Post office savings schemes: ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಬಂಫರ್ ಲಾಭ ಪಡೆಯಿರಿ!

ಪೋಸ್ಟ್ ಆಫೀಸ್‌ನ ಎಲ್ಲಾ ಉಳಿತಾಯ ಯೋಜನೆಗಳ ವಿವರಗಳನ್ನು ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಮೊತ್ತವು ಶೀಘ್ರದಲ್ಲೇ ದುಪ್ಪಟ್ಟಾಗುವುದು ಖಂಡಿತ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ನೀವು ದೀರ್ಘ ಅವಧಿಯ ಹೂಡಿಕೆಗಾಗಿ ಎದುರು ನೋಡುತ್ತಿದ್ದರೆ ಹೆಚ್ಚು ಸುರಕ್ಷಿತ ಹಾಗೂ ಸುಭದ್ರವಾದ ಯೋಜನೆಯಾದ ಅಂಚೆ ಕಚೇರಿ (ಪೋಸ್ಟ್ ಆಫೀಸ್) ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದ್ದು ಇದು ನಿಮಗೆ ಅತ್ಯುತ್ತಮ ಎಂದೆನಿಸಲಿದೆ. ಹೆಚ್ಚು ಸುರಕ್ಷಿತವಾದ ಸ್ಥಳದಲ್ಲಿ ನಿಮ್ಮ ಹಣ ಹೂಡಿಕೆಯಾಗಬೇಕು ಎಂದು ನೀವು ಬಯಸಿದ್ದಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಅತ್ಯಂತ ಉತ್ತಮ ಯೋಜನೆ ಎಂದೆನಿಸಿದೆ. ಕೇಂದ್ರ ಸರಕಾರ ಕೂಡ ಸಾಂಕ್ರಾಮಿಕದ ಕಾಯಿಲೆಯ ನಡುವೆ ಸಪ್ಟೆಂಬರ್ ತ್ರೈಮಾಸಿಕದ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.


ಪೋಸ್ಟ್ ಆಫೀಸ್‌ನ ಎಲ್ಲಾ ಉಳಿತಾಯ ಯೋಜನೆಗಳ ವಿವರಗಳನ್ನು ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಮೊತ್ತವು ಶೀಘ್ರದಲ್ಲೇ ದುಪ್ಪಟ್ಟಾಗುವುದು ಖಂಡಿತ.


1.ಪೋಸ್ಟ್ ಆಫೀಸ್ ಉಳಿತಾಯ ಖಾತೆ:


ಉಳಿತಾಯ ಖಾತೆಗಳಿಗೆ ವಿಧಿಸಿರುವ ಬಡ್ಡಿದರವು 4% ವಾಗಿದ್ದು 18 ವರ್ಷಗಳಲ್ಲಿ ಹೂಡಿಕೆ ಮೊತ್ತವು ದುಪ್ಪಟ್ಟಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ


2.ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (ಟಿಡಿ):


ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ನೀವು 1-3 ವರ್ಷಗಳವರೆಗೆ ಹೂಡಿಕೆ ಮಾಡಿದರೆ ನಿಮಗೆ ಬಡ್ಡಿ ದರ 5.5% ನಂತೆ ದೊರೆಯುತ್ತದೆ. ಅಂದರೆ 13 ವರ್ಷಗಳಲ್ಲಿ ಅಮೌಂಟ್ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ 5 ವರ್ಷಗಳಿಗಾಗಿ ಬಡ್ಡಿ ದರವು 6.7% ಆಗಿದೆ. ಈ ಬಡ್ಡಿದರದಲ್ಲಿ ನಿಮ್ಮ ಹಣವು 10.75 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ.


3.ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್:


ಈ ಹೂಡಿಕೆಯಲ್ಲಿ ಆರ್‌ಡಿ ಬಡ್ಡಿ ದರವು 5.8% ಆಗಿದೆ. ಈ ಬಡ್ಡಿ ದರದಲ್ಲಿ ನೀವು ಹೂಡಿಕೆ ಮಾಡಿದರೆ 12.41 ವರ್ಷಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ.


4.ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (ಎಮ್‌ಐಎಸ್):


ಈ ಯೋಜನೆಯಲ್ಲಿ ಬಡ್ಡಿ ದರವು 6.6% ಆಗಿದೆ ಹಾಗಾಗಿ ಈ ಯೋಜನೆಯ ಮೂಲಕ ನೀವು ಹೂಡಿಕೆ ಮಾಡಿದಲ್ಲಿ 10.91 ವರ್ಷಗಳಲ್ಲಿ ನಿಮ್ಮ ಹೂಡಿಕೆ ಮಾಡಿದ ಮೊತ್ತವು ದುಪ್ಪಟ್ಟಾಗುತ್ತದೆ.


5. ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್):


ಈ ಯೋಜನೆಯನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬಹುದಾಗಿದ್ದು ತಮ್ಮ ಹಣವನ್ನು ಉಳಿತಾಯ ಮಾಡಬಹುದು. ಈ ಯೋಜನೆಯ ಪ್ರಸ್ತುತ ಬಡ್ಡಿ ದರ 7.4% ಆಗಿದೆ. ಈ ಯೋಜನೆಯ ಮೂಲಕ ನೀವು ಹೂಡಿಕೆ ಮಾಡಿರುವ ಮೊತ್ತವು 9.73 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.


6.ಪೋಸ್ಟ್ ಆಫೀಸ್ ಪಿಪಿಎಫ್:


ಪಬ್ಲಿಕ್ ಪ್ರಾವಿಡೆಂಟ್ ಫಂಡ್ 15 ವರ್ಷಗಳ ಅವಧಿಯೊಂದಿಗೆ ಬಂದಿದ್ದು ಪೋಸ್ಟ್ ಆಫೀಸ್ ಪಿಪಿಎಫ್‌ಗಾಗಿ ಬಡ್ಡಿ ದರವು 7.1% ಆಗಿದೆ. ನಿಮ್ಮ ಹಣ 10.14 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.


7.ಪೋಸ್ಟ್ ಆಫೀಸ್ ಸುಕನ್ಯ ಸಮೃದ್ಧಿ ಖಾತೆ ಯೋಜನೆ:


ಈ ಯೋಜನೆ ಹೆಣ್ಣುಮಕ್ಕಳಿಗಾಗಿ ಇದ್ದು ಇದು ಅತ್ಯಧಿಕ ಬಡ್ಡಿ ದರ 7.6% ಅನ್ನು ಹೊಂದಿದೆ. ಈ ಯೋಜನೆಯ ಮೂಲಕ ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಲ್ಲಿ 9.47 ವರ್ಷಗಳಲ್ಲಿ ಇದು ದುಪ್ಪಟ್ಟಾಗುತ್ತದೆ.


First published: