ಭಾರತೀಯರು ಕಾಮ ಕಥೆಗಳ ವ್ಯಸನಿಗಳಾಗುತ್ತಿದ್ದಾರಂತೆ; ಅಧ್ಯಯನದಿಂದ ಹೊರಬಿತ್ತು ಆತಂಕಕಾರಿ ವಿಚಾರ

ಹೊಸ ಸಂಶೋಧನೆ ಹೇಳುವ ಪ್ರಕಾರ, ಯುವಕರು, ಕಮಿಟ್​ ಆಗಿರುವವರು, ಮದುವೆ ಆಗಿರುವವರು ಹೀಗೆ ಎಲ್ಲ ವರ್ಗದವರೂ ಪರರ ಸೆಕ್ಸ್​​ ಸ್ಟೋರಿಸ್​ಗಳನ್ನು ಆಲಿಸಲು, ಓದಲು ಇಷ್ಟಪಡುತ್ತಾರಂತೆ!

news18-kannada
Updated:March 23, 2020, 3:57 PM IST
ಭಾರತೀಯರು ಕಾಮ ಕಥೆಗಳ ವ್ಯಸನಿಗಳಾಗುತ್ತಿದ್ದಾರಂತೆ; ಅಧ್ಯಯನದಿಂದ ಹೊರಬಿತ್ತು ಆತಂಕಕಾರಿ ವಿಚಾರ
ಲೈಂಗಿಕ ಕ್ರಿಯೆ ನಡೆಸುವ ವೇಳೆ ನೀವು ನಿಮ್ಮ ಸಂಗಾತಿಯನ್ನು ಹೆಚ್ಚು ಹೆಚ್ಚು ಖುಷಿ ಪಡಿಸಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತೇವೆ. ದೀರ್ಘ ಸಂಭೋಗದ ಉಪಾಯಕ್ಕೆ ಕೆಲವು ಟಿಪ್ಸ್ ಇಲ್ಲಿದೆ.
  • Share this:
ಇಂದು ಮೊಬೈಲ್​ ಬಳಕೆ ಹೆಚ್ಚಿದೆ. ಮೊಬೈಲ್​ನಿಂದ ಸಾಕಷ್ಟು ಜ್ಞಾನ ಲಭ್ಯವಾಗುತ್ತಿದೆ. ಇದರ ಜೊತೆಗೆ ಸಾಕಷ್ಟು ಬೇಡದ ವಿಚಾರಗಳನ್ನು ಮಕ್ಕಳು-ಯುವ ಜನತೆ ತಲೆಗೆ ತುಂಬಿಕೊಳ್ಳುತ್ತಿದೆ. ಈ ಬಗ್ಗೆ ಅನೇಕ ಅಧ್ಯಯನಗಳು ಎಚ್ಚರಿಕೆ ನೀಡಿವೆ. ಈಗ ಇದೇ ಮಾದರಿಯ ಎಚ್ಚರಿಕೆಯನ್ನು ಹೊಸ ಸಂಶೋಧನೆಯೊಂದು ನೀಡಿದೆ. ಭಾರತದ ಎಲ್ಲ ವರ್ಗದವರು ಆನ್​ಲೈನ್​ನಲ್ಲಿ ಸಿಗುವ ಕಾಮ ಕಥೆಯನ್ನು ಓದಲು ಹಾತೊರೆಯುತ್ತಾರೆ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹೊಸ ಸಂಶೋಧನೆ ಹೇಳುವ ಪ್ರಕಾರ, ಯುವಕರು, ಕಮಿಟ್​ ಆಗಿರುವವರು, ಮದುವೆ ಆಗಿರುವವರು ಹೀಗೆ ಎಲ್ಲ ವರ್ಗದವರೂ ಪರರ ಸೆಕ್ಸ್​​ ಸ್ಟೋರಿಸ್​ಗಳನ್ನು ಆಲಿಸಲು, ಓದಲು ಇಷ್ಟಪಡುತ್ತಾರಂತೆ! ಇದೇ ಕಾರಣಕ್ಕೆ, ಆನ್​ಲೈನ್​ ಮೊರೆ ಹೋಗುತ್ತಾರೆ. ಅಲ್ಲಿ ಸಿಗುವ ಕಥೆಗಳನ್ನು ಓದಿ ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

“ಈ ಮೊದಲು ನೀಲಿಚಿತ್ರಗಳನ್ನು ಯುವಕರು ಹೆಚ್ಚು ನೋಡುತ್ತಿದ್ದರು. ಆದರೆ, ಈಗ ಈ ಕ್ರೇಜ್​ ಮೊದಲಿನಷ್ಟಿಲ್ಲ. ಈಗ ಸೆಕ್ಸ್​​ ಸ್ಟೋರಿಗಳನ್ನು ಓದಲು ಜನರು ಹೆಚ್ಚು ಇಷ್ಟಪಡುತ್ತಾರೆ. ಭಾರತದಲ್ಲಿ ಇದು ಹೆಚ್ಚಾಗುತ್ತಿದೆ. ಕಥೆ ಒಧುವವರಿಗೆ ವಯಸ್ಸಿನ ಮಿತಿ ಇಲ್ಲ,” ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.

ಸಾಮಾನ್ಯವಾಗಿ ಆನ್​ಲೈನ್​ನಲ್ಲಿ ಸಿಗುವ ಕಥೆಗಳು ಕಾಲ್ಪನಿಕವಾಗಿರುತ್ತವೆ. ಆದರೆ, ಅವುಗಳನ್ನು ಹೆಚ್ಚು ರಸವತ್ತಾಗಿ ಬರೆಯುವುದರಿಂದ ಕೆಲ ವರ್ಗದವರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ಅನೇಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ಅಧ್ಯಯನ ಎಚ್ಚರಿಸಿದೆ.

ಮೂಲಗಳ ಪ್ರಕಾರ ಗೂಗಲ್​ನಲ್ಲಿ ಸೆಕ್ಸ್​ ಸ್ಟೋರಿಸ್​​ಗಳನ್ನು ಹುಡುಕುವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆಯಂತೆ. ಇನ್ನು, ಇದು ಯುವಕರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಅತ್ಯಾಚಾರಕ್ಕೆ ಪ್ರೋತ್ಸಾಹಿಸುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
First published: March 23, 2020, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading