಿಟಮಿನ್ ಡಿ ಕೊರತೆ ಸಾಮಾನ್ಯವಾಗಿ ಕಂಡು ಬಂದಿದೆ.

ಇದನ್ನೂ ಓದಿ: Health tips: ಒತ್ತಡ ನಿವಾರಣೆ, ಉತ್ತಮ ಆರೋಗ್ಯಕ್ಕೆ ವಿಟಮಿನ್ ಡಿ ಎಷ್ಟು ಅಗತ್ಯ ನೋಡಿ

ವಿಶ್ವದಾದ್ಯಂತ ವೃದ್ಧಿಯಾಗುತ್ತಿರುವ ವಿಟಮಿನ್ ಡಿ ಕೊರತೆಯು ಆಹಾರದ ಕೊರತೆ ಹಾಗೂ ಸೂರ್ಯಕಿರಣಗಳಿಗೆ ಕಡಿಮೆ ಪ್ರಮಾಣದಲ್ಲಿ ಒಡ್ಡಿಕೊಳ್ಳುವುದರಿಂದ ಆಗಿರಬಹುದಾಗಿದ್ದು, ಕೋವಿಡ್-19 ಅವಧಿಯಲ್ಲಿ ಇದು ಮತ್ತಷ್ಟು ಬಿಗಡಾಯಿಸಿದೆ.

ವಿಟಮಿನ್ ಡಿ ( ಸೂರ್ಯನ ವಿಟಮಿನ್)
ವಿಟಮಿನ್ ಡಿ ದೇಹಕ್ಕೆ ಎಷ್ಟು ಅಗತ್ಯ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ವಿಟಮಿನ್ ಡಿ ಕೊರತೆ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು. ವಿಟಮಿನ್ ಡಿ ಕೊರತೆಯು, ಖಿನ್ನತೆ ಮತ್ತು ಆತಂಕ ಮುಂತಾದ ಮನಸ್ಥಿತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧ ಹೊಂದಿದೆ. ವಿಟಮಿನ್ ಡಿ ಅತ್ಯುತ್ತಮ ಮೂಲವೆಂದರೆ ಸೂರ್ಯನ ಬಿಸಿಲು. ಬೆಳಗಿನ ವೇಳೆ 10 -15 ನಿಮಿಷ ಸೂರ್ಯನ ಬಿಸಿಲಿನಲ್ಲಿ ಕಳೆಯುವುದರಿಂದ ವಿಟಮಿನ್ ಡಿ ಪಡೆಯಬಹುದಾಗಿದೆ.
Published by:vanithasanjevani vanithasanjevani
First published: