ಭಾರತೀಯರಿಗೆ ಗೋವಾ ಬೀಚ್ ಅಸುರಕ್ಷಿತ ಆದರೆ ವಿದೇಶಿಯರಿಗೆ..?

news18
Updated:August 16, 2018, 4:20 PM IST
ಭಾರತೀಯರಿಗೆ ಗೋವಾ ಬೀಚ್ ಅಸುರಕ್ಷಿತ ಆದರೆ ವಿದೇಶಿಯರಿಗೆ..?
news18
Updated: August 16, 2018, 4:20 PM IST
-ನ್ಯೂಸ್ 18 ಕನ್ನಡ

ಗೋವಾವನ್ನು ಪ್ರವಾಸಿಗಳ ಸ್ವರ್ಗ ಕರೆಯಲಾಗುತ್ತದೆ. ಈ ಸ್ವರ್ಗವು ಎಷ್ಟು ಸುರಕ್ಷಿತ ಎಂದು ತಿಳಿಯಲುಇತ್ತೀಚೆಗೆ ಅಧ್ಯಯನ ತಂಡವೊಂದು ಸಮೀಕ್ಷೆ ನಡೆಸಿದೆ. ಇದರಲ್ಲಿ ಭಾರತೀಯರು ಗೋವಾ ಬೀಚ್​ಗಳು ಪ್ರವಾಸಿಗರಿಗೆ ಸುರಕ್ಷಿತವಲ್ಲ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ವಿದೇಶಿ ಪ್ರವಾಸಿಗಳು ಅಂತಹ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ. ಗೋವಾ ಮೂಲದ ಡಾ.ಯಾಸ್ಮಿನ್ ಶೇಖ್ ಬರೆದ ಸೇಫ್ಟಿ ಇಸ್ಸ್ಯೂ ಇನ್ ಟೂರಿಸಂ ಇನ್ ಗೋವಾ- ಎ ಟೂರಿಸ್ಟ್​ ಪರ್ಸ್ಪೆಕ್ಟಿವ್ ಎಂಬ ಪುಸ್ತಕದಲ್ಲಿ ಈ ಅಧ್ಯಯನದ ಅಭಿಪ್ರಾಯಗಳನ್ನು ದಾಖಲಿಸಲಾಗಿದ್ದು, ಗೋವಾ ಕರಾವಳಿ ತೀರದ ಅಪರಾಧಿಗಳನ್ನು ನಿಯಂತ್ರಿಸಲು ಮತ್ತು ಮಹಿಳೆಯ ಸುರಕ್ಷತೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

ಗೋವಾದ ಕಡಲ ತೀರಗಳು ಬೆಳಗಿನ ಸಮಯದಲ್ಲಿ ಸುರಕ್ಷಿತವಾಗಿದ್ದರೂ, ರಾತ್ರಿಯ ವೇಳೆಯಲ್ಲಿ ಅಸುರಕ್ಷಿತತೆಯಿಂದ ಕೂಡಿರುತ್ತದೆ ಎಂದು ಭಾರತದ ಪ್ರವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ವಿದೇಶಿ ಪ್ರವಾಸಿಗಳು ರಾತ್ರಿನ ಹೊತ್ತಲ್ಲೂ ಬೀಚ್​ನಲ್ಲಿರುವುದರಿಂದ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದೆ.

ಶೇ. 62.19ರಷ್ಟು ಸ್ಥಳೀಯ ಪ್ರವಾಸಿಗರು ರಾತ್ರಿ ವೇಳೆ ಗೋವಾ ಕಡಲ ಕಿನಾರೆಯು ಅಸುರಕ್ಷಿತ ಎಂದು ತಿಳಿಸಿದ್ದಾರೆ. ಹಾಗೆಯೇ ರಾತ್ರಿಯಲ್ಲಿ ಗಸ್ತು ತಿರುಗುತ್ತಿರುವ ಮಹಿಳಾ ಪೊಲೀಸ್ ಪಡೆಯಿಂದ ಇಲ್ಲಿ ಸುರಕ್ಷಿತ ಭಾವನೆ ಮೂಡಿಸಬಹುದು ಎಂದು ಅಧ್ಯಯನ ತಂಡ ಹೇಳಿದೆ. ಯಾಸ್ಮಿನ್ ಶೇಖ್ ಮತ್ತು ತಂಡ ಈ ಅಧ್ಯಯನಕ್ಕಾಗಿ ಗೋವಾಗೆ ಭೇಟಿ ನೀಡಿರುವ 400 ಪ್ರವಾಸಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.

ಭಾರತದ ಪ್ರವಾಸೋದ್ಯಮದಲ್ಲಿ ಗೋವಾ ಪ್ರವಾಸಿ ತಾಣಗಳು ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದರಲ್ಲಿ ಏಳು ಮಿಲಿಯನ್​ನಷ್ಟು ವಿದೇಶಿಯರಿದ್ದಾರೆ. ಇತ್ತೀಚೆಗೆ ಗೋವಾ ಸರ್ಕಾರವು ಪ್ರವಾಸಿಗರ ಸುರಕ್ಷತೆ ಮತ್ತು ಮಹಿಳಾ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ನೀಡಿದ್ದು, ಈ ಸಮೀಕ್ಷೆಯಿಂದ ಇದು ಮತ್ತಷ್ಟು ಉತ್ತಮಗೊಳ್ಳಲಿದೆ.

2008ರಲ್ಲಿ ಉತ್ತರ ಗೋವಾದ ಅಂಜನಾ ಬೀಚ್​ನಲ್ಲಿ 15 ವರ್ಷದ ಬ್ರಿಟಿಷ್ ಪ್ರಜೆ ಸ್ಕಾರ್ಲೆಟ್ ಕೀಲಿಂಗ್​ ಲೈಂಗಿಕ ಕಿರುಕುಳಕ್ಕೆ ಒಳಗಾಗಿತ್ತು. ಈ ನಂತರ ಗೋವಾ ಬೀಚ್​ ಸುರಕ್ಷಿತವಲ್ಲ ಎಂಬ ಸುದ್ದಿಗಳು ಮೊದಲ ಬಾರಿಗೆ ಹೈಲೆಟ್ ಆಗಲು ಪ್ರಾರಂಭವಾಯಿತು.

ಇದಲ್ಲದೆ ಕೆಲ ತಿಂಗಳ ಹಿಂದೆ ಇಂದೋರ್​ ಮೂಲದ ಪ್ರವಾಸಿಗಳು ಗೋವಾ ಮಹಿಳೆಯನ್ನು ಅತ್ಯಾಚಾರ ನಡೆಸಿರುವುದು ಸುದ್ದಿಯಾಗಿತ್ತು. ಈ ಆಘಾತಕಾರಿ ಘಟನೆಯ ಬಳಿಕ ಗೋವಾ ರಾಜ್ಯದ ಕಡಲತೀರಗಳ ಸುರಕ್ಷತೆಯ ಬಗ್ಗೆ ಸುರಕ್ಷವಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು.
Loading...

ಕಳೆದ 21 ವರ್ಷಗಳಲ್ಲಿ ಗೋವಾ ತೀರಗಳಲ್ಲಿ 245 ವಿದೇಶಿ ಪ್ರವಾಸಿಗಳು ಸಾವನ್ನಪ್ಪಿದ್ದು, ಈ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್​​ ಕಳೆದ ತಿಂಗಳು ಆದೇಶ ನೀಡಿದೆ. ಒಂದು ಪ್ರದೇಶ ಸುರಕ್ಷಿತವಾಗಿದ್ದರೆ ಮಾತ್ರ ಪ್ರವಾಸಿಗಳು ಸುರಕ್ಷಿತವಾಗಿರುತ್ತಾರೆ. ಪ್ರವಾಸೋದ್ಯಮವು ಬೆಳೆಯಲು ಭದ್ರತೆಗೆ ಮಹತ್ವ ನೀಡಬೇಕಾಗಿದೆ ಎಂದು ಸಂಶೋಧಕರು ತಮ್ಮ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...